ರಾಮನಗರ: ರಾಮದೇವರಬೆಟ್ಟ, ಕೊಂಕಣಿದೊಡ್ಡಿಗೆ ಅಂಡರ್‌ಪಾಸ್‌ಗೆ ಒತ್ತಾಯಿಸಿ ಸ್ಥಳೀಯರ ಪ್ರತಿಭಟನೆ

ಪ್ರವಾಸಿ ತಾಣ ರಾಮದೇವರ ಬೆಟ್ಟಕ್ಕೆ ಹೋಗಲು ಎರಡು ಕಿಲೋಮೀಟರ್ ಬಳಸಬೇಕು. ಹಾಗೇ ರಾಮಗಿರಿ ತಪ್ಪಲಿನ ಇರುಳಿಗರ ಕಾಲೋನಿಗೆ ಹೋಗಲು ಸಹ ಸರಿಯಾದ ದಾರಿಯಿಲ್ಲ. ಹಾಗಾಗಿ ಇಲ್ಲಿ ಅಂಡರ್ ಪಾಸ್ ರಸ್ತೆ ಮಾಡದೆ ಬೇರೆ ಮಾಡಿದ್ದಾರೆಂಬುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣ.

ಅಂಡರ್‌ಪಾಸ್‌ಗೆ ಒತ್ತಾಯಿಸಿ ಪ್ರತಿಭಟಿಸುತ್ತಿರುವ ಗ್ರಾಮಸ್ಥರು.

ಅಂಡರ್‌ಪಾಸ್‌ಗೆ ಒತ್ತಾಯಿಸಿ ಪ್ರತಿಭಟಿಸುತ್ತಿರುವ ಗ್ರಾಮಸ್ಥರು.

  • Share this:
ರಾಮನಗರ: ಕೊಂಕಣಿ ದೊಡ್ಡಿ, ರಾಮದೇವರ ಬೆಟ್ಟದ ನಡುವೆ ಹಾದು ಹೋಗಿರಿವ ರಸ್ತೆಯಲ್ಲಿ ಕೊಂಕಣಿ ದೊಡ್ಡಿಯಿಂದ ರಾಮದೇವರ ಬೆಟ್ಟಕ್ಕೆ ಹೋಗಲು ರಸ್ತೆ ಕಲ್ಪಿಸುವಂತೆ ಬೆಂಗಳೂರು-ಮೈಸೂರು ನೂತನ ಹೆದ್ದಾರಿ ಕಾಮಗಾರಿಯನ್ನು ತಡೆದು ರಾಮನಗರದ ಕೊಂಕಣಿದೊಡ್ಡಿ ಗ್ರಾಮಸ್ಥರು ಇಂದು ಪ್ರತಿಭಟನೆ ನಡೆಸಿದ್ದಾರೆ.

ಸುಮಾರು ಅರ್ಧ ಗಂಟೆಗೂ ಅಧಿಕ ಕಾಲ ಕಾಮಗಾರಿ ವಾಹನಗಳ ತಡೆದು ಪ್ರತಿಭಟನೆ ನಡೆಸಿರುವ ಗ್ರಾಮಸ್ಥರು, ದಶಪಥ ರಸ್ತೆಯಲ್ಲಿ ಅಂಡರ್ ಪಾಸ್‌ ಮಾಡಿಕೊಡಲು  ಒತ್ತಾಯಿಸಿದ್ದಾರೆ. ಇನ್ನು ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಜಿಲ್ಲಾಧಿಕಾರಿಗಳಿಗೂ ಮನವಿ ನೀಡಿದರು ಪ್ರಯೋಜನವಿಲ್ಲ ಎಂಬ ಆರೋಪ ಮಾಡಿದರು.

ಇನ್ನು ಪ್ರವಾಸಿ ತಾಣ ರಾಮದೇವರ ಬೆಟ್ಟಕ್ಕೆ ಹೋಗಲು ಎರಡು ಕಿಲೋಮೀಟರ್ ಬಳಸಬೇಕು. ಹಾಗೇ ರಾಮಗಿರಿ ತಪ್ಪಲಿನ ಇರುಳಿಗರ ಕಾಲೋನಿಗೆ ಹೋಗಲು ಸಹ ಸರಿಯಾದ ದಾರಿಯಿಲ್ಲ. ಹಾಗಾಗಿ ಇಲ್ಲಿ ಅಂಡರ್ ಪಾಸ್ ರಸ್ತೆ ಮಾಡದೆ ಬೇರೆ ಮಾಡಿದ್ದಾರೆಂಬುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣ.

ಇದನ್ನೂ ಓದಿ : ವಿಶೇಷ ರೈಲುಗಳ ಹೊರತು ಬೇರೆಲ್ಲಾ ಸೇವೆಗಳೂ ಅನಿರ್ದಿಷ್ಟಾವಧಿಗೆ ಸ್ಥಗಿತ; ಭಾರತೀಯ ರೈಲ್ವೆ ಪ್ರಕಟಣೆ

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ರಾಮನಗರ ಪೊಲೀಸರು ಪ್ರತಿಭಟನಾಕಾರರ ಜೊತೆಗೆ ಮಾತುಕತೆ ನಡೆಸಿದರು. ಕೂಡಲೇ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ಜೊತೆಗೆ ಮಾತುಕತೆಗೆ ಸಮಯ ನಿಗಧಿ ಮಾಡಲಾಗುತ್ತೆ ಎಂದು ಆಶ್ವಾಸನೆ ನೀಡುವ ಮೂಲಕ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.
Published by:MAshok Kumar
First published: