ರಮೇಶ್ ಜಾರಕಿಹೊಳಿ ಬಳಿ ಯಡಿಯೂರಪ್ಪ ಸಿಡಿ ಇದೆ; ಕೆಪಿಸಿಸಿ ವಕ್ತಾರ ಎಂ. ಲಕ್ಷಣ್‌ ಹೊಸ ಬಾಂಬ್

ನಾ ಗಂಡಸು ಗಂಡಸು ಅಂತ 6 ಬಾರಿ ಹೇಳಿದ್ದೀರಿ, ಹೌದಪ್ಪ ನೀನು ಗಂಡಸು ಅಂತ ನಿನ್ನ ಸಿಡಿಯಲ್ಲೆ ಗೊತ್ತಾಗಿದೆ. ಅದನ್ನ ಯಾಕೇ ಪದೆ ಪದೆ ಹೇಳ್ತಿಯಾ?. ಹಾಗಂತ ನಮ್ಮ ಅಧ್ಯಕ್ಷರ ಮೇಲೆ ನಾಲಿಗೆ ಹರಿಬಿಟ್ಟು ಮಾತನಾಡೋದು ಯಾಕೇ? ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷಣ್ ಕಿಡಿಕಾರಿದ್ದಾರೆ.

ಕೆಪಿಸಿಸಿ ವಕ್ತಾರ ಎಂ. ಲಕ್ಷಣ್‌.

ಕೆಪಿಸಿಸಿ ವಕ್ತಾರ ಎಂ. ಲಕ್ಷಣ್‌.

  • Share this:
ಮೈಸೂರು (ಮಾರ್ಚ್​ 28); ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಯಡ್ಯೂರಪ್ಪ ಭೂಗತ ಆಗಿದ್ದಾರೆ. ಇದಕ್ಕೆ ಕಾರಣ ರಮೇಶ್ ಜಾರಕಿಹೊಳಿ ಬಳಿ ಯಡ್ಯೂರಪ್ಪ ಸಿಡಿ ಇದೆ ಎಂದು ಮೈಸೂರಿನಲ್ಲಿ ಕೆಪಿಸಿಸಿ ವಕ್ತಾರ ಎಂ.ಲಕ್ಷಣ್ ಹೊಸ ಬಾಂಬ್ ಸಿಡಿಸಿದ್ದಾರೆ. ಗ್ರೇಟ್ ಬಿ. ಎಲ್. ಸಂತೋಷ್ ಎಲ್ಲಿದ್ದೀರಾ? ಎಲ್ಲಿ ನಿಮ್ಮ‌ ಟ್ವಿಟ್? ಆ ಯುವತಿ ನನಗೆ ಜೀವ ಬೆದರಿಕೆ ಇದೆ ಎಂದು ಲಿಖಿತವಾಗಿ ದೂರು ಕೊಟ್ಟಿದ್ದಾಳೆ. ನನ್ನನ್ನ ಲೈಗಿಂಕವಾಗಿ ಬಳಸಿಕೊಂಡಿದ್ದಾರೆ ಎಂದು ಆರೋಪಿದ್ದಾಳೆ. ಬಿಜೆಪಿ ನಾಯಕರು ಎಲ್ಲಿದ್ದೀರಾ? ಎಂದು ಅವರು ಪ್ರಶ್ನೆ ಹಾಕಿದ್ದಾರೆ. ಅಲ್ಲದೆ, ಬೇರೆ ಯಾರಿಗಾದ್ರು ಈ ಥರ ಆಗಿದ್ರೆ ಶೋಭ ಕರಂದ್ಲಾಜೆ‌ ಬುರೆಡೆ ಮಾಡಿಸಿಕೊಂಡು ಬಿಡೋರು, ಈಗ ಎಲ್ಲೋಗಿದೆ ಆ ಯಮ್ಮ? ಈಶ್ವರಪ್ಪ, ಅಶೋಕ್, ಸಿ.ಟಿ.ರವಿ ಎಲ್ಲಿದ್ದಾರೆ?  ಕ್ರಿಕೆಟರ್ ಬುಮ್ರಾ ಸುರ್‌ಸುರ್‌ಬತ್ತಿ ಹಚ್ಚಿದ್ದಕ್ಕೆ ದೊಡ್ಡ ಗಲಾಟೆ ಮಾಡಿಬಿಟ್ಟರು, ಈ ವಿಚಾರಕ್ಕೆ ಯಾಕೇ ಮಾತನಾಡುತ್ತಿಲ್ಲ. ಈ ಯುವತಿಗೆ ಆಗಿರೋ ಅನ್ಯಾಯ ಕಣ್ಣಿಗೆ ಕಾಣ್ತಿಲ್ವಾ.? ಆ ತೇಜಸ್ವಿನಿ ಗೌಡ ಕುಣಿದು ಕುಪ್ಪಳಿಸಿ ಮಾಡಿದ್ರೆ ಏನು ಅಂತಾರೆ? 6 ಜನ ಸಿಡಿಯಲ್ಲಿ ಇನ್ವಾಲ್ ಆಗಿದ್ರೆ ಏನಿಗಾ ಅಂತಾರೆ ಇಂತವರ ನಡವಳಿಕೆ ಯಾವ ಸಂದೇಶ ನೀಡುತ್ತಿದೆ? ಎಂದು ಬಿಜೆಪಿ ಸರ್ಕಾರವನ್ನ ಪ್ರಶ್ನಿಸಿದರು. 

ಈ ಕೇಸ್‌ನಲ್ಲಿ 376(c) ಆಕ್ಟ್ ಅಡಿಯಲ್ಲಿ ಕೇಸ್ ಹಾಕಿದ್ದೀರಾ. ತನಗೆ ಅಧಿಕಾರ ಇದೆ ಎಂದು ಹೆಂಡತಿ ಮೇಲೂ ವ್ಯಕ್ತಿಯೊಬ್ಬ ಲೈಗಿಂಕ ಕ್ರಿಯೆ ನಡೆಸುವಂತಿಲ್ಲ. ಈ ಕೇಸ್‌ನಲ್ಲಿ ರಮೇಶ್ ಜಾರಕಿಹೊಳಿಗೆ ಆ ಯುವತಿ ಮೇಲೆ ಅಧಿಕಾರ ಇದ್ಯಾ?.  ಐಪಿಎಸ್ ಆಫಿಸರ್‌ಗಳೆ ನೀವು ಹಾಕಿರುವ ಕೇಸ್‌ಗಳಿಗೆ ಬೆಲೆ ಕಟ್ಟಬೇಕಾಗುತ್ತದೆ, ನಿರ್ಭಯ ಆಕ್ಟ್ ಅಡಿಯಲ್ಲಿ ದೂರು ದಾಖಲಾದ್ರೆ 8 ಗಂಟೆಯ ಒಳಗೆ ಬಂಧಿಸಬೇಕು. ಆದ್ರೆ ನೀವು ಯಾಕಾಗಿ ಜಾರಕಿಹೊಳಿ ಅರನ್ನ ಬಂಧಿಸಿಲ್ಲ? ಜಾರಕಿಹೊಳಿ ಸರ್ಕಾರಕ್ಕೆ ಧಮ್ಕಿ ಹಾಕ್ತಿದ್ದಾರೆ ಹಳೆ ಸರ್ಕಾರವನ್ನ ಬಿಳಿಸಿವನಿಗೆ ಇದ್ಯಾವ ಲೆಕ್ಕ? ಅಂತಾರೆ ಆದರೂ ಅವರನ್ನ ಬಂಧಿಸಿಲ್ಲವೇಕೆ? ಎಂದು ಎಸ್‌ಐಟಿ ಅಧಿಕಾರಿಗಳಿಗು ಪ್ರಶ್ನೆಗಳ ಸುರಿಮಳೆಗೈದರು.

ರಮೇಶ್ ಜಾರಕಿಹೊಳಿ ಕೇಸ್‌ನಲ್ಲಿ ಡಿಕೆಶಿ ಹೆಸರು ಪ್ರಸ್ತಾಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಕೆಪಿಸಿಸಿ ವಕ್ತಾರ,  "ಜಾರಕಿಹೊಳಿಯವರೆ ನಿಮಗೆ ಏನಾಗಿದೆ ಮೊದಲು ಹೇಳಿ ನೀವೆ ಸಿಡಿಯನ್ನ ನಕಲಿ ಅಂತೀರಾ? ಡಿಕೆಶಿಯೇ ಇದನ್ನೆಲ್ಲ ಮಾಡಿಸಿದ್ದು ಅಂತೀರ.  ಹಾಗಾದ್ರೆ ಸಿಡಿ ನಿಜ, ಅದರಲ್ಲಿರೋದು ನೀವೆ ಅಂತ ಒಪ್ಪಿಕೊಂಡಂತಾಯ್ತು. ಎಸ್‌ಐಟಿ ಅವರು ಜಾರಕಿಹೊಳಿರ, ಆ ಯುವತಿ ಇಬ್ಬರನ್ನು  ಬಿಟ್ಟಿದ್ದಾರೆ, ಆ ಕೇಸ್ ಸುತ್ತಮುತ್ತ ಇರೋ ಎಲ್ಲರನ್ನು ವಿಚಾರಣೆ ಮಾಡ್ತಿದ್ದಾರೆ. ಡಿಕೆಶಿ, ಪತ್ರಕರ್ತರು ಎಲ್ಲರನ್ನು ಬಿಡಿ ಮೊದಲು ಆ ಯುವತಿ ಎಲ್ಲಿದ್ದಾಳೆ ಅಂತ ಹುಡುಕಿ ಜಾರಕಿಹೊಳಿ ಅವರನ್ನು ಬಂಧಿಸಿ" ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: Assembly Elections2021: ಬಿಜೆಪಿ ಈ ಬಾರಿ ಪಶ್ಚಿಮ ಬಂಗಾಳದಲ್ಲಿ 200ಕ್ಕೂ ಅಧಿಕ ಸ್ಥಾನದಲ್ಲಿ ಗೆಲ್ಲಲಿದೆ: ಅಮಿತ್ ಶಾ

"ಆ ಯುವತಿಯ ಪೋಷಕರನ್ನ ಗನ್‌ಪಾಯಿಂಟ್‌ನಲ್ಲಿ ಇಟ್ಟು ಹೇಳಿಕೆ‌ ಕೊಡಿಸಲಾಗಿದೆ. ಜಾರಕಿಹೊಳಿಯವರ ಭಾಷೆ ಅವರ ಸಂಸ್ಕೃತಿಯನ್ನ ತೋರಿಸುತ್ತದೆ. ನಾ ಗಂಡಸು ಗಂಡಸು ಅಂತ 6 ಬಾರಿ ಹೇಳಿದ್ದೀರಿ, ಹೌದಪ್ಪ ನೀನು ಗಂಡಸು ಅಂತ ನಿನ್ನ ಸಿಡಿಯಲ್ಲೆ ಗೊತ್ತಾಗಿದೆ. ಅದನ್ನ ಯಾಕೇ ಪದೆ ಪದೆ ಹೇಳ್ತಿಯಾ?. ಹಾಗಂತ ನಮ್ಮ ಅಧ್ಯಕ್ಷರ ಮೇಲೆ ನಾಲಿಗೆ ಹರಿಬಿಟ್ಟು ಮಾತನಾಡೋದು ಯಾಕೇ? ಡಿಕೆಶಿ ಅವರ ಪಾತ್ರ ಇದ್ದರೆ ಅಧಿಕಾರಿಗಳು ತನಿಖೆ ಮಾಡ್ತಾರೆ, ನೀನು ಯಾವಾಗಲೂ ಚಾಲೇಂಜ್ ಮಾಡ್ತಿಯಲ್ಲ ಬಂದು ಕನಕಪುರದಲ್ಲಿ ಚುನಾವಣೆಗೆ ನಿಲ್ಲು. ಅದು ಬಿಟ್ಟು ಬಾಯಿಗೆ ಬಂದಂತೆ ಮಾತನಾಡೋದು ಯಾಕೇ?" ಎಂದು ರಮೇಶ್ ಜಾರಕಿಹೊಳಿ ವಿರುದ್ದ ಕೆಪಿಸಿಸಿ ವಕ್ತಾರ ಎಂ.ಲಕ್ಷಣ್ ವಾಗ್ದಾಳಿ ನಡೆಸಿದರು.

ಕೆಪಿಸಿಸಿ ಅಧ್ಯಕ್ಷರ ವಿರುದ್ದ ರಮೇಶ್ ಜಾರಕಿಹೊಳಿ ಅವಾಚ್ಯ ಪದ ಬಳಕೆ‌ ವಿಚಾರವಾಗಿ ಮೈಸೂರಿನ ಕಾಂಗ್ರೆಸ್ ಪಕ್ಷದಿಂದ ಜಾರಕಿಹೊಳಿ ವಿರುದ್ದ ಕಾನೂನು ಹೋರಾಟ ಮಾಡಲಾಗುವುದು ಎಂದು ಮೈಸೂರು ಜಿಲ್ಲಾಧ್ಯಕ್ಷ  ಬಿ.ಜೆ.ವಿಜಯ್ ಕುಮಾರ್ ತಿಳಿಸಿದರು. ಜಾರಕಿಹೊಳಿ ವಿರುದ್ದ ಮೈಸೂರಿನಲ್ಲಿ ದೂರು ಕೊಡ್ತಿವಿ ನಂತರ ನ್ಯಾಯಾಲಯಕ್ಕೆ ಹೋಗಿ ಕೇಸು ದಾಖಲಿಸುತ್ತೇವೆ. ಸಾಧ್ಯವಾದ್ರೆ ಹೈಕೋರ್ಟ್‌ನಲ್ಲು ಅರ್ಜಿ ಹಾಕುತ್ತೇವೆ. ಕೆಪಿಸಿಸಿ ಹಾಗೂ ಸಿಎಲ್‌ಪಿ ಸೂಚನೆ ಬಳಿಕ ಪ್ರತಿ ಜಿಲ್ಲೆಯಲ್ಲು ಕೇಸು ದಾಖಲಿಸಲು ಮುಂದಾಗುತ್ತೇವೆ ನಮ್ಮ ಪಕ್ಷದ ಅಧ್ಯಕ್ಷರ ತೇಜೋವಧೆಯನ್ನ ಕಾಂಗ್ರೆಸ್ ಸಹಿಸೋಲ್ಲ ಎಂದು ಅವರು ಎಚ್ಚರಿಕೆ ನೀಡಿದರು.
Published by:MAshok Kumar
First published: