HOME » NEWS » District » RAMESH JARKIHOLI CD CASE DK SURESH SUSPECTS LINK WITH CHENNAPATNA ATVR SNVS

ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಚನ್ನಪಟ್ಟಣದವರದ್ದು ಕೈವಾಡ: ಸಂಸದ ಡಿ.ಕೆ. ಸುರೇಶ್ ಅನುಮಾನ

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಕನಕಪುರ, ಬೆಳಗಾವಿಯವರ ಪಾತ್ರ ಇದೆ ಎಂದು ಸಿ.ಪಿ. ಯೋಗೇಶ್ವರ್ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಸಂಸದ ಡಿಕೆ ಸುರೇಶ್, ಈ ಪ್ರಕರಣದಲ್ಲಿ ಚನ್ನಪಟ್ಟಣದವರದ್ದು ಕೈವಾಡ ಇರಬಹುದು ಎಂದು ಶಂಕಿಸಿದ್ದಾರೆ.

news18-kannada
Updated:March 13, 2021, 8:39 AM IST
ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಚನ್ನಪಟ್ಟಣದವರದ್ದು ಕೈವಾಡ: ಸಂಸದ ಡಿ.ಕೆ. ಸುರೇಶ್ ಅನುಮಾನ
ಡಿಕೆ ಸುರೇಶ್
  • Share this:
ರಾಮನಗರ: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ವಿಚಾರಕ್ಕೆ ಸಂಬಂಧಿಸಿ ಸಚಿವ ಸಿ.ಪಿ.ಯೋಗೇಶ್ವರ್ ಅವರ ಹೇಳಿಕೆಗೆ ರಾಮನಗರದಲ್ಲಿ ಸಂಸದ ಡಿ.ಕೆ. ಸುರೇಶ್ ತೀಕ್ಷ್ಣ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಸಿಡಿ ಪ್ರಕರಣದಲ್ಲಿ ಚನ್ನಪಟ್ಟಣದವರದ್ದೂ ಪಾತ್ರ ಇದೆ. ಚನ್ನಪಟ್ಟಣದವರಿಗೆ ಅಧಿಕಾರದ ಮೇಲೆ ಆಸೆ ಇತ್ತಲ್ಲ. ಹಾಗಾಗಿ ಈ ಪ್ರಕರಣದಲ್ಲಿ ಅವರದ್ದು ಭಾಗಿ ಇದೆ ಎಂದಿದ್ದಾರೆ. ಕನಕಪುರದವರದ್ದು ಆಸೆಯಿದ್ದ ಮೇಲೆ, ಚನ್ನಪಟ್ಟಣದವರದ್ದು ಇರಲ್ವಾ? ಚಡ್ಡಿ, ಪ್ಯಾಂಟ್ ಬಿಚ್ಚೋದು ನೋಡಿರೋರು ಜೊತೆಯಲ್ಲಿದ್ದವರು. ಜೊತೆಯಲ್ಲಿದ್ದವರು ಅದನ್ನ ನೋಡಲು ಸಾಧ್ಯ. ಬೇರೆಯವರಿಂದ ಹೇಗೆ ಸಾಧ್ಯ? ಹಾಗಾಗಿ ಅವರ ಜೊತೆಯಲ್ಲಿದ್ದವರು ಚನ್ನಪಟ್ಟಣದವರು ಅಲ್ವಾ, ಅವರನ್ನೇ ಕೇಳಿ ಎಂದರು. 

ಈ ಪ್ರಕರಣದಲ್ಲಿ ಕನಕಪುರ, ಬೆಳಗಾವಿಯವರ ಪಾತ್ರ ಇದೆ ಎಂದು ಯೋಗೇಶ್ವರ್ ಹೇಳಿಕೆ ನೀಡಿದ್ದರು. ಈ ವಿಚಾರವಾಗಿ ಯೋಗೇಶ್ವರ್ ಹೇಳಿಕೆಗೆ ಸಂಸದ ಡಿ.ಕೆ‌. ಸುರೇಶ್ ಈ ರೀತಿಯಾಗಿ ತಿರುಗೇಟು ಕೊಟ್ಟರು. ‌ಇನ್ನು ಪ್ರಕರಣವನ್ನು ಎಸ್​ಐಟಿ ತನಿಖೆ ವಹಿಸಿ ಗ್ಱಹ ಸಚಿವರು ಆದೇಶ ಹೊರಡಿಸಿರುವ ಬಗ್ಗೆ ಮಾತನಾಡಿದ ಡಿಕೆ ಸುರೇಶ್, ನಾನು ಬಸವರಾಜ ಬೊಮ್ಮಾಯಿ ಅವರ ಹೇಳಿಕೆಯನ್ನ ನಾನು ನೋಡಿದ್ದೇನೆ. ಈ ಪ್ರಕರಣವನ್ನ SIT ಗೆ ವಹಿಸಿದ್ದಾರೆ, ಆದರೆ FIR ಇಲ್ಲ. ಹಾಗಾಗಿ ಈ ತನಿಖೆಯಿಂದ ಯಾವುದೇ ಪ್ರಯೋಜನವಿಲ್ಲ. ಕ್ಲೀನ್ ಚಿಟ್ ಕೊಡುವ ಸಲುವಾಗಿ ತನಿಖೆ ಮಾಡ್ತಾರೆ ಅಷ್ಟೇ. FIR ಮಾಡದೇ ತನಿಖೆ ಮಾಡಿದರೆ ಪ್ರಯೋಜನವಿಲ್ಲ ಎಂದು ಹೇಳಿದರು.

ರಾಮನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ದಿಶಾ ಸಭೆ ನಡೆಸಿದ ಡಿ.ಕೆ. ಸುರೇಶ್ ಅವರು ಪಿಎಂ ಕಿಸಾನ್ ಸಮ್ಮಾನ್ ಯೋಜನೆ ವಿಚಾರವಾಗಿ ಕನಕಪುರ ತಹಶೀಲ್ದಾರ್ ವರ್ಷಾ ಒಡೆಯರ್ ಮತ್ತಿತರ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು.

ಇದನ್ನೂ ಓದಿ: ಮಗಳ ಆಸೆಯಂತೆ ಮೇಕೆಗೆ ಸೀಮಂತ ಕಾರ್ಯ ಮಾಡಿದ ಪೋಷಕರು; ಚಿತ್ರದುರ್ಗದ ಈ ಊರಿನವರಿಗೆ ಹಬ್ಬದೂಟ

ಕಿಸಾನ್ ಸಮ್ಮಾನ್ ಯೋಜನೆ ಅಂದರೆ ಏನು? ಪ್ರತಿ ಖಾತೆದಾರನಿಗೆ 10 ಸಾವಿರ ರೂ ಹಣ ಸಿಗಲಿದೆ. ಕೇಂದ್ರದಿಂದ 6 ಸಾವಿರ, ರಾಜ್ಯದಿಂದ 4 ಸಾವಿರ ರೂ ಹಣ ಬರುತ್ತದೆ. 3 ಕಂತಿನಲ್ಲಿ ರೈತರಿಗೆ ಹಣ ಬರಲಿದೆ. ಆದರೆ ನೀವು ಅಧಿಕಾರಿಗಳು ರೈತರಿಗೆ ಮೋಸ ಮಾಡ್ತಿದ್ದೀರಿ. ರೈತರ ಖಾತೆಗಳನ್ನ ಯೋಜನೆಗೆ ಸೇರಿಸದೇ ನಿರ್ಲಕ್ಷ್ಯ ಮಾಡ್ತಿದ್ದೀರಿ. ಆದರೆ ಅಧಿಕಾರಿಗಳಿಗೆ ಯಾವುದೇ ಸಮಸ್ಯೆಯಾಗಲ್ಲ. ನಿಮಗೆ ಪ್ರತಿ ತಿಂಗಳು ಸಂಬಳ ಬರುತ್ತದೆ. ಆದರೆ ರೈತರಿಗೆ ನಿಮ್ಮಿಂದ ಬಹಳ ಸಮಸ್ಯೆಯಾಗುತ್ತೆ. ಕಳೆದ 2 ವರ್ಷದಿಂದ ನಾನು ಕೇಳ್ತಿದ್ದೇನೆ, ನಾನೇ 400-500 ಜನರಿಗೆ ಗ್ರ್ಯಾಂಟ್ ಮಾಡಿಸಿದ್ದೇನೆ. ಆದರೆ ರೈತರ ಖಾತೆಗಳನ್ನ ಸೇರಿಸಲು ನಿಮಗೆ ಆಗುತ್ತಿಲ್ಲ. ನಾನು ಕಳೆದ 1 ವರ್ಷ ನಿಮಗೆ ಫ್ರೀ ಬಿಟ್ಟೆ. ಅಧಿಕಾರಿಗಳು ಏನೋ ಮಾಡ್ತಾರೆಂದು ನೋಡುತ್ತಿದ್ದೆ. ಕೊರೋನಾ ಇತ್ತು ಹಾಗಾಗಿ ನಾನು ಸುಮ್ಮನಿದ್ದೆ. ಆದರೆ ಇವತ್ತಿನಿಂದ ಪ್ರಾರಂಭವಾಗುತ್ತೆ ಎಂದು ಎಚ್ಚರಿಕೆ ನೀಡಿದರು.

ನೀವು ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ನಾನು ಯಾರದ್ದೋ ಕಡೆಯಿಂದ ಬಂದಿದ್ದೀನೆಂದು ಕೆಲಸ ಮಾಡದೇ ಇದ್ದರೆ ಆಗಲ್ಲ. ನಾನು ಏನ್ ಮಾಡಬೇಕೋ ನನಗೂ ಗೊತ್ತಿದೆ. ಇನ್ನೊಂದು ತಿಂಗಳಿನಲ್ಲಿ ಪಿ.ಎಂ ಕಿಸಾನ್ ಯೋಜನೆ ಸರಿಯಾಗಬೇಕು, ಬಾಕಿಯಿರುವ ರೈತರ ಖಾತೆಗಳನ್ನ ಸೇರಿಸಬೇಕು ಎಂದು ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಹಾಗೂ ತಹಶೀಲ್ದಾರ್ ವರ್ಷಾ ಒಡೆಯರ್ ಅವರಿಗೆ ಸಂಸದ ಡಿಕೆ ಸುರೇಶ್ ಸೂಚನೆ ನೀಡಿದರು.

ಇದನ್ನೂ ಓದಿ: ಅಕ್ರಮ ಮರಳುಗಾರಿಕೆ: ನಂದಿಹಳ್ಳಿಯಿಂದ ಹುಬ್ಬಳ್ಳಿ, ಬೆಂಗಳೂರುವರೆಗೂ ನಾನ್ ಸ್ಟಾಪ್ ಮರಳು ಸಾಗಣಿಕೆಗೆ ಅಧಿಕಾರಿಗಳೇ ಶ್ರೀರಕ್ಷೆ!ಇನ್ನು, ಜನರಿಗೆ ಅನುಕೂಲ ಮಾಡಲು ಆಗದಿದ್ದರೆ ತಾಲೂಕು, ಜಿಲ್ಲಾ ಆಡಳಿತ ಯಾಕೆ ಬೇಕು ಎಂದು ಸಂಸದ ಡಿ.ಕೆ. ಸುರೇಶ್ ಅವರು ಇದೇ ವೇಳೆ ಜಿಲ್ಲಾಧಿಕಾರಿಗೆ ಪ್ರಶ್ನೆ ಮಾಡಿದರು.

ವರದಿ: ಎ.ಟಿ. ವೆಂಕಟೇಶ್
Published by: Vijayasarthy SN
First published: March 13, 2021, 8:39 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories