ಹಣ್ಣುಗಳನ್ನು ಸಂಸ್ಕರಿಸಿ ಇತರೆ ಪದಾರ್ಥ ಮಾಡುವ ವಿಧಾನ ಸಂಶೋಧಿಸಿದ ರಾಯಚೂರು ಕೃಷಿ ವಿವಿ

ಭಾರತ ಕೃಷಿ ಪ್ರಧಾನ ರಾಷ್ಟ್ರವಾಗಿದ್ದರಿಂದ ಕೃಷಿಯಲ್ಲಿ ಬದಲಾವಣೆ ತಂದು ಕೃಷಿ ಪದಾರ್ಥಗಳನ್ನು ಮೌಲ್ಯವರ್ಧನೆ ಮಾಡಿದರೆ ರೈತರಿಗೆ ಅನುಕೂಲವಾಗಲಿದೆ, ಈ ಹಿನ್ನಲೆಯಲ್ಲಿ ಸರಕಾರಗಳು ಸಹ ರೈತರಿಗೆ ಸಹಾಯ ಮಾಡಬೇಕಾಗಿದೆ.

ಹಣ್ಣುಗಳನ್ನು ಸಂಸ್ಕರಿಸುತ್ತಿರುವುದು.

ಹಣ್ಣುಗಳನ್ನು ಸಂಸ್ಕರಿಸುತ್ತಿರುವುದು.

  • Share this:
ರಾಯಚೂರು; ಬೆಳೆದ ಹಣ್ಣುಗಳನ್ನು ಮಾರುಕಟ್ಟೆಯಲ್ಲಿ ಬೇಗ ಮಾರಾಟ ಮಾಡಬೇಕು. ಇಲ್ಲದಿದ್ದರೆ ಈ ಹಣ್ಣುಗಳು ಹಾಳಾಗುತ್ತವೆ. ಆದರೆ ಈ ಹಣ್ಣುಗಳನ್ನು ಸಂಸ್ಕರಿಸಿ, ಮೌಲ್ಯವರ್ಧಿತ ಪದಾರ್ಥ ಮಾಡಿಕೊಂಡರೆ ರೈತರಿಗೆ ಲಾಭವಾಗುತ್ತದೆ. ಇಂಥ ಒಂದು ತಂತ್ರಜ್ಙಾನವನ್ನು ರಾಯಚೂರು ಕೃಷಿ ವಿಶ್ವವಿದ್ಯಾಲಯವು ಅಭಿವೃದ್ದಿಪಡಿಸಿದೆ.

ತೋಟಗಾರಿಕೆ ಬೆಳೆಗಳನ್ನು ಬೆಳೆದ ರೈತರಿಗೆ ಹಣ್ಣುಗಳನ್ನು ಮಾರಾಟ ಮಾಡುವುದು ದೊಡ್ಡಸಾಹಸದ ಕೆಲಸವಾಗಿದೆ. ಸಕಾಲಕ್ಕೆ ಹಣ್ಣುಗಳನ್ನು ಮಾರಾಟ ಮಾಡದಿದ್ದರೆ ಹಣ್ಣುಗಳು ಕೊಳೆತು ಹೋಗುತ್ತವೆ. ಆದರೆ ಈ ಹಣ್ಣುಗಳನ್ನು ಸಂಸ್ಕರಿಸಿ,  ಈ ಹಣ್ಣುಗಳಿಂದ ಬೇರೆ ಬೇರೆ ಉತ್ಪನ್ನಗಳನ್ನು ಮಾಡಿದರೆ ಅದು ರೈತರಿಗೆ ಲಾಭ ಹಾಗೂ ಹಣ್ಣುಗಳಲ್ಲಿ ಮೌಲ್ಯವರ್ಧಿತಗೊಂಡು ಬೇರೆ ಬೇರೆ ರೂಪದಲ್ಲಿ ಮಾರಾಟ ಮಾಡಬಹುದಾಗಿದೆ. ಆದರೆ ರೈತರಿಗೆ ಮೌಲ್ಯವರ್ಧಿತ ಪದಾರ್ಥಗಳನ್ನು ತಯಾರಿಸುವ ಹಾಗೂ ಮಾರಾಟ ಮಾಡುವ ಕುರಿತು ಮಾಹಿತಿ ಕಡಿಮೆ. ಆದರೆ ಇದಕ್ಕೆ ಪರಿಹಾರವಾಗಿ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಇಂಜನಿಯರಿಂಗ್ ವಿಭಾಗದ ಆಹಾರ ತಂತ್ರಜ್ಞಾನ ವಿಭಾಗದಲ್ಲಿ ಹಣ್ಣುಗಳ ಮೌಲ್ಯವರ್ಧನೆ ಮಾಡಿ ಮಾರಾಟ ಮಾಡುವ ತಂತ್ರಜ್ಞಾನವನ್ನು ರೈತರಿಗೆ ಮಾಹಿತಿ ನೀಡುತ್ತಿದ್ದಾರೆ.

ರಾಯಚೂರಿನಲ್ಲಿ ಮಾವು, ಪೇರಲ, ಅಂಜೂರು ಹಣ್ಣುಗಳನ್ನು ಜಾಮ್, ಬಾರ್, ಪೌಡರ್ ಗಳನ್ನಾಗಿ ತಯಾರಿಸಿ ಅವುಗಳನ್ನು ಮಾರಾಟ ಮಾಡುವ ವಿಧಾನವನ್ನು ರೈತರಿಗೆ ಮಾಹಿತಿ ನೀಡುವುದು ಅಲ್ಲದೇ ಇಲ್ಲಿ ತಯಾರಿಸಿ ಕೊಡುತ್ತಿದ್ದಾರೆ. ವಿವಿಯ ಈ ವಿಭಾಗದಲ್ಲಿ ಪ್ರತಿ ತಿಂಗಳು 300-550 ಕೆಜಿಯವರೆಗೂ ಹಣ್ಣುಗಳ ಸಂಸ್ಕರಿಸಿ, ಅವುಗಳ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ, ರೈತರಿಗೆ ಉಚಿತವಾಗಿ ತರಬೇತಿ ನೀಡಲಾಗುತ್ತಿದೆ, ಇಲ್ಲಿ ಪ್ರತಿ ತಿಂಗಳು ಸಾಕಷ್ಟು ರೈತರು ಬಂದು ಮಾಹಿತಿ ಪಡೆಯುತ್ತಿದ್ದಾರೆ. ಅಲ್ಲದೆ ಇಲ್ಲಿಯ ಮಾಹಿತಿಯನ್ನು ಅಳವಡಿಸಿಕೊಂಡು ಹಣ್ಣುಗಳಿಂದ ಲಾಭ ಪಡೆಯುತ್ತಿದ್ದಾರೆ.

ಇದನ್ನು ಓದಿ: ಡಬಲ್ ಎಂಜಿನ್ ಸರ್ಕಾರದಲ್ಲಿ ಬೋಗಿಗಳು ಎಲ್ಲೆಲ್ಲೋ ಹೋಗಿಬಿಟ್ಟಿವೆ; ಬಿಜೆಪಿ ಸರ್ಕಾರದ ಬಗ್ಗೆ ಎಚ್​ಡಿಕೆ ವ್ಯಂಗ್ಯ

ರಾಯಚೂರು, ಬಳ್ಳಾರಿ, ಕೊಪ್ಪಳ ಜಿಲ್ಲೆಯಲ್ಲಿ ಈಗ ಅಂಜೂರು ಬೆಳೆಯನ್ನು ಅಧಿಕವಾಗಿ ಬೆಳೆಯುತ್ತಿದ್ದಾರೆ. ಅಂಜೂರು ಹಣ್ಣನ್ನು ಸಂಸ್ಕರಿಸಿ ಬೇರೆ ಬೇರೆ ಉತ್ಪನ್ನಗಳನ್ನು ತಯಾರಿಕೆ ಮಾಡಲಾಗುತ್ತಿದೆ. ಹಣ್ಣುಗಳನ್ನು ಸ್ವಚ್ಷವಾಗಿ ತೊಳೆದು, ತಿರುಳನ್ನು ಸಿಪ್ಪೆಯಿಂದ ಬೇರ್ಪಡಿಸಿ, ತಿರುಳಿನಿಂದ ಪಲ್ಪ್, ಮಾಡಿ ಅದಕ್ಕೆ ಬೇಕಾಗುವಷ್ಟು ಸಿಹಿಗಾಗಿ ಸಕ್ಕರೆ, ಸಿಟ್ರಿಕ್ ಆಸಿಡ್ ಹಾಗು ಇತರ ತಿನಿಸಿಗೆ ಬೇಕಾಗುವ ವಸ್ತುಗಳನ್ನು ಸೇರಿಸಿ ಅಂಜೂರು ಜಾಮ್, ಅಂಜೂರ್ ಬಾರ್, ಅಂಜೂರು ಪೌಡರ್ ಹೀಗೆ ಹಲವಾರು ರೀತಿಯ ಉತ್ಪನ್ನಗಳನ್ನು ತಯಾರಿಕೆ ಮಾಡಲಾಗುತ್ತಿದೆ. ಈ ರೀತಿಯ ಮೌಲ್ಯವರ್ಧಿತ ಪದಾರ್ಥಗಳನ್ನು ಮಾಡುವುದರಿಂದ ರೈತರಿಗೆ ಹೆಚ್ಚು ಲಾಭವಾಗುತ್ತಿದೆ. ಇಲ್ಲಿ ಅಂಜೂರು ಜಾಮ್ ತಯಾರಿಕೆ ಪ್ರತಿ ಕೆಜಿಗೆ 150, ಬಾರ್ ತಯಾರಿಕೆಗೆ 250 ರೂಪಾಯಿ ಪೌಡರ್ ತಯಾರಿಕೆಗೆ 500 ರೂಪಾಯಿ ಸಂಸ್ಕರಣಾ ವೆಚ್ಚವಾಗಿ ಜಾರ್ಜ್ ಮಾಡುತ್ತಾರೆ. ಇಲ್ಲಿ ತಯಾರಾದ ಜಾಮ್, ಬಾರ್, ಹಾಗು ಪೌಡರನ್ನು ರೈತರು ತಮ್ಮದೆ ಬ್ರಾಂಡ್ ನಲ್ಲಿ 250, 400 ಹಾಗು 1000 ರೂಪಾಯಿಯವರೆಗೂ ಮಾರಾಟ ಮಾಡಬಹುದಾಗಿದೆ. ಇದು ರೈತರಿಗೆ ತುಂಬಾ ಅನುಕೂಲವಾಗಿದೆ ಎನ್ನುತ್ತಾರೆ, ವಿಭಾಗದ ಮುಖ್ಯಸ್ಥರಾದ ಉದಯಕುಮಾರ ನಿಡೋಣಿ.

ಭಾರತ ಕೃಷಿ ಪ್ರಧಾನ ರಾಷ್ಟ್ರವಾಗಿದ್ದರಿಂದ ಕೃಷಿಯಲ್ಲಿ ಬದಲಾವಣೆ ತಂದು ಕೃಷಿ ಪದಾರ್ಥಗಳನ್ನು ಮೌಲ್ಯವರ್ಧನೆ ಮಾಡಿದರೆ ರೈತರಿಗೆ ಅನುಕೂಲವಾಗಲಿದೆ, ಈ ಹಿನ್ನಲೆಯಲ್ಲಿ ಸರಕಾರಗಳು ಸಹ ರೈತರಿಗೆ ಸಹಾಯ ಮಾಡಬೇಕಾಗಿದೆ.
Published by:HR Ramesh
First published: