ಕೋಲಾರದ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ಹಗಲು ದರೋಡೆ; ರೈತರ ಗೋಳು ಕೇಳೋರಿಲ್ಲ

ಆನ್‍ಲೈನ್ ಮಾರ್ಕೆಟಿಂಗ್ ಮೂಲಕ ಮಾರಾಟವಾದ ಗೂಡಿನ ಹಣವನ್ನು ರೈತರಿಗೆ ನೀಡುವುದಕ್ಕೆ  ಅಧಿಕಾರಿಗಳ ಸತ್ತಾಯಿಸುತ್ತಿದ್ದಾರೆ. ಅಲ್ಲದೇ ಆನ್​ಲೈನ್​ ಬಿಲ್ಲಿಂಗ್ ಆದರು ಹಣ ನೀಡುವುದಿಲ್ಲ.

news18-kannada
Updated:September 19, 2020, 7:19 AM IST
ಕೋಲಾರದ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ಹಗಲು ದರೋಡೆ; ರೈತರ ಗೋಳು ಕೇಳೋರಿಲ್ಲ
ರೇಷ್ಮೆ ಮಾರುಕಟ್ಟೆ
  • Share this:
ಕೋಲಾರ (ಸೆ.17): ರೇಷ್ಮೆಗೆ ಈಗಾಗಲೇ ಸೂಕ್ತ ಬೆಲೆ ಸಿಗದೆ ಕಂಗಲಾಗಿದ್ದಾರೆ. ಈ ನಡುವೆ ರೈತರ ರೇಷ್ಮೆ ರೀಲರ್​ಗಳನ್ನೇ ಲೂಟಿಕೋರರು ದೋಚುತ್ತಿರುವುದು ಇಲ್ಲಿನ ರೈತರಿಗೆ ಬರೆ ಎಳೆದಂತೆ ಆಗಿದೆ. ಸರ್ಕಾರ ಮಾರುಕಟ್ಟೆಯಲ್ಲಿನ ಕಾಳಸಂತೆ ತಡೆಯಲು ರೇಷ್ಮೆ ಗೂಡುಗಳ ಮಾರಾಟಕ್ಕೆ ಆನ್ಲೈನ್​ ಸೇವೆ ಒದಗಿಸಿದೆ. ಆದರೆ, ಇದಕ್ಕೆ ಇಲ್ಲಿನ ಮಾರುಕಟ್ಟೆಯಲ್ಲಿ ಯಾವುದೇ ಕಿಮ್ಮತ್ತಿಲ್ಲ ಎಂಬಂತೆ ಆಗಿದೆ. ಅಧಿಕಾರಿಗಳ ದಿವ್ಯ ನಿರ್ಲಕ್ಷ ಹಾಗೂ ಸರ್ಕಾರದ ಆದೇಶ ಪಾಲನೆಯಾಗದ ಹಿನ್ನಲೆ ಈ ರೀತಿ ಹಗಲು ದರೋಡೆ ನಡೆಯುತ್ತಿದೆ ಎಂದು ಇಲ್ಲಿನ ರೇಷ್ಮೆ ಬೆಳೆಗಾರರು ಆಪಾದಿಸಿದ್ದಾರೆ.  ಆನ್​ಲೈನ್​ ಮಾರಾಟಕ್ಕೆ ಇಲ್ಲಿನ ಮಾರುಕಟ್ಟೆಗೆ ತಂದ ರೇಷ್ಮೆ ರೀಲರ್​ಗಳನ್ನು ಹರಾಜು ಸಮಯದಲ್ಲಿ ಕೆಲವು ಲೂಟಿಕೋರರು ಪರೀಕ್ಷೆ ಮಾಡುವ ನೆಪದಲ್ಲಿ ಹೊತ್ತೊಯ್ಯತ್ತಿದ್ದಾರೆ. ಹರಾಜು ವೇಳೆ ಸ್ಥಳಕ್ಕೆ ಬರುವ ವ್ಯಕ್ತಿಗಳು ರೀಲರ್​ಗಳ ಪರೀಕ್ಷೆ ನೆಪದಲ್ಲಿ ಕಾಲು-ಅರ್ಧ ಕೆಜಿಯಷ್ಟು ರಿಲರ್​​ ಹೊತ್ತೊಯ್ಯುತ್ತಿದ್ದಾರೆ. ಇದರಿಂದ ರೈತರಿಗೆ ನಷ್ಟವಾಗುತ್ತಿದೆ. 

ಪ್ರತಿ ಲಾಟ್‍ನಿಂದಲೂ ಐದಕ್ಕೂ ಹೆಚ್ಚು ರೀಲರ್​ಗಳನ್ನು  ಪರೀಕ್ಷೆ ಹೆಸರಲ್ಲಿ ತೆಗೆದುಕೊಂಡು ಹೋಗುತ್ತಿದ್ದಾರೆ. ಈ ಬಗ್ಗೆ ವಿಡಿಯೋ ಚಿತ್ರೀಕರಿಸಿ ಅಧಿಕಾರಿಗಳ ಬಳಿ ಪ್ರಶ್ನಿಸಿದರೂ, ಯಾವುದೇ ಪ್ರಯೋಜನ ಆಗಿಲ್ಲವೆಂದು ರೈತರು ಆರೋಪಿಸಿದ್ದಾರೆ.

ಇದನ್ನೂ ಓದಿ: ವಿಜಯೇಂದ್ರ ಸೂಪರ್ ಸಿಎಂ ಅಲ್ಲ, ಮುಂದೊಂದು ದಿನ ಸಿಎಂ ಆಗುತ್ತಾರೆ: ಶಾಸಕ ಪ್ರೀತಮ್ ಗೌಡ

ಇನ್ನು ಆನ್‍ಲೈನ್ ಮಾರ್ಕೆಟಿಂಗ್ ಮೂಲಕ ಮಾರಾಟವಾದ ಗೂಡಿನ ಹಣವನ್ನು ರೈತರಿಗೆ ನೀಡುವುದಕ್ಕೆ  ಅಧಿಕಾರಿಗಳ ಸತ್ತಾಯಿಸುತ್ತಿದ್ದಾರೆ. ಅಲ್ಲದೇ ಆನ್​ಲೈನ್​ ಬಿಲ್ಲಿಂಗ್ ಆದರು ಹಣ ನೀಡುವುದಿಲ್ಲ.  ಇದಕ್ಕೆಲ್ಲಾ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವೆಂದು ರೈತರು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ರೇಷ್ಮೆ ಮಾರುಕಟ್ಟೆ ಜಂಟಿ ನಿರ್ದೇಶಕ ರಾಧಾಕೃಷ್ಣ ರೈತರು ಈ ರೀತಿ ಯಾರಿಗೂ ಪರೀಕ್ಷೆಗೆ ಗೂಡು ಕೊಡಬಾರದು ಎಂಬ ಹಾರಿಕೆ ಉತ್ತರ ನೀಡುತ್ತಾರೆ.

ರೀಲರ್ಸ್​ ಸಂಘದಲ್ಲಿ ಕೂಡ ಈ ಬಗ್ಗೆ ಧ್ವನಿ ಎತ್ತಲಾಗಿದ್ದು, ಸಹಾಯ ಮಾಡಬೇಕಿದ್ದ ಸಂಘದ ಅಧ್ಯಕ್ಷರು, ಇದೆಲ್ಲಾ ರೈತರಿಗಾಗಿಯೇ ಮಾಡುತ್ತಿರುವುದಾಗಿ ಸಬೂಬು ಹೇಳುತ್ತಾರೆ.
Published by: Seema R
First published: September 19, 2020, 7:19 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading