HOME » NEWS » District » RAMANAGARA MANGO GROWERS EXPECT MORE CROP THIS SEASON RHHSN ATVR

ಈ ಬಾರಿ ರಾಮನಗರದಲ್ಲಿ ಬಾರಿ ಮಾವು ಬೆಳೆ ನಿರೀಕ್ಷೆ; ಹೂ ಬಿಡುತ್ತಿರುವ ಹಿನ್ನೆಲೆ ರೈತರ ಮೊಗದಲ್ಲಿ ಸಂತಸ!

ಕಳೆದ ಬಾರಿ ಕೊರೋನಾ ಇದ್ದ ಪರಿಣಾಮ ರಾಮನಗರ ಜಿಲ್ಲೆಯ ಗ್ರಾಮಾಂತರ ಭಾಗದ ಬಹುತೇಕ ರೈತರು ತನ್ನ ಬೆಳೆಗಳನ್ನು ಮಾರುಕಟ್ಟೆಗೆ ತಲುಪಿಸಲು ಸಾಧ್ಯವಾಗಲಿಲ್ಲ. ನಗರ ಪ್ರದೇಶಕ್ಕೆ ಅಂಟಿಕೊಂಡಂತಿರುವ ಕೆಲ ಪ್ರದೇಶದಲ್ಲಿ ಬೆಳೆಯಲಾಗಿದ್ದ ಮಾವನ್ನು ಮಾರುಕಟ್ಟೆಗೆ ತಂದು ಅದನ್ನು ಸಹ ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡಿದ್ದರು. ಹಾಗಾಗಿ ಈ ಬಾರಿ ರೈತರು ಮಾರುಕಟ್ಟೆಗೆ ತರುವ ತಮ್ಮ ಬೆಳೆಗೆ ಹೆಚ್ಚಿನ ಬೆಲೆ ನಿಗಧಿ ಮಾಡಬೇಕೆಂದು ಮಾವು ಬೆಳೆಗಾರರು ಮನವಿ ಮಾಡಿದ್ದಾರೆ.

news18-kannada
Updated:February 4, 2021, 5:06 PM IST
ಈ ಬಾರಿ ರಾಮನಗರದಲ್ಲಿ ಬಾರಿ ಮಾವು ಬೆಳೆ ನಿರೀಕ್ಷೆ; ಹೂ ಬಿಡುತ್ತಿರುವ ಹಿನ್ನೆಲೆ ರೈತರ ಮೊಗದಲ್ಲಿ ಸಂತಸ!
ಹೂ ಬಿಡುತ್ತಿರುವ ಮಾವಿನ ಫಸಲು.
  • Share this:
ರಾಮನಗರ: ರಾಮನಗರ ಜಿಲ್ಲೆಯಲ್ಲಿ ಈ ಬಾರಿ ಮಾವು ಬೆಳೆಯ ಮೇಲೆ ನಿರೀಕ್ಷೆ ಇಟ್ಟುಕೊಳ್ಳಲಾಗಿದ್ದು, ಕಳೆದ ಬಾರಿಗಿಂತಲೂ ಹೆಚ್ಚಿನ ಅದಾಯ ಬರಲಿದೆ ಎನ್ನಲಾಗಿದೆ‌. ಜಿಲ್ಲೆಯಲ್ಲಿ ಒಟ್ಟು 32 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವನ್ನು ಬೆಳೆಯಲಾಗುತ್ತೆ. ಈಗಾಗಲೇ ಮಲಗೋಬ, ಸೇಂದೂರ, ಬಾದಾಮಿ ತಳಿಯ ಮಾವಿನ ಮರಗಳಲ್ಲಿ ಹೂ ಬಿಡಲು ಪ್ರಾರಂಭವಾಗಿದೆ. ಕಳೆದ ಬಾರಿಗಿಂತಲೂ ಶೇ.10,15 ಇಳುವರಿ ಬರಲಿದೆ ಎಂದು ಅಂದಾಜಿಸಲಾಗಿದೆ. 1.30 ಅಥವಾ 1.50 ಲಕ್ಷ ಮೆಟ್ರಿಕ್ ಟನ್ ನಷ್ಟು ಮಾವು ಈ ಬಾರಿ ಇಳುವರಿ ಬರಲಿದೆ ಎನ್ನಲಾಗಿದೆ. ಇನ್ನು ಕಳೆದ ಬಾರಿ ಕೊರೋನಾ ಹಿನ್ನೆಲೆ ಜಿಲ್ಲೆಯಲ್ಲಿ ಮಾವು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದರು‌. ಆದರೆ ಈ ಬಾರಿ ಜಿಲ್ಲೆಯಲ್ಲಿ ಮಾವು ಬೆಳೆ ಉತ್ತಮವಾಗಿ ಬರಲಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲೇ ಮಾವನ್ನು ಬೆಳೆಯುವ ಅತಿದೊಡ್ಡ ಎರಡನೇ ಜಿಲ್ಲೆ ಅಂದರೆ ರಾಮನಗರ. ಮೊದಲ ಸ್ಥಾನದಲ್ಲಿ ಕೋಲಾರ ಇದ್ದರೆ ಎರಡನೇ ಸ್ಥಾನದಲ್ಲಿ ರಾಮನಗರ ಜಿಲ್ಲೆಯ ಮಾವು ಬೆಳೆಗಾರರಿದ್ದಾರೆ. ಆದರೆ ಕಳೆದ ವರ್ಷ ಕೊರೋನಾ ಹೆಮ್ಮಾರಿ ನಮ್ಮನ್ನು ಆವರಿಸಿದ ಹಿನ್ನೆಲೆಯಲ್ಲಿ ರೇಷ್ಮೆನಗರಿಯ ರೈತರು ಕಷ್ಟಪಟ್ಟು ಬೆಳೆದಿದ್ದ ಮಾವಿನ ಬೆಳೆ ಸಂಪೂರ್ಣ ನೆಲಕಚ್ಚಿತ್ತು. ಶೇ.60 ಬೆಳೆಯನ್ನು ಮಾರಾಟ ಮಾಡಲು ಸಾಧ್ಯವಾಗದೇ ರೈತರು ಕಂಗಾಲಾಗಿದ್ದರು. ಆದರೆ ಈ ಬಾರಿ ರಾಜ್ಯ ಸರ್ಕಾರದ ಜೊತೆಗೆ ಕೇಂದ್ರ ಸರ್ಕಾರವೂ ಸಹ ಮಾವು ಬೆಳೆಗಾರರ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಬೇಕೆಂದು ಮಾವು ಬೆಳೆಗಾರರು ಒತ್ತಾಯಿಸಿದ್ದಾರೆ. ಸಂಬಂಧಪಟ್ಟ ಮಾವಿನ ಮಾರುಕಟ್ಟೆಗಳಲ್ಲಿ ರೈತರಿಗೆ ಸೂಕ್ತ ವ್ಯವಸ್ಥೆಯನ್ನ ಸಂಬಂಧಪಟ್ಟವರು ರೈತರಿಗೆ ಅನುಕೂಲ ಮಾಡಿಕೊಡಬೇಕು. ಜೊತೆಗೆ ಮಾರುಕಟ್ಟೆಗಳಲ್ಲಿ ರೈತರ ಮಾವಿನಹಣ್ಣಿಗೆ ಸೂಕ್ತ ಬೆಲೆ ಸಿಗುವ ವ್ಯವಸ್ಥೆಯನ್ನು ಸರಿಯಾದ ರೀತಿಯಲ್ಲಿ ಮಾಡಬೇಕೆಂಬ ಕೂಗು ಹೆಚ್ಚಾಗಿ ಕೇಳಿಬಂದಿದೆ.

ಇದನ್ನು ಓದಿ: ಸೆರೆಯಾಗದ ಚಿರತೆ, ಸುಬ್ರಹ್ಮಣ್ಯ ಸಮೀಪದ ಮೂಲೆಮನೆ ಗ್ರಾಮಸ್ಥರಲ್ಲಿ ಆವರಿಸಿದೆ ಚಿಂತೆ!

ಕಳೆದ ಬಾರಿ ಕೊರೋನಾ ಇದ್ದ ಪರಿಣಾಮ ರಾಮನಗರ ಜಿಲ್ಲೆಯ ಗ್ರಾಮಾಂತರ ಭಾಗದ ಬಹುತೇಕ ರೈತರು ತನ್ನ ಬೆಳೆಗಳನ್ನು ಮಾರುಕಟ್ಟೆಗೆ ತಲುಪಿಸಲು ಸಾಧ್ಯವಾಗಲಿಲ್ಲ. ನಗರ ಪ್ರದೇಶಕ್ಕೆ ಅಂಟಿಕೊಂಡಂತಿರುವ ಕೆಲ ಪ್ರದೇಶದಲ್ಲಿ ಬೆಳೆಯಲಾಗಿದ್ದ ಮಾವನ್ನು ಮಾರುಕಟ್ಟೆಗೆ ತಂದು ಅದನ್ನು ಸಹ ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡಿದ್ದರು. ಹಾಗಾಗಿ ಈ ಬಾರಿ ರೈತರು ಮಾರುಕಟ್ಟೆಗೆ ತರುವ ತಮ್ಮ ಬೆಳೆಗೆ ಹೆಚ್ಚಿನ ಬೆಲೆ ನಿಗಧಿ ಮಾಡಬೇಕೆಂದು ಮಾವು ಬೆಳೆಗಾರರು ಮನವಿ ಮಾಡಿದ್ದಾರೆ.

ಹಾಗೆಯೇ ಕೊರೋನಾ ಗಾಳಿ ಇನ್ನು ಸ್ವಲ್ಪವಿರುವ ಕಾರಣ ಮಾರುಕಟ್ಟೆಗಳಲ್ಲಿ ಸ್ವಚ್ಛತೆ ಕಾಪಾಡಬೇಕೆಂದು ಮನವಿ ಮಾಡಲಾಗಿದೆ. ಜೊತೆಗೆ ಈ ಬಾರಿ ರಾಮನಗರ ಜಿಲ್ಲೆಯಲ್ಲಿ ಬೆಳೆದ ಮಾವಿನ ಹಣ್ಣು ರಾಜ್ಯ ಹಾಗೂ ಹೊರರಾಜ್ಯಕ್ಕೂ ರಫ್ತಾಗಬೇಕೆಂದು ಅಸೆ ಈ ಭಾಗದ ರೈತರದ್ದು, ಹಾಗಾಗಿ ಸರಿಯಾಗಿ ಕ್ರಮ ವಹಿಸಿ ಉತ್ತಮ ಗುಣಮಟ್ಟದ ಹಣ್ಣನ್ನು ಬೆಳೆಯಬೇಕೆಂದು ಅಧಿಕಾರಿಗಳು ತಿಳಿಸಿದ್ದಾರೆ.

ವರದಿ : ಎ.ಟಿ.ವೆಂಕಟೇಶ್
Published by: HR Ramesh
First published: February 4, 2021, 5:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories