HOME » NEWS » District » RAMANAGARAM BJP LEADER SLAMMED WITH DEROGATORY WORDS AGAINST ISHWAR KHANDRE AND CM IBRAHIM ATVR MAK

ರಾಮನಗರ: ಈಶ್ವರ್ ಖಂಡ್ರೆ ಮತ್ತು ಸಿ.ಎಂ. ಇಬ್ರಾಹಿಂ ವಿರುದ್ಧ ಅವಾಚ್ಯ ಶಬ್ಧಗಳಿಂದ ನಿಂದಿಸಿದ ಬಿಜೆಪಿ ನಾಯಕ

ರಾಮನಗರ ಜಿಲ್ಲೆ ಹಾಗೂ ರಾಜ್ಯದ ಜೆಡಿಎಸ್ - ಕಾಂಗ್ರೆಸ್ ಕಾರ್ಯಕರ್ತರಿಗೆ ಭವಿಷ್ಯದಲ್ಲಿ ಬಿಜೆಪಿ ಪಕ್ಷವೇ ಅನಿವಾರ್ಯವಾಗಲಿದೆ, ಜಿಲ್ಲೆಯಲ್ಲಿಯೂ ಮುಂದೆ ಬಿಜೆಪಿ ಪಕ್ಷದ ಹವಾ ಮತ್ತಷ್ಟು ಜೋರಾಗಲಿದೆ ಎಂದು ರುದ್ರೇಶ್ ತಿಳಿಸಿದ್ದಾರೆ.

news18-kannada
Updated:January 4, 2021, 9:57 AM IST
ರಾಮನಗರ: ಈಶ್ವರ್ ಖಂಡ್ರೆ ಮತ್ತು ಸಿ.ಎಂ. ಇಬ್ರಾಹಿಂ ವಿರುದ್ಧ ಅವಾಚ್ಯ ಶಬ್ಧಗಳಿಂದ ನಿಂದಿಸಿದ ಬಿಜೆಪಿ ನಾಯಕ
KRIDL ಅಧ್ಯಕ್ಷ ಎಂ.ರುದ್ರೇಶ್.
  • Share this:
ರಾಮನಗರ : ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರಕ್ಕೆ ಕೆ.ಆರ್.ಐ.ಡಿ.ಎಲ್ ಅಧ್ಯಕ್ಷ ಎಂ.ರುದ್ರೇಶ್ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ರಾಮನಗರದಲ್ಲಿ ಗ್ರಾ.ಪಂ ಚುನಾವಣೆಯಲ್ಲಿ ಗೆದ್ದ ಬಿಜೆಪಿ ಪಕ್ಷದ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಲು ಖಾಸಗಿ ರೆಸಾರ್ಟ್ ನಲ್ಲಿ ಏರ್ಪಡಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿರುವ ಎಂ. ರುದ್ರೇಶ್​, "ಕೆಲವರು ಮಾನಸಿಕ ಸ್ಥಿರತೆ ಕಳೆದುಕೊಂಡು ಮಾತನಾಡಿ ಆಸ್ಪತ್ರೆ ಸೇರುತ್ತಿದ್ದಾರೆ. ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ ಹಾಗೂ ಸಿ.ಎಂ.ಇಬ್ರಾಹಿಂ ಹುಚ್ಚುನಾಯಿಗಳಿದಂತೆ. ಅವರ ಯೋಗ್ಯತೆಗೆ ಈ ರೀತಿಯ ಹೇಳಿಕೆಗಳು ಶೋಭೆ ತರುವಂತದಲ್ಲ. ನಮ್ಮ ಪಕ್ಷದ ಸಿಎಂ ಹಾಗೂ ಅಧ್ಯಕ್ಷರ ಬಗ್ಗೆ ಮಾತನಾಡುವುದಕ್ಕೆ ಅವರು ಯಾರು? ನಮ್ಮ ಪಕ್ಷದ ಕೇಂದ್ರ ನಾಯಕರು ರಾಜ್ಯ ನಾಯಕರಿದ್ದಾರೆ ಅವರು ನೋಡಿಕೊಳ್ಳುತ್ತಾರೆ. ಇವರು ಹೀಗೆ ಸಿಎಂ ಬಗ್ಗೆ ಮಾತನಾಡುತ್ತಿದ್ರೆ ರಾಜ್ಯದ ಜನರೇ ಹುಚ್ಚುನಾಯಿಗೆ ಹೊಡೆದಂತೆ ಕಲ್ಲಿನಲ್ಲಿ ಹೊಡೆಯುತ್ತಾರೆ. ಇನ್ನೂ ಮುಂದಾದರು ಗೌರವಯುತವಾಗಿ ನಡೆದುಕೊಳ್ಳಲಿ" ಎಂದು ಅವಾಚ್ಯ ಶಬ್ಧಗಳ ಮೂಲಕ ಕಿಡಿಕಾರಿದ್ದಾರೆ.

ಇನ್ನು ಕಾರ್ಯಕ್ರಮದಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರು ಮುಂಬರುವ 2023 ರ ಸಾರ್ವತ್ರಿಕ ಚುನಾವಣೆಯಲ್ಲಿ ರುದ್ರೇಶ್ ರವರು ರಾಮನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕು ಎಂದು ಒತ್ತಾಯಿಸಿದರು. ಜಿಲ್ಲೆಯಲ್ಲಿ ಯಾರು ಪಕ್ಷ ಸಂಘಟನೆ ಮಾಡದ ದಿನಗಳಲ್ಲಿ ರುದ್ರೇಶ್ ರವರು ಪಕ್ಷದ ಬಗ್ಗೆ ಗಮನಹರಿಸಿ ಸಂಘಟನೆ ಮಾಡಿದ್ದಾರೆ. ಈಗ ಜಿಲ್ಲೆಯಲ್ಲಿ ಬಿಜೆಪಿ ಪಕ್ಷ ಸದೃಢವಾಗಿದೆ ಎಂದರೆ ಅದಕ್ಕೆ ಮುಖ್ಯ ಕಾರಣ ರುದ್ರೇಶ್. ಹಾಗಾಗಿ ಮುಂದಿನ ದಿನಗಳಲ್ಲಿ ಅವರಿಗೆ ಪಕ್ಷ ಅವಕಾಶ ಕೊಡಬೇಕು, ಅವರೇ ಸ್ಪರ್ಧೆ ಮಾಡಬೇಕು ಎಂದು ಒತ್ತಾಯಿಸಿದರು. ಇನ್ನು ಈ ಬಗ್ಗೆ ರುದ್ರೇಶ್ ಸಹ ಮಾತನಾಡಿ ಪಕ್ಷ ಅವಕಾಶ ಕೊಟ್ಟರೆ ನಾನು ಕನಕಪುರದಿಂದಲೂ ಸ್ಪರ್ಧೆ ಮಾಡಲು ಸಿದ್ಧ ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಬಿ.ಎಸ್.​ ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗಿಳಿಯೋದು ಪಕ್ಕಾ; ಸಿದ್ದರಾಮಯ್ಯ ಭವಿಷ್ಯ!

ಜೆಡಿಎಸ್ - ಕಾಂಗ್ರೆಸ್ ಗೆ ಮುಂದೆ ಬಿಜೆಪಿ ಪಕ್ಷವೇ ಅನಿವಾರ್ಯ;

ರಾಮನಗರ ಜಿಲ್ಲೆ ಹಾಗೂ ರಾಜ್ಯದ ಜೆಡಿಎಸ್ - ಕಾಂಗ್ರೆಸ್ ಕಾರ್ಯಕರ್ತರಿಗೆ ಭವಿಷ್ಯದಲ್ಲಿ ಬಿಜೆಪಿ ಪಕ್ಷವೇ ಅನಿವಾರ್ಯವಾಗಲಿದೆ, ಜಿಲ್ಲೆಯಲ್ಲಿಯೂ ಮುಂದೆ ಬಿಜೆಪಿ ಪಕ್ಷದ ಹವಾ ಮತ್ತಷ್ಟು ಜೋರಾಗಲಿದೆ. ಕನಕಪುರದಲ್ಲಿ ತಾಲಿಬಾನ್ ವಾತವರಣವಿತ್ತು, ಡಿ.ಕೆ.ಬ್ರದರ್ಸ್ ಎದುರು ಯಾರು ಇಲ್ಲ ಎನ್ನುತ್ತಿದ್ದ ಕಾಲ ಈಗಿಲ್ಲ, ಮುಂದೆ ಕನಕಪುರದಲ್ಲಿಯೂ ಸಹ ಬಿಜೆಪಿ ಪಕ್ಷವನ್ನ ಕಟ್ಟಲಾಗುತ್ತದೆ ಎಂದು ರುದ್ರೇಶ್ ತಿಳಿಸಿದರು.
Youtube Video

ಇನ್ನು ರಾಮನಗರ, ಚನ್ನಪಟ್ಟಣ, ಮಾಗಡಿ, ಕನಕಪುರದಲ್ಲಿ ಈ ಬಾರಿ ಬಿಜೆಪಿ ಪಕ್ಷದ ಕಾರ್ಯಕರ್ತರು ಗ್ರಾಮಪಂಚಾಯಿತಿ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಿದ್ದಾರೆ. ಇದು ಮುಂದೆಯೂ ಸಹ ಮುಂದುವರೆಯುತ್ತದೆ ಎಂದು ವಿಶ್ವಾಸವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಯಾರು ಹೆದರುವ ಅವಶ್ಯಕತೆ ಇಲ್ಲ. ಕನಕಪುರದಲ್ಲಿಯೂ ನಮ್ಮ ಪಕ್ಷದ ಕಾರ್ಯಕರ್ತರು ಪಕ್ಷ ಕಟ್ಟುತ್ತಿದ್ದಾರೆಂದು ಅಭಿಪ್ರಾಯಪಟ್ಟರು.
Published by: MAshok Kumar
First published: January 4, 2021, 9:52 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories