HOME » NEWS » District » RAM MANDIR BHUMI POOJA 9 KILO SILVER BRICKS WERE SENT TO AYODHYA FROM KALABURAGI TO CONSTRUCT SRI RAM TEMPLE HK

Ayodhya Ram Mandir : ರಾಮ ಮಂದಿರ ನಿರ್ಮಾಣಕ್ಕೆ ಕಲಬುರ್ಗಿಯಿಂದ 9 ಕೆ.ಜಿ. ಬೆಳ್ಳಿ ಇಟ್ಟಿಗೆ ; ಬೃಹತ್ ಮೂರ್ತಿಗೆ ಹಾಲಿನ ಅಭಿಷೇಕ ಮಾಡಿ ಸಂಭ್ರಮ

ಕಲಬುರ್ಗಿಯ ಶ್ರೀರಾಮನ ಪರಮಭಕ್ತ ರಾಜು ಭವಾನಿ ಎಂಬುವರು ಬೆಳ್ಳಿ ಇಟ್ಟಿಗೆಯನ್ನು ಮಂದಿರ ನಿರ್ಮಾಣಕ್ಕೆಂದು ಸಮರ್ಪಿಸುತ್ತಿದ್ದಾರೆ. ಕೋಲ್ಕತಾ ಮೂಲದ ಚಿನ್ನಾಭರಣ ವ್ಯಾಪಾರಿಯೋರ್ವರು 9 ಕೆಜಿ ಬೆಳ್ಳಿ ಇಟ್ಟಿಗೆಯನ್ನು ನಿರ್ಮಿಸಿದ್ದಾರೆ.

news18-kannada
Updated:August 5, 2020, 2:11 PM IST
Ayodhya Ram Mandir : ರಾಮ ಮಂದಿರ ನಿರ್ಮಾಣಕ್ಕೆ ಕಲಬುರ್ಗಿಯಿಂದ 9 ಕೆ.ಜಿ. ಬೆಳ್ಳಿ ಇಟ್ಟಿಗೆ ; ಬೃಹತ್ ಮೂರ್ತಿಗೆ ಹಾಲಿನ ಅಭಿಷೇಕ ಮಾಡಿ ಸಂಭ್ರಮ
ಬೆಳ್ಳಿಯ ಇಟ್ಟಿಗೆ
  • Share this:
ಕಲಬುರಗಿ (ಆಗಸ್ಟ್.05): ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರಕ್ಕೆ ಶಿಲನ್ಯಾಸ ನೆರವೇರಿಸಿದ ಸಂದರ್ಭದಲ್ಲಿ ಕಲಬುರ್ಗಿ ನಗರದ ರಾಮ ಮಂದಿರದಲ್ಲಿ 9 ಕೆಜಿ ಬೆಳ್ಳಿ ಇಟ್ಟಿಗೆ ಪೂಜೆ ನೆರವೇರಿಸಲಾಯಿತು. ಅಯೋಧ್ಯೆಯ ಶ್ರೀರಾಮಸೇನೆ ದೇಗುಲ ನಿರ್ಮಾಣದಲ್ಲಿ ಬಳಕೆಯಾಗಲಿರುವ ಕಲಬುರಗಿಯ ಬೆಳ್ಳಿ ಇಟ್ಟಿಗೆಯನ್ನು ಕೆಕೆಆರ್ ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೆವೂರ್ ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಪೂಜೆ ನೆರವೇರಿಸಿದರು. ಕೋಲ್ಕತಾ ಮೂಲದ ಚಿನ್ನಾಭರಣ ವ್ಯಾಪಾರಿಯೋರ್ವರು 9 ಕೆಜಿ ಬೆಳ್ಳಿ ಇಟ್ಟಿಗೆಯನ್ನು ನಿರ್ಮಿಸಿದ್ದಾರೆ.

ಕಲಬುರ್ಗಿಯ ಶ್ರೀರಾಮನ ಪರಮಭಕ್ತ ರಾಜು ಭವಾನಿ ಎಂಬುವರು ಬೆಳ್ಳಿ ಇಟ್ಟಿಗೆಯನ್ನು ಮಂದಿರ ನಿರ್ಮಾಣಕ್ಕೆಂದು ಸಮರ್ಪಿಸುತ್ತಿದ್ದಾರೆ. ಯುಪಿ ಸಿಎಂ ಯೋಗಿ ಆದಿತ್ಯನಾಥ್‌ರ ಮೂಲಕ ಅಯೋಧ್ಯೆಯ ಟ್ರಸ್ಟ್‌ಗೆ ಬೆಳ್ಳಿ ಇಟ್ಟಿಗೆ ಹಸ್ತಾಂತರಿಸಲಾಗುವುದು ಎಂದು ರಾಜು ಭವಾನಿ ತಿಳಿಸಿದ್ದಾರೆ. ಬೆಳ್ಳಿ ಇಟ್ಟಿಗೆ ಕಳಿಸುತ್ತಿರುವುದು ಕಲಬುರ್ಗಿಗೂ ಹೆಮ್ಮೆ ವಿಷಯ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ ಸಂಭ್ರಮಿಸಿದ್ದಾರೆ.

ಬೃಹತ್ ರಾಮ ಮೂರ್ತಿಗೆ ಹಾಲಿನ ಅಭಿಷೇಕ :

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ನಡೆದ ಸಂದರ್ಭ ದಲ್ಲಿಯೇ ಕಲಬುರ್ಗಿಯಲ್ಲಿ 14 ಅಡಿ ಎತ್ತರದ ಶ್ರೀರಾಮನ ಮೂರ್ತಿಗೆ ಹಾಲಿನ ಅಭಿಷೇಕ ಮಾಡಲಾಯಿತು. ಶ್ರೀರಾಮ ಸೇನೆ ಗೌರವಾಧ್ಯಕ್ಷ ಆಂದೋಲಶ್ರೀ ಸಿದ್ದಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಅಭಿಷೇಕ ಮಾಡಲಾಯಿತು.ಕಲಬುರ್ಗಿಯ ಆರಾಧ್ಯ ದೈವ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀರಾಮನ ಮೂರ್ತಿ ಇರಿಸಿ ಹಾಲಿನ ಅಭಿಷೇಕ ಹಾಗೂ ವಿಷೇಶ ಪೂಜೆ ನೆರವೇರಿಸಲಾಯಿತು. ಶ್ರೀರಾಮ ಸೇನೆ ಸಂಘಟನೆ ಕಾರ್ಯಕರ್ತರು ಶ್ರೀರಾಮನಿಗೆ ಜೈ಼ಘೋಷ ಹಾಕಿ ಸಿಹಿ ಹಂಚಿ ಸಂಭ್ರಮಿಸಿದರು. ಮರ್ಯಾದಾ ಪುರುಷ ಶ್ರೀರಾಮನ ಮಂದಿರ ನಿರ್ಮಾಣವಾಗುತ್ತಿರುವ ಹಿನ್ನೆಲೆ ಕಲಬುರ್ಗಿಯಲ್ಲಿ ಸಂಭ್ರಮ ಕಳೆಗಟ್ಟಿತ್ತು.

ಇದನ್ನೂ ಓದಿ  : Ayodhya Ram Mandir: ಅಯೋಧ್ಯೆಯಲ್ಲಿ ರಾಮಮಂದಿರ ಶಿಲಾನ್ಯಾಸಕ್ಕೆ ಕ್ಷಣಗಣನೆ ಆರಂಭ ; ಬೆಳಗಾವಿ ಜಿಲ್ಲೆಗೂ ರಾಮನಿಗೂ ಇರುವ ಸಂಬಂಧ ಎಂಥದ್ದು ಗೊತ್ತಾ..!:ರಾಮ ಮಂದಿರಕ್ಕೆ ಪ್ರಧಾನಿ ಮೋದಿ ಭೂಮಿ ಪೂಜೆ ಹಿನ್ನಲೆ ಕಲಬುರ್ಗಿಯ ಗಾಣಗಾಪುರ ದ ದತ್ತನ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಲಾಯಿತು. ಸರ್ಕಾರದ ಆದೇಶದಂತೆ ದೇಗುಲ ಮಂಡಳಿಯಿಂದ ಪೂಜೆ ನಡೆಯಿತು. ವಿಶೇಷ ಪೂಜೆ ಜೊತೆಗೆ ಅರ್ಚಕರಿಂದ ರಾಮನಾಮ ಭಜನೆ ನಡೆಯಿತು. ದತ್ತನ ಸನ್ನಿಧಿಯಲ್ಲಿಯೂ ರಾಮ ಮಂದಿರ ಶಿಲನ್ಯಾಸ ಸಂಭ್ರಮ ಮನೆಮಾಡಿತ್ತು.
Youtube Video

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಶಂಕುಸ್ಥಾಪನೆ ಹಿನ್ನೆಲೆಯಲ್ಲಿ ಕಲಬುರ್ಗಿ ನಗರದಾದ್ಯಂತ ಬಿಗಿ ಪೋಲಿಸ್ ಬಂದೊಬಸ್ತ್ ಕೈಗೊಳ್ಳಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ನಗರದಾದ್ಯಂತ ಪೋಲಿಸ್ ಕಟ್ಟೆಚ್ಚರ ವಹಿಸಲಾಗುತ್ತು. ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ನಿನ್ನೆ ಮಧ್ಯಾಹ್ನ ಮೂರು ಗಂಟೆಯಿಂದಲೇ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು, ನಾಳೆ ಬೆಳಿಗ್ಗೆವರೆಗೂ ನಿಷೇಧಾಜ್ಞೆ ಮುಂದುವರಿಯಲಿದೆ.
Published by: G Hareeshkumar
First published: August 5, 2020, 2:10 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories