ಯದುವಂಶದ ನಾಡಗೀತೆ ರಚಿಸಿದ ಅಭಿನವ ಕಾಳಿದಾಸ 'ಬಸವಪ್ಪ ಶಾಸ್ತ್ರಿ' ಸ್ಮಾರಕಕ್ಕೆ ಪುನರ್ಜನ್ಮ

ಯುವ ಬ್ರಿಗೇಡ್ ತಂಡ ಹಾಗೂ ಕೆಲ ಸ್ವಯಂಸೇವಕರು ಬಸವಪ್ಪ ಶಾಸ್ತ್ರಿಯವರ ಸ್ಮಾರಕಕ್ಕೆ ಹೊಸ ಜೀವಕಳೆ ನೀಡಿದ್ದಾರೆ

ಬಸವಪ್ಪಶಾಸ್ತ್ರಿ,

ಬಸವಪ್ಪಶಾಸ್ತ್ರಿ,

  • Share this:
ಮೈಸೂರು: ಯದುವಂಶಕ್ಕಾಗಿ ಬಸವಪ್ಪ ಶಾಸ್ತ್ರಿ ಎಂಬುವವರು  ನಾಡಗೀತೆಯನ್ನ ರಚಿಸಿ ಮೆಚ್ಚುಗೆ ಪಡೆದಿದ್ದರು. ಅವರ ಸಾಹಿತ್ಯಕ್ಕೆ ಮೆಚ್ಚಿದ್ದ ಮಹಾರಾಜರು ಅವರಿಗೆ ಅಭಿನವ ಕಾಳಿದಾಸ ಎಂದು ಬಿರುದು ನೀಡಿ ಸನ್ಮಾನಿಸಿದ್ದರು. ಆದರೆ ಅವರ ಇರುವಿಕೆಯ ಬಗ್ಗೆ ಹೆಚ್ಚಿನ ಜನರಿಗೆ ಮಾಹಿತಿ ತಿಳಿದಿಲ್ಲ. ಈಗ ಅವರ ಇರುವಿಕೆ ಗುರುತಿಸುವ ಕೆಲಸ ನಡೆಯುತ್ತಿದ್ದು, ಇದಕ್ಕೆ ಯುವ ಬ್ರಿಗೇಡ್​ ತಂಡ ಜೀವಕಳೆ ತುಂಬಿದೆ. ಈ ಮೂಲಕ ಅವರ ಇತಿಹಾಸವನ್ನು ನಾಡಿನ ಜನರಿಗೆ ಪರಿಚಯಿಸಲು ಮುಂದಾಗಿದೆ.  ಮೈಸೂರು ಸಂಸ್ಥಾನದಲ್ಲಿ  ವಿದ್ವಾಂಸರಾಗಿ ಸೇವೆ ಸಲ್ಲಿಸಿದ್ದ  ಬಸವಪ್ಪ ಶಾಸ್ತ್ರಿ , ಇಂದಿಗೂ ಯದುವಂಶದವರು ಬಳಸುವ ಕಾಯೋ ಶ್ರೀಗೌರಿ ಕರುಣಾಲಹರಿ' ಎಂಬ ನಾಡಗೀತೆಯನ್ನ ರಚಿಸಿದವರು. ' ಅಭಿಜ್ಞಾನ ಶಾಕುಂತಲ ನಾಟಕವನ್ನ ಕನ್ನಡಕ್ಕೆ ಅನುವಾದಿಸಿ ಅಭಿನವ ಕಾಳಿದಾಸ ಎಂಬ ಬಿರುದು ಪಡೆದವರು.

ಆದರೆ,  ಈ ಬಿರುದು ಹೊಂದಿದ್ದ ಶ್ರೇಷ್ಠ ವ್ಯಕ್ತಿಯ ಸ್ಥಳ ಇರುವಿಕೆಯೇ ಯಾರಿಗೂ ಗೊತ್ತಿರಲಿಲ್ಲ‌. ಬಸವಪ್ಪ ಶಾಸ್ತ್ರಿ ಕುರಿತು  ವಿಡಿಯೋವೊಂದನ್ನು ಇತಿಹಾಸ ತಜ್ಞರಾದ ಧರ್ಮೇಂದ್ರ ಕುಮಾರ್ ಮಾಡಿದ್ದರು. ಇದನ್ನ ಗಮನಿಸಿದ ಮೈಸೂರಿನ ಯುವ ಬ್ರಿಗೇಡ್ ತಂಡ ಹಾಗೂ ಕೆಲ ಸ್ವಯಂಸೇವಕರು ಇದಕ್ಕೆ ಹೊಸ ಜೀವಕಳೆ ನೀಡಿದ್ದು, ಈ ಸ್ಥಳ ಹೀಗಿತ್ತಾ? ಎಂದು ಭಾಸವಾಗುವಂತೆ ಮಾಡಿದ್ದಾರೆ. ಮಾತ್ರವಲ್ಲದೇ ಸೇಫ್ ವೀಲ್ಸ್ ಸಂಸ್ಥೆಯ ಮುಖ್ಯಸ್ಥ ಪ್ರಶಾಂತ್ ಅವರ ಸಹಕಾರದಿಂದ ಸುಣ್ಣ ಬಣ್ಣ ಬಳಿದು ಸಿಂಗಾರ ಮಾಡಿ' ಬಸವಪ್ಪ ಶಾಸ್ತ್ರಿಗಳ ಇರುವಿಕೆ ಅವರ ಇತಿಹಾಸ ತಿಳಿಸಲು ಮುಂದಾಗಿದ್ದಾರೆ. ಇದು ಮೈಸೂರು ಮಾತ್ರವಲ್ಲ ಎಲ್ಲ ಕಡೆ ಇತಿಹಾಸದ ಕುರುಹುಗಳು ಹಾಗೂ ಇಂತಹ ಹಲವಾರು ಮಹಾನ್ ವ್ಯಕ್ತಿಗಳ ಇರುವಿಕೆ ಹಾಗೂ ಇತಿಹಾಸ ಇಂದಿನ ಪೀಳಿಗೆಗೆ ತಿಳಿಸಲಾಗುವುದು ಅಂತಾರೆ ಸ್ವಯಂ ಸೇವಕರು.

ಇದನ್ನು ಓದಿ: ಚೆಲುವ ಚಾಮರಾಜನಗರ ಪ್ರಮೋಷನಲ್​ ವಿಡಿಯೋ ಬಿಡುಗಡೆ; ಜಿಲ್ಲಾಭಿವೃದ್ಧಿಗೆ ಕೈಜೋಡಿಸಲು ಸಿದ್ದ ಎಂದ ಪವರ್ ಸ್ಟಾರ್

ಮೈಸೂರು ಬೆಂಗಳೂರು ಮುಖ್ಯ ರಸ್ತೆಯ ಎಲ್‌ಐಸಿ ವೃತ್ತದ ಸಮೀಪ ಇದೆ‌. ಈ ಜಾಗ ನಮ್ಮ ವ್ಯಾಪ್ತಿಗೆ ಬರೋದಿಲ್ಲ ಅಂತ ಪಾಲಿಕೆ ಕೂಡ ಸುಮ್ಮನಾಗಿದೆ. ಬಳಿಕ ಇದಕ್ಕೊಂದು ಟ್ರಸ್ಟ್ ಇದ್ದು, ಬಸವಪ್ಪ ಶಾಸ್ತ್ರಿಗಳ ಮೊಮ್ಮಗನನ್ನ ಸಂಪರ್ಕ ಮಾಡಲಾಗಿತ್ತು. ಬಳಿಕ ಯುವ ಬ್ರಿಗೇಡ್ ತಂಡದ ಸದಸ್ಯರು ಒಟ್ಟುಗೂಡಿ ಇದಕ್ಕೆ ಹೊಸ ರೂಪ ನೀಡುವಲ್ಲಿ ಸಹಕಾರಿಯಾಗಿದ್ದಾರೆ. ಈ ಮೂಲಕ ಮೈಸೂರು ಮತ್ತು ರಾಜವಂಶದ ಇತಿಹಾಸ ತಿಳಿಯಲು ಜನರಿಗೆ ಅನುಕೂಲ ಆಗಲಿದೆ ಅಂತಾರೆ ಯುವ ಬ್ರಿಗೇಡ್ ತಂಡದ ಮಾರ್ಗದರ್ಶಕರು.

ಇತಿಹಾಸದಲ್ಲಿ ಹುದುಗಿದ ಮಹಾನ್ ವ್ಯಕ್ತಿಯನ್ನ ಇದೀಗ ಇತಿಹಾಸಕಾರರೊಬ್ಬರ ವಿಡಿಯೋ ಮೂಲಕ ತಿಳಿದು ಅದನ್ನ ಉಳಿಸಿ ಇತರರಿಗೆ ತಿಳಿಸಲು ಮುಂದಾದ ಯುವ ಬ್ರಿಗೇಡ್ ಕಾರ್ಯ ವೈಖರಿಗೆ ಬಿಗ್ ಸೆಲ್ಯೂಟ್ ಹೇಳಬೇಕು. ಇಡೀ ದೇಶದಲ್ಲೆ ಪ್ರತಿಷ್ಠಿತ ರಾಜಮನೆತನವಾದ ಮೈಸೂರು ರಾಜಮನೆತನಕ್ಕೆ ರಾಜ್ಯಗೀತೆ ರಚಿಸಿಕೊಟ್ಟವರನ್ನ ನಾವು ಸದಾ ನೆನಪಿನಲ್ಲಿರುವಂತೆ ಮಾಡುವುದು ನಮ್ಮ ಕರ್ತವ್ಯವು ಹೌದು.

(ವರದಿ: ಕೆ ಪುಟ್ಟಪ್ಪ)
Published by:Seema R
First published: