ಗುಮ್ಮಟನಗರಿ ವಿಜಯಪುರದಲ್ಲಿ ಕೊರೋನಾಘಾತ ; ರೈಲ್ವೆ ಪೊಲೀಸ್ ಠಾಣೆ ಸೀಲ್​​ ಡೌನ್​​

ರೈಲ್ವೆ ಪೊಲೀಸ್ ಠಾಣೆಯ ಮಹಿಳಾ ಪೊಲೀಸ್ ಕಾನ್ಸ್​ಟೇಬಲ್​​ಗೆ ಪಾಸಿಟಿವ್ ದೃಢವಾಗಿದೆ.  ಈ ಹಿನ್ನೆಲೆಯಲ್ಲಿ ಪಿಎಸ್ಐ ಸೇರಿ 20 ಜನ ಪೊಲೀಸ್ ಸಿಬ್ಬಂದಿಗಳಿಗೆ ಕ್ವಾರಂಟೈನ್ ಮಾಡಲಾಗಿದೆ.

news18-kannada
Updated:July 3, 2020, 4:09 PM IST
ಗುಮ್ಮಟನಗರಿ ವಿಜಯಪುರದಲ್ಲಿ ಕೊರೋನಾಘಾತ ; ರೈಲ್ವೆ ಪೊಲೀಸ್ ಠಾಣೆ ಸೀಲ್​​ ಡೌನ್​​
ವಿಜಯಪುರ ರೈಲ್ವೆ ಪೊಲೀಸ್ ಠಾಣೆ
  • Share this:
ವಿಜಯಪುರ(ಜು. 03): ಗುಮ್ಮಟನಗರಿ ವಿಜಯಪುರದಲ್ಲಿ ಈಗ ರೈಲ್ವೆ ಪೊಲೀಸ್ ಠಾಣೆಗೂ ಕೊರೋನಾ ವಕ್ಕರಿಸಿದ್ದು, ಪೊಲೀಸ್ ಠಾಣೆಯನ್ನು ಸೀಲ್​​ಡೌನ್ ಮಾಡಲಾಗಿದೆ. ಠಾಣೆಯ ಮಹಿಳಾ ಕಾನ್ಸ್ ಟೇಬಲ್ ಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಕಳೆದ ತಿಂಗಳು ದೇಶದ ನಾನಾ ಭಾಗಗಳಿಂದ ಅದರಲ್ಲೂ ಮಹಾರಾಷ್ಟ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ರೈಲಿನ ಮೂಲಕ ವಾಪಸ್ಸಾಗಿದ್ದರು. ಸುಮಾರು 4 ಸಾವಿರ ಜನ ಕಾರ್ಮಿಕರು ತವರು ಜಿಲ್ಲೆಗೆ ಮರಳಿದ್ದರು. ಈ ಸಂದರ್ಭದಲ್ಲಿ ಪೊಲೀಸರು ಕರ್ತವ್ಯ ನಿರ್ವಹಿಸಿದ್ದರು.

ರೈಲ್ವೆ ಪೊಲೀಸ್ ಠಾಣೆಯ ಮಹಿಳಾ ಪೊಲೀಸ್ ಕಾನ್ಸ್​ಟೇಬಲ್​​ಗೆ ಪಾಸಿಟಿವ್ ದೃಢವಾಗಿದೆ.  ಈ ಹಿನ್ನೆಲೆಯಲ್ಲಿ ಪಿಎಸ್ಐ ಸೇರಿ 20 ಜನ ಪೊಲೀಸ್ ಸಿಬ್ಬಂದಿಗಳಿಗೆ ಕ್ವಾರಂಟೈನ್ ಮಾಡಲಾಗಿದೆ. ಪರಿಣಾಮ ಓರ್ವ ರೇಲ್ವೆ ಪಿಎಸ್ಐ, 5 ಜನ್ ಹೆಡ್ ಕಾನ್ಸ್ ಸ್ಟೇಬಲ್​​ಗಳು, 14 ಜನ ಕಾನ್ಸ್​​ಟೇಬಲ್​​ಲ್ಲಿ ಕೊರೋನಾ ಆತಂಕ ಶುರುವಾಗಿದೆ.

ಜೂನ್ 24 ರಂದು 24 ಜನ ರೈಲ್ವೆ ಪೊಲೀಸ್ ಸಿಬ್ಬಂದಿ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ನೀಡಿದ್ದರು. ಈಗ ಓರ್ವ ಮಹಿಳಾ ಕಾನಸ್ಟೇಬಲ್ ನಲ್ಲಿ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಬಾಗಲಕೋಟೆಯ ಮೂವರು ರೈಲ್ವೆ ಪೊಲೀಸರಿಗೆ ವಿಜಯಪುರ ರೈಲ್ವೆ ಠಾಣೆಯ ಜವಾಬ್ದಾರಿ ನೀಡಲಾಗಿದೆ.

ಠಾಣೆಯ ಹೊರಗೆ ಟೇಬಲ್ ಹಾಕಿಕೊಂಡು ಬಾಗಲಕೋಟೆಯ ಸಿಬ್ಬಂದಿ ಈಗ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸರಕಾರದ ನಿರ್ದೇಶನದಂತೆ ರೇಲ್ವೆ ಪೊಲೀಸ್ ಠಾಣೆಯನ್ನು ಡಿಸ್ ‌ಇನಫೆಕ್ಷನ್ ಮಾಡಲಾಗಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ ತಿಳಿಸಿದ್ದಾರೆ.

ಈ ಮಧ್ಯೆ ವಿಜಯಪುರ ನಗರದಲ್ಲಿ 95 ಇಳಿ ವಯಸ್ಸಿನ ಅಜ್ಜಿಗೂ ಕೊರೋನಾ ಸೋಂಕು ತಗುಲಿದ್ದು, ವೃದ್ಧೆಯನ್ನು ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಪೆ.16965,  ವೃದ್ಧೆಗೆ ಪೆ. 8778 30 ವರ್ಷದ ಮಹಿಳೆಯಿಂದ ಸೋಂಕು ತಗುಲಿದೆ. ಈ ಮಹಿಳೆ ಐಎಲ್​ಐ ಅಂದರೆ ಕೆಮ್ಮು ಮತ್ತು ಜ್ವರದಿಂದಾಗಿ ಚಿಕಿತ್ಸೆ ಪಡೆಯುತ್ತಿದ್ದಾಗ ಅವರಲ್ಲಿ ಜೂನ್​. 21 ರಂದು ಕೊರೋನಾ ಸೋಂಕು ಇರುವುದು ದೃಢಪಟ್ಟಿತ್ತು. ಅಲ್ಲದೇ, ಈ ಮಹಿಳೆ ಜೂನ್​ 28 ರಂದು ಕೊರೋನಾದಿಂದ ಗುಣಮುಖರಾಗಿ ವಿಜಯಪುರ ಜಿಲ್ಸಾಸ್ಪತ್ರೆಯಿಂದ ಡಿಶ್ಚಾರ್ಜ್ ಆಗಿದ್ದಾಳರೆ.

ಪೆ. 8778 30 ವರ್ಷದ ಮಹಿಳೆ ಕೊರೋನಾದಿಂದ ಗುಣಮುಖರಾಗಿ ಬಿಡುಗಡೆಯಾದರೂ, ಈಗ ಈಕೆಯ ಸಂಪರ್ಕಕ್ಕೆ ಬಂದವರಲ್ಲಿ ಕೊರೋನಾ ಪಾಸಿಟಿವ್ ದೃಢವಾಗುತ್ತಿದೆ.ಈವರೆಗೆ ಈ ಮಹಿಳೆಯ ಪ್ರಾಥಮಿಕ ಸಂಪರ್ಕಕ್ಕೆ ಬಂದಿರುವ 13 ಜನರಲ್ಲಿ ಕೊರೋನಾ ಪಾಸಿಟಿವ್ ದೃಢವಾಗಿದೆ.

ಇದನ್ನೂ ಓದಿ : ಪೊಲೀಸರು, ವೈದ್ಯರಲ್ಲಿ ಸೋಂಕು ಹೆಚ್ಚಳ ; ಕಲಬುರ್ಗಿಯಲ್ಲಿ ಕೊರೋನಾ ವಾರಿಯರ್ಸ್ ತತ್ತರಈ ಮಧ್ಯೆ ವಿಜಯಪುರ ಜಿಲ್ಲೆಯಲ್ಲಿ ಈಗ ಪ್ರತಿನಿತ್ಯ ಕೊರೋನಾ ಪಾಸಿಟಿವ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಐಎಲ್​ಐ ಪ್ರಕರಣಗಳ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗುತ್ತಿದೆ. ಇಲ್ಲಿಯವರೆಗೆ ವಿಜಯಪುರ ಜಿಲ್ಲೆಯಲ್ಲಿ 466 ಜನರಲ್ಲಿ ಕೊರೋನಾ ಸೋಂಕು ತಗುಲಿದೆ. ಅಲ್ಲದೇ, ಕೊರೋನಾದಿಂದ ಜಿಲ್ಲೆಯಲ್ಲಿ ಈವರೆಗೆ 322 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗೆಡೆಯಾಗಿದ್ದಾರೆ. ಈ ಮಧ್ಯೆ ನಾನಾ ಕಾಯಿಲೆಗಳಿಂದ ಬಳಲಿ ಸಾವಿಗೀಡಾದ ವ್ಯಕ್ತಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಇದರಿಂದಾಗಿ ಜಿಲ್ಲೆಯಲ್ಲಿ ನಾನಾ ಕಾಯಿಲೆಗಳಿಂದ ಬಳಲುತ್ತಿದ್ದ ಕೊರೋನಾ ಸೋಂಕಿತ ಸಾವಿಗಿಡಾದವರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.

ವಿಜಯಪುರ ನಗರದ ಶಾಪೇಟಿ ನಿವಾಸಿ ಪೆ. 12139 56 ವರ್ಷದ ಪುರುಷನಲ್ಲಿ ಜೂನ್​ 28 ರಂದು ಕೊರೋನಾ ಸೋಂಕು ದೃಢವಾಗಿದೆ. ಕಂಟೇನ್​ಮೆಂಟ್ ವಲಯದಿಂದ ಕೊರೋನಾ ಪಾಸಿಟಿವ್ ಸೋಂಕಿತರಿಂದ ಈ ವ್ಯಕ್ತಿಗೆ ಸೋಂಕು ತಗುಲಿದೆ.

ತೀವ್ರ ಉಸಿರಾಟದ ತೊಂದರೆ ಮತ್ತು ಎದೆ ನೋವಿನಿಂದ ಬಳಲುತ್ತಿದ್ದ ವ್ಯಕ್ತಿ ಈ ವ್ಯಕ್ತಿಯನ್ನು ಖಾಸಗಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಜೂನ್ 27 ರಂದು ಮೃತಪಟ್ಟಿದ್ದಾನೆ. ಆದರೆ, ಇನ್ನೂ ರಾಜ್ಯ ಬುಲೆಟಿನ್ ನಲ್ಲಿ ಈ ಮಾಹಿತಿ ದಾಖಲಾಗಿಲ್ಲ ಎಂದು ವಿಜಯಪುರ ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
First published: July 3, 2020, 3:57 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading