ಯುವ ನಾಯಕನ ಮನವಿಗೆ ಸಿಕ್ತು ಮನ್ನಣೆ; ಬಸವನಾಡಿಗೆ ಮಂಜೂರಾಯ್ತು ಫುಡ್ ಪಾರ್ಕ್

ಸಚಿವರನ್ನು ಭೇಟಿಯಾಗಿದ್ದ ರಾಹುಲ್​ ಪಾಟೀಲ್

ಸಚಿವರನ್ನು ಭೇಟಿಯಾಗಿದ್ದ ರಾಹುಲ್​ ಪಾಟೀಲ್

ಬಸವನಾಡಿನಲ್ಲಿ ಫುಡ್ ಪಾರ್ಕ್ ಸ್ಥಾಪಿಸುವುದಾಗಿ ಸಿಎಂ ಬಿ. ಎಸ್. ಯಡಿಯೂರಪ್ಪ ಬಜೆಟ್ ನಲ್ಲಿ ಘೋಷಣೆ ಮಾಡಿದ್ದು, ಕೇವಲ ಮೂರು ತಿಂಗಳಲ್ಲಿ ಮಾಜಿ ಸಚಿವರು ಮತ್ತು ಅವರ ಪುತ್ರ ನಡೆಸಿದ ಪ್ರಯತ್ನಕ್ಕೆ ಆರಂಭಿಕ ಯಶಸ್ಸು ಸಿಕ್ಕಂತಾಗಿದೆ

  • Share this:

ವಿಜಯಪುರ: ಇದು ಯುವ ನಾಯಕನ ಬೇಡಿಕೆಗೆ ಸಿಕ್ಕ ಮನ್ನಣೆ.  ಅಂತೂ ಇಂತೂ ಬಸವನಾಡಿನಲ್ಲಿ ಫುಡ್ ಪಾರ್ಕ್ ಸ್ಥಾಪಿಸುವುದಾಗಿ ಸಿಎಂ ಬಿ. ಎಸ್. ಯಡಿಯೂರಪ್ಪ ಬಜೆಟ್ ನಲ್ಲಿ ಘೋಷಣೆ ಮಾಡಿದ್ದು, ಕೇವಲ ಮೂರು ತಿಂಗಳಲ್ಲಿ ಮಾಜಿ ಸಚಿವರು ಮತ್ತು ಅವರ ಪುತ್ರ ನಡೆಸಿದ ಪ್ರಯತ್ನಕ್ಕೆ ಆರಂಭಿಕ ಯಶಸ್ಸು ಸಿಕ್ಕಂತಾಗಿದೆ.  ಕಳೆದ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಮಾಜಿ ಸಚಿವ ಎಂ. ಬಿ. ಪಾಟೀಲ ಕೈಗೊಂಡ ನೀರಾವರಿ ಯೋಜನೆಗಳಿಂದಾಗಿ ಜಿಲ್ಲೆಯಲ್ಲಿ ಸಾಕಷ್ಟು ಭೂಮಿಗೆ ನೀರು ಸಿಕ್ಕಿದ್ದು, ಈ ಭೂಮಿಗೆ ಈಗ ಬಂಗಾರದ ಬೆಲೆ ಬರ ತೊಡಗಿದೆ.  ಈ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಮತ್ತಷ್ಟು ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲು ಮಾಜಿ ಸಚಿವ ಮತ್ತು ಹಾಲಿ ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ತಮ್ಮ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಇಟ್ಟಂಗಿಹಾಳ ಬಳಿ ಫುಡ್ ಪಾರ್ಕ್ ಸ್ಥಾಪಿಸುವಂತೆ ಕಳೆದ ವರ್ಷ ನವಂಬರ್ 20 ರಂದು ಕೃಷಿ ಸಚಿವ ಬಿ. ಸಿ. ಪಾಟೀಲ ಅವರಿಗೆ ಪತ್ರ ಬರೆದಿದ್ದರು.  ನಂತರ ಎಂ. ಬಿ. ಪಾಟೀಲ ಅವರ ಪುತ್ರ ಮತ್ತು ವಿಜಯಪುರದ ಪ್ರತಿಷ್ಢಿತ ಬಿ ಎಲ್ ಡಿ ಇ ಸಂಸ್ಥೆಯ ನಿರ್ದೇಶಕ ಬಸನಗೌಡ ಎಂ. ಪಾಟೀಲ ನೇತೃತ್ವದಲ್ಲಿ ರೈತರ ನಿಯೋಗ ಕಳೆದ ವರ್ಷ ಡಿ. 25 ರಂದು ಬೆಂಗಳೂರಿನಲ್ಲಿ ಕೃಷಿ ಸಚಿವ ಬಿ. ಸಿ. ಪಾಟೀಲ ಅವರನ್ನು ಭೇಟಿ ಮಾಡಿ  ಅತೀ ಸಮೀಪದಲ್ಲಿರುವ ಇಟ್ಟಂಗಿಹಾಳ ಬಳಿ ಪುಡ್‍ಪಾರ್ಕ್ ನಿರ್ಮಿಸಬೇಕು ಎಂದು ಮನವಿ ಪತ್ರ ಸಲ್ಲಿಸಿ ವಿನಂತಿ ಮಾಡಿತ್ತು. 


ಜಿಲ್ಲೆಯಲ್ಲಿ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳಿಗೆ ಹೆಸರುವಾಸಿಯಾಗಿದ್ದು, ದಾಳಿಂಬೆ, ಲಿಂಬೆ, ದ್ರಾಕ್ಷಿ, ಮಾವು, ಬಾರೆ, ಪೆರು ಮತ್ತು ಇತರೆ ಅನೇಕ ಹಣ್ಣಿನ ಬೆಳೆಗಳನ್ನು ಬೆಳೆಯಲಾಗುತ್ತಿದೆ.  ಈ ರೈತರಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಿ, ಸಂಸ್ಕರಣೆ ಹಾಗೂ ತಯಾರಿಕೆ ಅನಕೂಲತೆಗಳನ್ನು ಕಲ್ಪಿಸಿದರೆ, ಈ ಭಾಗದಲ್ಲಿ ಉತ್ತಮ ಸಣ್ಣ ಉದ್ಯಮಿಗಳು ಆರಂಭವಾಗುವವು ಮನವಿ ಮಾಡಿತ್ತು.  ಅಲ್ಲದೇ, ಇಟ್ಟಂಗಿಹಾಳ ಬಳಿ ಪುಡ್‍ಪಾರ್ಕ ನಿರ್ಮಿಸಲು 72 ಎಕರೆ ಜಮೀನನ್ನು ಈಗಾಗಲೇ ಮೀಸಲಿಡಲಾಗಿದೆ.  ಇದೇ ಸ್ಥಳದಲ್ಲಿ ಪುಡ್‍ಪಾರ್ಕ್ ಆರಂಭಿಸಿದರೆ ಸ್ಥಳೀಯರಿಗೆ ಉದ್ಯೋಗಾವಕಾಶಗಳು ಸಿಗಲಿವೆ.  ಅಲ್ಲದೇ, ಸಣ್ಣ, ಅತೀ ಸಣ್ಣ ಮತ್ತು ಮಧ್ಯಮ ಉದ್ಯಮಿಗಳಿಗೆ ಸಾಕಷ್ಟು ಅವಕಾಶಗಳು ದೊರೆಯುತ್ತದೆ ತಿಳಿಸಿದ್ದರು.


ಇದರಿಂದಾಗಿ  ಜಿಲ್ಲೆಯಲ್ಲಿ ಬಹುತೇಕ ಪ್ರದೇಶ ನೀರಾವರಿಗೆ ಒಳಪಟ್ಟಿರುವದರಿಂದ ಮುಂದಿನ ವರ್ಷಗಳಲ್ಲಿ ಇನ್ನೂ ಹೆಚ್ಚಿನ ತೋಟಗಾರಿಕೆ ಪ್ರದೇಶ ಬೆಳವಣಿಗೆಯಾಗಲಿದೆ.  ಈ ನಿಟ್ಟಿನಲ್ಲಿ ವಿಜಯಪುರ ಪುಡ್‍ಪಾರ್ಕ್‍ಗೆ ಹೆಚ್ಚು ಒತ್ತು ನೀಡಬೇಕು ಎಂದು ಸವಿವರವಾಗಿ ಮನವಿ ಮಾಡಿದ್ದರು. ಆಗ ರೈತರ ನಿಯೋಗಕ್ಕೆ ಸ್ಪಂಧಿಸಿದ ಕೃಷಿ ಸಚಿವ ಬಿ. ಸಿ. ಪಾಟೀಲ ಶೀಘ್ರದಲ್ಲಿಯೇ ವಿಜಯಪುರ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು, ಪುಡ್‍ಪಾರ್ಕ್ ಸ್ಥಾಪನೆಗೆ ಕೂಡಲೇ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು.  ಇದಾದ ಬಳಿಕ ಫೆ. 22 ರಂದು ವಿಜಯಪುರ ಜಿಲ್ಲೆಯ ಇಟ್ಟಂಗಿಹಾಳ ಬಳಿ ನಿಯೋಜಿತ ಫುಡ್ ಪಾರ್ಕ್ ಸ್ಥಳಕ್ಕೆ ಭೇಟಿ ನೀಡಿದ್ದ ಕೃಷಿ ಸಚಿವ ಬಿ. ಸಿ. ಪಾಟೀಲ, ಈ ಸ್ಥಳವು ಫುಡ್‍ಪಾರ್ಕ್ ಗೆ ಅತ್ಯಂತ ಸೂಕ್ತವಾಗಿರುವ ಹಿನ್ನೆಲೆಯಲ್ಲಿ ಮುಂಬರುವ ಆಯವ್ಯಯದಲ್ಲಿ ಅನುದಾನ ಕಾಯ್ದಿರಿಸಲು ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದ್ದರು.


ಇಟ್ಟಂಗಿಹಾಳದಲ್ಲಿ ಫುಡ್‍ಪಾರ್ಕ್‍ಗಾಗಿ ಕಾಯ್ದಿರಿಸಿದ 210 ಎಕರೆ ಜಮೀನು ಸ್ಥಳ ಪರಿಶೀಲನೆ ನಡೆಸಿದ ಅವರು, ಈ ಭಾಗದಲ್ಲಿ ತರಕಾರಿ ಬೆಳೆಗಳನ್ನು ಹೆಚ್ಚಾಗಿ ಬೆಳೆಯುವುದರಿಂದ ಅದರಲ್ಲೂ ವಿಶೇಷವಾಗಿ ದ್ರಾಕ್ಷಿ, ದಾಳಿಂಬೆ ಹಾಗೂ ಲಿಂಬೆ ಬೆಳೆ ಹೆಚ್ಚಾಗಿ ಬೆಳೆಯುವುದರಿಂದ, ಈ ಫುಡ್‍ಪಾರ್ಕ್ ಸ್ಥಾಪನೆಯಿಂದ ರೈತರಿಗೆ ಹೆಚ್ಚಿನ ನೆರವಾಗಲಿದೆ.  ಅದರಂತೆ ಪ್ರಧಾನ ಮಂತ್ರಿಗಳ ಆತ್ಮನಿರ್ಭರ್ ಯೋಜನೆಯಲ್ಲಿ ಕೃಷಿಗೂ ರೂ. 1 ಲಕ್ಷ ಕೋ. ನೀಡಲಾಗಿದ್ದು, ಆ ಪೈಕಿ ರೂ. 10000 ಕೋ. ಹಣವನ್ನು ವಿಶೇಷವಾಗಿ ಆಹಾರ ಸಂಸ್ಕರಣ ಘಟಕಗಳಿಗೂ ನೀಡಲಾಗಿದೆ.  ಫುಡ್‍ಪಾರ್ಕ್‍ಗಾಗಿ ಇದರಲ್ಲಿನ ಅನುದಾನ ಕಾಯ್ದಿರಿಸಲು ಪ್ರಸ್ತಾವನೆಯಲ್ಲಿ ಪ್ರಸ್ತಾಪಿಸುವುದಾಗಿ ತಿಳಿಸಿದ್ದರು.


ಇದನ್ನು ಓದಿ: ಚಾಮರಾಜನಗರ ಜಿಲ್ಲಾಭಿವೃದ್ಧಿಗೆ ಬಜೆಟ್ ಘೋಷಣೆಗಳೇನು ಗೊತ್ತಾ?  


ಈ ಸಂದರ್ಭದಲ್ಲಿ ಮಾಜಿ ಸಚಿವ ಮತ್ತು ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ಖುದ್ದಾಗಿ ಉಪಸ್ಥಿತರಿದ್ದು ಈ ಯೋಜನಯಿಂದಾಗುವ ಲಾಭದ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದರು.ಇದೀಗ ಅಂದು ನೀಡಿದ ಭರವಸೆಯಂತೆ ಸಿಎಂ ಬಜೆಟ್ ನಲ್ಲಿ ವಿಜಯಪುರ ಜಿಲ್ಲೆಯ ಇಟ್ಟಂಗಿಹಾಳ ಬಳಿ ಫುಡ್ ಪಾರ್ಕ್ ಸ್ಥಾಪನೆ ಘೋಷಣೆ ಮಾಡಿದ್ದಾರೆ.  ಇದು ಬರದ ನಾಡು ಎಂಬ ಹಣೆಪಟ್ಟಿ ಕಳಚಿಕೊಳ್ಳುತ್ತಿರುವ ಬಸವನಾಡಿಗೆ ಮತ್ತೋಂದು ವರದಾನವಾದಂತಾಗಿದೆ.  ಈ ಯೋಜನೆಯಲ್ಲಿ ಮಾಜಿ ಸಚಿವ ಎಂ. ಬಿ. ಪಾಟೀಲ ಅವರ ವೈಯಕ್ತಿಕ ವರ್ಚಸ್ಸೂ ಕೂಡ ಕೆಲಸ ಮಾಡಿರುವುದು ಗೋಚರಿಸಿದಂತಾಗಿದೆ.


ಮಾಜಿ ಸಚಿವ ಎಂ. ಬಿ. ಪಾಟೀಲ ಪ್ರತಿಕ್ರಿಯಿಸಿ, ಸರಕಾರದ ಫುಡ್ ಪಾರ್ಕ್ ಸ್ಥಾಪನೆಯನ್ನು ಮಾಜಿ ಸಚಿವ ಮತ್ತು ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ಸ್ವಾಗತಿಸಿದ್ದಾರೆ.  ಅಲ್ಲದೇ, ಇದು ಕೇವಲ ಬಜೆಟ್ ಘೋಷಣೆಯಾಗಬಾರದು.  ಕೂಡಲೇ ಇದು ಕಾರ್ಯಗತವಾಗಬೇಕು ಎಂದೂ ಅವರು ಸರಕಾರಕ್ಕೆ ಕಿವಿಮಾತು ಹೇಳಿದ್ದಾರೆ.

First published: