Rape: ಲಿಫ್ಟ್ ಕೊಡುವ ನೆಪದಲ್ಲಿ ಮಹಿಳೆಯನ್ನು ಬೈಕಿನಲ್ಲಿ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ ಕಾಮುಕ!
ಆತ ಯಾರು ಅಂತ ಕೂಡ ಆಕೆಗೆ ಗೊತ್ತಿಲ್ಲ ಅಂತ ಹೇಳಿದ್ದಾಳೆ. ಆದರೆ ಆಕೆ ಡ್ರಾಪ್ ಪಡೆದ ಬೈಕ್ ಮೇಲೆ ಇರುವ ಹೆಸರು ಹೇಳಿದ್ದಾಳೆ. ಆ ಹೆಸರಿನ ಹಿಂದೆ ಬಿದ್ದ ಪೊಲೀಸರು ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಂತಹ ಹೆಸರು ಇರುವ ವ್ಯಕ್ತಿಯ ಬಗ್ಗೆ ಮಾಹಿತಿ ಕಲೆ ಹಾಕಿ, ಆಗಸ್ಟ್ 31 ರಂದು ಇಂಜಳ್ಳಿ ಗ್ರಾಮದ ಆರೋಪಿ ನಾಗರಾಜ್ನನ್ನ ಪೊಲೀಸರು ಬಂಧಿಸಿದ್ದಾರೆ.
ಕಲಬುರಗಿ: (Kalaburagi) ಮಹಿಳೆಯರೇ ಹಾಗೂ ಯುವತಿಯರೇ, ಬಸ್ ಸಿಕ್ಕಿಲ್ಲ ಅಂತಾ ಸಿಕ್ಕ ಸಿಕ್ಕ ಬೈಕ್ ಸವಾರರನ್ನು ಲಿಫ್ಟ್ ಕೇಳೊ ಮುನ್ನ ಕೊಂಚ ಎಚ್ಚರ ವಹಿಸಿ. ಸ್ವಲ್ಪವೂ ಯಾಮಾರಿ ನಿವೇನಾದರು ಲಿಫ್ಟ್ ಕೇಳಿದರೆ ಮಾನಗೇಡಿಗಳು ನಿಮ್ಮ ಮಾನ ಕಳೆದೆ ಬಿಡ್ತಾರೆ. ಅಷ್ಟಕ್ಕೂ ಇಲ್ಲೊಬ್ಬ ಕಾಮುಕ ಮಹಿಳೆಗೆ ಲಿಫ್ಟ್ ಕೊಡೊ ನೆಪದಲ್ಲಿ ಅತ್ಯಾಚಾರ ಎಸಗಿ, ಇದೀಗ ಕಂಬಿ ಎಣಿಸುತ್ತಿದ್ದಾನೆ. ಇತ್ತೀಚಿಗೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಯುವತಿ ಮೇಲಿನ ಅತ್ಯಾಚಾರ ಪ್ರಕರಣ ರಾಜ್ಯವಲ್ಲದೇ ದೇಶದೆಲ್ಲೆಡೆ ತೀವ್ರ ಸಂಚಲನ ಮೂಡಿಸಿತ್ತು. ಇದೀಗ ಕಲಬುರಗಿಯಲ್ಲಿ ಸಹ ಕಾಮುಕ ಬೈಕ್ ಸವಾರನೋರ್ವ ಮಹಿಳೆಯೊಬ್ಬರಿಗೆ ಲಿಫ್ಟ್ ಕೊಡುವ ನೆಪದಲ್ಲಿ ಅತ್ಯಾಚಾರ ಎಸಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಹೌದು, ಅಂದು ಮೇ 24. ಕೊರೋನಾ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಸರ್ಕಾರ ಲಾಕ್ಡೌನ್ ಘೋಷಿಸಿತ್ತು. ಸಾರಿಗೆ ಸಂಚಾರ ಕೂಡ ಸ್ಥಗಿತ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಸರ್ಕಾರಿ ಕಚೇರಿಯೊಂದರಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಮಹಿಳೆಯು ಸಂಜೆ ತನ್ನ ಕೆಲಸ ಮುಗಿಸಿಕೊಂಡು ತನ್ನ ಗ್ರಾಮಕ್ಕೆ ತೆರಳಲು ಬಸ್ಗಾಗಿ ಕಾಯುತ್ತ ನಿಂತಿದ್ದರು. ಲಾಕ್ಡೌನ್ ಕಾರಣ ಬಸ್ ಇಲ್ಲದೇ ಇರೊದ್ರಿಂದ ನಿಂತಿದ್ದ ಮಹಿಳೆಯನ್ನು ಕಂಡು ಬೈಕ್ ಸವಾರನೊಬ್ಬ ನಾನು ಆ ಕಡೆನೇ ಹೋಗುತ್ತಿದ್ದೇನೆ, ಬೇಕಾದ್ರೆ ನಾನೇ ನಿಮಗೆ ಡ್ರಾಪ್ ಮಾಡ್ತಿನಿ ಅಂತಾ ಹೇಳಿದ್ದಾನೆ. ಅದಕ್ಕೆ ಸರಿ ಎಂದ ಮಹಿಳೆ ಆತನ ಬೈಕ್ ಹತ್ತಿದ್ದಾಳೆ. ಒಂದೆರಡು ಕಿಲೋ ಮೀಟರ್ ದೂರ ಹೋದ ನಂತರ ಮಾರ್ಗ ಮಧ್ಯೆ ಸೇತುವೆ ಬಳಿ ಬೈಕ್ ನಿಲ್ಲಿಸಿ ಮಹಿಳೆಯನ್ನ ಬಲವಂತವಾಗಿ ಎಳೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ.
ಕಾಮುಕ ಆರೋಪಿ ಸಿಕ್ಕಿದ್ದು ಹೇಗೆ?
ಅತ್ಯಾಚಾರ ಘಟನೆಯಿಂದ ಮಾನಸಿಕವಾಗಿ ನೊಂದಿದ್ದ ಆ ಮಹಿಳೆ ವಿಷಯವನ್ನು ಯಾರಿಗೂ ಹೇಳದೆ ಸುಮ್ಮನಿದ್ದರು. ದಿನ ಕಳೆದಂತೆ ಅತ್ಯಾಚಾರದ ದುರಂತದ ಬಗ್ಗೆ ಆಕೆ ಮನಸ್ಸಿನಲ್ಲೆ ಇಟ್ಟು ಕೊಂಡು ಕೊರಗುತಿದ್ದರು. ಇದಕ್ಕೆ ಏನಾದರೂ ಪರಿಹಾರ ಕಂಡುಕೊಳ್ಳಬೇಕು ಅಂತ ಒಂದು ದಿನ ಬೆಂಗಳೂರಿನ ಮಹಿಳಾ ಆಯೋಗಕ್ಕೆ ಫೋನ್ ಮಾಡಿ ಅಂದು ನಡೆದ ಘಟನೆ ಬಗ್ಗೆ ವಿವರವಾಗಿ ಹೇಳಿದ್ದಾರೆ. ಅಲ್ಲದೇ ನನ್ನ ಹೆಸರು ಎಲ್ಲೂ ಹೇಳಬೇಡಿ ಗೌಪ್ಯತೆ ಕಾಪಾಡಿ ಅಂತ ಅವರಿಗೆ ಹೇಳಿದ್ದಾರೆ.
ಮಹಿಳಾ ಆಯೋಗದವರು ಕುರಕುಂಟಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕಾರ್ಯ ಪ್ರವೃತ್ತರಾದ ಪೊಲೀಸರು ಮಹಿಳೆಯನ್ನು ಠಾಣೆಗೆ ಕರೆಸಿ ಮಾಹಿತಿ ಪಡೆದಿದ್ದಾರೆ. ಆತ ಯಾರು ಅಂತ ಕೂಡ ಆಕೆಗೆ ಗೊತ್ತಿಲ್ಲ ಅಂತ ಹೇಳಿದ್ದಾಳೆ. ಆದರೆ ಆಕೆ ಡ್ರಾಪ್ ಪಡೆದ ಬೈಕ್ ಮೇಲೆ ಇರುವ ಹೆಸರು ಹೇಳಿದ್ದಾಳೆ. ಆ ಹೆಸರಿನ ಹಿಂದೆ ಬಿದ್ದ ಪೊಲೀಸರು ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಂತಹ ಹೆಸರು ಇರುವ ವ್ಯಕ್ತಿಯ ಬಗ್ಗೆ ಮಾಹಿತಿ ಕಲೆ ಹಾಕಿ, ಆಗಸ್ಟ್ 31 ರಂದು ಇಂಜಳ್ಳಿ ಗ್ರಾಮದ ಆರೋಪಿ ನಾಗರಾಜ್ನನ್ನ ಪೊಲೀಸರು ಬಂಧಿಸಿದ್ದಾರೆ ಎಂದು ಕಲಬುರ್ಗಿ ಎಸ್ಪಿ ಸಿಮ್ಮಿ ಮರಿಯಂ ಜಾರ್ಜ್ ಹೇಳಿದ್ದಾರೆ.