• Home
  • »
  • News
  • »
  • district
  • »
  • ಲಾಕ್​ಡೌನ್​ ಮುಗಿಯುವವರೆಗೆ ರಾಮನಗರ ಜನರು ಶ್ರೀರಂಗಪಟ್ಟಣಕ್ಕೆ ನೋ ಎಂಟ್ರಿ

ಲಾಕ್​ಡೌನ್​ ಮುಗಿಯುವವರೆಗೆ ರಾಮನಗರ ಜನರು ಶ್ರೀರಂಗಪಟ್ಟಣಕ್ಕೆ ನೋ ಎಂಟ್ರಿ

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

ಮಂಡ್ಯ ಜಿಲ್ಲೆಗೆ ರಾಮನಗರ ಜಿಲ್ಲೆ ಅಂಟಿಕೊಂಡಿದೆ. ಜೊತೆಗೆ ಸತ್ತವರ ಅಸ್ತಿ ಬಿಡಲು ನೂರಾರು ಸಂಖ್ಯೆಯಲ್ಲಿ ಜನರು ರಾಮನಗರ ಜಿಲ್ಲೆಯಿಂದ ಮಂಡ್ಯದ ಶ್ರೀರಂಗಪಟ್ಟಣಕ್ಕೆ ಹೋಗುತ್ತಾರೆ. ಆದರೆ ಲಾಕ್​ಡೌನ್ ಮುಗಿಯುವವರೆಗೆ ಯಾವುದೇ ಕಾರಣಕ್ಕೂ ಇದಕ್ಕೆ ಅವಕಾಶ ಇರುವುದಿಲ್ಲ.

  • Share this:

ರಾಮನಗರ: ಕೊರೋನಾ ಎರಡನೇ ಹೆಚ್ಚಾಗಿರುವ ಹಿನ್ನೆಲೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣಕ್ಕೆ ಜನರು ಹೋಗುವುದನ್ನ ಸಂಪೂರ್ಣ ನಿಷೇಧ ಮಾಡಲಾಗಿದೆ. ಅದರಲ್ಲೂ ಸದ್ಯದ ಪರಿಸ್ಥಿತಿಯಲ್ಲಿ ಮಂಡ್ಯ ಜಿಲ್ಲೆಯಲ್ಲಿಯೂ ಕೊರೋನಾ ಕೇಸ್ ಗಳು ಹೆಚ್ಚಾಗಿರುವ ಹಿನ್ನೆಲೆ ಪಕ್ಕದ ರಾಮನಗರ ಜಿಲ್ಲೆಯಿಂದ ಜನರು ಸತ್ತವರ ಅಸ್ತಿ ಬಿಡಲು ಶ್ರೀರಂಗಪಟ್ಟಣಕ್ಕೆ ದಿನನಿತ್ಯ ನೂರಾರು ಸಂಖ್ಯೆಯಲ್ಲಿ ಹೋಗುತ್ತಿದ್ದಾರೆ. ಆದರೆ ಇಂದಿನಿಂದ ಅದನ್ನ ಸಂಪೂರ್ಣವಾಗಿ ತಡೆಯಿಡಿಯಲಾಗಿದೆ ಎಂದು ರಾಮನಗರ ಎಸ್ಪಿ ಎಸ್.ಗಿರೀಶ್ ತಿಳಿಸಿದ್ದಾರೆ.


ಮಂಡ್ಯ ಜಿಲ್ಲೆಗೆ ರಾಮನಗರ ಜಿಲ್ಲೆ ಅಂಟಿಕೊಂಡಿದೆ. ಜೊತೆಗೆ ಸತ್ತವರ ಅಸ್ತಿ ಬಿಡಲು ನೂರಾರು ಸಂಖ್ಯೆಯಲ್ಲಿ ಜನರು ರಾಮನಗರ ಜಿಲ್ಲೆಯಿಂದ ಮಂಡ್ಯದ ಶ್ರೀರಂಗಪಟ್ಟಣಕ್ಕೆ ಹೋಗುತ್ತಾರೆ. ಆದರೆ ಲಾಕ್​ಡೌನ್ ಮುಗಿಯುವವರೆಗೆ ಯಾವುದೇ ಕಾರಣಕ್ಕೂ ಇದಕ್ಕೆ ಅವಕಾಶ ಇರುವುದಿಲ್ಲ. ಲಾಕ್​ಡೌನ್ ಮುಗಿದ ನಂತರ ಧಾರ್ಮಿಕ ಕಾರ್ಯಕ್ರಮಗಳನ್ನ ಮಾಡಿಕೊಳ್ಳಬಹುದು. ಅಲ್ಲಿಯವರೆಗೆ ಯಾರು ಸಹ ಅಸ್ತಿ ಬಿಡಲು ಬರಬೇಡಿ, ಪೊಲೀಸರು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.


ಇನ್ನು ಮಾಹಿತಿಯ ಪ್ರಕಾರ ರಾಮನಗರ ಜಿಲ್ಲೆಯಿಂದ ದಿನಕ್ಕೆ ನೂರಾರು ಸಂಖ್ಯೆಯಲ್ಲಿ ಶ್ರೀರಂಗಪಟ್ಟಣಕ್ಕೆ ಹೋಗ್ತಾರೆಂಬ ಮಾಹಿತಿ ಲಭ್ಯವಿದ್ದು, ಪ್ರಮುಖವಾಗಿ ರಾಮನಗರ, ಚನ್ನಪಟ್ಟಣ, ಮಾಗಡಿ ಕನಕಪುರ, ಬಿಡದಿಯ ಜನರು ಹೋಗ್ತಾರೆ. ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಮೂಲಕ ಪ್ರಯಾಣ ಬೆಳೆಸುತ್ತಾರೆ. ಆದರೆ ಈಗ ಲಾಕ್ ಡೌನ್ ಇರುವ ಹಿನ್ನೆಲೆ ಚನ್ನಪಟ್ಟಣದಿಂದ ಮದ್ದೂರು ಮಾರ್ಗವಾಗಿ ಹೋಗಲಿದ್ದು, ಜಿಲ್ಲೆಯಲ್ಲಿ ಒಟ್ಟು 28 ಚೆಕ್ ಪೋಸ್ಟ್ ನಿರ್ಮಿಸಿದ್ದು ಯಾವ ಮಾರ್ಗದಲ್ಲಿಯೂ ಹೋಗಲು ಸಾಧ್ಯವಿಲ್ಲ ಎನ್ನಲಾಗುತ್ತಿದೆ.


ಕಾಲುದಾರಿಗಳಿಗೂ ಪೊಲೀಸರು ಬ್ರೇಕ್, ಚೆಕ್ ಪೋಸ್ಟ್ ನಿರ್ಮಾಣ:


ರಾಮನಗರ ಜಿಲ್ಲೆಯಿಂದ ಮಂಡ್ಯ ಜಿಲ್ಲೆಗೆ ಹೋಗಲು ಬೆಂಗಳೂರು-ಮೈಸೂರು ಹೆದ್ದಾರಿಯನ್ನು ಬಿಟ್ಟು ಬೇರೆ ಕಾಲುದಾರಿಗಳು ಸಹ ಇದ್ದಾವೆ. ರಾಮನಗರ, ಚನ್ನಪಟ್ಟಣ, ಮಾಗಡಿ, ಕನಕಪುರ ಭಾಗದಿಂದ ಜನರು ರಾಷ್ಟ್ರೀಯ ಹೆದ್ದಾರಿಗಳನ್ನ ಬಿಟ್ಟು ಬೇರೆ ಗ್ರಾಮಗಳ ಮೂಲಕ ಕಾಲುದಾರಿಗಳಲ್ಲಿ ಮಂಡ್ಯ ತಲುಪಲು ಮುಂದಾಗಿದ್ದಾರೆ. ಆದರೆ ಈಗ ರಾಮನಗರ ಜಿಲ್ಲೆಯಾದ್ಯಂತ 28 ಚೆಕ್ ಪೋಸ್ಟ್ ಗಳನ್ನ ನಿರ್ಮಾಣ ಮಾಡಲಾಗಿದ್ದು ಯಾವುದೇ ಕಾರಣದಿಂದಾಗಿಯೂ ಹೋಗಲು ಸಾಧ್ಯವಿಲ್ಲ ಎನ್ನಲಾಗುತ್ತಿದೆ.


ಇದನ್ನೂ ಓದಿ: LockDown: ಮೇ.17ರವರೆಗೆ ಲಾಕ್​ಡೌನ್ ವಿಸ್ತರಿಸಿದ ಹರಿಯಾಣ ಸರ್ಕಾರ; ಬಿಪಿಎಲ್​ ಕುಟುಂಬಗಳಿಗೆ 5 ಸಾವಿರ ಪ್ಯಾಕೇಜ್ ಘೋಷಣೆ!


ಇನ್ನು ಈಗಾಗಲೇ ನಗರ ಪ್ರದೇಶದ ಜೊತೆಗೆ ಗ್ರಾಮಾಂತರ ಭಾಗದ ಪ್ರಮುಖ ಸೆಂಟರ್ ಗಳಲ್ಲಿಯೂ ಸಹ ಪೊಲೀಸರ ತಂಡ ಅಲರ್ಟ್ ಆಗಿದ್ದಾರೆ. ಇನ್ನು ಕನಕಪುರ ಮಾರ್ಗವಾಗಿ ಮಳವಳ್ಳಿ ಮೂಲಕ ಮಂಡ್ಯ ಜಿಲ್ಲೆಗೆ ಹೋಗುವ ಜನರಿಗೆ ಪೊಲೀಸರು ಅರಿವು ಮೂಡಿಸುತ್ತಿದ್ದಾರೆ. ಕೊರೋನಾ ಲಾಕ್ ಡೌನ್ ಮುಗಿಯುವವರೆಗೆ ಯಾವುದೇ ಕಾರಣದಿಂದಾಗಿಯೂ ಅಸ್ತಿ ಬಿಡಲು ಬರಬೇಡಿ.


ಲಾಕ್​ಡೌನ್ ಅವಧಿ ಮುಗಿಯುವವರೆಗೆ ಧಾರ್ಮಿಕ ಕಾರ್ಯಕ್ರಮಗಳನ್ನ ಕೈಗೊಳ್ಳಬೇಡಿ. ಇದರಿಂದಾಗಿ ಕೊರೋನಾ ಸೋಂಕು ಹೆಚ್ಚುವ ಸಾಧ್ಯತೆ ಇದ್ದು ಯಾವುದೇ ಕಾರಣಕ್ಕೂ ಬರಬೇಡಿ ಎಂದು ತಿಳಿಸುತ್ತಿದ್ದಾರೆ. ಈ ಹಿನ್ನೆಲೆ ಜನರು ಸಹ ಲಾಕ್​ಡೌನ್ ಮುಗಿಯುವವರೆಗೆ ಅಸ್ತಿ ಬಿಡಲು ಶ್ರೀರಂಗಪಟ್ಟಣಕ್ಕೆ ಹೋಗದಿರುವುದು ಉತ್ತಮ ಎನ್ನಬಹುದು.


(ವರದಿ : ಎ.ಟಿ.ವೆಂಕಟೇಶ್)

Published by:MAshok Kumar
First published: