ಸುಮಲತಾ ಕೊಳ್ಳೆಗಾಲದ ಮಾಟಗಾರರಂತೆ ನಾನು ಭಸ್ಮ ಆಗೋಗಲಿ ಎಂದಿದ್ದಾರೆ: ರವೀಂದ್ರ ಶ್ರೀಕಂಠಯ್ಯ ಆರೋಪ

KRS ಬಿರುಕು ಬಿಟ್ಟಿದೆ ಎಂದು ರಾಜ್ಯದಲ್ಲಿ ಅಶಾಂತಿ ಮೂಡಿಸಿದ ನಿಮ್ಮನ್ನ ನಟೋರಿಯಸ್ ಎನ್ನದೇ ಇನ್ನೇನು ಅನ್ನಬೇಕು. ಸಾಮಾನ್ಯ ಜನ ಈ ಹೇಳಿಕೆ ನೀಡಿದ್ರೆ ಇಷ್ಟೋತ್ತಿಗೆ ಕೇಸ್ ಹಾಕಿರೋರು.

ಸುಮಲತಾ, ರವೀಂದ್ರ ಶ್ರೀಕಂಠಯ್ಯ

ಸುಮಲತಾ, ರವೀಂದ್ರ ಶ್ರೀಕಂಠಯ್ಯ

  • Share this:
ಮಂಡ್ಯ: ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಹಾಗೂ ಮಂಡ್ಯ ಸಂಸದೆ ಸುಮಲತಾ ಅಂಬರೀಶ್​ ನಡುವಿನ ಜಟಾಪಟಿ ಮುಗಿಯುವ ಲಕ್ಷಣಗಳೇ ಕಾಣುತ್ತಿಲ್ಲ. ಇಬ್ಬರೂ ಮುಖಂಡರ ಬೆಂಬಲಿಗರ ವಾಕ್ಸಮರವೂ ತಾರಕಕ್ಕೇರಿದೆ. ನಿನ್ನೆ ಅಂಬಿ ಆಪ್ತ ಬಳಗ ಎಚ್​ಡಿಕೆ, ರವೀಂದ್ರ ಶ್ರೀಕಂಠಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅದಕ್ಕೆ ಇಂದು ಅರಕೆರೆ ಗ್ರಾಮದಲ್ಲಿ ಪ್ರತಿಕ್ರಿಯಿಸಿದ ಶಾಸಕ ರವೀಂದ್ರ ಶ್ರೀಕಂಠಯ್ಯ ಪ್ರತ್ಯಾರೋಪ ಮಾಡಿದ್ದಾರೆ. ಸುಮಲತಾ ಅಳೋದಕ್ಕೆ ಮಂಡ್ಯ ಜನ ಒಮ್ಮೆ ಬೆಲೆ ಕೊಟ್ಟಿದ್ದಾರೆ. ಅದನ್ನೇ ಮಾಡುತ್ತಿದ್ದರೆ ಜನ ವ್ಯಂಗ್ಯ ಮಾಡುತ್ತಾರೆ ಎಂದರು.

ನಾನು ಒಬ್ಬ ಶಾಸಕ, ನನ್ನ ಭಸ್ಮ ಆಗೋಗಲಿ ಎಂದು ಸುಮಲತಾ ಹೇಳಿರೋದು ಸರಿನಾ ಎಂದು ಪ್ರಶ್ನಿಸಿದರು. ಕೊಳ್ಳೆಗಾಲ ಮಾಟಗಾರರಂತೆ ಭಸ್ಮ ಆಗೋಗಲಿ, ಮಣ್ಣಾಗಾಗೋಲಿ ಎಂದಿದ್ದಾರೆ ಎಂದು ಕಿಡಿಕಾರಿದರು. ಯಾರು ಯಾರೋ ಜಿಲ್ಲಾಧಿಕಾರಿನ, ಅಧಿಕಾರಿಗಳನ್ನ ಪ್ರಶ್ನೆ ಮಾಡುತ್ತಾರೆ. ಎಲ್ಲರ ಪ್ರತಿಕ್ರಿಯೆಗಳನ್ನ ಗಮನಿಸುತ್ತಿದ್ದೇನೆ. ಸಂಸದರು ಈಗ ದಾರಿ ತಪ್ಪಿದ್ದಾರೆ. KRS ವಿಚಾರ ಬಿಟ್ಟು ಈಗ ಅಧಿಕಾರಿಗಳ ಟ್ರಾನ್ಸಫರ್ ವಿಚಾರಕ್ಕೆ ಹೋಗಿದ್ದಾರೆ. ಏನನ್ನು ಮುಚ್ಚಿಕೊಳ್ಳಲು ಈ ಹೋರಾಟ ಮಾಡುತ್ತಿದ್ದಾರೆ ಎಂದು ರವೀಂದ್ರ ಶ್ರೀಕಂಠಯ್ಯ ಪ್ರಶ್ನಿಸಿದರು.

ನಿಮಗೆ ನೀವೆ ಹಿಟ್ಲರ್ ಸರ್ಕಾರ ಎಂದುಕೊಂಡಿದ್ದೀರಾ? ಒಂದು ಗಣಿಗಾರಿಕೆ ನಿಲ್ಲಿಸಿ ನೋಡಿ ಜನ ಬೀದಿಗೆ ಬರುತ್ತಾರೆ. ಈಗಲೇ ಕಾಮಗಾರಿಗಳಿಗೆ ಜಲ್ಲಿ, ಕಲ್ಲು ಸಿಗುತ್ತಿಲ್ಲ. ಅಕ್ರಮ ಇದ್ದರೆ ಸರ್ಕಾರದ ಮಟ್ಟದಲ್ಲಿ ತೀರ್ಮಾನ ಮಾಡಿ ಕ್ರಮಕೈಗೊಳ್ಳಲಿ. KRS ಬಿರುಕು ಬಿಟ್ಟಿದೆ ಎಂದು ರಾಜ್ಯದಲ್ಲಿ ಅಶಾಂತಿ ಮೂಡಿಸಿದ ನಿಮ್ಮನ್ನ ನಟೋರಿಯಸ್ ಎನ್ನದೇ ಇನ್ನೇನು ಹೇಳಬೇಕು. ಸಾಮಾನ್ಯ ಜನ ಈ ಹೇಳಿಕೆ ನೀಡಿದ್ರೆ ಇಷ್ಟೋತ್ತಿಗೆ ಕೇಸ್ ಹಾಕಿರೋರು. ಇವರ ವಿರುದ್ಧ ಕ್ರಮ ಏಕಿಲ್ಲ, ನಾನು ಇವರನ್ನ ಬಂಧಿಸಿ ಎನ್ನಲ್ಲ ಯಾಕಂದ್ರೆ ನನ್ನನ್ನ ಸಹೋದರ ಎಂದಿದ್ದಾರೆ ಎನ್ನುವ ಮೂಲಕ ಟಾಂಗ್​ ನೀಡಿದರು.

ಎಲ್ಲರೂ ಗಾಬರಿಯಾದಂತೆ ಕಾಣುತ್ತಿದೆ, ಎಮೋಷನಲ್ ಆಗಿ ಮಾತನಾಡಿ ಎಡವಟ್ಟು ಮಾಡಿಕೊಳ್ತಿದ್ದಾರೆ. ಟೆಕ್ನಿಕಲ್ ಟೀಂ KRS ಸುರಕ್ಷಿತ ಎಂದಿದ್ದಾರೆ, ಈಗಲಾದರು ಸುಮಲತಾ ಜನರ ಕ್ಷಮೆ ಕೇಳಿ ಈ ಎಪಿಸೋಡ್ ಮುಗಿಸಲಿ. ಅಳೋದು ಕರೆಯೋದಕ್ಕೆ ಮಂಡ್ಯ ಜನ ಒಂದ್ಸಲ ಬೆಲೆ ಕೊಟ್ಟಿದ್ದಾರೆ. ಮತ್ತೆ ಮತ್ತೆ ಅದನ್ನೇ ಮಾಡಿದ್ರೆ ಜನ ವ್ಯಂಗ್ಯ ಮಾಡ್ತಾರೆ. ನನಗೆ ಭಸ್ಮ ಆಗಲಿ, ಮಣ್ಣಾಗೋಗಲಿ ಎಂದು ನನಗೆ ಹೇಳಿದ್ರಲ್ಲ, ಈ ಮಾತುಗಳು ಯಾರ ಗಮನಕ್ಕೂ ಬಂದಿಲ್ವ? ಇಂತಹ ಮಾತುಗಳು ಸರಿನಾ ಎಂದು ಆಕ್ರೋಶ ಹೊರಹಾಕಿದರು.

ಇದನ್ನು ಓದಿ: ನನ್ನ ಮತ್ತು ಸುಮಲತಾರ ಅಶ್ಲೀಲ ವಿಡಿಯೋ ಸೃಷ್ಟಿಸಲು HDK ಯತ್ನಿಸಿದ್ದರು : ರಾಕ್​​ಲೈನ್​​ ಗಂಭೀರ ಆರೋಪ!

ಹೋಟೆಲ್‌ನಲ್ಲಿ ನಡೆದ ತಮ್ಮ ಆಪ್ತರ ಮಾತುಕತೆ ಬಗ್ಗೆ ಸಂಸದರೇ ಒಪ್ಪಿದ್ದಾರೆ. ಆದ್ರೆ ಮಾಧ್ಯಮಗಳು ಈ ವಿಚಾರವನ್ನೆಲ್ಲಾ ಬಿಟ್ಟು ಬೇರೆಬೇರೆ ತೋರಿಸುತ್ತಿದ್ದಾರೆ. ಈ ಮಧ್ಯೆ ನನ್ನ ಸ್ನೇಹಿತ ಅಭಿಷೇಕ್ ಹೊಸ ಆವಿಷ್ಕಾರ ಮಾಡೋಕೆ ಪದಗಳನ್ನ ಬಳಸಿದ್ದಾರೆ. ನಾನು ಎಲ್ಲೂ ಅಂಬರೀಶ್ ಅಕ್ರಮ ಗಣಿಗಾರಿಕೆ ಮಾಡುತ್ತಿದ್ದರು ಎಂದಿಲ್ಲ. ಅಂಬರೀಶ್ ಬೆಂಬಲಿಗರು ಮಾಡುತ್ತಿದ್ದರು ಎಂದಿದ್ದೇನೆ. ಸಂಸದರು ಕೇಂದ್ರ ಸರ್ಕಾರದ ಪ್ರತಿನಿಧಿ ಸಮಾಜದ ತಪ್ಪು ಹೇಳುವುದು ಸರಿ. ಆದರೆ ನಮ್ಮ ರಾಜ್ಯದ ಅಧಿಕಾರಿಗಳಿಗೆ ಏನು ಮಾಡಬೇಕು ಅಂತ ಹೇಳುವುದು ಮಾಡುವುದು ಸರಿಯಲ್ಲ ಎಂದರು.

ನಾನು ಎಲ್ಲಿ ಓದಿದ್ದು ಎಂದು ಕೇಳ್ತೀರಾ.? ನಾನು ಓದಿದ್ದು ಸರ್ಕಾರಿ ಶಾಲೆಯಲ್ಲಿ. ನಮ್ಮ ಆಸ್ತಿ ಪಾಸ್ತಿಯನ್ನ ಸಾರ್ವಜನಿಕ ಬದುಕಿಗೆ ಕೊಟ್ಟು ರಾಜಕಾರಣ ಮಾಡಿದ್ದೇನೆ, ಸಿನಿಮಾದಿಂದ ಹಣ ಮಾಡಿಲ್ಲ ಎಂದು ತಿರುಗೇಟು ಕೊಟ್ಟರು. ನಿಮಗೆ ನೀವೇ ಸೂಪರ್ ಪವರ್ ಎಂದು ಭಾವಿಸಬೇಡಿ. ಅಂಬರೀಶ್‌ರವರನ್ನ, ನನ್ನನ್ನ ಸೋಲಿಸಿದ್ದಾರೆ ಮಂಡ್ಯ ಜನ ಎಂದು ಎಚ್ಚರಿಸಿದರು.

ಅಂಬರೀಶ್​ ಅವರು ಇದ್ದಾಗ ನಾನು ಮುಂಗಾರು ಮಳೆ ಗಣೇಶ್ ತರ ಇದ್ದೆ, ಈಗ ವಜ್ರಮುನಿಯಂತೆ ಎಂದು ರಾಕ್​​ಲೈನ್​ ಹೇಳಿದ್ದಾರೆ. ವಜ್ರಮುನಿ ಒಳ್ಳೆಯ ನಟ. ಅವರಿಂದಲೇ ಸಿನಿಮಾಗಳಲ್ಲಿ ನಾಯಕನ ಪಾತ್ರಕ್ಕೆ ತೂಕ ಬರುತ್ತಿತ್ತು. ರಾಕ್​ಲೈನ್​ ಯಾವ ಅರ್ಥದಲ್ಲಿ ಅವರ ಹೆಸರನ್ನು ಬಳಸಿದ್ದಾರೆ ಗೊತ್ತಿಲ್ಲ ಎಂದರು.
Published by:Kavya V
First published: