ಮಾಗಡಿಯಲ್ಲಿ ರೌಡಿ ಶೀಟರ್ ಗಳಿಗೆ ಖಡಕ್ ವಾರ್ನಿಂಗ್ ಕೊಟ್ಟ ಪೊಲೀಸ್ ಅಧಿಕಾರಿಗಳು

ಬೆಂಗಳೂರಿನಲ್ಲಿ ನಡೆದ ಕೆ.ಜಿ.ಹಳ್ಳಿ - ಡಿ.ಜೆ.ಹಳ್ಳಿ ಗಲಭೆ ಪ್ರಕರಣದ ನಂತರ ಬೆಂಗಳೂರಿಗೆ ಕೂಗಳತೆ ದೂರದಲ್ಲಿರುವ ಮಾಗಡಿ, ಕುದೂರು, ತಾವರೆಕೆರೆಯಲ್ಲೂ ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ.

ರೌಡಿಗಳಿಗೆ ಎಚ್ಚರಿಕೆ ನೀಡುತ್ತಿರುವ ಪೊಲೀಸ್ ಅಧಿಕಾರಿಗಳು

ರೌಡಿಗಳಿಗೆ ಎಚ್ಚರಿಕೆ ನೀಡುತ್ತಿರುವ ಪೊಲೀಸ್ ಅಧಿಕಾರಿಗಳು

  • Share this:
ರಾಮನಗರ(ಆಗಸ್ಟ್​. 16): ರಾಮನಗರ ಜಿಲ್ಲೆಯ ಮಾಗಡಿ, ಕುದೂರು, ತಾವರೆಕೆರೆ ವ್ಯಾಪ್ತಿಯ ರೌಡಿಶೀಟರ್ ಗಳ ಪೊಲೀಸ್ ಪರೇಡ್ ಮಾಡಲಾಯಿತು. ಮಾಗಡಿಯ ಕೋಟೆ ಮೈದಾನದಲ್ಲಿ ನಡೆದ  ಪರೇಡ್ ನಲ್ಲಿ ಯಾವುದೇ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾದರೆ ಬಿಡಲ್ಲ ಎಂದು ಹಾಜರಿದ್ದ ರೌಡಿಶೀಟರ್​ಗಳಿಗೆ ಪೊಲೀಸ್ ಅಧಿಕಾರಿಗಳು ಖಡಕ್ ಎಚ್ಚರಿಕೆ ಕೊಡಲಾಯಿತು.

ರಾಮನಗರ ಜಿಲ್ಲೆಯ ಮಾಗಡಿಯಲ್ಲಿ ಇಂದು ರೌಡಿಶೀಟರ್ ಗಳ ಪೊಲೀಸ್ ಪರೇಡ್ ಮಾಡಲಾಯಿತು. ಮಾಗಡಿ, ಕುದೂರು, ತಾವರೆಕೆರೆ ವ್ಯಾಪ್ತಿಯಲ್ಲಿ ರೌಡಿಶೀಟರ್​ಗಳ ಪಟ್ಟಿಯಲ್ಲಿರುವ 59 ಜನರನ್ನ ಕರೆಸಿ ಮಾಗಡಿ ಕೋಟೆ ಮೈದಾನದಲ್ಲಿ ಪರೇಡ್ ಮಾಡಲಾಯಿತು. ಮೊದಲಿಗೆ ಮಾಗಡಿ ಸರ್ಕಲ್ ಇನ್ಸ್‌ಪೆಕ್ಟರ್ ಮಂಜುನಾಥ್ ಬೆಳ್ಳಂ ಬೆಳಗ್ಗೆಯೇ ರೌಡಿಶೀಟರ್ಸ್ ಮನೆಗೆ ಖುದ್ದಾಗಿ ಹೋಗಿ ಅವರನ್ನ ಕರೆತಂದರು. ನಂತರ ಡಿವೈಎಸ್ಪಿ ಓಂ ಪ್ರಕಾಶ್ ನೇತೃತ್ವದಲ್ಲಿ ರೌಡಿಶೀಟರ್ಸ್ ಪರೇಡ್ ನಡೆಯಿತು.

ಇನ್ನು ಪರೇಡ್ ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್​ಗಳಿಗೆ ಡಿವೈಎಸ್ಪಿ ಓಂ ಪ್ರಕಾಶ್ ಖಡಕ್ ಎಚ್ಚರಿಕೆ ಕೊಟ್ಟರು. ಮಾಗಡಿ, ಕುದೂರು, ತಾವರೆಕೆರೆ ಬೆಂಗಳೂರಿಗೆ ಹತ್ತಿರದಲ್ಲಿದೆ. ಈ ಭಾಗದಲ್ಲಿ ನೀವ್ಯಾರು ಸಹ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಬಾರದು. ಯಾರಾದರು ಮುಂದೆ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾದರೆ ಕಠಿಣ ಕಾನೂನಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ಕೊಟ್ಟರು.

ಇದನ್ನೂ ಓದಿ : ಪ್ರವಾಹವಾಗಿ ಒಂದು ವರ್ಷ ಕಳೆದರು ಸಿಗದ ಪರಿಹಾರ ; ಇನ್ನೂ ಬಿದ್ದ ಮನೆಗಳಲ್ಲೆ ವಾಸ ಮಾಡುತ್ತಿರುವ ಕುಟುಂಬಗಳು

ಇನ್ನು ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗದೇ ಇದ್ದರೆ ಅಂತಹವರನ್ನ ರೌಡಿಶೀಟರ್ ನಿಂದ ವಜಾ ಮಾಡಲಾಗುತ್ತೆ ಎಂದು ಭರವಸೆ ಕೊಟ್ಟರು. ಇನ್ನು ಸಂಬಂಧಿಸಿದ ಪೊಲೀಸ್ ಇನ್ಸ್‌ಪೆಕ್ಟರ್ ಗಳಿಗೂ ಸೂಚನೆ ನೀಡಿನ ಡಿವೈಎಸ್ಪಿ ಇವರ ಜೊತೆಗೆ ನಿರಂತರ ಫೋನ್ ಸಂಪರ್ಕದಲ್ಲಿ ಇರಬೇಕು, ಇವರ ಎಲ್ಲಾ ಚಟುವಟಿಕೆಗಳ ಬಗ್ಗೆ ಗಮನಹರಿಸಿ ಎಂದರು.

ಒಟ್ಟಾರೆ ಬೆಂಗಳೂರಿನಲ್ಲಿ ನಡೆದ ಕೆ.ಜಿ.ಹಳ್ಳಿ - ಡಿ.ಜೆ.ಹಳ್ಳಿ ಗಲಭೆ ಪ್ರಕರಣದ ನಂತರ ಬೆಂಗಳೂರಿಗೆ ಕೂಗಳತೆ ದೂರದಲ್ಲಿರುವ ಮಾಗಡಿ, ಕುದೂರು, ತಾವರೆಕೆರೆಯಲ್ಲೂ ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ.
Published by:G Hareeshkumar
First published: