HOME » NEWS » District » RAJAPURA SAMSTANA MATH TAKE CARE FOR ORPHANED CHILDREN FROM CORONAVIRUS CANK MAK

ಮಹಾಮಾರಿ ಕೊರೋನಾದಿಂದ ತಬ್ಬಲಿಯಾದ ಮಕ್ಕಳ ಪಾಲನೆ ಪೋಷಣೆಗೆ ಮುಂದಾದ ರಾಜಾಪುರ ಸಂಸ್ಥಾನ ಮಠ!

ರಾಜಾಪುರ ವೀರಧರ್ಮ ಸಂಸ್ಥಾನ ಮಠ ಆನೇಕಲ್ ತಾಲ್ಲೂಕಿನಲ್ಲಿನ ಅನಾಥ ಮಕ್ಕಳ ಪಾಲನೆ ಪೋಷಣೆ ಸೇರಿದಂತೆ ಎಲ್ಲಾ ಜವಾಬ್ದಾರಿ ತೆಗೆದುಕೊಳ್ಳುವುದಾಗಿ ಮಠದ ಗುರುಗಳಾದ ಡಾ. ರಾಜೇಶ್ವರ ಶಿವಾಚಾರ್ಯ ಸ್ವಾಮಿಗಳು ತಿಳಿಸಿದ್ದಾರೆ

news18-kannada
Updated:June 16, 2021, 12:01 AM IST
ಮಹಾಮಾರಿ ಕೊರೋನಾದಿಂದ ತಬ್ಬಲಿಯಾದ ಮಕ್ಕಳ ಪಾಲನೆ ಪೋಷಣೆಗೆ ಮುಂದಾದ ರಾಜಾಪುರ ಸಂಸ್ಥಾನ ಮಠ!
ರಾಜಾಪುರ ಸಂಸ್ಥಾನ ಮಠ.
  • Share this:
ಆನೇಕಲ್. : ಮಹಾಮಾರಿ ಕ್ರೂರಿ ಕೊರೋನಾ ಲಕ್ಷಾಂತರ ಜೀವಗಳಿಗೆ ಕೊಳ್ಳಿ ಇಟ್ಟಿದೆ. ಮಾತ್ರವಲ್ಲದೆ ಮನೆಗೆ ಆಧಾರ ಸ್ತಂಭವಾಗಿದ್ದ ಮಗ, ಮಗಳು, ಅಳಿಯ ಸೊಸೆ ಹೀಗೆ ಅನೇಕರನ್ನು ಬಲಿ ಪಡೆದು ವಿಜೃಂಭಿಸಿದೆ . ಕೊರೋನಾ ರಣಕೇಕೆಗೆ ಅದೆಷ್ಟೋ ಮಕ್ಕಳು ತಮ್ಮವರನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಅಂತಹ ಅನಾಥ ಮಕ್ಕಳ ಪಾಲನೆ ಮತ್ತು ಪೋಷಣೆಗೆ ಇಲ್ಲೊಂದು ಮಠ ಮುಂದೆ ಬಂದಿದೆ. ಹೌದು ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ರಾಜಾಪುರ ವೀರಧರ್ಮ ಸಂಸ್ಥಾನ ಮಠ ಮಹಾಮಾರಿ ಕೊರೋನಾದಿಂದ ಪೋಷಕರನ್ನು ಕಳೆದುಕೊಂಡು ಸಂಕಷ್ಟದಲ್ಲಿರುವ ಮಕ್ಕಳಿಗೆ ನೆರವಾಗಲು ಮುಂದಾಗಿದೆ . ಈಗಾಗಲೇ ಮಹಾಮಾರಿ ಕೊರೋನಾ ಅಸಂಖ್ಯಾತ ಕುಟುಂಬಗಳ ದಿಕ್ಕು ದೆಸೆಯನ್ನೆ ಬದಲಿಸಿದೆ.

ಮನೆ ಮಕ್ಕಳನ್ನು ಬಲಿಪಡೆದು ಅದೆಷ್ಟೋ ಮಂದಿಯನನ್ನು ಅನಾಥರನ್ನಾಗಿಸಿದೆ. ಇಂತಹ ಸನ್ನಿವೇಶದಲ್ಲಿ ಸಮಾಜದ ಜೊತೆ ನಿಲ್ಲಬೇಕಾದದ್ದು, ಪ್ರತಿಯೊಬ್ಬರ ಕರ್ತವ್ಯವಾಗಿದೆ. ಅದ್ರಲ್ಲು ಪೋಷಕರನ್ನು ಕಳೆದುಕೊಂಡು ಸಂಕಷ್ಟದಲ್ಲಿರುವ ಮಕ್ಕಳಿಗೆ ಹೊಸ ದಾರಿ ತೋರಿಸಬೇಕಾದ್ದು, ನಮ್ಮಗಳ ಕರ್ತವ್ಯ. ಮಕ್ಕಳು ದೇವರ ಸಮಾನರು. ಅಂತಹ ಮಕ್ಕಳಲ್ಲಿ ಅನಾಥ ಭಾವನೆ ಕಾಡಬಾರದು.

ಎಲ್ಲಾ ಮಕ್ಕಳಂತೆಯೇ ಅವರಿಗೂ ಸಹ ಉತ್ತಮ‌ ಶಿಕ್ಷಣ , ಸಂಸ್ಕಾರ ದೊರೆಯಬೇಕು. ಆ ಮೂಲಕ ಸಮಾಜದಲ್ಲಿ ಒಳ್ಳೆಯ ಪ್ರಜೆಯಾಗಿ ಇತರರಂತೆ ಬದುಕು‌ ಕಟ್ಟಿಕೊಳ್ಳಬೇಕು ಎಂಬ ಉದ್ದೇಶದಿಂದ ರಾಜಾಪುರ ವೀರಧರ್ಮ ಸಂಸ್ಥಾನ ಮಠ ಆನೇಕಲ್ ತಾಲ್ಲೂಕಿನಲ್ಲಿನ ಅನಾಥ ಮಕ್ಕಳ ಪಾಲನೆ ಪೋಷಣೆ ಸೇರಿದಂತೆ ಎಲ್ಲಾ ಜವಾಬ್ದಾರಿ ತೆಗೆದುಕೊಳ್ಳುವುದಾಗಿ ರಾಜಾಪುರ ಸಂಸ್ಥಾನ ಮಠದ ಗುರುಗಳಾದ ಡಾ. ರಾಜೇಶ್ವರ ಶಿವಾಚಾರ್ಯ ಸ್ವಾಮಿಗಳು ತಿಳಿಸಿದ್ದಾರೆ.

ಇನ್ನೂ ಅನಾದಿ ಕಾಲದಿಂದಲೂ ನಮ್ಮ ದೇಶದಲ್ಲಿ ಗುರುಕುಲ ಪರಂಪರೆ ನಡೆದುಕೊಂಡು ಬಂದಿದೆ . ಗುರುಕುಲ ಪದ್ದತಿಯಲ್ಲಿ ಮಕ್ಕಳಿಗೆ ತ್ರಿವಿಧ ದಾಸೋಹವನ್ನು ಮಠ ಮಾನ್ಯಗಳು ನಡೆಸಿಕೊಂಡು ಬರುತ್ತಿದ್ದವು . ಇಂದಿಗೂ ನಾಡಿನ ಅನೇಕ ಮಠ ಮಾನ್ಯಗಳು, ಅನ್ನ, ಶಿಕ್ಷಣ ಸೇರಿದಂತೆ ತ್ರಿವಿಧ ದಾಸೋಹವನ್ನು ಮುಂದುವರಿಸಿಕೊಂಡು ಬರುತ್ತಿವೆ . ಅಂತೆಯೇ ರಾಜಾಪುರ ಸಂಸ್ಥಾನ ಮಠ ಕೊರೊನಾ ಸಂದರ್ಭದಲ್ಲಿ ಬಡವರಿಗೆ ನಿರಂತರವಾಗಿ ಅನ್ನ ದಾಸೋಹ ನಡೆಸಿಕೊಂಡು ಬರುತ್ತಿದೆ.

ಇದನ್ನೂ ಓದಿ: ಲಾಕ್​ಡೌನ್ ನಿಯಮ ಉಲ್ಲಂಘನೆ ಪ್ರಶ್ನಿಸಿದ ಪೊಲೀಸ್ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ; 5 ಜನರ ವಿರುದ್ಧ FIR

ಇದೀಗ ಕೊರೊನಾ ಕಾರಣದಿಂದ ತಮ್ಮ ಕುಟುಂಬದವರನ್ನು ಕಳೆದುಕೊಂಡು ಅನಾಥರಾದ ಮಕ್ಕಳಿಗೆ ರಾಜಾಪುರ ಮಠ ಜಾತಿ,ಮತ, ಧರ್ಮ ಮತ್ತು ಪಂಥ ಭೇದಗಳಿಲ್ಲದೆ ಅಗತ್ಯ ಸೌಲಭ್ಯ ಒದಗಿಸಲಿದೆ ಎಂದು ರಾಜಾಪುರ ಸಂಸ್ಥಾನ ಮಠದ ಪೀಠಾಧಿಪತಿಗಳಾದ ಡಾ. ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ತರಬೇತಿ ಪಡೆದ ಮಹಿಳೆಯರೂ ಇನ್ನೂ ದೇವಾಲಯಗಳಲ್ಲಿ ಅರ್ಚನೆ ಮಾಡಬಹುದು; ತಮಿಳುನಾಡು ಸರ್ಕಾರಒಟ್ನಲ್ಲಿ ಕೊರೋನಾ ಮಹಾಮಾರಿ ಅಸಂಖ್ಯಾತ ಜನರ ಜೀವಕ್ಕೆ ಕುತ್ತು ತಂದಿದ್ದು, ಇದರಿಂದ ಅದೆಷ್ಟೋ ಕುಟುಂಬಗಳು ಬೀದಿಗೆ ಬಿದ್ದಿದ್ದು, ಅಂತಹ ಕುಟುಂಬದ ಅನಾಥ ಮಕ್ಕಳಿಗೆ ಸರ್ಕಾರದ ಜೊತೆಗೆ ಸಂಘ ಸಂಸ್ಥೆಗಳು, ಮಠಮಾನ್ಯಗಳು ನೆರವಿಗೆ ಧಾವಿಸುತ್ತಿರುವುದು ನಿಜಕ್ಕೂ ಸಮಾಜಕ್ಕೆ ಮಾದರಿಯಾಗಿದೆ.

(ವರದಿ- ಆದೂರು ಚಂದ್ರು)
Youtube Video

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by: MAshok Kumar
First published: June 15, 2021, 11:59 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories