ಒಂದು ದಶಕ ಕಳೆದರೂ ಸಂತ್ರಸ್ತರಿಗೆ ಸಿಗಲಿಲ್ಲ ಸೂರು ; ಬೀಳುವ ಮನೆಗಳಿಗೆ ಹಕ್ಕು ಪತ್ರ ನೀಡಲು ಮುಂದಾದ ಜಿಲ್ಲಾಡಳಿತ

ಈ ಮನೆಗಳು ಕಳಪೆಯಾಗಿವೆ ಎಂದು ಜನರು ಅಲ್ಲಿಗೆ ಹೋಗಲು ನಿರಾಕರಿಸಿದ್ದರು. ಈ ಬಗ್ಗೆ ತನಿಖೆಯಾಗಿ ಈ ಮನೆಗಳು ವಾಸಿಸಲು ಯೋಗ್ಯವಾಗಿಲ್ಲ ಎಂದು ವರದಿಯನ್ನು ಸಹ ನೀಡಿದ್ದರು. ಆದರೆ. ಜಿಲ್ಲಾಡಳಿತ ನಿರ್ಲಕ್ಷಿಸಿ ಪರ್ಯಾಯ ವ್ಯವಸ್ಥೆ ಮಾಡಲಿಲ್ಲ

ಮನೆಗಳು

ಮನೆಗಳು

  • Share this:
ರಾಯಚೂರು(ಅಕ್ಟೋಬರ್​. 06): ಈ ವರ್ಷ ಸುರಿದಂತೆ 2009 ರಲ್ಲಿ ಭಾರಿ ಮಳೆಯಾಗಿತ್ತು, ಇದರಿಂದಾಗಿ ರಾಯಚೂರು ಜಿಲ್ಲೆಯ ಬಹುತೇಕ ಗ್ರಾಮಗಳು ಮಳೆಯಿಂದ ತತ್ತರಿಸಿದ್ದು, ಈ ಸಂದರ್ಭದಲ್ಲಿ ಅಂದಿನ ಸರಕಾರ ಆಸರೆ ಯೋಜನೆಯಲ್ಲಿ ಮನೆಗಳನ್ನು ನಿರ್ಮಿಸಿದೆ. ಆದರೆ, ಈ ಮನೆಗಳು ಕಳಪೆಯಾಗಿರುವದು, ರೈತರು ವಾಸಿಸಲು ಯೋಗವಾಗಿರದೆ ಇರುವದು, ಮೂಲಭೂತ ಸೌಲಭ್ಯವಿಲ್ಲದೆ ಇರುವದರಿಂದ ಆಸರೆ ಮನೆಗಳಲ್ಲಿ ಜನರು ವಾಸವಾಗಿಲ್ಲ. ಆದರೆ, ಇದೇ ಮನೆಗಳಿಗೆ ಫಲಾನುಭವಿಗಳನ್ನು ಸ್ಥಳಾಂತರಿಸಲು ಜಿಲ್ಲಾಡಳಿತ ಸಿದ್ದತೆ ನಡೆಸಿದೆ. ಕಳೆದ ತಿಂಗಳು ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಸೂಚನೆಯ ಹಿನ್ನೆಲೆಯಲ್ಲಿ ಅಂದಿನ ಮನೆಗಳಿಗೆ ಹಕ್ಕುಪತ್ರ ನೀಡಿ ಮನೆಗಳಿಗೆ ಜನರನ್ನು ಸ್ಥಳಾಂತರಿಸಿ ಎಂದು ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈಗ ಮನೆಗಳನ್ನು ಫಲಾನುಭವಿಗಳಿಗೆ ನೀಡಲು ಮುಂದಾಗಿದೆ. ಆದರೆ ಈ ಮನೆಗಳು ಸಂಪೂರ್ಣವಾಗಿ ಬಿದ್ದು ಹೋಗಿವೆ. ಬಹುತೇಕ ಮನೆಗಳಿಗೆ ಅಡಿಪಾಯ ಕಿತ್ತಿಕೊಂಡು ಹೋಗಿದೆ. ಬಾಗಿಲು, ಕಿಡಕಿಗಳಿಲ್ಲ. ರಸ್ತೆಗಳು ಇಲ್ಲ, ವಿದ್ಯುತ್ ಕುಡಿವ ನೀರು ಇಲ್ಲ,ಈ ಎಲ್ಲಾ ಇಲ್ಲಗಳ ಮಧ್ಯೆಯೂ ಜಿಲ್ಲಾಡಳಿತ ಸ್ಥಳಾಂತರಿಸಲು ಹೊರಟಿದೆ.

ಇದಕ್ಕೆ ಉದಾಹರಣೆ ಎಂಬಂತೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಜೂಕೂರು ಗ್ರಾಮವು ಒಂದು, ಈ ಗ್ರಾಮವನ್ನು ಸಂಪೂರ್ಣವಾಗಿ ಸ್ಥಳಾಂತರಿಸಲು 250 ಮನೆಗಳನ್ನು ಅಂದು ಜಿಲ್ಲಾಡಳಿತವು ನಿರ್ಮಿತ ಕೇಂದ್ರದಿಂದ ನಿರ್ಮಿಸಿದೆ.ಈ ಮನೆಗಳು ಕಳಪೆಯಾಗಿವೆ ಎಂದು ಜನರು ಅಲ್ಲಿಗೆ ಹೋಗಲು ನಿರಾಕರಿಸಿದ್ದರು. ಈ ಬಗ್ಗೆ ತನಿಖೆಯಾಗಿ ಈ ಮನೆಗಳು ವಾಸಿಸಲು ಯೋಗ್ಯವಾಗಿಲ್ಲ ಎಂದು ವರದಿಯನ್ನು ಸಹ ನೀಡಿದ್ದರು. ಆದರೆ. ಜಿಲ್ಲಾಡಳಿತ ನಿರ್ಲಕ್ಷಿಸಿ ಪರ್ಯಾಯ ವ್ಯವಸ್ಥೆ ಮಾಡಲಿಲ್ಲ.

ಈ ಮಧ್ಯೆ 2016 ರಲ್ಲಿ ಸಿದ್ದರಾಮಯ್ಯ ಸರಕಾರದಲ್ಲಿ ಜೂಕೂರು ಗ್ರಾಮದ ಆಸರೆ ಮನೆಗಳಿಗೆ ಮೂಲಭೂತ ಸೌಲಭ್ಯ ಒದಗಿಸಲು 9.60 ಕೋಟಿ ರೂಪಾಯಿ ಮಂಜೂರು ಮಾಡಲಾಗಿತ್ತು. ಅಗತ್ಯ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳು ಹಾಗು ಜಿಲ್ಲಾ ಪಂಚಾಯತ್ ಗೆ ಸೂಚನೆ ನೀಡಿದ್ದು, ಅವರು ತಮ್ಮ ಪಂಚಾಯತ್ ರಾಜ್ ಇಂಜಿನಿಯರ್​ ಇಲಾಖೆಗೆ ಸೂಚಿಸಿದ್ದರು. ಆದರೆ, ಇಲ್ಲಿಯವರೆಗೂ ಇಲ್ಲಿ ಮೂಲಭೂತ ಸೌಲಭ್ಯ ಒದಗಿಸಿಲ್ಲ.

ಇದನ್ನೂ ಓದಿ : ಮಗಳಿಗೆ ಕನ್ನಡ ಶೆಟ್ಟಿ ಎಂದು ಹೆಸರಿಟ್ಟ ಉದ್ಯಮಿ ; ಪ್ರತಾಪ್ ಶೆಟ್ಟಿಯ ಕನ್ನಡಾಭಿಮಾನಕ್ಕೆ ವ್ಯಾಪಕ ಮೆಚ್ಚುಗೆ

ಈಗ ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದ್ದಾರೆ ಎಂಬ ಕಾರಣಕ್ಕೆ ಹಕ್ಕು ಪತ್ರ ನೀಡಲು ಮುಂದಾಗಿದ್ದಾರೆ. ಆಸರೆ ಮನೆಗಳಲ್ಲಿ ಸುಮಾರು 60 ಕುಟುಂಬಗಳು ವಾಸವಾಗಿವೆ. ಅವರಿಗೆ ಹಳೆಯ ಗ್ರಾಮದಲ್ಲಿ ವಾಸಿಸಲು ಮನೆಗಳು ಇಲ್ಲದೆ ಇರುವದರಿಂದ ತಾವೇ ರಿಪೇರಿ ಮಾಡಿಸಿಕೊಂಡು ವಾಸವಾಗಿದ್ದಾರೆ.

ಈಗ ಈ ಕುಟುಂಬಗಳಿಗೆ ಹಕ್ಕುಪತ್ರ ಸಹ ನೀಡಿಲ್ಲ. ಈಗ ಕಳಪೆ ಮನೆಗಳನ್ನು ಜನರಿಗೆ ಹಕ್ಕುಪತ್ರ ನೀಡಲು ಮುಂದಾಗಿದ್ದಾರೆ. ಇದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಶಾಸಕರು ಸಹ ಸಕಾಲಕ್ಕೆ ಹಕ್ಕು ಪತ್ರ ನೀಡಿ ಸುಸಜ್ಜಿತ ಮನೆಗಳನ್ನು ನೀಡಿದ್ದರೆ ಜೂಕೂರು ಗ್ರಾಮಸ್ಥರು ಸ್ಥಳಾಂತರವಾಗುತ್ತಿದ್ದರು. ಆದರೆ, ಜಿಲ್ಲಾಡಳಿತ ಮಾಡಿರುವ ತಪ್ಪಿನಿಂದ ಗ್ರಾಮಸ್ಥರು ಸ್ಥಳಾಂತರವಾಗಿಲ್ಲ. ಮೂಲಭೂತ ಸೌಲಭ್ಯ ಒದಗಿಸಿ ಮನೆಗಳ ಹಕ್ಕು ಪತ್ರ ನೀಡಿ ಎಂದು ಹೇಳಿದ್ದಾರೆ.
Published by:G Hareeshkumar
First published: