news18-kannada Updated:January 15, 2021, 12:06 PM IST
ಸಚಿವ ರಮೇಶ್ ಜಾರಕಿಹೋಳಿ
ಬೆಳಗಾವಿ: ಸಿಎಂ ಯಡಿಯೂರಪ್ಪ ಸಚಿವ ಸಂಪುಟ ವಿಸ್ತರಣೆ ಪಕ್ಷದಲ್ಲಿ ಬಿರುಗಾಳಿ ಬೀಸಿದೆ. ಸಿಎಂ ಯಡಿಯೂರಪ್ಪ ಮತ್ತು ಸಿ.ಪಿ. ಯೋಗೇಶ್ವರ್ ಬಗ್ಗೆ ಅಸಮಾಧಾನ ಹೊರ ಹಾಕುತ್ತಿರುವ ಭಿನ್ನಮತೀಯರಿಗೆ ಗೋಕಾಕ ಸಾಹುಕಾರ್ ರಮೇಶ್ ಜಾರಕಿಹೊಳಿ ಟಾಂಗ್ ಕೊಟ್ಟಿದ್ದಾರೆ. ಸಿಎಂ ಯಡಿಯೂರಪ್ಪ ಅವರ ಸಂಪುಟ ತೀರ್ಮಾನಕ್ಕೆ ನಾವೆಲ್ಲರೂ ಸ್ವಾಗತಿಸುತ್ತೇವೆ. ಬಿಜೆಪಿಯಂತಹ ದೊಡ್ಡ ಪಕ್ಷದಲ್ಲಿ ಭಿನ್ನಮತ ಸಹಜ. ಅದನ್ನ ನಮ್ಮ ಪಕ್ಷದ ವರಿಷ್ಠರು ಸರಿಪಡಿಸುವಲ್ಲಿ ಸಮರ್ಥರಾಗಿದ್ದಾರೆ ಎಂದು ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ.
ಬೆಳಗಾವಿ ಸರ್ಕ್ಯೂಟ್ ಹೌಸ್ನಲ್ಲಿ ಮಾತನಾಡಿದ ರಮೇಶ ಜಾರಕಿಹೊಳಿ, ಸಿಡಿ ಇದೆಯೋ ಇಲ್ಲೋ ನನಗೆ ಗೊತ್ತಿಲ್ಲ. ಆದ್ರೆ ರಾಜಕೀಯ ಜೀವನದಲ್ಲಿ ಸಿಡಿ ಬರುತ್ತೆ ಹೋಗುತ್ತೆ. ಯಾವುದೇ ಕಾರಣಕ್ಕೂ ವೈಯಕ್ತಿಕ ಜೀವನದ ವಿಚಾರಗಳನ್ನು ಕೆಣಕಬಾರದು ಎಂದರು.
ಇದನ್ನೂ ಓದಿ: ಗೋವಾಕ್ಕೆ ಟ್ರಿಪ್ ಹೊರಟಿದ್ದವರು ಮಸಣಕ್ಕೆ; ಧಾರವಾಡದಲ್ಲಿ ಭೀಕರ ಅಪಘಾತಕ್ಕೆ 11 ಬಲಿ
ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಯೋಗೇಶ್ವರ ಬೆನ್ನಿಗೆ ನಿಂತಿದ್ದಾರೆ. ಸೋತವರಿಗೆ ಕೊಡ್ತಾರೆ ಬಿಡ್ತಾರೆ ಗೊತ್ತಿಲ್ಲ. ಯೋಗೇಶ್ವರ್ ಅವರಿಗೆ ಅಂದು ನಮ್ಮನ್ನ ಒಗ್ಗೂಡಿಸುವುದು ಯಾಕೆ ಬೇಕಿತ್ತು? ಕಷ್ಟಪಟ್ಟು ಹೆಲ್ತ್ ಹಾಳು ಮಾಡಿಕೊಂಡು, ಸಾಲ ಮಾಡಿಕೊಂಡು ಮಾಡುವುದು ಯಾಕೆ ಬೇಕಿತ್ತು? ತಮ್ಮ ಮನೆಯ ಮೇಲೆ ಒಂಬತ್ತು ಕೋಟಿ ಸಾಲ ಮಾಡಿಕೊಂಡರು. ಎಂ.ಟಿ.ಬಿ ನಾಗರಾಜ್ ಕಡೆಯಿಂದ ಸಿ.ಪಿ ಯೋಗೇಶ್ವರ್ ಅಂದು ಸಾಲ ತಂದರು. ಇದು ಯಾಕೆ ಬೇಕಿತ್ತು? ಈಗ ಮಾತನಾಡುವವರು ಆಗ ಎಲ್ಲಿದ್ದರು? ಅಂತಾ ರಮೇಶ್ ಅಸಮಾಧಾನ ಶಾಸಕರ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ.
ಸಂಪುಟ ರಚನೆ ಬಗ್ಗೆ ಮೂಲ ಮತ್ತು ವಲಸೆ ಬಿಜೆಪಿ ನಾಯಕರೇ ಅಸಮಾಧಾನ ಹೊರಹಾಕುತ್ತಿದ್ದರೆ. ಇತ್ತ ಸಿಎಂ ಯಡಿಯೂರಪ್ಪ, ಯೋಗೇಶ್ವರ ಪರ ಗೋಕಾಕ ಸಾಹುಕಾರ್ ಬ್ಯಾಟಿಂಗ್ ಮಾಡುವ ಮೂಲಕ ಭಿನ್ನಮತೀಯರಿಗೆ ತೀರುಗೇಟು ನೀಡಿದ್ದಾರೆ.
ಇದನ್ನೂ ಓದಿ: ನನ್ನ ರಾಜೀನಾಮೆಯಿಂದ ನಮ್ಮ ಬಾಂಬೆ ಟೀಂ ಸ್ನೇಹಿತರಿಗೆ ಬೇಸರ: ಮಾಜಿ ಸಚಿವ ನಾಗೇಶ್
ಇದೇ ವೇಳೆ, ಬೆಂಗಳೂರಿನಲ್ಲಿ ರಮೇಶ್ ಜಾರಕಿಹೊಳಿ ಅವರು ಸಿಪಿವೈ ಸಾಲದ ಬಗ್ಗೆ ಮಾಡಿದ ಹೇಳಿಕೆಯನ್ನು ಎಂಟಿಬಿ ನಾಗರಾಜ್ ತಳ್ಳಿಹಾಕಿದ್ದಾರೆ. ಯೋಗೇಶ್ವರ್ ತಮ್ಮ ಬಳಿ ಯಾವುದೇ ಸಾಲ ಪಡೆದಿಲ್ಲ. ರಮೇಶ್ ಜಾರಕಿಹೊಳಿ ಯಾಕೆ ಈ ಹೇಳಿಕೆ ನೀಡಿದರೋ ಗೊತ್ತಿಲ್ಲ. ತಾನು ಅವರೊಂದಿಗೆ ಮಾತನಾಡುವುದಾಗಿ ನೂತನ ಸಚಿವರು ಹೇಳಿದ್ದಾರೆ.
ವರದಿ: ಚಂದ್ರಕಾಂತ ಸುಗಂಧಿ
Published by:
Vijayasarthy SN
First published:
January 15, 2021, 12:06 PM IST