Crime News: ಮದ್ದೂರಿನಲ್ಲಿ ಮಹಿಳೆಯ ಅತ್ಯಾಚಾರ-ಕೊಲೆ ಪ್ರಕರಣ; ಇಬ್ಬರು ಆರೋಪಿಗಳನ್ನೂ ಬಂಧಿಸಿದ ಪೊಲೀಸರು

ಈ ಪ್ರಕರಣದಿಂದ ಇಡೀ ಮದ್ದೂರಿನ ಜನಬೆಚ್ಚಿ ಬಿದ್ದಿದ್ರು. ಮನೆಯಲ್ಲಿ ಒಂಟಿಯಾಗಿದ್ದ ಮಹಿಳೆಯನ್ನು ಅತ್ಯಾಚಾರ ಮಾಡಿ ಕೈ ಕಾಲು ಕಟ್ಟಿಹಾಕಿ ಹತ್ಯೆ ಮಾಡಿದ್ದು ಮಹಿಳೆಯರಿಗೆ ಭಯ ಉಂಟುಮಾಡಿತ್ತು. ಆರೋಪಿಗಳು ಚಾಣಾಕ್ಷ ತನದಿಂದ ಹತ್ಯೆಗೈದು ಮಹಿಳೆಯ ಕತ್ತು ಹಾಗೂ ಕೈನಲ್ಲಿದ್ದ ಚಿನ್ನದ ಆಭರಣದ ಜೊತೆ ಮನೆಯಲ್ಲಿದ್ದ ನಗದನ್ನೂ ಕೂಡ ಕದ್ದು ಪರಾರಿಯಾಗಿದ್ದರು.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

  • Share this:
ಮಂಡ್ಯ: ಸಕ್ಕರೆನಾಡು ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಫೆ.02 ರಂದು ಮಹಿಳೆಯೊಬ್ಬಳ ಕೊಲೆಯಾಗಿತ್ತು. ಮಹಿ ಳೆ ಮೇಲೆ ಅತ್ಯಾಚಾರ ಎಸಗಿ ಮಂಚಕ್ಕೆ ಕೈ ಕಾಲು ಕಟ್ಟಿ ಹಾಕಿ ಉಸಿರು ಕಟ್ಟಿಸಿ ಬರ್ಬರವಾಗಿ ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದರು. ಆ ದಿನ ನಡೆದ ಘಟನೆಗೆ ಇಡೀ ಮದ್ದೂರು ಪಟ್ಟಣದ ಜನ ಬೆಚ್ಚಿ ಬಿದ್ದಿದ್ರು. ಕೊಲೆ ಮಾಡಿದ ಆರೋಪಿಗಳು ಯಾವುದೇ ಕ್ಲೂ ಕೂಡ ಬಿಡದೆ ಕೊಲೆಗೈದು ಪರಾರಿಯಾಗಿದ್ರು. ಪ್ರಕರಣ ದಾಖಲಿಸಿಕೊಂಡಿದ್ದ  ಮದ್ದೂರು ಪೊಲೀಸರು ಕಡೆಗೂ ಪ್ರಕರಣ ಭೇಧಿಸುವಲ್ಲಿ ಯಶಸ್ವಿಯಾಗಿದ್ದು, ಕೃತ್ಯ ಎಸಗಿದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ‌.

ಈ ಪ್ರಕರಣದಿಂದ ಇಡೀ ಮದ್ದೂರಿನ ಜನಬೆಚ್ಚಿ ಬಿದ್ದಿದ್ರು. ಮನೆಯಲ್ಲಿ ಒಂಟಿಯಾಗಿದ್ದ ಮಹಿಳೆಯನ್ನು ಅತ್ಯಾಚಾರ ಮಾಡಿ ಕೈ ಕಾಲು ಕಟ್ಟಿಹಾಕಿ ಹತ್ಯೆ ಮಾಡಿದ್ದು ಮಹಿಳೆಯರಿಗೆ ಭಯ ಉಂಟುಮಾಡಿತ್ತು. ಆರೋಪಿಗಳು ಚಾಣಾಕ್ಷ ತನದಿಂದ ಹತ್ಯೆಗೈದು ಮಹಿಳೆಯ ಕತ್ತು ಹಾಗೂ ಕೈನಲ್ಲಿದ್ದ ಚಿನ್ನದ ಆಭರಣದ ಜೊತೆ ಮನೆಯಲ್ಲಿದ್ದ ನಗದನ್ನೂ ಕೂಡ ಕದ್ದು ಪರಾರಿಯಾಗಿದ್ದರು.

ಆ ದಿನ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲಿಸಿದ ಪೊಲೀಸರು ಶ್ವಾನದಳ ಮತ್ತು FSL ತಜ್ಞರಿಂದ ಶೋಧ ನಡೆಸಿ ಸಿಕ್ಕ ಕೆಲವೊಂದು ಮಾಹಿತಿಗಳಿಂದ ಕೃತ್ಯ ಎಸಗಿದ ಆರೋಪಿಗಳ ಪತ್ತೆಗಾಗಿ 3 ತಂಡಗಳನ್ನು ರಚಿಸಿ ಕೊಂಡು ಪರಾರಿಯಾಗಿದ್ದ ಆರೋಪಿಗಳಿಗಾಗಿ ಬಲೆ ಬೀಸಿದ್ರು. ಕಡೆಗೂ ಪ್ರಕರಣ ಭೇಧಸುವಲ್ಲಿ ಯಶಸ್ವಿ ಯಾಗಿದ್ದು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಇಬ್ಬ ರು ಆರೋಪಿಗಳು ರಾಮನಗರ ಜಿಲ್ಲೆಯ ಮೂಲದವರಾಗಿದ್ದಾರೆ. ಮನು ಕುಮಾರ್ ಮತ್ತು ರಮೇಶ್  ಎಂಬ ಇಬ್ಬರು ಯುವಕರು ಈ ಕೃತ್ಯ ಎಸಗಿ ತಲೆ ಮರೆಸಿಕೊಂಡಿದ್ದರು. ಕೊಲೆಯಾದ ಮಹಿಳೆಯ ಮೊಬೈಲ್ ಕರೆಗಳ ಆಧಾರದ ಮೇಲೆ ರಾಮನಗರದಲ್ಲಿ ತಲೆ ಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಮದ್ದೂರು  ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಇದನ್ನೂ ಓದಿ: Basavaraj Horatti | ವಿಧಾನ ಪರಿಷತ್ ನೂತನ ಸಭಾಪತಿಯಾಗಿ ಬಸವರಾಜ ಹೊರಟ್ಟಿ ಆಯ್ಕೆ

ಪೊಲೀಸರ ಮುಂದೆ ಆರೋಪಿಗಳು ಅತ್ಯಾಚಾರ ಎಸಗಿ ಕೊಲೆ ಮಾಡಿರುವುದಾಗಿ ಸತ್ಯ ಬಾಯ್ಬಿಟ್ಟಿದ್ದಾರೆ. ಕೊಲೆಯಾದ ಪೂರ್ಣಿಮಾ ದೈಹಿಕ ಸುಖಕ್ಕೆ ನಮ್ಮ ಬಳಿ ಹೆಚ್ಚಿನ ಹಣ ಕೇಳಿದ್ದ ಕಾರಣಕ್ಕೆ ದೈಹಿಕ ಸಂಭೋಗದ ಬಳಿಕ  ಕೈ ಕಾಲು ಕಟ್ಟಿ ಉಸಿರುಗಟ್ಟಿಸಿ ಹತ್ಯೆ ಮಾಡಿ ಕೈ ಮತ್ತು ಕತ್ತಿನಲ್ಲಿದ್ದ ಸರ ಮತ್ತು ಬಳೆ ಸೇರಿ ಮನೆಯಲ್ಲಿದ್ದ ಸ್ವಲ್ಪ ನಗದು ಹಣ ತೆಗೆದುಕೊಂಡು ಹೋಗಿದ್ದಾಗಿ ಪೊಲೀಸರ ವಿಚಾರಣೆ  ವೇಳೆ ನಿಜಾಂಶ ತಿಳಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸ್ತಿದ್ದ ಮದ್ದೂರು ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಅಲ್ಲದೆ, ಕೃತ್ಯಕ್ಕೆ ಬಳಸಿದ್ದ ಬೈಕ್ ಸೇರಿ 2 ಮೊಬೈ ಲ್ ಹಾಗೂ ಬಳಿ ಇದ್ದ 4 ಸಾವಿರ ನಗದನ್ನು ವಶಕ್ಕೆ ಪಡೆದಿದ್ದಾರೆ. ಶೀಘ್ರವಾಗಿ ಪ್ರಕರಣ ಭೇಧಿಸಿ ಆರೋಪಿಗಳನ್ನ ಬಂಧಿಸಿರೋ ಮದ್ದೂರು ಪೊಲೀಸರ ಕಾರ್ಯಾಚರಣೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ಶ್ಲಾಘಿಸಿದ್ದು, ಪ್ರಕರಣ ಭೇಧಿಸಿದ ಪೊಲೀಸರಿಗೆ ನಗದು ಬಹುಮಾನವನ್ನು ಕೂಡ ಘೋಷಿಸಿದ್ದಾರೆ.
Published by:MAshok Kumar
First published: