HOME » NEWS » District » RAMESH JARKIHOLI CD CASE DINESH KALLAHALLI TALK AGAINST EX CM KUMARASWAMY ATVR MAK

Ramesh Jarkiholi CD Case: ಕುಮಾರಣ್ಣ ಇಷ್ಟು ದಿನ ಯಾಕೆ ಸುಮ್ಮನಿದ್ದರು, 5 ಕೋಟಿ ಡೀಲ್ ಬಗ್ಗೆ ಫ್ರೂ ಮಾಡಲಿ: ದಿನೇಶ್ ಕಲ್ಲಹಳ್ಳಿ ಸವಾಲು

ಇನ್ನು ರೇಣುಕಾಚಾರ್ಯರ ಬಗ್ಗೆ ನಾನು ಹೇಳಲ್ಲ, ನರ್ಸ್ ಜಯಕ್ಕನ ಬಗ್ಗೆ ಅವರು ಹೇಳಲಿ. ಅವರ ಕೇಸ್ ನಲ್ಲಿ ಶಿಕ್ಷೆಯಾಗುತ್ತಿತ್ತು, ಕೊನೆ ಹಂತದಲ್ಲಿ ತಪ್ಪಿಸಿಕೊಂಡರು. ಹಾಗಾಗಿ ಅವರ ಮಾತಿಗೆ ನಾನು ಏನು ಹೇಳಲ್ಲ. ನರ್ಸ್ ಜಯಕ್ಕರನ್ನ ಸಂಪರ್ಕ ಮಾಡಿದರೆ ಎಲ್ಲವೂ ತಿಳಿಯಲಿದೆ ಎಂದು ದಿನೇಶ್ ಕಲ್ಲಹಳ್ಳಿ ಹೇಳಿದ್ದಾರೆ.

news18-kannada
Updated:March 6, 2021, 9:44 PM IST
Ramesh Jarkiholi CD Case: ಕುಮಾರಣ್ಣ ಇಷ್ಟು ದಿನ ಯಾಕೆ ಸುಮ್ಮನಿದ್ದರು, 5 ಕೋಟಿ ಡೀಲ್ ಬಗ್ಗೆ ಫ್ರೂ ಮಾಡಲಿ: ದಿನೇಶ್ ಕಲ್ಲಹಳ್ಳಿ ಸವಾಲು
ದಿನೇಶ್ ಕಲ್ಲಹಳ್ಳಿ.
  • Share this:
ರಾಮನಗರ (ಮಾರ್ಚ್​ 06); ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೆಕ್ಸ್ ಸಿಡಿ ವಿಚಾರವಾಗಿ ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿದ್ದು 5 ಕೋಟಿಗೆ ಡೀಲ್ ಆಗಿದೆ ಎಂದು ಆರೋಪಿಸಿದ್ದಾರೆ. ಮಾಜಿ ಸಚಿವ ರೇಣುಕಾಚಾರ್ಯ ಸಹ ಟೀಕಿಸಿದ್ದಾರೆ. ಆದರೆ, ಅವರಿಗೆ ಸಾಮಾಜಿಕ ಬದ್ಧತೆ ಇದ್ದರೆ ಫ್ರೂವ್ ಮಾಡಲಿ ಎಂದು ದಿನೇಶ್​ ಕಲ್ಲಹಳ್ಳಿ ಸವಾಲು ಹಾಕಿದ್ದಾರೆ. ಈ ಕುರಿತು ಮಾತನಾಡಿರುವ ದಿನೇಶ್​ ಕಲ್ಲಹಳ್ಳಿ, "ಸಿಡಿ ಬಗ್ಗೆ ಕುಮಾರಸ್ವಾಮಿ 3 ತಿಂಗಳ ಹಿಂದೆಯೇ ಗೊತ್ತಿತ್ತು ಅಂತಾರೆ, ಆದರೆ ಅವರಿಗೆ ಗೊತ್ತಿದ್ದರೆ ಆಗಲೇ ಯಾಕೆ ಹೇಳಲಿಲ್ಲ. ಇನ್ನು ಇಷ್ಟು ದಿನ ಯಾಕೆ ಸುಮ್ಮನಿದ್ದರು ಕುಮಾರಣ್ಣ, ಜೆಡಿಎಸ್, ಕಾಂಗ್ರೆಸ್, ಬಿಜೆಪಿ ನಾಯಕರು ಇದ್ದಾರಾ? 5 ಕೋಟಿ ಡೀಲ್ ಬಗ್ಗೆ ಕುಮಾರಣ್ಣ ಫ್ರೂ ಮಾಡಲಿ" ಎಂದು ಚಾಲೆಂಜ್ ಮಾಡಿದ್ದಾರೆ.

"ಇನ್ನು ರೇಣುಕಾಚಾರ್ಯರ ಬಗ್ಗೆ ನಾನು ಹೇಳಲ್ಲ, ನರ್ಸ್ ಜಯಕ್ಕನ ಬಗ್ಗೆ ಅವರು ಹೇಳಲಿ. ಅವರ ಕೇಸ್ ನಲ್ಲಿ ಶಿಕ್ಷೆಯಾಗುತ್ತಿತ್ತು, ಕೊನೆ ಹಂತದಲ್ಲಿ ತಪ್ಪಿಸಿಕೊಂಡರು. ಹಾಗಾಗಿ ಅವರ ಮಾತಿಗೆ ನಾನು ಏನು ಹೇಳಲ್ಲ. ನರ್ಸ್ ಜಯಕ್ಕರನ್ನ ಸಂಪರ್ಕ ಮಾಡಿದರೆ ಎಲ್ಲವೂ ತಿಳಿಯಲಿದೆ" ಎಂದು ದಿನೇಶ್ ಕಲ್ಲಹಳ್ಳಿ ಹೇಳಿದ್ದಾರೆ.

ಇನ್ನು ಸಚಿವರು ಕೋರ್ಟ್ ಗೆ ಅರ್ಜಿ ಸಲ್ಲಿಸಿರುವ ವಿಚಾರಕ್ಕೆ ಮಾತನಾಡಿ ಸಚಿವರು ನ್ಯಾಯಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ, ಆದರೆ ಕಾರಣ ಗೊತ್ತಿಲ್ಲ, ನಾನು ಈ ಪ್ರಕರಣದ ವಿಚಾರವಾಗಿ ಸುಪ್ರೀಂಕೋರ್ಟ್ ನಲ್ಲೂ ಹೋರಾಟ ಮಾಡುತ್ತೇನೆ. ನನ್ನ ಬಳಿಯಿರುವ ಅಕ್ರಮದ ಬಗ್ಗೆ ವಕೀಲರ ಬಳಿ ಚರ್ಚೆ ಮಾಡ್ತೇನೆ. ನಂತರ ಸಂದರ್ಭ ಬಂದಾಗ ಆ ವಿಚಾರದ ಬಗ್ಗೆ ಮಾತನಾಡುತ್ತೇನೆ. ನನ್ನ ವಿರುದ್ಧ ಪ್ರತಿಭಟನೆ ಮಾಡ್ತಿದ್ದಾರೆ ಕೆಲವರು, ಆದರೆ ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಎಲ್ಲಾ ರೀತಿಯ ಅವಕಾಶವಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Ramesh Jarkiholi CD Case: ಸಿಡಿ ಪ್ರಕರಣಕ್ಕೆ ಬೆಚ್ಚಿ ಸಚಿವರು ಕೋರ್ಟಿಗೆ ಹೋದ ಬಗ್ಗೆ ಮಾಹಿತಿ ಪಡೆದ ಬಿಜೆಪಿ ಹೈಕಮಾಂಡ್

ಸಿ.ಪಿ.ಯೋಗೇಶ್ವರ್ ಹೊಸಬಾಂಬ್: ಕನಕಪುರ - ಬೆಳಗಾವಿಯವರ ತಂತ್ರದ ಗುಟ್ಟು

ಸಿಡಿ ವಿಚಾರವಾಗಿ ಸಚಿವ ಸಿ.ಪಿ.ಯೋಗೇಶ್ವರ್ ಹೊಸಬಾಂಬ್ ಸಿಡಿಸಿದ್ದು. ಈ ಪ್ರಕರಣದಲ್ಲಿ ಕನಕಪುರ - ಬೆಳಗಾವಿಯವರ ಕೈವಾಡವಿದೆ ಎನ್ನುವ ಮೂಲಕ ಡಿ.ಕೆ.ಶಿವಕುಮಾರ್ ಹಾಗೂ ಲಕ್ಷ್ಮಿಹೆಬ್ಬಾಳ್ಕರ್ ಹೆಸರು ಬಳಸದೇ ಟಾಂಗ್ ಕೊಟ್ಟಿದ್ದಾರೆ. ಜೊತೆಗೆ ರಾಜಕೀಯವಾಗಿ ಡಿ.ಕೆ.ಶಿವಕುಮಾರ್ ಮೇಲೆ ದ್ವೇಹ ಹೊಂದಿರುವ ಸಿ.ಪಿ‌.ಯೋಗೇಶ್ವರ್ ಈ ಸಂದರ್ಭದಲ್ಲಿ ಅದನ್ನ ಚೆನ್ನಾಗಿ ಬಳಸಿಕೊಳ್ತಿದ್ದಾರೆಂಬ ಚರ್ಚೆಗಳು ನಡೆಯುತ್ತಿವೆ.
ಜೊತೆಗೆ ಬೆಳಗಾವಿಯಲ್ಲಿ ಲಕ್ಷ್ಮಿಹೆಬ್ಬಾಳ್ಕರ್ ಹಾಗೂ ಸಾಹುಕಾರ್ ನಡುವೆ ರಾಜಕೀಯ ಜಿದ್ದಿರುವ ಕಾರಣ ಯೋಗೇಶ್ವರ್ ಈ ಎರಡು ಹೆಸರನ್ನ ಪ್ರಸ್ತಾಪ ಮಾಡಿದ್ದಾರೆ. ಲಕ್ಷ್ಮಿ ಹೆಬ್ಬಾಳ್ಕರ್, ಡಿ.ಕೆ.ಶಿವಕುಮಾರ್ ಗೆ ರಮೇಶ್ ಜಾರಕಿಹೊಳಿ ಮೇಲೆ ಕಣ್ಣಿತ್ತು, ಹಾಗಾಗಿ ಈ ಪ್ರಕರಣದಲ್ಲಿ ಇವರ ಪಾತ್ರ ಇದೇ ಎಂಬ ಸಂದೇಶ ಸಾರಲು ಯೋಗೇಶ್ವರ್ ಈ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
Published by: MAshok Kumar
First published: March 6, 2021, 9:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories