ರಾಯಚೂರು: ಕೆಎಸ್​ಆರ್​​ಟಿಸಿ ಚಾಲಕ-ನಿರ್ವಾಹಕರಿಗಿಲ್ಲ ರಾತ್ರಿ ನೆಮ್ಮದಿಯ ನಿದ್ದೆ!

ಡಿಪೋಗಳಲ್ಲಿ ಸಿಬ್ಬಂದಿಗಾಗಿ ರೆಸ್ಟ್ ರೂಮ್ ಮಾಡಲಾಗಿದೆ. ಆದರ ಅವು ತೀರಾ ಕಡಿಮೆ ಜನರಿಗೆ ಅವಕಾಶವಿದೆ. ಬೆಳಗಿನ ಜಾವ ಪ್ರಯಾಣಿಸುವ ಸ್ಥಳೀಯ ಬಸ್ ಗಳ ಸಿಬ್ಬಂದಿಗಳಿಗೆ ಮಾತ್ರ ಸೀಮಿತವಾಗಿದೆ. ಡಿಪೋಗಳಲ್ಲಿ ಬೇರೆ ವಿಭಾಗ, ಡಿಪೊಗಳಿಂದ ಬಂದ ಬಸ್ ಗಳಿಗೆ ಅವಕಾಶವಿಲ್ಲ.

ಬಸ್​ನಲ್ಲೇ ನಿದ್ರೆಗೆ ಜಾರಿರುವ ಚಾಲಕ.

ಬಸ್​ನಲ್ಲೇ ನಿದ್ರೆಗೆ ಜಾರಿರುವ ಚಾಲಕ.

  • Share this:
ರಾಯಚೂರು: ಊರಿಂದ ಊರಿಗೆ ಜನರನ್ನು ಹೊತ್ತೊಯುವ ಬಸ್ ಗಳ ಚಾಲಕರು ಹಾಗೂ ನಿರ್ವಾಹಕರು ರಾತ್ರಿಯ ವೇಳೆ ಒಂದಿಷ್ಟು ನೆಮ್ಮದಿಯ ನಿದ್ದೆ ಮಾಡಲು ಆಗುತ್ತಿಲ್ಲ. ದುಡಿದು ಬಂದವರಿಗೆ ರಾತ್ರಿಯ ವೇಳೆ ಸೋಳ್ಳೆಗಳ ಕಾಟ, ಮುಂಜಾನೆ ಎದ್ದ ನಂತರ ಟಾಯ್ಲೆಟ್ ಗೂ ಪರದಾಟ, ರಾಯಚೂರು ಕೇಂದ್ರ ಬಸ್ ನಿಲ್ದಾಣದಲ್ಲಿ ನಿತ್ಯ ಚಾಲಕರು, ನಿರ್ವಾಹಕರು ಯಾಕಾದರೂ ರಾತ್ರಿ ಬರುತ್ತದೆ ಎಂದುಕೊಳ್ಳುವಂತಾಗಿದೆ. ಹಗಲಿನಲ್ಲಿ ಪ್ರಯಾಣಿಸಿ ರಾತ್ರಿಯ ವೇಳೆ ನಿಲ್ದಾಣದಲ್ಲಿದ್ದು ಮುಂಜಾನೆಯ ವೇಳೆಗೆ ಮತ್ತೆ ಪ್ರಯಾಣ ಬೆಳೆಸಬೇಕು, ಗಾಡಿ ಓಡಿಸುವ, ವಾಹನಗಳಲ್ಲಿ ಪ್ರಯಾಣಿಕರಿಗೆ ಟಿಕೆಟ್ ನೀಡುವ ಜನರನ್ನು ಹತ್ತಿಸಿ ಇಳಿಸುವ ಕಾರ್ಯ ಮಾಡುವ ನಿರ್ವಾಹಕರ ಸಂಜೆಯಾಗುತ್ತಲೆ ಒಂದಿಷ್ಟು ನೆಮ್ಮದಿಯಿಂದ ನಿದ್ದೆ ಮಾಡಿದರೆ ಆಗಿರುವ ಆಯಾಸ ಕಡಿಮೆಯಾಗುತ್ತದೆ. ಆದರೆ ಹಗಲು ದುಡಿದು ಅಯಾಸ ಪಟ್ಟವರು ಮತ್ತೆ ರಾತ್ರಿಯಿಡಿ ಜಾಗರಣೆ ಮಾಡುವಂತಾಗಿದೆ.

ರಾಯಚೂರು ಕೇಂದ್ರ ಬಸ್ ನಿಲ್ದಾಣದಲ್ಲಿ ರಾತ್ರಿಯ ವೇಳೆ ಬೇರೆ ಕಡೆಯಿಂದ ಬಂದ ಸುಮಾರು 20 ಅಧಿಕ ಬಸ್ ಗಳ ಸುಮಾರು 40 ಜನ ಸಿಬ್ಬಂದಿ ನಿತ್ಯ ಇದೇ ಸಂಕಟ ಪಡುವಂತಾಗಿದೆ. ಬಸ್ ನಿಲ್ದಾಣದಲ್ಲಿ ವಿಪರೀತ ಸೊಳ್ಳೆಗಳು, ಈಗ ಛಳಿಗಾಲ, ವಿಪರೀತ ಛಳಿ ಇದೆ, ಈ ಸಂದರ್ಭದಲ್ಲಿ ಬಸ್ ನಲ್ಲಿ ಮಲಗುವ ಸಿಬ್ಬಂದಿ ಸೊಳ್ಳೆಗಳ ಕಡಿತದಿಂದ ಪಾರಾಗಲು ಸೊಳ್ಳೆ ಪರದೆ ಹಾಕಿಕೊಂಡು ಮಲಗಬೇಕು. ಅಪ್ಪಿತಪ್ಪಿ ಸೊಳ್ಳೆ ಪರದೆ ಇಲ್ಲದಿದ್ದರೆ ಅನಿವಾರ್ಯವಾಗಿ ಸೊಳ್ಳೆಯ ಬತ್ತಿ ಹಚ್ಚಿಕೊಳ್ಳಬೇಕು. ಅದು ಇಲ್ಲದಿದ್ದರೆ ಸೊಳ್ಳೆಯ ಕಡಿತಕೊಳ್ಳಗಾಗಿ ಇಡೀ ರಾತ್ರಿ ನಿದ್ದೆ ಇಲ್ಲದೆ ಒದ್ದಾಡಬೇಕು.

ಇನ್ನೂ ಮುಂಜಾನೆ ಮತ್ತೆ ಪ್ರಯಾಣಕ್ಕೆ ಸಿದ್ದವಾಗಬೇಕು. ಬೇರೆ ಕಡೆಯಿಂದ ಬರುವ ಸಿಬ್ಬಂದಿಗಳು ವಾಸ್ತವ್ಯ, ಮುಂಜಾನೆಯ ಅವರ ನಿತ್ಯ ಕರ್ಮಾದಿಗಳನ್ನು ಪೊರೈಸಿಕೊಳ್ಳಲು ನಿಲ್ದಾಣದಲ್ಲಿ ಡಾರ್ಮೆಟರಿ ಮಾದರಿಯಲ್ಲಿ ಕಟ್ಟಡ ನೀಡಬೇಕು  ಅವರಿಗೆ ಶೌಚಾಲಯ ಸೇರಿದಂತೆ ಅಗತ್ಯ ಸೌಲಭ್ಯ ನೀಡಬೇಕು. ಆದರೆ ರಾಯಚೂರು ಬಸ್ ನಿಲ್ದಾಣದಲ್ಲಿ ಈ ವ್ಯವಸ್ಥೆ ಇಲ್ಲ. ಹೀಗಾಗಿ ಬೇರೆ ಕಡೆಯಿಂದ ಬರುವ ಸಿಬ್ಬಂದಿ ಅನಿವಾರ್ಯವಾಗಿ ಬಸ್ ನಿಲ್ದಾಣದಲ್ಲಿಯೇ ಬಸ್ ನಲ್ಲಿಯೇ ಇರಬೇಕು. ಇಲ್ಲಿಯವರೆಗೂ ಸಿಬ್ಬಂದಿಗಳಿಗಾಗಿ ಕನಿಷ್ಠ ಮೂಲಭೂತ ಸೌಲಭ್ಯ ಒದಗಿಸಲಾಗಿಲ್ಲ ಎಂದು ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ : ರೈತರ ಬೇಡಿಕೆ ಈಡೇರುವವರೆಗೆ ಬ್ರಿಟನ್ ಪ್ರಧಾನಿ ಭಾರತಕ್ಕೆ ಬರುವುದು ಬೇಡ; ರೈತರಿಂದ ಇಂಗ್ಲೆಂಡ್ ಸಂಸದರಿಗೆ ಪತ್ರ!

ಡಿಪೋಗಳಲ್ಲಿ ಸಿಬ್ಬಂದಿಗಾಗಿ ರೆಸ್ಟ್ ರೂಮ್ ಮಾಡಲಾಗಿದೆ. ಆದರ ಅವು ತೀರಾ ಕಡಿಮೆ ಜನರಿಗೆ ಅವಕಾಶವಿದೆ. ಬೆಳಗಿನ ಜಾವ ಪ್ರಯಾಣಿಸುವ ಸ್ಥಳೀಯ ಬಸ್ ಗಳ ಸಿಬ್ಬಂದಿಗಳಿಗೆ ಮಾತ್ರ ಸೀಮಿತವಾಗಿದೆ. ಡಿಪೋಗಳಲ್ಲಿ ಬೇರೆ ವಿಭಾಗ, ಡಿಪೊಗಳಿಂದ ಬಂದ ಬಸ್ ಗಳಿಗೆ ಅವಕಾಶವಿಲ್ಲ. ಅವರು ಹೊರಗಡೆನೇ ಇರಬೇಕಾದ ಅನಿವಾರ್ಯತೆ ಇದೆ. ಈ ಮಧ್ಯೆ ರಾಯಚೂರು ಕೇಂದ್ರ ಬಸ್ ನಿಲ್ದಾಣದಲ್ಲಿ ಸಿಬ್ಬಂದಿಗಳಿಗಾಗಿ ಡಾರ್ಮೆಟರಿ ಮಾದರಿಯಲ್ಲಿ ಕೊಠಡಿಯನ್ನು ಎರಡು ವರ್ಷದಿಂದ ನಿರ್ಮಿಸುತ್ತಿದ್ದು ಇಲ್ಲಿಯವರೆಗೂ ಅದು ಪೂರ್ಣಗೊಂಡಿಲ್ಲ.

ಈ ಬಗ್ಗೆ ವಿಭಾಗೀಯ ನಿಯಂತ್ರಕರನ್ನು ಕೇಳಿದರೆ ಇನ್ನೂ ಹದಿನೈದು ದಿನಗಳಲ್ಲಿ ಕೊಠಡಿ ಪೂರ್ಣಗೊಂಡು ಸಿಬ್ಬಂದಿಗಳಿಗೆ ಲಭ್ಯವಾಗಲಿದೆ, ಈ ಕೊಠಡಿಯಲ್ಲಿ ಅಗತ್ಯ ಸೌಲಭ್ಯ ಒದಗಿಸಲಾಗುವುದು ಎಂದು ತಿಳಿಸಿದ್ದಾರೆ. ರಾಯಚೂರು ಸಾರಿಗೆ ಸಚಿವ ಡಿಸಿಎಂ ಲಕ್ಷ್ಮಣ ಸವದಿಯವರ ಉಸ್ತುವಾರಿ ಜಿಲ್ಲೆಯಾಗಿದ್ದು ಈ ಜಿಲ್ಲೆಯಲ್ಲಿಯೆ ಸಾರಿಗೆ ಸಿಬ್ಬಂದಿ ಪರದಾಡುವಂತಾಗಿದೆ.
Published by:MAshok Kumar
First published: