news18-kannada Updated:January 25, 2021, 3:29 PM IST
ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ
ಬೆಳಗಾವಿ: ರಮೇಶ್ ಜಾರಕಿಹೋಳಿಯ ಪರಮ ಆಪ್ತ ಶಾಸಕ ಹಾಗೂ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ರಾಜೀನಾಮೆ ನೀಡಿದವರಲ್ಲಿ ಮಹೇಶ್ ಕುಮಟಳ್ಳಿ ಕೂಡ ಒಬ್ಬರು. ಸದ್ಯ ಮಹೇಶ ಕುಮಟಳ್ಳಿ ಕುರಿತು ಜಲ ಸಂಪನ್ಮೂಲ ಸಚಿವರು ರಾಜಕೀಯ ಭವಿಷ್ಯ ನುಡಿದಿದ್ದು, ಮಾರ್ಚ್ ನಂತರ ಅವರೂ ಕೂಡ ಸಚಿವರಾಗ್ತಾರೆ ಎಂದು ಹೇಳಿದ್ದಾರೆ.
ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಈಗಾಗಲೇ ಮುಗಿದಿದೆ. ಸಚಿವ ಸಂಪುಟದ ಬಳಿಕ ಹಲವು ಶಾಸಕರು ಸಹ ಅಸಮಾಧಾನಗೊಂಡಿದ್ದಾರೆ. ಸಂಪುಟ ವಿಸ್ತರಣೆಗೂ ಮುನ್ನ ಮಹೇಶ್ ಕುಮಟಳ್ಳಿ ಕೂಡ ಅಸಮಾಧಾನ ಹೊರ ಹಾಕಿದ್ದರು.
ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ. ನನಗೂ ಸಚಿವ ಸ್ಥಾನ ಸಿಗುತ್ತೆ ಅಂದುಕೊಂಡಿದ್ದೆ. ಆದ್ರೆ ಇದುವರೆಗೆ ಯಾಕೆ ಸಚಿವ ಸ್ಥಾನ ನೀಡಿಲ್ಲ ಎಂಬುದು ನನಗೂ ಗೊತ್ತಿಲ್ಲಾ. ಸಚಿವ ಸ್ಥಾನ ನೀಡದ ಕುರಿತು ಸಾಕಷ್ಟು ಬಾರಿ ಪ್ರಶ್ನೆ ಕೇಳಿದ್ದೇನೆ. ಆದ್ರೆ ಆ ಬಗ್ಗೆ ನನಗೆ ಇನ್ನು ಉತ್ತರ ಸಿಕ್ಕಿಲ್ಲ. ನಾನು ಮಾತ್ರ ಅಲ್ಲ ಮಾಧ್ಯಮದವರು ಸಾಕಷ್ಟು ಬಾರಿ ಪ್ರಶ್ನೆ ಕೇಳಿದಾಗಲು ಅವರ ಬಳಿ ಉತ್ತರ ಸಿಕ್ಕಿಲ್ಲಾ. ಜಟಿಲ ಸಮಸ್ಯೆ ಇದ್ದಾಗ ಒಬ್ಬರು ಸಮಾಧಾನ ಮಾಡಿಕೊಳ್ಳಬೇಕು. ಅದು ನಾನ ಆಗಿದ್ದೀನಿ ಎನ್ನುವ ಮೂಲಕ ಇತ್ತೀಚೆಗೆ ಕುಮಟಳ್ಳಿ ಅಸಮಾಧಾನ ವ್ಯಕ್ತಪಡಿಸಿದ್ದರು.
ಅಸಮಾಧಾನದ ಬೆನ್ನಲೆ ತಮ್ಮ ಪ್ರೀತಿಯ ಶಿಷ್ಯನ ಕುರಿತು ಸಾಹುಕಾರ್ ತಲೆ ಕೆಡಿಸಿಕೊಂಡಿದ್ದಾರೆ. ತಮ್ಮ ಆಪ್ತನನ್ನು ಸಚಿವ ಸಂಪುಟದಲ್ಲಿ ಸ್ಥಾನ ಕೊಡಿಸಲು ಸಜ್ಜಾಗಿದ್ದಾರೆ. ಇದೇ ವಿಚಾರವಾಗಿ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿರುವ ಸಚಿವ ರಮೇಶ್ ಜಾರಕಿಹೋಳಿ, ಬರುವ ಮಾರ್ಚ್ ಬಳಿಕ ಮಹೇಶ್ ಕುಮಟಳ್ಳಿಗೂ ಸಚಿವ ಸ್ಥಾನ ಸಿಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಇನ್ನು ಸಚಿವರುಗಳ ಖಾತೆ ಅದಲು ಬದಲು ಅಸಮಾಧಾನ ವಿಚಾರದಲ್ಲಿ ಮಾತನಾಡಿದ ಅವರು, ಅಣ್ಣ ತಮ್ಮಂದಿರ ಜಗಳ ಮನೆಯೊಳಗೆ ಬಗೆಹರಿಯುತ್ತೆ. ಅದೇ ರೀತಿ ಸಚಿವರ ಒಳ ಜಗಳವನ್ನೂ ಸಹ ಸಚಿವರುಗಳು ಸರಿಪಡಿಸಿಕೊಳ್ತಾರೆ. ಒಂದು ಮನೆ ಅಂದ ಬಳಿಕ ಜಗಳ ಮುನಿಸು ಇವೆಲ್ಲವೂ ಸಹಜ. ಎಲ್ಲವೂ ಸರಿ ಹೋಗುತ್ತೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಸರ್ಕಾರಕ್ಕೆ ತಪ್ಪಿಲ್ಲ ಕಂಟಕ; ರಾಜೂಗೌಡ, ಮಾಧುಸ್ವಾಮಿ, ಆನಂದ್ ಸಿಂಗ್ ರಾಜೀನಾಮೆ ಸಾಧ್ಯತೆ
ನೀರಿನ ವಿಚಾರದಲ್ಲಿ ಮಹಾರಾಷ್ಟ್ರ ಜೊತೆ ಮಾತುಕತೆ:ಮಹಾರಾಷ್ಟ್ರದವರಿಗೆ ನಾವು ನೀರು ಬಿಡುತ್ತೇವೆ, ಅವರು ನಮಗೆ ನೀರು ಬಿಡುತ್ತಾರೆ. ಈ ಕುರಿತು ಈಗಾಗಲೇ ಮಹಾರಾಷ್ಟ್ರದ ಸರ್ಕಾರದೊಂದಿಗೆ ಮಾತುಕತೆ ನಡೆದಿದೆ. ಮಹಾರಾಷ್ಟ್ರದ ಜತೆಗೆ ನಾವು 4 ಟಿಎಂಸಿ ನೀರು ಬಿಡುಗಡೆ ಮಾಡುತ್ತೇವೆ. ಪ್ರತಿಯಾಗಿ ಮಾಹಾರಾಷ್ಟ್ರದಿಂದ ಬೇಸಿಗೆಯಲ್ಲಿ ಕುಡಿಯಲು 6 ಟಿಎಂಸಿ ನೀರು ಬಿಡುಗಡೆ ಮಾಡಲಿದೆ. ಈ ಬಗ್ಗೆ ಅಲ್ಲಿನ ಸಚಿವರು ಹಾಗೂ ಸರ್ಕಾರದೊಂದಿಗೆ ಮಾತುಕತೆ ನಡೆದಿದೆ ಎಂದು ಸಚಿವ ಜಾರಕಿಹೊಳಿ ಹೇಳಿದ್ದಾರೆ.
ವರದಿ: ಲೋಹಿತ್ ಶಿರೋಳ
Published by:
Vijayasarthy SN
First published:
January 25, 2021, 3:29 PM IST