ಡಿಕೆ ಶಿವಕುಮಾರ್​ ಪದಗ್ರಹಣದ ದಿನವೇ ಮಳವಳ್ಳಿ ಕಾಂಗ್ರೆಸ್ ನಲ್ಲಿ ಭಿನ್ನಮತ : ಮಾಜಿ ಶಾಸಕರ ವಿರುದ್ದ ದೂರು ನೀಡಲು ಮೂಲ ಕಾಂಗ್ರೆಸಿಗರ ನಿರ್ಧಾರ

ಪಕ್ಷದ ಮೂಲ ಕಾರ್ಯಕರ್ತರನ್ನು ಮಾಜಿ‌ ಶಾಸಕರು ಕಡೆಗಣಿಸುತ್ತಿರುವ ಕಾರಣದಿಂದ ಮಳವಳ್ಳಿ ತಾಲೂಕಿನ ಕೈ ಮುಖಂಡರು ಮತ್ತು ಕಾರ್ಯಕರ್ತರು ಬಂಡಾಯವೆದ್ದಿದ್ದಾರೆ.

news18-kannada
Updated:July 2, 2020, 5:55 PM IST
ಡಿಕೆ ಶಿವಕುಮಾರ್​ ಪದಗ್ರಹಣದ ದಿನವೇ ಮಳವಳ್ಳಿ ಕಾಂಗ್ರೆಸ್ ನಲ್ಲಿ ಭಿನ್ನಮತ : ಮಾಜಿ ಶಾಸಕರ ವಿರುದ್ದ ದೂರು ನೀಡಲು ಮೂಲ ಕಾಂಗ್ರೆಸಿಗರ ನಿರ್ಧಾರ
ಮಾಜಿ ಶಾಸಕ ನರೇಂದ್ರ ಸ್ವಾಮಿ
  • Share this:
ಮಂಡ್ಯ(ಜುಲೈ. 02): ಕೆಪಿಸಿಸಿ ಅಧ್ಯಕ್ಷರಾಗಿ ಡಿ ಕೆ ಶಿವಕುಮಾರ್ ಪದಗ್ರಹಣವಾಗುತ್ತಲೇ ಮಂಡ್ಯ ಜಿಲ್ಲೆಯ ಮಳವಳ್ಳಿ ಕ್ಷೇತ್ರದ ಕಾಂಗ್ರೆಸ್ ಬಂಡಾಯ ಭುಗಿಲೆದ್ದಿದೆ. ಮಾಜಿ ಶಾಸಕ ನರೇಂದ್ರಸ್ವಾಮಿ ವಿರುದ್ದ ಮೂಲ ಕಾಂಗ್ರೆಸಿಗರು ಬಂಡಾಯ ಸಾರಿದ್ದಾರೆ. ಮಾಜಿ ಶಾಸಕರ ವಿರುದ್ದ ಮೂಲ ಕಾಂಗ್ರೆಸಿಗರು ಪಕ್ಷದ ರಾಜ್ಯಾಧ್ಯಕ್ಷರಿಗೆ ದೂರು ನೀಡಲು ಮುಂದಾಗಿದ್ದಾರೆ.

ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಪದಗ್ರಹಣ ಮಾಡಿ ರಾಜ್ಯ ದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ನ್ನು ಅಧಿಕಾರಕ್ಕೆ ತರುವ ಸಂಕಲ್ಪ ಮಾಡುತ್ತಿದ್ರೆ, ಇತ್ತ ಮಂಡ್ಯದ ಮಳವಳ್ಳಿ ಕ್ಷೇತ್ರದ ಕಾಂಗ್ರೆಸ್ ನಲ್ಲಿ ಬಂಡಾಯ ಭುಗಿಲೆದ್ದಿದೆ. ಡಿಕೆಶಿ ಪದಗ್ರಹಣದ ದಿನ ಮಳವಳ್ಳಿ ತಾಲೂಕಿನಲ್ಲಿ ಕೈ ಪಕ್ಷದ ಬಂಡಾಯದ ಭಿನ್ನಮತ ಸ್ಫೋಟ ಗೊಂಡಿದೆ.

ಪಕ್ಷದ ಮೂಲಕ ಕಾರ್ಯಕರ್ತರನ್ನು ಕೈ ಬಿಟ್ಟಿದ್ದಾರೆ ಎನ್ನುವ ಆರೋಪದ ನಡುವೆ ತಮಗೆ ಬೇಕಾದವರನ್ನು ಸೇರಿಸಿಕೊಂಡು ಸ್ವಗ್ರಾಮ ಪೂರಿಗಾಲಿಯಲ್ಲಿ ಡಿಕೆಶಿ ಪದ ಗ್ರಹಣ ನೇರ ವೀಕ್ಷಣೆ ವ್ಯವಸ್ಥೆ ಕಾರ್ಯಕ್ರಮ‌ ಏರ್ಪಾಡು ಮಾಡಿ ಮುಂದೆ ಡಿಕೆಶಿ ಮುಖ್ಯಮಂತ್ರಿ ಆಗಲು ಪಣತೊಡುವುದಾಗಿ ತಿಳಿಸಿದರು.

ಇನ್ನು ತಾಲೂಕಿನ ಕ್ಷೇತ್ರದಲ್ಲಿ ಪಕ್ಷದ ಮೂಲ ಕಾರ್ಯಕರ್ತರನ್ನು ಮಾಜಿ‌ ಶಾಸಕರು ಕಡೆಗಣಿಸುತ್ತಿರುವ ಕಾರಣದಿಂದ ಮಳವಳ್ಳಿ ತಾಲೂಕಿನ ಕೈ ಮುಖಂಡರು ಮತ್ತು ಕಾರ್ಯಕರ್ತರು ಬಂಡಾಯವೆದ್ದಿದ್ದಾರೆ. ಇಂದು ಡಿಕೆಶಿ ಪದಗ್ರಹಣದ ಕಾರಣದಿಂದ ಬಂಡಾಯವಾಗಿಯೇ ಅಲ್ಲಲ್ಲಿ ಡಿಕೆಶಿ‌ ಅಭಿಮಾನಿಗಳ ಹೆಸರಲ್ಲಿ ಪದಗ್ರಹಣ ವೀಕ್ಷಣೆ ಕಾರ್ಯಕ್ರಮ ಆಯೋಜಿಸಿದರು.

ಇದನ್ನೂ ಓದಿ : ಕೊರೋನಾ‌ ಸೋಂಕಿತರಿಗೆ ಮೂರು ‌ವಿಭಾಗವಾಗಿ ಪ್ರತ್ಯೇಕ ಚಿಕಿತ್ಸೆ ; ಹೊಸ ಪ್ಲಾನ್ ರೂಪಿಸಿದ ಉತ್ತರ ಕನ್ನಡ ಜಿಲ್ಲಾಡಳಿತ

ಮಳವಳ್ಳಿ ತಾಲೂಕಿನ ಹಲಗೂರು, ಲಿಂಗಪಟ್ಟಣ, ಹಾಡ್ಲಿ, ಚೊಟ್ಟನಹಳ್ಳಿ, ತಳಗವಾದಿ ಸೇರಿ  10 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಡಿಕೆಶಿ ಪದಗ್ರಹಣ ಕಾರ್ಯಕ್ರಮವನ್ನು‌ ಬಂಡಾಯವಾಗಿ ಅದ್ದೂರಿಯಾಗಿ ಏರ್ಪಡಿಸಿ ಮೂಲ ಕಾರ್ಯಕರ್ತರನ್ನು ಕಡೆಗಣಿಸಿದ ಮಾಜಿ ಶಾಸಕ ನರೇಂದ್ರ ಸ್ವಾಮಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದು, ನಿರ್ಲಕ್ಷ್ಯ ಮಾಡುತ್ತಿರುವ ಮಾಜಿ ಶಾಸಕರ ವಿರುದ್ದ ದೂರು ನೀಡಲು ಮುಂದಾಗಿದ್ದಾರೆ. ಅಲ್ಲದೇ ತಕ್ಷಣವೇ ಪಕ್ಷದ ರಾಜ್ಯಾಧ್ಯಕ್ಷರಾದ ಡಿಕೆ ಶಿವಕುಮಾರ್​ ಅವರು ಇತ್ತ ಗಮನ ಹರಿಸಿ‌ ಮೂಲ ಕೈ ಕಾರ್ಯಕರ್ತರನ್ನು ಉಳಿಸುವಂತೆ ಮನವಿ ಮಾಡಿದ್ದಾರೆ.
ಒಟ್ಟಾರೆ  ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್​ ಪದಗ್ರಹಣ ಮಾಡಿ ಪಕ್ಷದ ಚುಕ್ಕಾಣಿ ಹಿಡಿಯುವ ಮೊದಲೇ ಇತ್ತ ಮಂಡ್ಯದ ಮಳವಳ್ಳಿ ಕ್ಷೇತ್ರದಲ್ಲಿ ಕೈ ಪಕ್ಷದ ಬಂಡಾಯ‌ ಭುಗಿಲೆದ್ದಿದೆ. ಬಂಡಾಯವೆದ್ದ ಮಂಡ್ಯದ ಕೈ ಪಕ್ಷದ ಮುಖಂಡರು‌ ಮತ್ತು ಕಾರ್ಯಕರ್ತರನ್ನು ಪಕ್ಷದ ನೂತನ ಸಾರಥಿ‌ ಯಾಗಿರುವ ಡಿಕೆಶಿ ಹೇಗೆ ನಿಭಾಯಿಸುತ್ತಾರೆ ಎನ್ನುವುದು ಕಾದು ನೋಡಬೇಕಿದೆ.
First published: July 2, 2020, 5:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading