HOME » NEWS » District » RAMESH JARKIHOLI CD CASE DINESH KALLAHALLI SAYS HE WILL GET JUSTICE TO THE WOMAN ATVR SNVS

Jarkiholi CD Case: ದಿನೇಶ್ ಕಲ್ಲಹಳ್ಳಿಯ ಕನಕಪುರ ಮನೆಗೆ ಪೊಲೀಸ್ ಭದ್ರತೆ; ನೊಂದ ಯುವತಿಗೆ ನ್ಯಾಯ ಕೊಡಿಸುವೆ ಎಂದ ದೂರುದಾರ

ರಮೇಶ್ ಜಾರಕಿಹೊಳಿ ಅವರ ಸಿಡಿ ಬಿಡುಗಡೆ ಮಾಡಿದ ಬಳಿಕ ಕನಕಪುರದ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿಯ ಮನೆಗೆ ಪೊಲೀಸ್ ಭದ್ರತೆ ನೀಡಲಾಗಿದೆ. ಇದೇ ವೇಳೆ, ನೊಂದ ಯುವತಿಗೆ ನ್ಯಾಯ ಕೊಡಿಸುವುದಾಗಿ ದಿನೇಶ್ ಹೇಳಿದ್ದಾರೆ.

news18-kannada
Updated:March 4, 2021, 10:22 AM IST
Jarkiholi CD Case: ದಿನೇಶ್ ಕಲ್ಲಹಳ್ಳಿಯ ಕನಕಪುರ ಮನೆಗೆ ಪೊಲೀಸ್ ಭದ್ರತೆ; ನೊಂದ ಯುವತಿಗೆ ನ್ಯಾಯ ಕೊಡಿಸುವೆ ಎಂದ ದೂರುದಾರ
ದಿನೇಶ್ ಕಲ್ಲಹಳ್ಳಿ
  • Share this:
ರಾಮನಗರ: ರಮೇಶ್ ಜಾರಕಿಹೋಳಿ ರಾಜಿನಾಮೆ ವಿಚಾರವಾಗಿ ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಳ್ಳಿ ಹೇಳಿಕೆ ನೀಡಿ ಮುಖ್ಯಮಂತ್ರಿಗೆ ಮೊದಲು ಅಭಿನಂದನೆ ಸಲ್ಲಿಸುತ್ತೇನೆಂದಿದ್ದಾರೆ. ಕನಕಪುರದ ಕಲ್ಲಹಳ್ಳಿಯ ನಿವಾಸದಲ್ಲಿ ಮಾತನಾಡಿದ ಅವರು, ಇಡೀ ಪ್ರಕರಣದ ಸಂಬಂಧ ಸಂಪೂರ್ಣವಾಗಿ ತನಿಖೆಯಾಗಬೇಕು. ನಾನು ಪೊಲೀಸ್ ಆಯುಕ್ತರಿಗೆ ಸಿಡಿಯನ್ನು ನೀಡಿದ್ದೇನೆ. ಆ ಸಿಡಿಯಲ್ಲಿ ಸತ್ಯಾಂಶ ಇದೆ. ಹಾಗಾಗಿ ನೈತಿಕತೆಯಲ್ಲಿ ಸಿಎಂ ರಾಜಿನಾಮೆ ಪಡೆದಿದ್ದಾರೆ. ಈ ಪ್ರಕರಣದಲ್ಲಿ ಗಂಭೀರತೆ ಇದೆ. ಸಚಿವ ಸಂಪುಟದಲ್ಲಿ ಇಂತಹವರು ಇರುವುದು ಬೇಡ ಎಂದು ರಾಜಿನಾಮೆ ಪಡೆಯಿರಿ ಅಂತಾ ಹೇಳಿದ್ದೆ. ಹೀಗಾಗಿ ರಾಜಿನಾಮೆ ಪಡೆದಿದ್ದಾರೆ ಎಂದು ಹೇಳಿದರು.

ರಮೇಶ್ ಜಾರಕಿಹೋಳಿ ತನಿಖೆಯ ಮೇಲೆ ಪ್ರಭಾವ ಬೀರಲ್ಲ ಅಂತಾ ಅಂದುಕೊಂಡಿದ್ದೇನೆ. ನಾನು ಉಚ್ಚ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುತ್ತೇನೆ. ನನ್ನ ಹೋರಾಟ ಮುಂದುವೆರೆಯುತ್ತದೆ. ನಾನು ಕಾನೂನು ಪರವಾಗಿ ಹೋರಾಟ ಮಾಡುತ್ತೇನೆ. ಬಹಳ ಅಕ್ರಮಗಳು ಇವೆ, ನಾನು ಮುಂದೆ ಹೇಳುತ್ತೇನೆ. ಇಂತಹ ಗಂಭೀರ ಪ್ರಕರಣಗಳು ಇನ್ನೂ ಇವೆ. ಕೆಲವು ಪ್ರಭಾವಿ ನಾಯಕರು ಹಾಗೂ ಸಚಿವ ಸಂಪುಟದಲ್ಲಿ ಇನ್ನೂ ಕೆಲವರು ಇದ್ದಾರೆ. ಅವರ ಬಗ್ಗೆ ಮುಂದೆ ಮಾತನಾಡುತ್ತೇನೆ. ಜೊತೆಗೆ ನನಗೆ ಜೀವ ಬೆದರಿಕೆ ಕರೆಗಳು ಬರುತ್ತಿವೆ. ಹಾಗಾಗಿ ನಾನು ರಾಮನಗರ ಎಸ್​ಪಿಗೆ ದೂರು ನೀಡುತ್ತಿದ್ದೇನೆ ಎಂದರು.

ಇದನ್ನೂ ಓದಿ: H Vishwanth: ರಮೇಶ್​ ಜಾರಕಿಹೊಳಿ ಒಳ್ಳೆಯ ಕುಟುಂಬದಿಂದ ಬಂದವರು; ಈ ಸಿಡಿ ಬಗ್ಗೆ ತನಿಖೆಯಾಗಬೇಕು; ಎಚ್​ ವಿಶ್ವನಾಥ್​​

ಇದೇ ವೇಳೆ, ದಿನೇಶ್ ಮೆಸೇಜ್ ಬಗ್ಗೆ ಮಾಹಿತಿ ನೀಡಿದ ಎಸ್ಪಿ ಗಿರೀಶ್, ನನಗೆ ದಿನೇಶ್ ಕಲ್ಲಹಳ್ಳಿ ಮೆಸೇಜ್ ಮಾಡಿದ್ದಾರೆ. ಬೆದರಿಕೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ನಾನು ಸಂಬಂಧಿಸಿದ ಲೋಕಲ್ ಪೊಲೀಸ್ ಠಾಣೆಯಲ್ಲಿ ದೂರು ಕೊಡಿ ಎಂದಿದ್ದೇನೆ. ದೂರಿನ ಮೇಲೆ ಮುಂದಿನ ಕ್ರಮ ವಹಿಸಲಾಗುತ್ತೆ. ಭದ್ರತೆ ವಿಚಾರವಾಗಿ ದೂರಿನ ನಂತರ ತೀರ್ಮಾನ ಮಾಡಲಾಗುತ್ತೆ ಎಂದರು.

ಎಸ್ಪಿ ಮಾಹಿತಿ ಹಿನ್ನೆಲೆ ದಿನೇಶ್ ಕಲ್ಲಹಳ್ಳಿ ಕನಕಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು. ಇದರ ಬೆನ್ನಲ್ಲೇ ದಿನೇಶ್ ಮನೆಗೆ ಪೊಲೀಸರನ್ನ ನಿಯೋಜಿಸಲಾಗಿದೆ. ದೂರು ನೀಡಿದ ಬಳಿಕ ಮಾತನಾಡಿದ ದಿನೇಶ್ ಕಲ್ಲಹಳ್ಳಿ, ನಾನು ಎಸ್ಪಿರವರ ಮಾಹಿತಿ ಮೇರೆಗೆ ದೂರು ನೀಡಿದ್ದೇನೆ, ನನಗೆ ಜೀವಬೆದರಿಕೆ ಇದೆ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಪರಸತಿ, ಪರಧನ, ಪರದೇಶಿ ಮಧ್ಯೆ ರಾಜಕಾರಣ ಓಡಾಡುತ್ತಿದೆ, ಈಗಿನ ರಾಜಕಾರಣಿಗಳು ಹೈಬ್ರಿಡ್‌ ತಳಿಗಳು: ಸಿ.ಎಂ.ಇಬ್ರಾಹಿಂ

ಯುವತಿಯ ಕುಟುಂಬಸ್ಥರು ಪರಿಚಯಸ್ಥರ ಮೂಲಕ ನನ್ನ ಭೇಟಿ ಮಾಡಿದರು. ಸಚಿವರಿಂದ ಸಂತ್ರಸ್ತ ಯುವತಿಗೆ ಅನ್ಯಾಯವಾಗಿದೆ. ಸರ್ಕಾರ ಉದ್ಯೋಗ ಆಮಿಷವೊಡ್ಡಿ ಯುವತಿಯನ್ನ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ. ನೀವು ಮುಂದೆ ನಿಂತು‌ ನ್ಯಾಯಕೊಡಿಸಬೇಕು ಎಂದು ಕೇಳಿಕೊಂಡರು. ಹೇಳಿದ ಬಳಿಕ ಸಂಪೂರ್ಣವಾಗಿ ಪರಾಮರ್ಶೆ ಮಾಡಿ ವಕೀಲರ ಜತೆ ಚರ್ಚೆ ಮಾಡಿದ ಬಳಿಕ ಪೊಲೀಸ್ ಆಯುಕ್ತರನ್ನ ನಿನ್ನೆ ಭೇಟಿ ಮಾಡಿ ದೂರು ಕೊಟ್ಟಿದ್ದೇನೆ. ದೂರಿನ ಜತೆಗೆ ಸಂಬಂಧಟ್ಟ ಮಾಹಿತಿಯನ್ನು ಕೊಟ್ಟಿದ್ದೇನೆ. ಪ್ರಕರಣ ಬೆಳಕಿಗೆ ಬಂದ ಮೇಲೆ ಸಾಕಷ್ಟು ಬೆದರಿಕೆ ಕರೆಗಳು ಬರುತ್ತಿದೆ. ಇಂತಹ ಬೆದರಿಕೆಗೆ ಹೆದರುವುದಿಲ್ಲ. ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನ ಭೇಟಿ ಮಾಡಿ ದೂರು ಕೊಡುತ್ತೇನೆ. ನನ್ನ ಜತೆ ಯಾವ ಪ್ರಭಾವಿ ವ್ಯಕ್ತಿಗಳು ನಿಂತಿಲ್ಲ. ನಕಲಿ‌ ಸಿಡಿ‌ ಎಂಬ ಹೇಳಿಕೆ‌ ವಿಚಾರ ಆದಷ್ಟು ಬೇಗ ತನಿಖೆ ಪೂರ್ಣಗೊಳಿಸಿ ರಾಜ್ಯದ ಜನತೆಗೆ ಸತ್ಯಾ ಸತ್ಯತೆ ಗೊತ್ತಾಗಬೇಕಿದೆ. ಪ್ರಧಾನಿಗಳನ್ನ ಭೇಟಿ ಮಾಡಲು ಅವಕಾಶ ಕೋರುತ್ತೇನೆ ಎಂದು ಕನಕಪುರದಲ್ಲಿ ದಿನೇಶ್ ಕಲ್ಲಹಳ್ಳಿ ಹೇಳಿಕೆ ನೀಡಿದರು.ಇದೇ ವೇಳೆ, ದಿನೇಶ್ ಕಲ್ಲಹಳ್ಳಿ ಅವರು ಇಂದು ತಮ್ಮ ದೂರಿನ ಬಗ್ಗೆ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಹೆಚ್ಚಿನ ಮಾಹಿತಿ ನೀಡಲು ಬೆಂಗಳೂರಿಗೆ ತೆರಳಿದ್ದಾರೆ.

ವರದಿ: ಎ.ಟಿ. ವೆಂಕಟೇಶ್
Published by: Vijayasarthy SN
First published: March 4, 2021, 10:22 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories