• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಪ್ರವಾಹ ನಿರ್ವಹಣೆಗೆ ಸಿದ್ದರಿದ್ದು, ಹಾನಿಯಾದ ಮನೆ, ಬೆಳೆಗಳಿಗೆ ಶೀಘ್ರದಲ್ಲಿ ಪರಿಹಾರ; ಜಗದೀಶ್‌ ಶೆಟ್ಟರ್‌

ಪ್ರವಾಹ ನಿರ್ವಹಣೆಗೆ ಸಿದ್ದರಿದ್ದು, ಹಾನಿಯಾದ ಮನೆ, ಬೆಳೆಗಳಿಗೆ ಶೀಘ್ರದಲ್ಲಿ ಪರಿಹಾರ; ಜಗದೀಶ್‌ ಶೆಟ್ಟರ್‌

ಜಗದೀಶ್‌ ಶೆಟ್ಟರ್‌.

ಜಗದೀಶ್‌ ಶೆಟ್ಟರ್‌.

ಯಾರೆಲ್ಲಾ ಮನೆಗಳಿಗೆ ಹಾನಿಯಾಗಿದೆ, ಬೆಳೆಗಳು ನಾಶವಾಗಿದೆ. ಎಲ್ಲರಿಗೂ ಸೂಕ್ತ ಪಡಿಹಾರ ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗುವುದು. ಈ ಪ್ರವಾಹವನ್ನು ಎದುರಿಸಲು ಬಿಜೆಪಿ ಸರ್ಕಾರ ಸನ್ನದ್ಧವಾಗಿದೆ ಎಂದು ಸಚಿವ ಜಗದೀಶ್‌ ಶೆಟ್ಟರ್‌ ತಿಳಿಸಿದ್ದಾರೆ.

  • Share this:

ಧಾರವಾಡ : ಕಳೆದ ನಾಲ್ಕು ದಿನಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದ್ದು, ಇದರಿಂದಾಗಿ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಬಹಳಷ್ಟು ಮನೆಗಳು ಮತ್ತು ಬೆಳೆ ಹಾನಿಯಾಗಿದೆ. ಸರಕಾರದಿಂದ ನಷ್ಟದ ಪರಿಹಾರ  ನೀಡಲು  ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕ್ರಮಕೈಗೊಳ್ಳಲಾಗಿದೆ ಎಂದು  ಬೃಹತ್, ಮಧ್ಯಮ ಕೈಗಾರಿಕಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ ಶೆಟ್ಟರ್‌ ತಿಳಿಸಿದ್ದಾರೆ.


ನವಲಗುಂದ ತಾಲೂಕಿನ ಯಮನೂರ ಹತ್ತಿರದ ಬೆಣ್ಣಿ ಹಳ್ಳದಲ್ಲಿ ಎನ್.ಡಿ.ಆರ್.ಎಫ್. ತಂಡ ನಡೆಸಿದ ತುಂಬಿ ಹರಿಯುವ ಹಳ್ಳದ ನೀರಿನಲ್ಲಿ ಜೀವರಕ್ಷಣೆ ಕುರಿತು ಮಾಡಿದ ಅಣಕು ಪ್ರದರ್ಶನ ವೀಕ್ಷಣೆ ಮಾಡಿದ ನಂತರ  ಮಾತನಾಡಿದ ಅವರು,


"ನವಲಗುಂದಕ್ಕೆ ವಿಶೇಷವಾಗಿ ಎನ್ ಡಿ ಆರ್ ಎಫ್ ತಂಡವನ್ನು ನಿಯೋಜನೆ ಮಾಡುವ ಮೂಲಕ  ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಯಾವುದೇ ಸಮಯದಲ್ಲಿ  ಅತೀ ಮಳೆಯಿಂದ ಪ್ರವಾಹ, ಜನ,ಜಾನುವಾರು ಆಪತ್ತಿನಲ್ಲಿ ಸಿಲುಕಿದರೆ ಮತ್ತು ಯಾವುದೇ ರೀತಿ ಘಟನೆಗಳು ಸಂಭವಿಸಿದ್ದರೆ ತಕ್ಷಣ ಎನ್ ಡಿ ಆರ್ ಎಫ್ ತಂಡ ರಕ್ಷಣಾ ಕಾರ್ಯದಲ್ಲಿ ಪ್ರವೃತ್ತಿಯಾಗಲಿದೆ" ಎಂದರು.


"ಎನ್.ಡಿ.ಆರ್.ಎಫ್ ತಂಡದೊಂದಿಗೆ  ಧರ್ಮಸ್ಥಳದ ಗ್ರಾಮೀಣಾಭಿವೃದ್ಧಿ ಸಂಘ, ಯುವಕ ಮಂಡಳ, ಸಂಸ್ಥೆಗಳು ಸಾಮಾಜಿಕ ಸೇವೆಗೆ ನಮ್ಮೊಂದಿಗೆ ಕೈ  ಜೋಡಿಸಿದ್ದಾರೆ. ತುರ್ತು ಪರಿಹಾರ ಕಾರ್ಯಗಳಿಗೆ ತಕ್ಷಣಕ್ಕೆ ನೇರವಾಗಲು ಈಜು, ಧೈರ್ಯ, ಕ್ರಿಯಾಶೀಲತೆ ಇರುವ ಮತ್ತು ಸ್ಥಳಿಯವಾಗಿ ಗ್ರಾಮಗಳಲ್ಲಿಯೇ  ಲಭ್ಯವಿರುವ  ಯುವಕರ ತಂಡಗಳನ್ನು  ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ವಿಶೇಷ ಮುತುವರ್ಜಿವಹಿಸಿ ಸಿದ್ಧಗೊಳಿಸಿದ್ದಾರೆ. ಇದೊಂದು ವಿಶೇಷ ಪ್ರಯತ್ನವಾಗಿದೆ.


ಇದನ್ನೂ ಓದಿ : ’ಯುವ ಜನರಿಗೆ ಉದ್ಯೋಗ ನೀಡುವ ಶಕ್ತಿ ಮೋದಿಗಿಲ್ಲ’; ಉದ್ಯೋಗ ಒದಗಿಸಿ ಅಭಿಯಾನ ಆರಂಭಿಸಿದ ರಾಹುಲ್ ಗಾಂಧಿ


ನವಲಗುಂದ ತಾಲೂಕಿಗೆ ಸಿಮೀತವಾಗಿ 85 ಯುವಕರ ತಂಡ ಹಾಗೂ ಧಾರವಾಡ ಜಿಲ್ಲೆಗೆ 200 ಯುವಕ ತಂಡ ರಚಿಸಿ, ಎನ್ ಡಿ ಆರ್ ಎಫ್ ತಂಡದೊಂದಿಗೆ ಕೈ ಜೋಡಿಸಿರುವುದು ಶ್ಲಾಘನೀಯ ಕೆಲಸ. ಪ್ರವಾಹ ಪರಿಸ್ಥಿತಿ ಎದುರಿಸಲು ಸರಕಾರ  ಅಗತ್ಯ ಕ್ರಮಗಳನ್ನು  ಕೈಗೊಂಡಿದೆ. ಅಧಿಕಾರಿಗಳು ಹಗಲಿರಳು ಶ್ರಮಿಸುತ್ತಿದ್ದಾರೆ.


ಅದರ ಜೊತೆಗೆ ಜನಸಾಮಾನ್ಯರು, ಸಂಘ ಸಂಸ್ಥೆಗಳು ಸಹಕಾರ ನೀಡುತ್ತಿರುವದಿಂದ ಇನ್ನು ಹೆಚ್ಚಿನ ಪ್ರಮಾಣದಲ್ಲಿ ಕೆಲಸ ಕಾರ್ಯಗಳು ಯಶಸ್ವಿಯಾಗುವಂತೆ ಮಾಡೋಣ. ಇದಲ್ಲದೆ, ಯಾರೆಲ್ಲಾ ಮನೆಗಳಿಗೆ ಹಾನಿಯಾಗಿದೆ, ಬೆಳೆಗಳು ನಾಶವಾಗಿದೆ. ಎಲ್ಲರಿಗೂ ಸೂಕ್ತ ಪಡಿಹಾರ ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗುವುದು. ಈ ಪ್ರವಾಹವನ್ನು ಎದುರಿಸಲು ಬಿಜೆಪಿ ಸರ್ಕಾರ ಸನ್ನದ್ಧವಾಗಿದೆ" ಎಂದು ಸಚಿವ ಜಗದೀಶ್‌ ಶೆಟ್ಟರ್‌ ತಿಳಿಸಿದ್ದಾರೆ.

Published by:MAshok Kumar
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು