HOME » NEWS » District » RAMESH JARKIHOLI SUPPORTERS PROTEST AGAINST MLA LAKSHMI HEBBALKAR IN GOKAK LCTV MAK

Ramesh Jarkiholi CD Case: ಸಿಡಿ ಹಿಂದೆ ಲಕ್ಷ್ಮೀ ಹೆಬ್ಬಾಳ್ಕರ್​ ಕೈವಾಡ ಆರೋಪ; ಗೋಕಾಕ್​ನಲ್ಲಿ ಇನ್ನೂ ನಿಂತಿಲ್ಲ ಬೆಂಬಲಿಗರ ಆಟಾಟೋಪ

ಇಂದು ಗೋಕಾಕ್ ತಾಲೂಕಿನ ಮೂರುಕಡೆ ರಮೇಶ ಅಭಿಮಾನಿಗಳು ಪ್ರತಿಭಟನೆ ನಡೆಸಿದರು. ಅಂಕಲಗಿ ಬಂದ ವೇಳೆ ಭಾಗವಹಿಸಿದ್ದ ಮಹಿಳಾ ಹೋರಾಟಗಾರ್ತಿ ತೊಡೆತಟ್ಟಿ ಆಕ್ರೋಶ ಹೊರಹಾಕಿದರು. ಅಂಕಲಗಿಯಲ್ಲೂ ಲಕ್ಷ್ಮೀ ಹೆಬ್ಬಾಳಕರ ವಿರುದ್ಧ ಮಹಿಳಾ ಹೋರಾಟಗಾರರು ಆಕ್ರೋಶ ಹೊರಹಾಕಿದ್ದಾರೆ.

news18-kannada
Updated:March 7, 2021, 12:02 PM IST
Ramesh Jarkiholi CD Case: ಸಿಡಿ ಹಿಂದೆ ಲಕ್ಷ್ಮೀ ಹೆಬ್ಬಾಳ್ಕರ್​ ಕೈವಾಡ ಆರೋಪ; ಗೋಕಾಕ್​ನಲ್ಲಿ ಇನ್ನೂ ನಿಂತಿಲ್ಲ ಬೆಂಬಲಿಗರ ಆಟಾಟೋಪ
ಗೋಕಾಕ್​ನಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್​ ಹಾಗೂ ಕಲ್ಲಹಳ್ಳಿ ವಿರುದ್ಧ ಪ್ರತಿಭಟಿಸಿರುವ ರಮೇಶ್​ ಜಾರಕಿಹೊಳಿ ಬೆಂಬಲಿಗರು.
  • Share this:
ಬೆಳಗಾವಿ (ಮಾರ್ಚ್​ 06); ಗೋಕಾಕ್​ನಲ್ಲಿ ನಾಲ್ಕನೇ ದಿನವೂ ರಮೇಶ್ ಜಾರಕಿಹೊಳಿ‌ ಅಭಿಮಾನಿಗಳ ಆಕ್ರೋಶ ಭುಗಿಲೆದ್ದಿತ್ತು. ಸಿಡಿ ಪ್ರಕರಣದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಕೈವಾಡ ಇರಬೇಕೆಂದು ಮಹಿಳಾ ಹೋರಾಟಗಾರ್ತಿ ಗಂಭೀರ ಆರೋಪ ಮಾಡಿದ್ದಾರೆ. ಇತ್ತ ಇಂದು ಸಹ ರಮೇಶ್ ಅಭಿಮಾನಿಗಳು ಗುಂಡಾಗಿರಿ ಪ್ರದರ್ಶಿಸಿದ್ದಾರೆ. ರಮೇಶ್ ಜಾರಕಿಹೊಳಿ‌  ಸಿಡಿ ಬಹಿರಂಗ ಹಿನ್ನೆಲೆ ಇಂದು ಸಹ ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನಲ್ಲಿ ಪ್ರತಿಭಟನೆ ಕಾವು ಜೋರಾಗಿತ್ತು. ಅಂಕಲಗಿ, ಮಮದಾಪೂರ ಮತ್ತು ಗೋಕಾಕ ಪಟ್ಟಣದಲ್ಲಿ ಟಾಯರಗೆ ಬೆಂಕಿ ಹಚ್ಚಿ ಬೆಂಬಲಿಗರು ಆಕ್ರೋಶ ಹೊರಹಾಕಿದರೆ, ರಮೇಶ್ ಜಾರಕಿಹೊಳಿ‌ ಅಭಿಮಾನಿಗಳು ದಿನೇಶ ಕಲ್ಲಹಳ್ಳಿ ಅಣಕು ಶವಯಾತ್ರೆ ನಡೆಸಿದರು. ದಿನೇಶ್​ ಕಲ್ಲಹಳ್ಳಿ ಪ್ರತಿಕೃತಿ ದಹಿಸಿ ಆತನನ್ನು ಬಂಧಿಸಲು ಆಗ್ರಹಿಸಿದರು.

ಗೋಕಾಕ್​ನ ಪ್ರತಿಭಟನಾ ವೇದಿಕೆಯಲ್ಲಿ ಬಿಜೆಪಿ ನಾಯಕಿ ಶ್ರೀದೇವಿ ತಡಕೋಳ ಲಕ್ಷ್ಮಿ ಹೆಬ್ಬಾಳ್ಕರ್  ಹೆಸರು ಪ್ರಸ್ಥಾಪಿಸಿದರು. ಈ ಮೂಲಕ  ಪ್ರಕರಣದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಕೈವಾಡವಿದೆಯಾ ಎಂಬ ಅನುಮಾನವನ್ನ ಪರೋಕ್ಷವಾಗಿ ಹೊರಹಾಕಿದರು. ಪ್ರಕರಣದ ತನಿಖೆಯಾದ್ರೆ ಸತ್ಯಾಸತ್ಯತೆ ಹೊರ ಬರುತ್ತೆ. ಅವಳು ಒಂದು ಹೆಣ್ಣು. ಈ ವಿಡಿಯೋ ನೋಡಿ ಅವಳಿಗೆ ನೋವು ಆಗಲ್ವಾ. ಅವಳು ಪ್ರತಿಪಕ್ಷದಲ್ಲಿ ಇರಬಹುದು, ಆದ್ರೆ ಈ ವಿಡಿಯೋ ದಿಂದ ಇಡೀ ಹೆಣ್ಣು ಕುಲಕ್ಕೆ ಅವಮಾನವಾಗಿದೆ ಎಂದು ಬಿಜೆಪಿ ನಾಯಕಿ ಶ್ರೀದೇವಿ ತಡಕೋಳ ಗಂಭೀರ ಆರೋಪ ಮಾಡಿದ್ದಾರೆ.

ಇನ್ನೂ ಇಂದು ಗೋಕಾಕ್ ತಾಲೂಕಿನ ಮೂರುಕಡೆ ರಮೇಶ ಅಭಿಮಾನಿಗಳು ಪ್ರತಿಭಟನೆ ನಡೆಸಿದರು. ಅಂಕಲಗಿ ಬಂದ ವೇಳೆ ಭಾಗವಹಿಸಿದ್ದ ಮಹಿಳಾ ಹೋರಾಟಗಾರ್ತಿ ತೊಡೆತಟ್ಟಿ ಆಕ್ರೋಶ ಹೊರಹಾಕಿದರು. ಅಂಕಲಗಿಯಲ್ಲೂ ಲಕ್ಷ್ಮೀ ಹೆಬ್ಬಾಳಕರ ವಿರುದ್ಧ ಮಹಿಳಾ ಹೋರಾಟಗಾರರು ಆಕ್ರೋಶ ಹೊರಹಾಕಿದ್ದಾರೆ. ಇನ್ನ ಮಮದಾಪೂರ ಕ್ರಾಸನಲ್ಲಿ ಪ್ರತಿಭಟನಾ ನಿರತರು ರಮೇಶ್ ಜಾರಕಿಹೋಳಿ ಬೆಂಬಲಿಗರಿಂದ ಗುಂಡಾಗಿರಿ ಪ್ರದರ್ಶಿಸಿದ್ದಾರೆ. ಮಮದಾಪೂರ ಗ್ರಾಮದ ಅಂಗಡಿಗಳನ್ನ ಬಲವಂತವಾಗಿ ಮುಚ್ಚಿಸಿದ್ದಾರೆ.

ಇದನ್ನೂ ಓದಿ: Ramesh Jarkiholi CD Case: ತಮ್ಮ ವಿರುದ್ಧ ವಿಡಿಯೋ ಪ್ರಸಾರ ಮಾಡದಂತೆ ಕೋರ್ಟ್‌ಗೆ ಎಡತಾಕುತ್ತಿರುವ ಸಚಿವರು; ಗೃಹ ಸಚಿವರು ಹೇಳಿದ್ದೇನು?

ಗ್ರಾಮದಲ್ಲಿನ ಪೆಟ್ರೋಲ್ ಬಂಕ್ ಲಗ್ಗೆ ಇಟ್ಟ ಪ್ರತಿಭಟನಾಕಾರರು ಅವಾಚ್ಚ ಶಬ್ದಗಳನ್ನ ಬಳಸಿ ಬಲವಂತವಾಗಿ ಬಂಕ್ ಮಾಡಿಸಿದ್ರು ಅಲ್ಲದೆ ರಸ್ತೆ ತಡೆ ನೆಪದಲ್ಲಿ ವಾಹನ ಸವಾರರ ಮೇಲೆ ಹಲ್ಲೆ ಯತ್ನಿಸಿದ್ರು. ಯರಗಟ್ಟಿ ಕಡೆಯಿಂದ ಗೋಕಾಕ ಗೆ ಬರುತ್ತಿದ್ದ ಕಾರು ಯಾವುದೋ ಅರ್ಜೆಂಟ್ ಕೆಲಸಕ್ಕಾಗಿ ತೆರಳುತ್ತಿದ್ದೇನೆ ದಯವಿಟ್ಟು ಬಿಡಿ ಎಂದರು ಕೇಳಿದ್ರು ಬೆಂಬಲಿಗರು ಅಸ್ಪದ ನೀಡದೆ ಹಲ್ಲೆಗೆ ಯತ್ನಿಸಿದ್ರು. ಇನ್ನು ಇಷ್ಟೆಲ್ಲಾ ನಡೆದರು ಸಹ ಪೊಲೀಸರ ಮಾತ್ರ ತಮ್ಮ ಅಸಹಾಯಕತೆಯನ್ನ ತೋರಿದ್ದಾರೆ.

ಗುಂಡಾಗಿರಿ ಪ್ರದರ್ಶನ ಮಾಡುತ್ತಿದ್ದರು ಯಾವುದೆ ಕ್ರಮಕ್ಕೆ ಮಾತ್ರ ಮುಂದಾಗಲಿಲ್ಲಾ ಸಿಪಿಐ ಕೂಡ ಸುಮ್ಮನೆ ನಿಂತಿದ್ರು. ಸಿಬ್ಬಂದಿಗಳೆ ಮಧ್ಯ ಪ್ರವೇಶಿಸಿ ಕಾರನ್ನ ಬಿಡಿಸಿ ಕಳಿಸಿದ್ದಾರೆ. ಒಟ್ಟಿನಲ್ಲಿ ಗೋಕಾಕ ಸಾಹುಕಾರ್ ಪರ ಇಂದು ಸಹ ನೂರಾರು ಅಭಿಮಾನಿಗಳು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ. ಇಂದು ಯಾವುದೇ ರೀತಿಯ ಆತ್ಮಹತ್ಯೆ ಯತ್ನದಂಹ ಘಟನೆಗಳು ಘಟಿಸಿದಂತೆ ಪೊಲೀಸರು ಎಚ್ಚರಿಕೆ ವಹಿಸಿದ್ದರು. .
Published by: MAshok Kumar
First published: March 6, 2021, 6:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories