ಮಳೆ ಬಂದ್ರೆ ಕೆಸರು ಗದ್ದೆಯಂತಾಗುತ್ತೆ ಆನೇಕಲ್‌ ತರಕಾರಿ ಮಾರುಕಟ್ಟೆ; ರೈತರಿಗೆ-ಗ್ರಾಹಕರಿಗೆ ನಿತ್ಯ ಸಂಕಟ

ಈಗಾಗಲೇ ಕೊರೊನಾ ಹಾವಳಿಯಿಂದಾಗಿ ಸಂಕಷ್ಟದಲ್ಲಿರುವ ಇಲ್ಲಿನ ಜನಕ್ಕೆ ಮಳೆಯು ಸಹ ಕಾಡುತ್ತಿದೆ. ಇಷ್ಟಾದರೂ ಎಪಿಎಂಸಿ ಅಧಿಕಾರಿಗಳು ಮಾತ್ರ ಇತ್ತ ತಲೆ ಹಾಕುತ್ತಿಲ್ಲ. ಕನಿಷ್ಠ ಅವ್ಯವಸ್ಥೆಯನ್ನು ಸರಪಡಿಸುವ ಗೋಜಿಗೆ ಹೋಗಿಲ್ಲ ಎಂಬುದು ಇಲ್ಲಿನ ವರ್ತಕರ ಆರೋಪವಾಗಿದೆ.

news18-kannada
Updated:May 29, 2020, 7:04 PM IST
ಮಳೆ ಬಂದ್ರೆ ಕೆಸರು ಗದ್ದೆಯಂತಾಗುತ್ತೆ ಆನೇಕಲ್‌ ತರಕಾರಿ ಮಾರುಕಟ್ಟೆ; ರೈತರಿಗೆ-ಗ್ರಾಹಕರಿಗೆ ನಿತ್ಯ ಸಂಕಟ
ಮಳೆಗೆ ಕೆಸರು ಗದ್ದೆಯಂತಾಗಿರುವ ಆನೇಕಲ್ ತರಕಾರಿ ಮಾರುಕಟ್ಟೆ.
  • Share this:
ಆನೇಕಲ್: ಕಳೆದ ಹಲವು ದಿನಗಳಿಂದ ಬೆಂಗಳೂರು ಸೇರಿದಂತೆ ಹೊರವಲಯದಲ್ಲಿ ಉತ್ತಮ ಮಳೆಯಾಗುತ್ತಿದೆ. ಆದರೆ, ಇದು ರೈತರಿಗೆ ಸಂತೋಷ ಮತ್ತು ಸಂಕಟವನ್ನು ತಂದಿಟ್ಟಿದೆ. ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಸಿಂಗೇನಾ ಅಗ್ರಹಾರ ತಾತ್ಕಾಲಿಕ ತರಕಾರಿ ಮಾರುಕಟ್ಟೆ ಕೆಸರು ಗದ್ದೆಯಾಗಿದೆ.

ಮಹಾ ಮಾರಿ ಕೊರೊನಾ ತಡೆಯುವ ಸಲುವಾಗಿ ನಗರದ ಹೃದಯ ಭಾಗದಲ್ಲಿದ್ದ ಕೆ ಆರ್ ಮಾರುಕಟ್ಟೆಯನ್ನು ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಸಿಂಗೇನಾ ಅಗ್ರಹಾರ ಗ್ರಾಮದ ಬಳಿಗೆ ಸರ್ಕಾರ ಸ್ಥಳಾಂತರ ಮಾಡಿತ್ತು. ಅಂದಿನಿಂದ ಎಪಿಎಂಸಿ ಅಧಿಕಾರಿಗಳು ಸರ್ಕಾರದ ಜಮೀನೊಂದರಲ್ಲಿ ತಾತ್ಕಾಲಿಕ ಶೆಡ್ಗಳನ್ನು ನಿರ್ಮಿಸಿ ಮಣ್ಣಿನ ಅಂಗಳದಲ್ಲಿಯೇ ಮಾರುಕಟ್ಟೆಯ ವಹಿವಾಟು ನಡೆಸಲು ಅವಕಾಶ ಕಲ್ಪಿಸಲಾಗಿತ್ತು. ಇಲ್ಲಿ ಸುಮಾರು 300ಕ್ಕೂ ಅಧಿಕ ಮಂಡಿಗಳು ವ್ಯಾಪಾರ ವಹಿವಾಟು ನಡೆಸುತ್ತಿವೆ.

ಹೊಸಕೋಟೆ, ಮಾಲೂರು, ಕೋಲಾರ ಸೇರಿದಂತೆ ಬೇರೆ ಬೇರೆ ಕಡೆಯಿಂದ ರೈತರು ತಾವು ಬೆಳೆದ ವಿವಿಧ ರೀತಿಯ ಸೊಪ್ಪು ತರಕಾರಿಗಳನ್ನು ಇಲ್ಲಿನ ಮಾರುಕಟ್ಟೆಗೆ ತಂದು ಮಾರಾಟ ಮಾಡುತ್ತಿದ್ದು, ಸಗಟು ವ್ಯಾಪಾರಿಗಳು ಮತ್ತು ಹೋಲ್ ಸೇಲ್ ವರ್ತಕರು ಖರೀದಿ ಮಾಡಿ ಗ್ರಾಹಕರಿಗೆ ಮಾರಾಟ ಮಾಡುತ್ತಾರೆ. ಆದ್ರೆ ಕಳೆದ ನಾಲ್ಕೈದು ದಿನಗಳಿಂದ ಸಂಜೆ ಮತ್ತು ರಾತ್ರಿ ಮಳೆ ಸುರಿಯುತ್ತಿರುವುದರಿಂದ ಇಡೀ ತಾತ್ಕಾಲಿಕ ತರಕಾರಿ ಮಾರುಕಟ್ಟೆ ಕೆಸರು ಗದ್ದೆಯಂತಾಗಿದ್ದು, ವರ್ತಕರು, ರೈತರು ಮತ್ತು ಗ್ರಾಹಕರು ಪರದಾಡುವಂತಾಗಿದೆ.

ಅಂದಹಾಗೆ ನೆಲಕ್ಕೆ ಡಾಂಬರು ಅಥವಾ ಕಾಂಕ್ರೀಟ್ ಯಾವುದನ್ನು ಹಾಕಿಲ್ಲ. ತಗಡಿನ ಶೀಟಿನ ಚಾವಣಿ ಮಾತ್ರ ನಿರ್ಮಿಸಿದ್ದು,  ಮಳೆ ಬಂದ್ರೆ ಸಾಕು ಇಡೀ ತರಕಾರಿ ಮಾರುಕಟ್ಟೆ ಕೆಸರು ಗದ್ದೆಯಂತಾಗುತ್ತದೆ. ವರ್ತಕರು, ರೈತರು ಮತ್ತು ಗ್ರಾಹಕರು ಕೊಚ್ಚೆಯಂತಹ ಮಾರುಕಟ್ಟೆಯಲ್ಲಿ ಕಾಲಿಡಲು ಭಯಪಡುತ್ತಾರೆ. ಇದರಿಂದ ಬೆಳೆ ಬೆಳೆದ ರೈತರು, ಖರೀದಿಸುವ ಗ್ರಾಹಕರು, ತರಕಾರಿ ವ್ಯಪಾರವನ್ನೆ ನೆಚ್ವಿಕೊಂಡಿರುವ ವರ್ತಕರು ಉತ್ತಮ ವ್ಯಾಪಾರ ವಹಿವಾಟು ಇಲ್ಲದೆ ನಷ್ಟ ಅನುಭವಿಸುತ್ತಿದ್ದಾರೆ.

ಈಗಾಗಲೇ ಕೊರೊನಾ ಹಾವಳಿಯಿಂದಾಗಿ ಸಂಕಷ್ಟದಲ್ಲಿರುವ ಇಲ್ಲಿನ ಜನಕ್ಕೆ ಮಳೆಯು ಸಹ ಕಾಡುತ್ತಿದೆ. ಇಷ್ಟಾದರೂ ಎಪಿಎಂಸಿ ಅಧಿಕಾರಿಗಳು ಮಾತ್ರ ಇತ್ತ ತಲೆ ಹಾಕುತ್ತಿಲ್ಲ. ಕನಿಷ್ಠ ಅವ್ಯವಸ್ಥೆಯನ್ನು ಸರಪಡಿಸುವ ಗೋಜಿಗೆ ಹೋಗಿಲ್ಲ ಎಂಬುದು ಇಲ್ಲಿನ ವರ್ತಕರ ಆರೋಪವಾಗಿದೆ.

ಇದನ್ನೂ ಓದಿ : ಸಾರಿಗೆ ನಷ್ಟವನ್ನು ಸರಿದೂಗಿಸಿ ಲಾಭ ತರುವ ನಿಟ್ಟಿನಲ್ಲಿ ಕ್ರಮವಹಿಸಿ; ಅಧಿಕಾರಿಗಳಿಗೆ ಲಕ್ಷ್ಮಣ ಸವದಿ ಸೂಚನೆ
First published: May 29, 2020, 7:04 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading