ಮಂಜಿನನಗರಿಯಲ್ಲಿ ನೀಲಿ ಸುಂದರಿಯ ಸೊಬಗು.. ಕೈ ಬೀಸಿ ಕರೆಯುತ್ತಿವೆ ನೀಲಿ ಕುರುಂಜಿ ಹೂವುಗಳು

ಮಾಂದಲಪಟ್ಟಿಯಲ್ಲಿ 12 ವರ್ಷಗಳ ಬಳಿಕ ನೀಲಿ ಕುರುಂಜಿ ಹೂವುಗಳು ಅರಳಿವೆ.ಈ ಹೂವುಗಳು ಅರಳಿದಾಗ ಗಿಡದ ಕಾಂಡದಲ್ಲಿ ಅಪಾರ ಪ್ರಮಾಣದ ಔಷಧಿಯ ಗುಣ ಅಡಗಿರುತ್ತದೆಯಂತೆ.  ಹೀಗಾಗಿ ನಾನಾ ಕಾಯಿಲೆಗೂ ಇದನ್ನು ಔಷಧಿಯಾಗಿ ಬಳಸುತ್ತಾರೆ ಎನ್ನುತ್ತಾರೆ ಸ್ಥಳೀಯರು.

ನೀಲಿ ಕುರುಂಜಿ ಹೂವುಗಳ ಮಧ್ಯೆ ಪ್ರವಾಸಿಗರು

ನೀಲಿ ಕುರುಂಜಿ ಹೂವುಗಳ ಮಧ್ಯೆ ಪ್ರವಾಸಿಗರು

  • Share this:
ಕೊಡಗು : ಕೊಡಗು ದಕ್ಷಿಣ ಕಾಶ್ಮೀರ. ಮೋಡಗಳು ಬೆಟ್ಟಗಳಿಗೆ ಮುತ್ತಿಟ್ಟು  ಭೂಮಿ ಆಕಾಶಗಳನ್ನು ಹೊಂದು ಮಾಡುವ ಪ್ರವಾಸಿ ತಾಣವಾದ ಮಾಂದಲಪಟ್ಟಿ ಅದನ್ನು ಸಾಕ್ಷೀಕರಿಸುತ್ತದೆ. ಆದರೀಗ ಮಾಂದಲಪಟ್ಟಿ ಎನ್ನುವ ಮುಗಿಲಪೇಟೆಯನ್ನು ಮಂಜಿನ ಬದಲಾಗಿ ನೀಲಿ ಪುಷ್ಪಗಳು ಸಿಂಗಾರ ಮಾಡಿವೆ. ಎಲ್ಲಿ ನೋಡಿದರೂ ನೀಲ ಕುರುಂಜಿ ಹೂಗಳ ಕಲರವ. ಇಡೀ ಮುಗಿಲಪೇಟೆ ಸಂಪೂರ್ಣ ನೀಲ ವರ್ಣಕ್ಕೆ ತಿರುಗಿ  ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಆ ಸೌಂದರ್ಯದ ಕಣಿಯ ನೀವು ಒಮ್ಮೆ ಕಣ್ತುಂಬಿಕೊಳ್ಳಿ. ಹೂ ಚೆಲುವೆಲ್ಲಾ ನನ್ನದೆಂದಿತು ಎನ್ನೋ ಹಾಡು ಕೊಡಗಿನ ಮಾಂದಲಪಟ್ಟಿಯಲ್ಲಿ ಅಕ್ಷರಶಃ ಸತ್ಯವಾಗಿಸಿದೆ.

ಜಗತ್ತಿನ ಸೌಂದರ್ಯವನ್ನೆಲ್ಲಾ ತನ್ನಲ್ಲೇ ಹುದುಗಿಸಿಕೊಂಡಿರೋ ಪ್ರಕೃತಿಯ ಸಿರಿತನದ ಎದುರು ಉಳಿದೆಲ್ಲವು ನಶ್ವರವೇ ಸರಿ. ನೀಲಿ ಕುರುಂಜಿ‍ ಎಂಬ ಹೆಸರಿನ ಅಪರೂಪದ ಹೂವೊಂದು ಅರಳಿ ನಿಂತು ಇಡೀ ಪ್ರಕೃತಿ ಸೌಂದರ್ಯದ ಶ್ರೀಮಂತಿಕೆಯನ್ನ ಇಮ್ಮಡಿಗೊಳಿಸಿದೆ. ಅದ್ರಲ್ಲೂ ಕಣ್ಣಾಯಿಸಿದಷ್ಟು ದೂರದವರೆಗೂ ಬೆಟ್ಟವೇ ಹೂಬಿಟ್ಟಂತೆ ಕಾಣುವ ವಿಸ್ಮಯದ ದೃಶ್ಯಕಾವ್ಯವದು. ಮಾಂದಲಪಟ್ಟಿಯ ಮೋಡಗಳ ನೋಡಲು ಬರುವ ಪ್ರವಾಸಿಗರನ್ನು ಈ ನೀಲಿ ಕುರುಂಜಿ ಹೂವುಗಳು ಸೂಜಿಗಲ್ಲಿನಂತೆ ಸೆಳೆಯುತ್ತಿವೆ. ಹೀಗಾಗಿ ಮಾಂದಲಪಟ್ಟಿಗೆ ಬಂದೊಡನೆ ಪ್ರವಾಸಿಗರು ಮೂಕವಿಸ್ಮಿತರಾಗಿ ಹೂವಿನ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

ಹೂವುಗಳ ಮಧ್ಯೆ ನಿಂತು ಫೋಟೋಕೆ ಫೋಸ್ ಕೊಟ್ಟು ತಮ್ಮ ಕಣ್ಮನಗಳ ತಣಿಸಿಕೊಳ್ಳುತ್ತಿದ್ದಾರೆ. ಹೂವುಗಳನ್ನೇ ತಬ್ಬಿ ಮುದ್ದಾಡಿ ಎಂಜಾಯ್ ಮಾಡುತ್ತಿದ್ದಾರೆ. ಈ ಎಲ್ಲಾ ದೃಶ್ಯಗಳನ್ನು ನೀವು ಕಣ್ತುಂಬಿಕೊಳ್ಳೋಕೆ ದಕ್ಷಿಣ ಕಾಶ್ಮೀರವೆಂದೆ ಪ್ರಸಿದ್ಧಿ ಪಡೆದಿರುವ ಕೊಡಗು ಜಿಲ್ಲೆಯ ಮಾಂದಲಪಟ್ಟಿ (ಮುಗಿಲು ‌ಪೇಟೆ)ಗೆ ಬರಬೇಕು. ಸಾವಿರಾರು ಎಕರೆಯಷ್ಟು ವಿಸ್ತಾರವಾದ ಈ ಬೆಟ್ಟದಲ್ಲಿ ಅರಳಿರುವ ಹೂಗಳು ಇಡೀ ಪರಿಸರವನ್ನು ನೀಲವರ್ಣಕ್ಕೆ ತಿರುಗಿಸಿವೆ. ಇದರಿಂದ ಮುಗಿಲಪೇಟೆಯಲ್ಲಿ ಹಬ್ಬದ ವಾತಾವರಣವೇ ಮನೆಮಾಡಿದೆ. ಹಲವು ವರ್ಷಗಳ ಬಳಿಕ ಅರಳಿರುವ ಹೂವುಗಳು ದೇಶ ವಿದೇಶಗಳಿಂದ ಬರುತ್ತಿರುವ ಪ್ರವಾಸಿಗರನ್ನು ಕಣ್ಮನ ಕೋರೈಸಿ ತಮ್ಮತ್ತ ಸೆಳೆಯುತ್ತಿವೆ ಎನ್ನುತ್ತಾರ. ಬೆಂಗಳೂರಿನಿಂದ ಬಂದಿದ್ದ ಪ್ರವಾಸಿ ಹೇಮಾ.

ಇದನ್ನೂ ಓದಿ: ತನ್ನ ಪಾಲಿನ ಆಸ್ತಿಯನ್ನು ವೃದ್ಧಾಶ್ರಮಕ್ಕೆ ದಾನ ಮಾಡಿದ ಅಜ್ಜಿ..!

ಮಾಂದಲಪಟ್ಟಿಯಲ್ಲಿ 12 ವರ್ಷಗಳ ಬಳಿಕ ನೀಲಿ ಕುರುಂಜಿ ಹೂವುಗಳು ಅರಳಿವೆ. ಧಾರ್ಮಿಕ ಇತಿಹಾಸ ಹೊಂದಿರೋ ಈ ಹೂವು ಅರಳಿದ ಕೂಡಲೇ ಸುಬ್ರಹ್ಮಣ್ಯ ದೇವರಿಗೆ ಅರ್ಪಿಸಲಾಗುತ್ತದೆಯಂತೆ. ಮಳೆ, ಗಾಳಿ, ನೀರು, ಬೆಳಕುಗಳಿಂದ ಪ್ರಕೃತಿ ಸಮತೋಲನದಲ್ಲಿದ್ದಾಗ ಮಾತ್ರ ಈ ನೀಲಿ ಕುರಂಜಿ ಅರಳುತ್ತವೆಯಂತೆ. ಇದಕ್ಕೆ ಗುರ್ಗಿ ಹೂವು ಎಂತಲೂ ಹೆಸರಿದ್ದು, ಇದರಲ್ಲಿ ನಾನಾ ವಿಧಗಳಿವೆ. ಅಂದರೆ 5, 7, 12 ಮತ್ತು 14 ವರ್ಷಗಳಿಗೆ ಒಮ್ಮೆ ಅರಳುವ ಪ್ರಭೇದದ ಹೂವುಗಳು ಇವೆ.

ಈ ಹೂವುಗಳು ಅರಳಿದಾಗ ಗಿಡದ ಕಾಂಡದಲ್ಲಿ ಅಪಾರ ಪ್ರಮಾಣದ ಔಷಧಿಯ ಗುಣ ಅಡಗಿರುತ್ತದೆಯಂತೆ.  ಹೀಗಾಗಿ ನಾನಾ ಕಾಯಿಲೆಗೂ ಇದನ್ನು ಔಷಧಿಯಾಗಿ ಬಳಸುತ್ತಾರೆ ಎನ್ನುತ್ತಾರೆ ಸ್ಥಳೀಯರಾದ ಗಣೇಶ್. ಒಟ್ಟಿನಲ್ಲಿ ಪಶ್ಚಿಮ ಘಟ್ಟದಲ್ಲಿ ಅರಳುವ ಈ ಹೂವು, ಮುಗಿಲಪೇಟೆಯ ಪ್ರಾಕೃತಿಕ ಸೌಂದರ್ಯವನ್ನು ನೂರ್ಮಡಿಗೊಳಿಸಿದೆ. ಬರುವ ಪ್ರವಾಸಿಗರು ಬೆಟ್ಟವೇ ಬಿಟ್ಟಂತಿರುವ ಈ ಹೂವು ತೋಟದಲ್ಲಿ ಸುತ್ತಾಡಿ ತಮ್ಮ ಮನಸೂರೆಗೊಂಡು ಹೋಗುತ್ತಿದ್ದಾರೆ.

ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: