ಜನರ ಸಮಸ್ಯೆ ಕೇಳಲು ಬಂದು ಬೆಂಬಲಿಗರ ಮನೆಯಲ್ಲಿ ಕುಳಿತ ಶಾಸಕ ; ಶಾಸಕರನ್ನ ತರಾಟೆಗೆ ತೆಗೆದುಕೊಂಡ ಜನ

ಶಾಸಕರು ಆಗಮಿಸುತ್ತಿದ್ದಂತೆ ಜನರು ಮತ್ತು ಶಾಸಕ ದುರ್ಯೋಧನ ಐಹೊಳೆ ಮಧ್ಯೆ ಮಾತಿನ ಚಕಮಕಿ ನಡೆದಿದೆ ಶಾಸಕ ಐಹೊಳೆಗೆ ಘೇರಾವ ಹಾಕಿ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾಸಕರನ್ನು ತರಾಟೆಗೆ ತೆಗೆದುಕೊಂಡ ಜನರು

ಶಾಸಕರನ್ನು ತರಾಟೆಗೆ ತೆಗೆದುಕೊಂಡ ಜನರು

  • Share this:
ಚಿಕ್ಕೋಡಿ(ಜೂ.30): ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕಂಕಣವಾಡಿ ಗ್ರಾಮದಲ್ಲಿ ಸರ್ಕಾರಿ ಗೈರಾಣ (ಸರ್ಕಾರಿ ಜಾಗ ) ಒತ್ತುವರಿ ವ್ಯಾಜ್ಯದ ಕುರಿತು ಕಳೆದ ಹಲವು ದಿನಗಳಿಂದ ಸರ್ಕಾರ ಮತ್ತು ಗ್ರಾಮಸ್ಥರ ನಡುವೆ ಸಂಘರ್ಷ ನಡೆದಿದ್ದು, ಗ್ರಾಮಸ್ಥರು ಹಲವು ಬಾರಿ ಪ್ರತಿಭಟನೆ ನಡೆಸಿ ತಮ್ಮ ಅಳಲನ್ನ ತೋಡಿ ಕೊಂಡಿದ್ದರು. ಕಳೆದ 30 ವರ್ಷಗಳಿಂದ ಕಂಕನವಾಡಿ ಗ್ರಾಮದ ಗೈರಾಣ ಜಮೀನಿನಲ್ಲಿ ವಾಸವಿದ್ದ 2 ಸಾವಿರ ಕುಟುಂಬಗಳಿಗೆ ಸರಕಾರನೇ ಮೂಲಭೂತ ಸೌಕರ್ಯಗಳನ್ನ ನೀಡಿ ಆಶ್ರಯ‌ ಯೋಜನೆಯಲ್ಲೂ ಮನೆ ನಿರ್ಮಿಸಿ‌ ಕೊಟ್ಟಿದೆ.

ಆದರೆ ಈಗ ಏಕಾಏಕಿ ಗೈರಾಣು ಜಮೀನಿನನ್ನ ಖಾಲಿ ಮಾಡುವಂತೆ ಆದೇಶ ಹೊರಡಿಸಿದೆ.‌ ಇದರಿಂದ ಮನೆಗಳನ್ನ ಈಗ ಖಾಲಿ‌ ಮಾಡಿಸುವಂತೆ ರಾಯಬಾಗ ತಾಲೂಕು ಆಡಳಿತ ಸೂಚನೆ ನೀಡಿರುವ ಕಾರಣ ಕಂಕನವಾಡಿ ಪಟ್ಟಣದ ಶೇ.85 ರಷ್ಟು ಕುಟುಂಬಗಳು ಬೀದಿಗೆ ಬರುವ ಸ್ಥಿತಿ ಗ್ರಾಮದಲ್ಲಿ ನಿರ್ಮಾಣ ವಾಗಿತ್ತು ಸರ್ಕಾರದ ನೀತಿಯನ್ನು ಖಂಡಿಸಿ ಗ್ರಾಮಸ್ಥರ ಕಳೆದ 4 ದಿನಗಳ ಹಿಂದೆ ಗ್ರಾಮವನ್ನ ಬಂದ್ ಪ್ರತಿಭಟನೆ ನಡೆಸಿದ್ದರು.

ಅಂದು ಗ್ರಾಮಸ್ಥರ ಅಳಲು ಕೇಳಲು ಆಗಮಿಸದ ರಾಯಬಾಗ ಶಾಸಕ ದುರ್ಯೋಧನ ಐಹೊಳೆ ನಾಲ್ಕು ದಿನಗಳ ಬಳಿಕ ಕಂಕಣವಾಡಿ ಗ್ರಾಮಕ್ಕೆ ಸಮಸ್ಯೆ ಕೆಳಲೆಂದೆ ಆಗಮಿಸಿದ್ದರು. ಆದರೆ, ಜನರ ಸಮಸ್ಯೆ ಕೇಳಲು ನೇರ ಜನರ ಮನೆಗೆ ತೆರಳದ ಶಾಸಕ ಐಹೊಳೆ ತಮ್ಮ ಬೆಂಬಲಿಗರ ಮನೆಗೆ ತೆರಳಿದ್ದಾರೆ. ಅಲ್ಲಿಂದಲೇ ಯಾರಿಗೆ ಸಮಸ್ಯೆ ಇದೆಯೋ ಅವರನ್ನ ಇಲ್ಲಿಗೆ ಕರೆಸಿ ಎಂದಿದ್ದಾರೆ.

ಇನ್ನು ಶಾಸಕರ ದರ್ಪದ ಮಾತಿಗೆ ಗರಂ ಆದ ಸ್ಥಳೀಯರು ಶಾಸಕ ಐಹೊಳೆ ವಿರುದ್ದ ಪ್ರತಿಭಟನೆ ನಡೆಸಿದ್ದಾರೆ. ನಿಪ್ಪಾಣಿ ಮುಧೋಳ ರಾಜ್ಯ ಹೆದ್ದಾರಿ ತಡೆದು ಶಾಸಕರ ವಿರುದ್ಧ ಘೋಷಣೆ ಕೂಗುತ್ತಿದ್ದಂತೆ ಬೆಂಬಲಿಗನ ಮನೆಯಿಂದ ಶಾಸಕ ಐಹೊಳೆ ಕಾಲ್ಕಿತ್ತು ಜನರ ಬಳಿ ಬಂದಿದ್ದಾರೆ. ಶಾಸಕರು ಆಗಮಿಸುತ್ತಿದ್ದಂತೆ ಜನರು ಮತ್ತು ಶಾಸಕ ದುರ್ಯೋಧನ ಐಹೊಳೆ ಮಧ್ಯೆ ಮಾತಿನ ಚಕಮಕಿ ನಡೆದಿದೆ ಶಾಸಕ ಐಹೊಳೆಗೆ ಘೇರಾವ ಹಾಕಿ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜನರನ್ನ ಸಮಾಧಾನ ಪಡಿಸಲು ಅಲ್ಲಿ ಜನ ಸೇರಿದರು ಹಾಗಾಗಿ ಹೋಗಿದ್ದೆ ನೀವು ಮನೆಗೆ ಕರೆಯಿರಿ ನಾನು ನಿಮ್ಮ ಮನೆಗೂ ಬರ್ತಿನಿ ಎಂದು ಸಮಾಧಾನ ಪಡಿಸಲು ಮುಂದಾದರು. ಆದರೆ, ಅದಕ್ಕೆ ಬಗ್ಗದ ಜನ ಮನೆಗೆ ಬರೋದಾದ್ರೆ ನಮ್ಮ ಜಾಗದ ಹಕ್ಕುಪತ್ರದ ಸಮೇತ ಬನ್ನಿ ಎಂದು ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ : ಸಾಲ ಮರುಪಾವತಿಗೆ ಬ್ಯಾಂಕುಗಳು ಒತ್ತಡ ; ಒಡವೆ ಅಡವಿಟ್ಟು ಕಂತು ಕಟ್ಟುತ್ತಿರುವ ಕೃಷಿಕರು

ರಾಯಬಾಗ ಕ್ಷೇತ್ರದ ಶಾಸಕ ದುರ್ಯೋಧನ ಐಹೊಳೆ ಅವರೇ ಈಗ ಸರಕಾರಕ್ಕೆ ಚುಕ್ಕಿ ಗುರುತಿನ ಪ್ರಶ್ನೆಯಲ್ಲಿ ಕೇಳಿದ ಕಾರಣ ಸರಕಾರ ಈಗ ಗೈರಾಣ ಜಮೀನನ್ನ ಖಾಲಿ ಮಾಡಿಸಲು ಮುಂದಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಕಳೆದ 30 ವರ್ಷಗಳಿಂದ ನಾವು ಇಲ್ಲಿಯೆ ವಾಸವಾಗಿದ್ದೇವು ಆದರೆ, ಶಾಸಕರು ಕೇಳಿದ ಪ್ರಶ್ನೆಯಿಂದಾಗಿ ಸರ್ಕಾರ ನಮ್ಮನ್ನ ಇಲ್ಲಿಂದ ಖಾಲಿ ಮಾಡಿಸಲು ಮುಂದಾಗಿದೆ. ನಮಗೆ ಬೇರೆ ಜಾಗ ಕೋಡಿಸಬೇಕು. ಇಲ್ಲಾ ಅಕ್ರಮ ಸಕ್ರಮದಡಿ ನಮಗೆ ಶಾಸಕರೆ ಈಗ ಹಕ್ಕುಪತ್ರ ಕೋಡಿಸಬೇಕು ಎಂದು ಜನರು ಆಗ್ರಹಿಸಿದ್ದಾರೆ.
First published: