ಯಾದಗಿರಿಯಲ್ಲಿ ವರುಣನ‌ ಅಬ್ಬರ ಅಂಗಡಿಯೊಳಗೆ ಜಲದಿಗ್ಬಂಧನ...! ಗೋಡೆ ಕುಸಿತ ಇಬ್ಬರಿಗೆ ಗಾಯ, ಸಿಡಿಲಿಗೆ ಜಾನುವಾರು ಸಾವು...! 

ಯಾದಗಿರಿ ‌ನಗರದ ಸುಭಾಷ್ ವೃತ್ತದಲ್ಲಿ ವಾಣಿಜ್ಯ ‌ಮಳಿಗೆಗಳ ಕಟ್ಟಡದ ಮೇಲ್ಭಾಗದಿಂದ ಕಟ್ಟಡದ ಗೋಡೆ ಬಿರುಗಾಳಿ ಸಹಿತ ಮಳೆಯ ಅಬ್ಬರಕ್ಕೆ ಕೆಳಗೆ ಬಿದ್ದಿದ್ದು ರಸ್ತೆ ಪಕ್ಕದಲ್ಲಿ ಹಣ್ಣು ವ್ಯಾಪಾರ ಮಾಡಿಕೊಂಡು ಬದುಕು ಸಾಗಿಸುತ್ತಿದ್ದ ಮಹಿಳೆಗೆ ಗಾಯವಾಗಿದೆ. ಮಹಿಳೆಯು ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಯಾದಗಿರಿಯಲ್ಲಿ ಮಳೆಯಿಂದ ಗೋಡೆ ಕುಸಿತ

ಯಾದಗಿರಿಯಲ್ಲಿ ಮಳೆಯಿಂದ ಗೋಡೆ ಕುಸಿತ

  • Share this:
ಯಾದಗಿರಿ(ಏಪ್ರಿಲ್ 06): ಬಿರುಗಾಳಿ ಸಹಿತ ಭಾರಿ ಮಳೆಗೆ ಜಿಲ್ಲೆಯ ಜನರು ನಲುಗಿ ಹೋಗಿದ್ದಾರೆ. ಕಳೆದ ಒಂದು ತಿಂಗಳಿನಿಂದ ಬಿಸಿಲಿನಿಂದ ಕಂಗಲಾಗಿದ್ದ ಯಾದಗಿರಿ ಜಿಲ್ಲೆಯ ಜನರಿಗೆ ವರುಣ ದೇವ ತಂಪೆರೆದಿದ್ದಾನೆ. ಆದರೆ, ಮಳೆಯಿಂದ ಜಿಲ್ಲೆಯಲ್ಲಿ ಸಾಕಷ್ಟು ಅವಾಂತರಗಳು ಜರುಗಿವೆ.
ಗಾಳಿಗೆ ಹಾರಿಬಿದ್ದ ಗೋಡೆ: ಯಾದಗಿರಿ ‌ನಗರದ ಸುಭಾಷ್ ವೃತ್ತದಲ್ಲಿ ವಾಣಿಜ್ಯ ‌ಮಳಿಗೆಗಳ ಕಟ್ಟಡದ ಮೇಲ್ಭಾಗದಿಂದ ಕಟ್ಟಡದ ಗೋಡೆ ಬಿರುಗಾಳಿ ಸಹಿತ ಮಳೆಯ ಅಬ್ಬರಕ್ಕೆ ಕೆಳಗೆ ಬಿದ್ದಿದ್ದು ರಸ್ತೆ ಪಕ್ಕದಲ್ಲಿ ಹಣ್ಣು ವ್ಯಾಪಾರ ಮಾಡಿಕೊಂಡು ಬದುಕು ಸಾಗಿಸುತ್ತಿದ್ದ ಮಹಿಳೆಗೆ ಗಾಯವಾಗಿದೆ. ಮಹಿಳೆಯು ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಅದೇ ರೀತಿ ಇನ್ನೊರ್ವ ವೃದ್ದೆ ಎಲ್ಲಮ್ಮ ಬಿರುಗಾಳಿ ಸಹಿತ ಮಳೆ ಬರುವಾಗ ಎಚ್ಚೆತ್ತುಕೊಂಡು ಪಕ್ಕದ ಅಂಗಡಿ ಭಾಗದಲ್ಲಿ ಕುಳಿತುಕೊಂಡು ಅಪಾಯದಿಂದ ಪಾರಾಗಿದ್ದಾಳೆ. ಘಟನೆಯಲ್ಲಿ ಹಣ್ಣು ವ್ಯಾಪಾರಿಗಳ ಹಣ್ಣುಗಳು, ತಳ್ಳು ಬಂಡಿಗಳು ಹಾನಿಯಾಗಿವೆ. ಬೃಹತ್‌ ಗಾತ್ರದ ಗೋಡೆ ಮೇಲಿಂದ ಬಿದ್ದ ಪರಿಣಾಮ ನಾಲ್ಕು ಬೈಕ್ ಗಳು ಜಖಂಗೊಂಡಿವೆ. ಈ ವೇಳೆ ಘಟನಾ ಸ್ಥಳವನ್ನು ನೋಡಲು ಜನ‌ರು ಮುಗಿಬಿದ್ದಿದ್ದು, ಸ್ಥಳಕ್ಕೆ ಆಗಮಿಸಿದ ಸಿಪಿಐ ಸೋಮಶೇಖರ ಕೆಂಚರೆಡ್ಡಿ, ಪಿಎಸ್ ಐ ಸೌಮ್ಯ ಜನರನ್ನು ಚದುರಿಸಿದರು.
ಸ್ಥಳಕ್ಕೆ ಆಗಮಿಸಿದ ಹೋರಾಟಗಾರ ಚಂದ್ರಶೇಖರ ದಾಸನಕೇರಿ ಕೂಡಲೇ ಹಣ್ಣು ವ್ಯಾಪಾರಿಗಳಿಗೆ ಪರಿಹಾರ ನೀಡಬೇಕು ಮತ್ತು ಗೋಡೆ ಕುಸಿಯಲು ನಿಷ್ಕಾಳಜಿ ವಹಿಸಿದ ಮಾಲಿಕರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಧರಣಿ ನಡೆಸಿದರು. ನಂತರ ಸ್ಥಳಕ್ಕೆ ಆಗಮಿಸಿದ ನಗರಸಭೆ ಪೌರಾಯುಕ್ತ ಬಿ.ಟಿ.ನಾಯಕ  ಹಾಗೂ ನಗರಸಭೆ ಅಧ್ಯಕ್ಷ ವಿಲಾಸ ಪಾಟೀಲ ಸೂಕ್ತ ಪರಿಹಾರ ಕಲ್ಪಿಸುವ ಭರವಸೆ ನೀಡಿದರು.
ಯಾದಗಿರಿ ನಗರದ ಸುಭಾಷ್ ವೃತ್ತದ ಸಮೀಪದಲ್ಲಿರುವ ಅಂಗಡಿಯೊಳಗೆ ಮಳೆ ನೀರು ನುಗ್ಗಿದ್ದ ಪರಿಣಾಮ ಜಲದಿಗ್ಬಂಧನ ಹಾಕಿದಂತಾಗಿದೆ. ನಗರಸಭೆ ಅಧಿಕಾರಿಗಳು ಚರಂಡಿ ಸ್ವಚ್ಛತೆ ಮಾಡದ ಪರಿಣಾಮ ನೀರು ಬೆರೆ ಮಾರ್ಗವಾಗಿ ಹರಿದು ಹೋಗದೆ 20 ಕ್ಕು ಹೆಚ್ಚು ಅಂಗಡಿಗಳೊಳಗೆ ನೀರು ನುಗ್ಗಿದ್ದು ಅಪಾರ ಪ್ರಮಾಣದ ವಸ್ತುಗಳು ಹಾನಿಯಾಗಿವೆ . ರಸ್ತೆ ಮೇಲೆ ಕೂಡ ನೀರು ಹರಿದಿದ್ದು ನಗರದ ರಸ್ತೆಯು ಕೆರೆಯಂತಾಗಿತ್ತು. ನಗರಸಭೆ ಅಧಿಕಾರಿ ಹಾಗೂ ಜನಪ್ರತಿನಿಧಿಗಳಿಗೆ ನಿವಾಸಿಗಳು ಹಿಡಿ ಶಾಪ ಹಾಕಿದರು.

ನಗರಸಭೆ ಮೇಲ್ಛಾವಣಿ ಕುಸಿತ: ನಗರಸಭೆ ಕಚೇರಿಯ ಮೇಲ್ಛಾವಣಿಯು  ಬಿದ್ದಿದ್ದು ಪೀಠೋಪಕರಣಗಳು ಹಾಳಾಗಿವೆ. ಶಿಥಿಲಗೊಂಡ ಕಟ್ಟಡದಲ್ಲಿಯೇ ನಗರಸಭೆ ಕಚೇರಿ ನಡೆಸಲಾಗುತ್ತಿದ್ದು ಇದೆ ರೀತಿ ಹಾಳಾದ ಕಟ್ಟಡದಲ್ಲಿ ಕಚೇರಿ ನಡೆಸಿದ್ರೆ ಮತ್ತೆನಾಗುತ್ತೋ ಎಂಬ ಆತಂಕ ನಗರಸಭೆ ಸಿಬ್ಬಂದಿಗಳನ್ನು ಕಾಡುತ್ತಿದೆ. ಇನ್ನು ನಗರದ ಗಂಜ್ ಪ್ರದೇಶದಲ್ಲಿರುವ ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರು ಮಾರಾಟಕ್ಕಾಗಿ ತಂದಿಟ್ಟ ಶೇಂಗಾ ಸಂಪೂರ್ಣ ನೀರು ಪಾಲಾಗಿವೆ. ಶೇಂಗಾ ಹಾನಿಯಾದ ಹಿನ್ನೆಲೆ ಎಪಿಎಂಸಿ ವರ್ತಕರು ಹಾಗೂ ರೈತರು ನಷ್ಟ ಅನುಭವಿಸುವಂತಾಗಿದೆ.
Published by:Soumya KN
First published: