• Home
  • »
  • News
  • »
  • district
  • »
  • ಗದಗದಲ್ಲಿ ಎಸಿಬಿ ಅಧಿಕಾರಿಗಳ ದಾಳಿ; ಲಂಚ ಪಡೆಯುವಾಗ ರೆಡ್‌ಹ್ಯಾಂಡ್ ಸಿಕ್ಕಿಬಿದ್ದ ಪಿಡಿಓ

ಗದಗದಲ್ಲಿ ಎಸಿಬಿ ಅಧಿಕಾರಿಗಳ ದಾಳಿ; ಲಂಚ ಪಡೆಯುವಾಗ ರೆಡ್‌ಹ್ಯಾಂಡ್ ಸಿಕ್ಕಿಬಿದ್ದ ಪಿಡಿಓ

ಪಿಡಿಓ ಸಿದ್ದಪ್ಪ ಡಂಬಳ.

ಪಿಡಿಓ ಸಿದ್ದಪ್ಪ ಡಂಬಳ.

ಮುಂಡರಗಿ ತಾಲೂಕಿನ ಮುರಡಿ ಗ್ರಾಮ ಪಂಚಾಯತಿ ಪಿಡಿಓ ಸಿದ್ದಪ್ಪ ಡಂಬಳ, ಅಕೌಂಟೆಂಟ್ ಪ್ರದೀಪ್ ಕದಮ್‌ ಎಂಬವವರು 41 ಕಂಪ್ಯೂಟರ್ ಪಹಣಿ ನೀಡಲು 41 ಸಾವಿರ ಬೇಡಿಕೆ ಇಟ್ಟಿದ್ದಾರೆ. 41 ಸಾವಿರ ಹಣ ಪಡೆಯುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

  • Share this:

ಗದಗ: ಬೆಳಂಬೆಳಗ್ಗೆ ಎಸಿಬಿ ಅಧಿಕಾರಿಗಳ ದಾಳಿಯಲ್ಲಿ ಲಂಚ ಪಡೆಯುವಾಗ ಪಿಡಿಓ ಮತ್ತು ಅಕೌಂಟೆಂಟ್ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿರುವ ಘಟನೆ ಗದಗ ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ನಡೆದಿದೆ.

ಮುಂಡರಗಿ ತಾಲೂಕಿನ ಮುರಡಿ ಗ್ರಾಮ ಪಂಚಾಯತಿ ಪಿಡಿಓ ಸಿದ್ದಪ್ಪ ಡಂಬಳ, ಅಕೌಂಟೆಂಟ್ ಪ್ರದೀಪ್ ಕದಮ್‌ ಎಂಬವವರು 41 ಕಂಪ್ಯೂಟರ್ ಪಹಣಿ ನೀಡಲು 41 ಸಾವಿರ ಬೇಡಿಕೆ ಇಟ್ಟಿದ್ದಾರೆ. 41 ಸಾವಿರ ಹಣ ಪಡೆಯುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಮುಂಡರಗಿ ಪಟ್ಟಣದ ಅಕೌಂಟೆಂಟ್ ಮನೆ ಮೇಲೆ ಇಂದು ಬೆಳಗ್ಗೆ ಎಸಿಬಿ ಡಿವೈಎಸ್ಪಿ ವಾಸುದೇವ ರಾಮ ನೇತೃತ್ವದಲ್ಲಿ ದಾಳಿ ನಡೆಸಿದ್ದಾಗ ಅಧಿಕಾರಿಗಳು ಲಂಚ ಸ್ವೀಕರಿಸುತ್ತಿರುವುದು ಬೆಳಕಿಗೆ ಬಂದಿದೆ. ಸದ್ಯ ಪಿಡಿಓ ಹಾಗೂ ಅಕೌಂಟೆಂಟ್ ನನ್ನು ಎಸಿಬಿ ಪೊಲೀಸರು ಬಂಧಿಸಿ ಸುಪರ್ದಿಗೆ ತೆಗೆದುಕೊಂಡಿದ್ದಾರೆ.

Published by:MAshok Kumar
First published: