ರಾಯಚೂರು: ಹೊಸ ನೀತಿಯಿಂದಾಗಿ ರೈತರಿಗೆ ಸಿಗುತ್ತಿಲ್ಲ ಯೂರಿಯಾ ಗೊಬ್ಬರ

ರಾಯಚೂರು ಜಿಲ್ಲೆಯಲ್ಲಿ 3.50 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದು ಅದರಲ್ಲಿ ತೋಗರಿ 89 ಸಾವಿರ ಹೆಕ್ಟರ್, 1.34 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ, 43 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಭತ್ತ ಸೇರಿದಂತೆ ವಿವಿಧ ಬೆಳೆಯನ್ನು ಬೆಳೆಯುತ್ತಿದ್ದಾರೆ. ಈ ಸಂದರ್ಭದಲ್ಲಿ ಯೂರಿಯಾ ಗೊಬ್ಬರ ಅವಶ್ಯವಾಗಿದೆ. ಆದರೆ, ಜಿಲ್ಲೆಯಲ್ಲಿ ಯೂರಿಯಾ ಸಿಗುತ್ತಿಲ್ಲ.

news18-kannada
Updated:August 14, 2020, 8:49 PM IST
ರಾಯಚೂರು: ಹೊಸ ನೀತಿಯಿಂದಾಗಿ ರೈತರಿಗೆ ಸಿಗುತ್ತಿಲ್ಲ ಯೂರಿಯಾ ಗೊಬ್ಬರ
ಪ್ರಾತಿನಿಧಿಕ ಚಿತ್ರ.
  • Share this:
ರಾಯಚೂರು: ರೈತರಿಗೆ ಈಗ ಒಂದೇ ಚಿಂತೆ ಬೆಳೆಯುವ ಬೆಳೆಗೆ ಯೂರಿಯಾ ಹಾಕಬೇಕು. ಯೂರಿಯಾ ಬೇಕಾದರೆ ಅವಶ್ಯಕತೆ ಇಲ್ಲದಿದ್ದರೂ ಬೇರೆ ಗೊಬ್ಬರ ಖರೀದಿಸಬೇಕು. ವಿಚಿತ್ರ ನಿಯಮಾವಳಿಯಿಂದಾಗಿ ಇದೀಗ ರಾಯಚೂರು ರೈತರು ಯೂರಿಯಾಕ್ಕಾಗಿ ದುಬಾರಿ ಗೊಬ್ಬರ ಖರೀದಿಸುವಂತಾಗಿದೆ.

ಉತ್ತಮ ಫಸಲು ಬರಬೇಕು ಎಂದರೆ ಮಣ್ಣಿನಲ್ಲಿ ಸಮತೋಲನ ಗೊಬ್ಬರ ನೀಡಬೇಕು. ಅದಕ್ಕೆ ಯೂರಿಯಾ ಅಧಿಕ ಬಳಕೆ ಮಾಡದಂತೆ ಸೂಚಿಸಲಾಗಿದೆ. ಈ ಹಿನ್ನಲೆ ಬೇರೆ ಬೇರೆ ಗೊಬ್ಬರ ಕೊಡಬಹುದು,  ಹಾಗಂತ ಯೂರಿಯಾ ಮಾತ್ರ ಕೇಳಿದರೆ ಬಲವಂತವಾಗಿ ಬೇರೆ ಗೊಬ್ಬರ ಖರೀದಿಸಲು ಹೇಳುವುದು ತಪ್ಪು ರಾಯಚೂರು ಜಿಲ್ಲೆಯಲ್ಲಿ ಈ ವರ್ಷ ಮುಂಗಾರು ಪೂರ್ವದಿಂದ ಉತ್ತಮ‌ ಮಳೆಯಾಗಿದೆ.

ಇದರಿಂದಾಗಿ ಈ ಬಾರಿ ಜಿಲ್ಲೆಯಲ್ಲಿ ನಿಗಿದಿಗಿಂತ ಅಧಿಕ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಇಲ್ಲಿಯವರೆಗೂ 3.50 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಹತ್ತಿ, ತೋಗರಿ, ಭತ್ತ, ಸೇರಿದಂತೆ ವಿವಿಧ ಬೆಳೆಗಾಗಿ ಬಿತ್ತನೆ ಮಾಡಿದ್ದಾರೆ. ಈಗಲೂ ಮಳೆಯಾಗುತ್ತಿದೆ ಅಲ್ಲದೆ  ತುಂಗಭದ್ರಾ ಎಡದಂಡೆ ಹಾಗು ನಾರಾಯಣಪುರ ಬಲದಂಡೆ ನಾಲೆಯಿಂದ‌ ನೀರು ಹರಿದು ಬರುತ್ತಿದೆ. ಈ ಸಂದರ್ಭದಲ್ಲಿ ಬೆಳೆಗೆ ರಸಗೊಬ್ಬರ ನೀಡಬೇಕಾಗಿದೆ. ಈ ಮಧ್ಯೆ ಕಡಿಮೆ ದರದಲ್ಲಿ ಸಿಗುವ ಯೂರಿಯಾ ಗೊಬ್ಬರಕ್ಕೆ ಭಾರಿ ಬೇಡಿಕೆ ಇದೆ.

ಪ್ರತಿ 50 ಕೆಜಿ ಯೂರಿಯಾ ಗೊಬ್ಬರಕ್ಕೆ 365 ರೂಪಾಯಿ. ಬೆಳೆಯುವ ಬೆಳೆಗೆ ಮಳೆಗಾಲದಲ್ಲಿ ಯೂರಿಯಾ ಹಾಕಿದರೆ ಉತ್ತಮ ಬೆಳೆ ಬರುತ್ತದೆ. ಅದಕ್ಕಾಗಿ ಈಗ ರೈತರು ಯೂರಿಯಾಕ್ಕಾಗಿ ಅಲೆಯುತ್ತಿದ್ದಾರೆ. ರಾಯಚೂರು ಮಾರುಕಟ್ಟೆಯಲ್ಲಿ ಕೇವಲ ಯೂರಿಯಾ ಕೇಳಿದರೆ ಯಾವ ಅಂಗಡಿಯವರು ಕೊಡುತ್ತಿಲ್ಲ. ಒಂದು ಚೀಲಕ್ಕಾಗಿ ನಾಲ್ಕು ಚೀಲ ಬೇರೆ ಬೇರೆ ಗೊಬ್ಬರ ಖರೀದಿಸಬೇಕು. ಡಿಎಪಿ 10:20 ಸೇರಿದಂತೆ ವಿವಿಧ ಗೊಬ್ಬರವು ಪ್ರತಿ ಚೀಲಕ್ಕೆ 1200-1350 ರೂಪಾಯಿ ಇದೆ. ಕೇವಲ 365 ರೂಪಾಯಿಗೆ ಸಿಗುವ ಗೊಬ್ಬರಕ್ಕೆ 5100 ರೂಪಾಯಿ ಕೊಟ್ಟು ಯೂರಿಯಾದೊಂದಿಗೆ ಅವಶ್ಯಕತೆ ಇಲ್ಲದಿದ್ದರೂ ಖರೀದಿಸಬೇಕಾಗಿದೆ.

ಬಹುತೇಕ ಅಂಗಡಿಗಳಲ್ಲಿ ಯೂರಿಯಾ ಗೊಬ್ಬರವಿಲ್ಲವೆಂದು ಹೇಳುತ್ತಿದ್ದಾರೆ. ಈ ಬಗ್ಗೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕರನ್ನು ಕೇಳಿದರೆ ಬೆಳೆಗೆ ಸಮತೋಲನ ಗೊಬ್ಬರ ನೀಡಬೇಕು.  ಅದಕ್ಕಾಗಿ ಯೂರಿಯಾದೊಂದಿಗೆ ಬೇರೆ ಗೊಬ್ಬರ ಕೊಡುತ್ತಾರೆ. ಹಾಗಂತ ಬಲವಂತವಾಗಿ ಬೇರೆ ಗೊಬ್ಬರ ಖರೀದಿಸುವಂತೆ ಹೇಳಿದರೆ ತಪ್ಪಾಗುತ್ತದೆ. ಈ ಬಗ್ಗೆ ದೂರು ನೀಡಿದರೆ ಸಹಾಯಕ ನಿರ್ದೇಶಕರು ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಸರ್ಕಾರವನ್ನು ಕೆಡವಲು ಯತ್ನಿಸಿದವರ ಕುತಂತ್ರ ವಿಫಲವಾಗಿದೆ; ಬಿಜೆಪಿ ನಾಯಕರ ವಿರುದ್ಧ ಅಶೋಕ್ ಗೆಹ್ಲೋಟ್‌ ಕಿಡಿ

ರಾಯಚೂರು ಜಿಲ್ಲೆಯಲ್ಲಿ 3.50 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದು ಅದರಲ್ಲಿ ತೋಗರಿ 89 ಸಾವಿರ ಹೆಕ್ಟರ್, 1.34 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ, 43 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಭತ್ತ ಸೇರಿದಂತೆ ವಿವಿಧ ಬೆಳೆಯನ್ನು ಬೆಳೆಯುತ್ತಿದ್ದಾರೆ. ಈ ಸಂದರ್ಭದಲ್ಲಿ ಯೂರಿಯಾ ಗೊಬ್ಬರ ಅವಶ್ಯವಾಗಿದೆ. ಆದರೆ, ಜಿಲ್ಲೆಯಲ್ಲಿ ಯೂರಿಯಾ ಸಿಗುತ್ತಿಲ್ಲ. ಈ ತಿಂಗಳಲ್ಲಿ 190000 ಟನ್ ಯೂರಿಯಾ ಬೇಕಾಗಿದೆ.

ಆದರೆ, ಈಗ ಜಿಲ್ಲೆಗೆ 9836 ಟನ್ ಯೂರಿಯಾ ಬಂದಿದೆ. ಯೂರಿಯಾ ಕೊರತೆ ಕೊರೋನಾ ಹಿನ್ನಲೆಯಲ್ಲಿ ಲಾಕ್‌ಡೌನ್ ಮಾಡಿದ್ದರಿಂದ ಗೊಬ್ಬರ ತಯಾರಿಕಾ ಕಂಪನಿಗಳು ಬಂದ್ ಆಗಿದ್ದವು. ವಿದೇಶದಿಂದ ಬರುವ ಗೊಬ್ಬರವು ಬಾರದೆ ಕೊರತೆ ಉಂಟಾಗಿದೆ ಎನ್ನಲಾಗಿದೆ. ಹಾಗಂತ ರೈತರಿಗೆ ಆರ್ಥಿಕ ಹೊರೆಯಾಗುವಂತೆ ರಸಗೊಬ್ಬರ ಮಾರಾಟ ಮಾಡುವುದನ್ನು ಜಿಲ್ಲಾಡಳಿತ ತಡೆಯಬೇಕಾಗಿದೆ.
Published by: MAshok Kumar
First published: August 14, 2020, 8:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading