ರಾಯಚೂರು: ಒಂದೇ ದಿನ 503 ಕೊರೋನಾ ಸೋಂಕು ಪ್ರಕರಣ ದಾಖಲು!

ಇಂದು ದಾಖಲಾದ 503 ಜನರಲ್ಲಿ ರಾಯಚೂರು ತಾಲೂಕಿನಲ್ಲಿಯೇ 183 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇಲ್ಲಿಯವರೆಗೂ ಅತೀ ಹೆಚ್ಚು ರಾಯಚೂರು ನಗರದಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದ್ದರೂ ರಾಯಚೂರು ಜನ ಎಚ್ಚೆತ್ತುಕೊಂಡಿಲ್ಲ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

  • Share this:
ರಾಯಚೂರು; ರಾಜ್ಯದಲ್ಲಿ ಕೊರೊನಾ ಎರಡನೆಯ ಅಬ್ಬರಿಸುತ್ತಿದೆ, ಕೊರೊನಾ ತಡೆಗಾಗಿ ಸರಕಾರ ಸೆಮಿಲಾಕ್ ಡೌನ್ ಘೋಷಣೆ ಮಾಡಿ ಕಟ್ಟುನಿಟ್ಟಿನ ಕ್ರಮ ವಹಿಸಲು ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಈ ಮಾರ್ಗಸೂಚಿಯನ್ನು ಜನರು ಪಾಲಿಸುತ್ತಿಲ್ಲ, ಪಾಲಿಸಲು ಸ್ಥಳೀಯ ಆಡಳಿತಗಳು ಸಹ ವಿಫಲವಾಗಿವೆ. ತರಕಾರಿ ಮಾರುಕಟ್ಟೆಗಳಲ್ಲಿ ಜನಜಂಗುಳಿ ಸೇರಬಾರದು, ತರಕಾರಿ ಮಾರುಕಟ್ಟೆಯನ್ನು ವಿಸ್ತಾರವಾದ ಬಯಲು ಪ್ರದೇಶಕ್ಕೆ ಸ್ಥಳಾಂತರಿಸಬೇಕು ಎಂಬ ನಿಯಮವಿದೆ. ಆದರೆ ರಾಯಚೂರು ಉಸ್ಮಾನಿಯಾ ಮಾರುಕಟ್ಟೆ ಹಾಗು ಉಸ್ಮಾನಿಯಾ ಮಾರುಕಟ್ಟೆ ಯ ಹಿಂದುಗಡೆ ಇರುವ ರೈತರ ಮಾರುಕಟ್ಟೆಯಲ್ಲಿ ಇಂದು ಮುಂಜಾನೆ ಜನಜಾತ್ರೆ ಸೇರಿತ್ತು. ಇಲ್ಲಿ ಮುಂಜಾನೆಯೇ ಜನರು ತರಕಾರಿ ಮಾರುಕಟ್ಟೆ ಗೆ ಬರುತ್ತಾರೆ.  ಈ ಸಂದರ್ಭದಲ್ಲಿ ವ್ಯಾಪಾರಿಗಳು ಯಾರು ಸಹ ಕನಿಷ್ಠ ಮಾಸ್ಕ್, ಶಾರೀರಕ ಅಂತರ ಕಾಪಾಡಬೇಕೆಂಬ ನಿಯಮವನ್ನು ಗಾಳಿಗೆ ತೂರಿದ್ದರು.

ಗ್ರಾಹಕರು ಸಹ ಗುಂಪು ಗುಂಪಾಗಿ ನಿಂತು ವ್ಯಾಪಾರ ಮಾಡುತ್ತಿರುವುದು ಕಂಡು ಬಂತು. ಇನ್ನೂ ಕಡೆ ರಾಯಚೂರಿನಲ್ಲಿ ಇಂದು ದಾಖಲೆ ಪ್ರಮಾಣದ 503 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಒಟ್ಟು 2686 ಜನರ ಗಂಟಲದ್ರವ ಪರೀಕ್ಷೆ ಮಾಡಿದಾಗ 2183 ಜನರಲ್ಲಿ ನೆಗಟಿವ್ ವರದಿ ಬಂದಿದೆ. ಇಂದು ದಾಖಲಾದ 503 ಜನರಲ್ಲಿ ರಾಯಚೂರು ತಾಲೂಕಿನಲ್ಲಿಯೇ 183 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇಲ್ಲಿಯವರೆಗೂ ಅತೀ ಹೆಚ್ಚು ರಾಯಚೂರು ನಗರದಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದ್ದರೂ ರಾಯಚೂರು ಜನ ಎಚ್ಚೆತ್ತುಕೊಂಡಿಲ್ಲ.

ಸರಕಾರದ ನಿಯಮ ಪಾಲನೆಯನ್ನು ಜನರು ಪಾಲಿಸುತ್ತಿಲ್ಲ, ಜನರಿಗೆ ಕೊರೊನಾ ಭಯವೇ ಇಲ್ಲದಂತೆ ವರ್ತಿಸುತ್ತಿದ್ದಾರೆ. ನಿಯಮ ಪಾಲಿಸದೆ ಇರುವವರಿಗೆ ಅರಿವು ಮೂಡಿಸಿ ನಿಯಮ ಪಾಲಿಸುವಂತೆ ಕ್ರಮ ಕೈಗೊಳ್ಳಬೇಕಾದ ನಗರಸಭೆ ಅಥವಾ ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಿಲ್ಲ, ಇದೇ ಸ್ಥಿತಿ ಮುಂದುವರಿದರೆ ರಾಯಚೂರು ಕೊರೊನಾ ಹಾಟಸ್ಪಾಟ್ ಆಗಿ ಪರಿವರ್ತನೆಗೊಂಡಿದೆ. ಇದನ್ನು ತಡೆಯಬೇಕಾಗಿದೆ.ಈ ಮಧ್ಯೆ ಸೋಂಕು  ರಾಯಚೂರು ಜಿಲ್ಲೆಯಲ್ಲಿಯೂ ದಾಖಲೆ ಪೃಮಾಣದಲ್ಲಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಜಿಲ್ಲೆಯಲ್ಲಿ ಇಲ್ಲಿಯವರೆಗೂ ಒಂದೇ ದಿನದಲ್ಲಿ ಇಷ್ಟು ಪ್ರಮಾಣದಲ್ಲಿ ಸೋಂಕು ದಾಖಲಾಗಿರಲಿಲ್ಲ.

ಸೋಂಕು ಹೆಚ್ಚಾಗುತ್ತಿದ್ದಂತೆ ಜಿಲ್ಲಾಡಳಿತ ಒತ್ತಾಯಪೂರ್ವಕವಾಗಿ ಅಂಗಡಿಗಳನ್ನು ಮುಚ್ಚಿಸಲು ಮುಂದಾಗಿದ್ದಾರೆ. ಇದಕ್ಕೆ ವ್ಯಾಪಾರಿಗಳು ತೀವ್ರ ವಿರೋಧ ವ್ಯಕ್ತಪಡಿಸಿದರು. ರಾಜ್ಯ ಸರಕಾರ ಅಂಗಡಿ ಮುಗ್ಗಟ್ಟುಗಳನ್ನು ಶನಿವಾರ ಹಾಗು ಭಾನುವಾರ ಹೊರತುಪಡಿಸಿ ಉಳಿದ ದಿನಗಳಲ್ಲಿ ಸಂಜೆ 9 ಗಂಟೆಯಿಂದ ಮುಂಜಾನೆ 6 ಗಂಟೆಯವರೆಗೂ ಮಾತ್ರ ಬಂದ್ ಮಾಡಲು ಸೂಚಿಸಿದ್ದಾರೆ. ಆದರೆ, ರಾಯಚೂರು ಜಿಲ್ಲೆಯಲ್ಲಿ 503 ಪ್ರಕರಣಗಳು ವರದಿಯಾಗಿದ್ದು, ನಗರದಲ್ಲಿಯೇ ಈಗ ಕೊರೊನಾ ಹಾಟ್ ಸ್ಪಾಟ್ ಆಗಿದೆ. ಇದರಿಂದಾಗಿ ಇಂದು ಮದ್ಯಾಹ್ನ 12 ಗಂಟೆಯ ವೇಳೆಗೆ ಸದರ ಬಜಾರ ಪೊಲೀಸ್ ಠಾಣೆಯ ಇನ್ಸೆಫೆಕ್ಟರ್ ಮಲ್ಲಮ್ಮ ಚೌಬಿ ನೇತ್ರತ್ವದಲ್ಲಿ ಪೊಲೀಸರು ಅಂಗಡಿಗಳನ್ನು ಬಂದ್ ಮಾಡಿಸಿದರು.

ಇದನ್ನೂ ಓದಿ: ಕೊರೋನಾದಿಂದಾಗಿ ಸಿಪಿಎಂ ನಾಯಕ ಸೀತಾರಾಮ್ ಯೆಚೂರಿ ಮಗ ಸಾವು; ಬಿಜೆಪಿ ಉಪಾಧ್ಯಕ್ಷನಿಂದ ವಿಕೃತಿ!

ಸದರ ಬಜಾರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿಯೇ ಪ್ರಮುಖ ವ್ಯಾಪಾರ ವಹಿವಾಟಿನ ಬಜಾರವಿದ್ದು ಈ ಹಿನ್ನಲೆಯಲ್ಲಿ ಪೊಲೀಸರು ಜನಸಂದಣಿ ಅಧಿಕವಾಗಿರುವ ಹಿನ್ನಲೆಯಲ್ಲಿ ಕಿರಾಣಿ, ಹಣ್ಣಿನ ಅಂಗಡಿ, ಔಷಧಿ ಅಂಗಡಿ ಹೊರತುಪಡಿಸಿ ಉಳಿದ ಎಲ್ಲಾ ಅಂಗಡಿಗಳನ್ನು ಬಂದ್ ಮಾಡಿಸಿದರು. ಯಾವುದೇ ಮುನ್ಸೂಚನೆ ಇಲ್ಲದೆ ಏಕಾಎಕಿಯಾಗಿ ಅಂಗಡಿಗಳನ್ನು ಮುಚ್ಚಿಸುತ್ತಿರುವದರಿಂದ ಸಾಕಷ್ಟು ಆರ್ಥಿಕ ನಷ್ಟ ಅನುಭವಿಸುತ್ತೇವೆ. ಈಗ ವ್ಯಾಪಾರಕ್ಕಾಗಿ ಗ್ರಾಮೀಣ ಪ್ರದೇಶದಿಂದಲೂ ಜನ ಬಂದಿರುತ್ತಾರೆ ಈಗ ಬಂದ್ ಮಾಡಿಸಿದರೆ ಹೇಗೆ ಎಂದು ನೂರಾರು ಜನ ವ್ಯಾಪಾರಿ ಗಳು ಜಿಲ್ಲಾಧಿಕಾರಿ ಕಚೇರಿಯ ಮುಂದೆ ಜಮಾಯಿಸಿ ಜಿಲ್ಲಾಧಿಕಾರಿ ಗಳ ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಜನರ ಜೀವನ ಮುಖ್ಯ ವಾಗಿದ್ದು ಕೊರೊನಾ ನಿಯಮ ಪಾಲನೆ ಮಾಡಲೇಬೇಕಾಗಿದೆ, ವ್ಯಾಪಾರಕ್ಕೆ ಏನೇಲ್ಲ ಕ್ರಮ ಕೈಗೊಳ್ಳಬೇಕೆಂಬುವದನ್ನು ಕುರಿತು ಸ್ಪಷ್ಠತೆ ಇಷ್ಟರಲ್ಲಿಯೇ ಪ್ರಕಟಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು. ಒಟ್ಟಾರೆಯಾಗಿ ರಾಯಚೂರು ಜಿಲ್ಲೆಯಲ್ಲಿ ಕೊರೊನಾ ಸೋಂಕು ವ್ಯಾಪಕವಾಗುವ ಸ್ಪೀಡ್ ಗೆ ಜನತೆ ಬೆಚ್ಚಿ ಬಿದ್ದಿದ್ದಾರೆ.
Published by:MAshok Kumar
First published: