ರಾಯಚೂರು ವಿ.ವಿ.ಯಿಂದ ಔಷಧಿ ಸಂಪರಣೆಗೆ ಡ್ರೋನ್ ; ವಿದ್ಯಾರ್ಥಿಗಳ ಪ್ರಥಮ ಪ್ರಯತ್ನಕ್ಕೆ ರೈತ ಸಮುದಾಯದ ಮೆಚ್ಚುಗೆ

news18-kannada
Updated:July 20, 2020, 3:42 PM IST
ರಾಯಚೂರು ವಿ.ವಿ.ಯಿಂದ ಔಷಧಿ ಸಂಪರಣೆಗೆ ಡ್ರೋನ್ ; ವಿದ್ಯಾರ್ಥಿಗಳ ಪ್ರಥಮ ಪ್ರಯತ್ನಕ್ಕೆ ರೈತ ಸಮುದಾಯದ ಮೆಚ್ಚುಗೆ
ಡ್ರೋನ್​​
  • Share this:
ರಾಯಚೂರು(ಜುಲೈ.20): ಮಂಡ್ಯ ಮೂಲದ ಯುವಕ ಪ್ರತಾಪ್ ಡ್ರೋನ್ ಕಂಡು ಹಿಡಿದಿರುವ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದೆ. ಇದರ ಮಧ್ಯೆಯೇ ರಾಯಚೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಇಂಜಿನಿಯರಿಂಗ್ ವಿಭಾಗ ಡ್ರೋನ್ ಚಾಲಿತ ಔಷಧಿ ಸಿಂಪಡಣೆಯ ಯಂತ್ರವನ್ನು ಅವಿಷ್ಕಾರ ಮಾಡಿದೆ. 

ಕೃಷಿಯಲ್ಲಿ ಈಗ ಕೂಲಿಯಾಳುಗಳ ಕೊರತೆ, ಔಷಧಿ ಸಿಂಪಡಣೆ ಮಾಡುವಾಗ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಆಗುತ್ತಿವೆ, ಎತ್ತರವಾದ ಮರಗಳು, ಭತ್ತದ ಗದ್ದೆಯಲ್ಲಿ ಸದಾ  ನೀರು ನಿಲ್ಲುವದರಿಂದ ಇಲ್ಲಿ ಔಷಧಿ ಸಿಂಪಡೆಣೆಗೆ ಕಷ್ಟ ಪಡಬೇಕಾಗಿದೆ, ಈ ಎಲ್ಲಾ ಕಾರಣಕ್ಕಾಗಿ ವಿಶ್ವದಾದ್ಯಂತ ಹೊಸ ಹೊಸ ಅವಿಷ್ಕಾರಗಳು ನಡೆಯುತ್ತಿವೆ, ಇವುಗಳ ಮಧ್ಯೆ ರಾಯಚೂರು ಕೃಷಿ ವಿಶ್ವವಿದ್ಯಾಲಯ ಸಹ ಡ್ರೋನ್ ಚಾಲಿತ ಔಷಧಿ ಸಿಂಪಡಣೆಯ ಯಂತ್ರವನ್ನು ತಯಾರಿಸಿದೆ.

ಮೊದಲು 5 ಲೀಟರ್ ಸಾಮಾರ್ಥ್ಯದ ಡ್ರೋನ್ ಚಾಲಿತ ಔಷಧಿ ಯಂತ್ರವನ್ನು ತಯಾರಿಸಿದ್ದರು. ಆದರೆ, ಇದು ಎಲ್ಲಾ ರೈತರಿಗೆ ಲಾಭದಾಯಕವಾಗುವದು ಕಷ್ಟ ಸಾಧ್ಯ ಎನ್ನುವ ಕಾರಣಕ್ಕೆ ಈಗ 20 ಲೀಟರ್ ಔಷಧಿ ಸಿಂಪಡಿಸುವ ಡ್ರೋನ್​​​ನ್ನು ತಯಾರಿಸಿದ್ದಾರೆ.

ಡ್ರೋನ್ ತಯಾರಿಕೆಯ ನಂತರ ಕೇಂದ್ರ ವಿಮಾನಯಾನ ನಿರ್ದೇಶನಾಲಯವು ಡ್ರೋನ್ ಚಾಲನೆಗೆ ಪರವಾನಿಗೆ ತೆಗೆದುಕೊಳ್ಳಬೇಕು ಎಂಬ ಸೂಚನೆ ಇದೆ. ಈ ಹಿನ್ನೆಲೆಯಲ್ಲಿ ಕಳೆದ ವರ್ಷವೇ ರೈತರ ಭೂಮಿಯಲ್ಲಿ ಪ್ರಯೋಗ ಮಾಡಬೇಕಾದ ಡ್ರೋನ್ ಯಂತ್ರವು ಈ ವರ್ಷ ರೈತರ ಭೂಮಿಯಲ್ಲಿ ಪ್ರಾಯೋಗಿಕವಾಗಿ ಔಷಧಿ ಸಿಂಪಡಿಸಲು ಪರವಾನಿಗೆ ಸಿಕ್ಕಿದೆ.

20 ಲೀಟರ್ ಸಾಮಾರ್ಥ್ಯದ ಡ್ರೋನ್ ಚಾಲಿತ ಯಂತ್ರವನ್ನು ಸುಮಾರು 10 ಲಕ್ಷ ರೂಪಾಯಿಯಲ್ಲಿ ತಯಾರಿಸಲಾಗಿದೆ. ಇಲ್ಲಿ ಸ್ಪ್ರೇಯರ್ ನ್ನು ಈಗಾಗಲೇ ವಿವಿ ಆವರಣದಲ್ಲಿ ಪ್ರಯೋಗಕ್ಕೆ ಒಳಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ರೈತರ ಭೂಮಿಯಲ್ಲಿಯೂ ಸಿಂಪಡಣೆಗೆ ಇಳಿಯಲಿದೆ.

ಇದನ್ನೂ ಓದಿ : ಕರಾವಳಿಯಲ್ಲಿ ಆಷಾಢ ಅಮಾವಾಸ್ಯೆ ಆಚರಣೆ ; ಕೊರೋನಾ ನಡುವೆ ಮಹತ್ವ ಪಡೆದ ಆಟಿ ಕಷಾಯ

ಜಿಪಿಎಸ್ ಅಳವಡಿಸಿ ರೈತರ ಭೂಮಿಯಲ್ಲಿ ಎಷ್ಟು ಪ್ರಮಾಣದಲ್ಲಿ ಔಷಧಿ ಸಿಂಪಡಿಸಬಹುದು ಹಾಗು ಡ್ರೋನ್ ಚಾಲನೆಗಾಗಿ ನುರಿತ ತಜ್ಞರನ್ನು ನೇಮಿಸಿಕೊಳ್ಳಲಾಗಿದೆ. ಪ್ರಾಯೋಗಿಕವಾಗಿ ಆರಂಭಿಸಿರುವ ಈ ಯಂತ್ರವು ಬರುವ ದಿನಗಳಲ್ಲಿ ರೈತರಿಗೆ ಭರವಸೆದಾಯಕವಾಗಿದೆ ಎನ್ನುತ್ತಾರೆ ಇಂಜಿಯರಿಂಗ್ ವಿಭಾಗದ ಡೀನ್ ವೀರನಗೌಡ.

ಈಗಾಗಲೇ ರೈತರು ಯಂತ್ರಗಳನ್ನು ಬಾಡಿಗೆ ರೂಪದಲ್ಲಿ ಪಡೆಯುತ್ತಿದ್ದು, ಅದೇ ರೀತಿ ಸಮುದಾಯ ಆಧಾರಿತ ಗುಂಪು ಗುಂಪಾಗಿ ರೈತರು ಯಂತ್ರವನ್ನು ಬಾಡಿಗೆ ರೂಪದಲ್ಲಿ ಪಡೆಯಬಹುದಾಗಿದೆ, ಈ ಕುರಿತು ಅಂತಿಮವಾಗಿ ರೂಪರೇಷಗಳನ್ನು ತಯಾರಿಸಲಾಗುತ್ತಿದ್ದು, ರಾಯಚೂರು ಕೃಷಿ ವಿಶ್ವವಿದ್ಯಾಯ ಕಂಡು ಹಿಡಿದ ಈ ಡ್ರೋನ್​​ ಚಾಲಿತ ಔಷಧಿ ಯಂತ್ರ ಬರುವ ದಿನಗಳಲ್ಲಿ ಸಾಕಷ್ಟು ಬೇಡಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
Published by: G Hareeshkumar
First published: July 20, 2020, 3:40 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading