HOME » NEWS » District » RATHI KAMA ADORNED WITH GOLD JEWELERY IN GADAGA RHHSN SKG

ಬಂಗಾರದ ಆಭರಣಗಳಿಂದ ಶೃಂಗಾರಗೊಂಡ ರತಿ-ಕಾಮರು! ಇಷ್ಟಾರ್ಥಸಿದ್ಧಿಗೆ ಚಿನ್ನದ ಹರಕೆ ಹೊತ್ತುಕೊಳ್ಳುವ ಜನರು!

ಈ ರತಿ ಕಾಮರಿಗೆ ನಡೆದುಕೊಂಡರೆ ಮದುವೆಯಾಗದವರಿಗೆ ಕಂಕಣ ಭಾಗ್ಯ, ಮಕ್ಕಳಾಗದವರಿಗೆ ಸಂತಾನ ಭಾಗ್ಯ, ನಿರುದ್ಯೋಗಿಗಳಿಗೆ ನೌಕರಿ ಭಾಗ್ಯ, ಸಿರಿತನ ಹೀಗೆ ಬೇಡಿಬಂದ ಭಕ್ತರಿಗೆ ಬಯಸಿದ್ದನ್ನೆಲ್ಲವನ್ನು ನೀಡುವ ಸರಸ ಭಂಗಿಯ ಕಲ್ಪ ವೃಕ್ಷವಿದ್ದಂತೆ.

news18-kannada
Updated:April 1, 2021, 4:05 PM IST
ಬಂಗಾರದ ಆಭರಣಗಳಿಂದ ಶೃಂಗಾರಗೊಂಡ ರತಿ-ಕಾಮರು! ಇಷ್ಟಾರ್ಥಸಿದ್ಧಿಗೆ ಚಿನ್ನದ ಹರಕೆ ಹೊತ್ತುಕೊಳ್ಳುವ ಜನರು!
ಬಂಗಾರದ ಆಭರಣಗಳಿಂದ ಶೃಂಗಾರಗೊಂಡಿರುವ ರತಿ-ಕಾಮ
  • Share this:
ಗದಗ: ನಗರದ ಕಿಲ್ಲಾ ಓಣಿಯಲ್ಲಿ ವಿಶೇಷ ಹಾಗೂ ವಿಭಿನ್ನವಾದ ರತಿ-ಕಾಮರಿದ್ದಾರೆ. ಅವರು ಮದುವೆ ಆಗದವರಿಗೆ ಕಂಕಣ ಭಾಗ್ಯ. ಮಕ್ಕಳು ಆಗದವರಿಗೆ ಸಂತಾನ ಭಾಗ್ಯ. ನಿರುದ್ಯೋಗಿಗಳಿಗೆ ನೌಕರಿ ಭಾಗ್ಯ. ಬಡವರಿಗೆ ಸಿರಿತನ ಭಾಗ್ಯ ಕರುಣಿಸುತ್ತಾರೆ. ಏನ್ರಿ ಇದು ಚುನಾವಣೆಗಳ ಭರವಸೆ ಅಂತಾ ಅಂದುಕೊಳ್ಳಬೇಡಿ. ಇದು ಬೇಡಿ ಬಂದವರಿಗೆ ಬಯಸಿದ್ದನ್ನು ನೀಡುವ ಗದಗದ ಇಷ್ಟಾರ್ಥ ರತಿ-ಕಾಮರ ಕಥೆಯಿದು.

ಹೌದು, ನಗರದ ಕಿಲ್ಲಾ ಓಣಿಯ ಬಂಗಾರದ ರತಿ-ಮನ್ಮತರಿವರು. ನಗರದಲ್ಲಿ 156 ವರ್ಷಗಳಿಂದ ಈ ಕಾಮ-ರತಿಯರನ್ನು ಪ್ರತಿಷ್ಠಾಪಿಸುತ್ತಾ ಬಂದಿದ್ದಾರೆ. ಇದಕ್ಕೆ ಸರ್ಕಾರಿ ರತಿ-ಕಾಮರು ಎಂತೆಲ್ಲಾ ಕರೆಯುತ್ತಾರೆ. ಇಲ್ಲಿಯ ರತಿಗೆ ಪ್ರತಿವರ್ಷ ಸುಮಾರು 25 ರಿಂದ 30 ಕೆಜಿ ವರೆಗೆ ಬಂಗಾರದ ವಿವಿಧ ಲೇಪನಗಳನ್ನ ಹಾಕಲಾಗುತ್ತದೆ. ಮನ್ಮಥ ಅಪ್ಪಟ ಚಿನ್ನದ ಕಂಠಿಹಾರ, ರತಿಗೆ ಕಿಲೋ ಗಟ್ಟಲೆ ಚಿನ್ನದ ಸರಗಳಿಂದ ಶೋಭಾಯಮಾನಗೊಳ್ಳುವ ರತಿ-ಮನ್ಮಥರನ್ನು ಅದ್ದೂರಿಯಾಗಿ ಅಲಂಕಾರ ಮಾಡುತ್ತಾರೆ. ತಮ್ಮ ಮನೆಯಲ್ಲಿರುವ ಬಂಗಾರದ ವಸ್ತುಗಳನ್ನು ಈ ರತಿಗೆ ನೀಡಿದರೆ ಬರುವ ವರ್ಷದಲ್ಲಿ ಮತ್ತಷ್ಟು ಬಂಗಾರ ಹೆಚ್ಚಾಗುತ್ತೆ ಎಂಬ ನಂಬಿಕೆ.

ರಾಶಿಗಟ್ಟಲೆ ಬಂಗಾರದ ಆಭರಣಗಳು ಇಲ್ಲಿ ಜಮಾವಣೆಯಾಗಿರುತ್ತವೆ. ಭಕ್ತರು ಕೊಡುವ ಆಭರಣಗಳನ್ನು ಈ ರತಿ-ಕಾಮರ ಕಮೀಟಿಯವರು ಅವುಗಳಿಗೆ ಅವರ ಹೆಸರು ಬರೆದು ನೋಂದಾಯಿಸಿಕೊಂಡು ಒಂದು ಚೀಟಿ ಕೊಡ್ತಾರೆ. ಆ ಬಂಗಾರಕ್ಕೆ ಭಕ್ತರ ಹೆಸರಿನ ಒಂದು ಸಣ್ಣ ಚೀಟಿ ಸಹ ಬರೆದು ಹಾಕಲಾಗುತ್ತೆ. ಜೊತೆಗೆ ಭದ್ರತೆ ಕೂಡಾ ಇರುವುದರಿಂದ ಒಂದು ಗುಂಜಿ ಬಂಗಾರ ಸಹ ಕದಲುವುದಿಲ್ಲ. ಭಕ್ತರಿಗೆ ಒಳ್ಳೆಯದಾಗುತ್ತೆ ಎಂಬ ನಂಬಿಕೆಯಿಂದ ಇದು ಹಿಂದಿನಿಂದ ನಡೆದು ಬಂದ ಸಂಪ್ರದಾಯ ಅಂತಿದ್ದಾರೆ ಸ್ಥಳೀಯರು.

ಇದನ್ನು ಓದಿ: ಬೆಂಗಳೂರಿನಲ್ಲಿ ಕೋವಿಡ್ ಹೆಚ್ಚಾಗುತ್ತಿರುವ ಸಮಯದಲ್ಲೇ ಬಿಬಿಎಂಪಿ ಆಯುಕ್ತರಾಗಿ ಗೌರವ್ ಗುಪ್ತಾ ಅಧಿಕಾರ ಸ್ವೀಕಾರ

ಕೊರೋನಾ 2ನೇ ಅಲೆಯ ಮಧ್ಯೆಯೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. 156 ವರ್ಷಗಳ ಇತಿಹಾಸವಿರುವ ನಗರದ ರತಿ-ಕಾಮರ ಹೋಳಿ ಆಚರಣೆಗೆ ತನ್ನದೆ ಆದ ವೈಶಿಷ್ಟ್ಯವಿದೆ. 5 ದಿನಗಳವರೆಗೆ ರತಿ ಮನ್ಮಥರನ್ನ ಪ್ರತಿಷ್ಠಾಪಿಸುತ್ತಾರೆ. ಪ್ರತಿನಿತ್ಯ ಎರಡು ಬಾರಿ ಸಿಹಿ ಅಡುಗೆ ಎಡೆಮಾಡುವ ಮೂಲಕ ಪೂಜೆ ಮಾಡುತ್ತಾರೆ. ಈ ರತಿ ಕಾಮರಿಗೆ ನಡೆದುಕೊಂಡರೆ ಮದುವೆಯಾಗದವರಿಗೆ ಕಂಕಣ ಭಾಗ್ಯ, ಮಕ್ಕಳಾಗದವರಿಗೆ ಸಂತಾನ ಭಾಗ್ಯ, ನಿರುದ್ಯೋಗಿಗಳಿಗೆ ನೌಕರಿ ಭಾಗ್ಯ, ಸಿರಿತನ ಹೀಗೆ ಬೇಡಿಬಂದ ಭಕ್ತರಿಗೆ ಬಯಸಿದ್ದನ್ನೆಲ್ಲವನ್ನು ನೀಡುವ ಸರಸ ಭಂಗಿಯ ಕಲ್ಪ ವೃಕ್ಷವಿದ್ದಂತೆ. ಅನೇಕ ಯುವತಿಯರು ಕಂಕಣ ಕಟ್ಟಿದ್ರು, ಮಕ್ಕಳಾಗದ ಮಹಿಳೆಯರು ತೊಟ್ಟಿಲು, ಅರಿಶಿನ ಕುಂಕುಮ, ಕಣವಿಟ್ಟರು. ನಿರುದ್ಯೋಗಿಗಳು ಭಕ್ತಿಯಿಂದ ಬೇಡಿಕೊಂಡರು.  ನಂಬಿಕೆಯಿಂದ ರತಿಕಾಮರಿಗೆ ನಡೆದುಕೊಳ್ಳುವುದರಿಂದ ನಮಗೆ ಒಳ್ಳೆಯದಾಗಿದೆ ಎಂತಾರೆ ಅನೇಕರು.

ಈ ಬಂಗಾರದ ರತಿ-ಕಾಮರ ದರ್ಶನಕ್ಕೆ ಬೇರೆ ಬೇರೆ ಜಿಲ್ಲೆಯಿಂದಲೂ ಭಕ್ತರು ಬರ್ತಾರೆ. ಸುಮಾರು 30 ಕೆಜಿ ವರೆಗೆ ಬೆಳ್ಳಿ-ಬಂಗಾರ ವಸ್ತುಗಳನ್ನ ಮೂರ್ತಿಗೆ ಹಾಕ್ತಾರೆ. ಈ ಬಂಗಾರದ ರತಿ-ಕಾಮರನ್ನ ನೋಡಲು ಅನೇಕ ಭಕ್ತ ಸಮೂಹವೇ ಇಲ್ಲಿಗೆ ಹರಿದು ಬರುತ್ತದೆ. ಜನರು ತಮ್ಮ ಬೇಡಿಕೆಗಳಿಗೆ ಸರ್ಕಾರಕ್ಕೆ ಮೊರೆ ಇಟ್ಟರೆ ಅದು ಈಡೇರುತ್ತದೆಯೋ ಇಲ್ಲವೋ ಗೊತ್ತಿಲ್ಲ. ಕೊರಳಲ್ಲಿ ಕೆಜಿ ಗಟ್ಟಲೆ ಚಿನ್ನದ ಸರ ಹಾಕಿಕೊಂಡು ಮೆರೆಯುವ ಗದುಗಿನ ಸರಕಾರಿ ರತಿಕಾಮರು ಬೇಡಿಕೊಂಡ್ರೆ ಈಡೇರುತ್ತವೆ ಎಂಬ ನಂಬಿಕೆ ಇಲ್ಲಿನ ಜನರದು.ವರದಿ: ಸಂತೋಷ ಕೊಣ್ಣೂರ
Published by: HR Ramesh
First published: April 1, 2021, 4:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories