ಕೊರೋನಾ ಏಟಿಗೆ ಕುಂಬಾರರ ಬದುಕು ದುಸ್ತರ; ಸರ್ಕಾರ ಸಹಾಯ ಮಾಡಿದರಷ್ಟೇ ಬದುಕಿಗೆ ಆಧಾರ

ಹಿಂದೆಲ್ಲಾ ಮಣ್ಣಿನ ದೀಪಗಳನ್ನ ಹಚ್ಚಿ ಪೂಜಿಸಿದರೆ ಶ್ರೇಷ್ಠ ಎಂಬ ಮಾತಿತ್ತು. ಹಾಗೇ ಮಣ್ಣಿನ ದೀಪಗಳಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರ ನೆಲೆಸಿರುತ್ತಾನೆಂಬುದು ನಂಬಿಕೆ. ಆದರೆ ಈಗ ರಾಜ್ಯ ಹಾಗೂ ಹೊರರಾಜ್ಯದ ಪ್ರಸಿದ್ಧ ದೇವಸ್ಥಾನಗಳನ್ನ ಮುಚ್ಚಿರುವುದರಿಂದ ಕುಂಬಾರರು ತಯಾರು ಮಾಡಿದ ಮಣ್ಣಿನ ದೀಪಗಳು, ಕುಡಿಕೆಗಳಿಗೆ ಬೇಡಿಕೆಯೇ ಇಲ್ಲದಂತಾಗಿದೆ.

news18-kannada
Updated:July 18, 2020, 7:15 AM IST
ಕೊರೋನಾ ಏಟಿಗೆ ಕುಂಬಾರರ ಬದುಕು ದುಸ್ತರ; ಸರ್ಕಾರ ಸಹಾಯ ಮಾಡಿದರಷ್ಟೇ ಬದುಕಿಗೆ ಆಧಾರ
ಮಣ್ಣಿನ ದೀಪ ತಯಾರಕರು
  • Share this:
ರಾಮನಗರ: ಈ ಗ್ರಾಮದಲ್ಲಿ ಮಣ್ಣಿನ ದೀಪಗಳನ್ನ ತಯಾರಿಸುವುದೇ ಮೂಲ ಕಾಯಕ. ಪ್ರತಿದಿನ ತಯಾರಾಗುವ ದೀಪ, ಮಡಿಕೆ, ಕುಡಿಕೆಗಳು ರಾಜ್ಯ ಮಾತ್ರವಲ್ಲದೇ ಹೊರರಾಜ್ಯಗಳಲ್ಲೂ ಸಾವಿರಾರು ಸಂಖ್ಯೆಯಲ್ಲಿ ಮಾರಾಟವಾಗುತ್ತಿದ್ದವು. ಆದರೆ ಈಗ ಕೊರೋನಾ ಅಟ್ಟಹಾಸದಿಂದ ತಯಾರಾಗಿರುವ ದೀಪಗಳಿಗೆ ಬೇಡಿಕೆಯೇ ಇಲ್ಲದಂತಾಗಿದೆ. ಇದರಿಂದಾಗಿ ಕುಂಬಾರರ ಬದುಕು ಕಷ್ಟಸಾಧ್ಯವಾಗಿದೆ. 

ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಬೇವೂರು ಗ್ರಾಮದಲ್ಲಿ ಸುಮಾರು 60ರಿಂದ 70ಕ್ಕೂ ಹೆಚ್ಚು ಕುಂಬಾರ ಸಮುದಾಯದ ಕುಟುಂಬಗಳಿವೆ. ತಲಾ ತಲಾಂತರದಿಂದಲೂ ಕೂಡ ಮಣ್ಣಿನ ದೀಪಗಳನ್ನ ತಯಾರು ಮಾಡುವುದೇ ಇವರ ನಿತ್ಯ ಕಾಯಕ. ಇನ್ನೊಂದು ವಿಶೇಷವೆಂದರೆ ಮಣ್ಣಿನ ದೀಪಗಳನ್ನ ತಯಾರು ಮಾಡುವುದರಿಂದ ಈ ಊರು ಕುಡಿಕೆ ಬೇವೂರು ಎಂದೇ ಹೆಸರುವಾಸಿ. ಆದರೆ ಈಗ ಕೊರೋನಾ ಹಾವಳಿಯಿಂದಾಗಿ ಇಲ್ಲಿನ ದೀಪಗಳಿಗೆ, ಮಡಿಕೆಗಳಿಗೆ, ಕುಡಿಕೆಗಳಿಗೆ ಬೇಡಿಕೆಯೇ ಇಲ್ಲದಂತಾಗಿದೆ.

ರೈಲ್ವೆ ಖಾಸಗೀಕರಣ ವಿರೋಧಿಸಿ ಧಾರವಾಡದಲ್ಲಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್​ ನಾಯಕರು

ಹಿಂದೆಲ್ಲಾ ಮಣ್ಣಿನ ದೀಪಗಳನ್ನ ಹಚ್ಚಿ ಪೂಜಿಸಿದರೆ ಶ್ರೇಷ್ಠ ಎಂಬ ಮಾತಿತ್ತು. ಹಾಗೇ ಮಣ್ಣಿನ ದೀಪಗಳಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರ ನೆಲೆಸಿರುತ್ತಾನೆಂಬುದು ನಂಬಿಕೆ. ಆದರೆ ಈಗ ರಾಜ್ಯ ಹಾಗೂ ಹೊರರಾಜ್ಯದ ಪ್ರಸಿದ್ಧ ದೇವಸ್ಥಾನಗಳನ್ನ ಮುಚ್ಚಿರುವುದರಿಂದ ಕುಂಬಾರರು ತಯಾರು ಮಾಡಿದ ಮಣ್ಣಿನ ದೀಪಗಳು, ಕುಡಿಕೆಗಳಿಗೆ ಬೇಡಿಕೆಯೇ ಇಲ್ಲದಂತಾಗಿದೆ. ಇದರಿಂದಾಗಿ ಕುಂಬಾರ ಸಮುದಾಯದ ಮುಖಂಡ ನಾಗರಾಜ್ ನ್ಯೂಸ್ 18 ಜೊತೆಗೆ ಮಾತನಾಡಿ ರಾಜ್ಯ ಸರ್ಕಾರದ ನಮ್ಮ ಜೀವನದ ಬಗ್ಗೆ ಗಂಭೀರವಾಗಿ ಚಿಂತಿಸಬೇಕೆಂದು ಮನವಿ ಮಾಡಿದ್ದಾರೆ.

ಇನ್ನು, ಸದ್ಯದ ಪರಿಸ್ಥಿತಿಯಲ್ಲಿ ಕೊರೋನಾ ಹಾವಳಿಯಿಂದಾಗಿ ಮಣ್ಣಿನ ದೀಪಗಳನ್ನ ತಯಾರು ಮಾಡುವವರ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿದೆ. ಹಾಗೇ ಲಾಕ್‌ಡೌನ್ ಎಫೆಕ್ಟ್‌ನಿಂದಾಗಿ ತಯಾರಾದ ದೀಪಗಳನ್ನ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಈ ನಡುವೆ ಸಾಲ ಮಾಡಿಕೊಂಡಿರುವ ನಾವು ಸಾಲ ತೀರಿಸಲಾಗದೇ ನರಳುತ್ತಿದ್ದೇವೆಂದು ಬೇಸರವ್ಯಕ್ತಪಡಿಸಿದ್ದಾರೆ. ಈ ಕಾರಣದಿಂದಾಗಿ ರಾಜ್ಯ ಸರ್ಕಾರ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಬೇವೂರು ಗ್ರಾಮದ ಯುವ ಮುಖಂಡ ಬಿ.ಸಿ.ಯೋಗೇಶ್ ಗೌಡ ಅಭಿಪ್ರಾಯಪಟ್ಟಿದ್ದಾರೆ.

ಒಟ್ಟಾರೆ, ನಮ್ಮ ಸಂಸ್ಕೃತಿಯನ್ನು ಉಳಿಸುವ, ಬೆಳೆಸುವ ಮಣ್ಣಿನ ದೀಪಗಳನ್ನ ತಯಾರು ಮಾಡುತ್ತಿದ್ದವರು ಇಂದು ಕೊರೋನಾ ಗಾಳಿಗೆ ಸಿಲುಕಿ ನರಳುತ್ತಿದ್ದಾರೆ. ಹಾಗಾಗಿ ರಾಜ್ಯ ಸರ್ಕಾರ ಮಣ್ಣಿನ ದೀಪಗಳನ್ನ ತಯಾರು ಮಾಡುವ ಕುಂಬಾರರ ಬದುಕಿಗೆ ಬೆಳಕಾಗಲಿ, ಜೊತೆಗೆ ಗುಡಿ ಕೈಗಾರಿಕೆ ಉಳಿಸಲು ಮುಂದಾಗಲಿ ಎಂಬುದು ನ್ಯೂಸ್ 18 ಕನ್ನಡದ ಆಶಯ.
Published by: Latha CG
First published: July 18, 2020, 7:15 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading