HOME » NEWS » District » QUARREL IN A GARMENTS AT PEENYA RESULTS IN DEATH OF A MECHANIC ANLM SNVS

ಪೀಣ್ಯದ ಗಾರ್ಮೆಂಟ್ಸ್​ನಲ್ಲಿ ಕೆಲಸದ ವಿಚಾರಕ್ಕೆ ಜಗಳ; ಹೃದಯಾಘಾತದಿಂದ ಟೆಕ್ನಿಷಿಯನ್ ಸಾವು

ಸಹೋದ್ಯೋಗಿಯೊಂದಿಗಿನ ಜಗಳದ ಬಿಸಿಯಲ್ಲಿ ಮೆಕ್ಯಾನಿಕ್​ವೊಬ್ಬ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿರುವ ದುರಂತ ಘಟನೆ ಪೀಣ್ಯಾ ಕೈಗಾರಿಕಾ ಪ್ರದೇಶದ ಶಾಹಿ ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಸಂಭವಿಸಿದೆ.

news18-kannada
Updated:October 15, 2020, 4:52 PM IST
ಪೀಣ್ಯದ ಗಾರ್ಮೆಂಟ್ಸ್​ನಲ್ಲಿ ಕೆಲಸದ ವಿಚಾರಕ್ಕೆ ಜಗಳ; ಹೃದಯಾಘಾತದಿಂದ ಟೆಕ್ನಿಷಿಯನ್ ಸಾವು
ಹೃದಯಾಘಾತದಿಂದ ಮೃತಪಟ್ಟ ಮೆಕ್ಯಾನಿಕ್ ರಾಜು
  • Share this:
ನೆಲಮಂಗಲ: ಗಾರ್ಮೆಂಟ್ಸ್ ವೊಂದರಲ್ಲಿ ಕೆಲಸದ ವಿಚಾರವಾಗಿ ಶುರವಾದ ಜಗಳ‌ ಒಬ್ಬನ ಸಾವಿನಲ್ಲಿ ಅಂತ್ಯಗೊಂಡ ಘಟನೆ ಬೆಂಗಳೂರಿನ ಪೀಣ್ಯಾ ಕೈಗಾರಿಕಾ ಪ್ರದೇಶದಲ್ಲಿ ಸಂಭವಿಸಿರುವುದು ಬೆಳಕಿಗೆ ಬಂದಿದೆ. ಶಾಹಿ ಗಾರ್ಮೆಂಟ್ಸ್​ನ ಸೂಪರ್​ವೈಸರ್ ಮೆಕ್ಯಾನಿಕ್ ಮತ್ತು ಪ್ರೊಡಕ್ಷನ್ ಮ್ಯಾನೇಜರ್ ನಡುವಿನ ಜಗಳದಲ್ಲಿ 42 ವರ್ಷದ ಮೆಕ್ಯಾನಿಕ್ ರಾಜು ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ.

ಮೃತ ರಾಜು ಹಾಗೂ ಆತನ ಪತ್ನಿ ಪ್ರಮಿಳಾ ಮೂಲತಃ ಮಂಗಳೂರಿನವರಾಗಿದ್ದು, ಇಬ್ಬರು ಸಹ ಕಳೆದ 13 ವರ್ಷಗಳಿಂದ ಪೀಣ್ಯದಲ್ಲಿರುವ ಶಾಹಿ ಗಾರ್ಮೆಂಟ್ಸ್​ನ ಯುನಿಟ್ 20ರಲ್ಲಿ ಕೆಲಸ ಮಾಡಿತ್ತಿದ್ದರು. ಪ್ರತಿದಿನ ಸೂಪರ್ವೈಸರ್ ಪ್ರೊಡಕ್ಷನ್ ಮ್ಯಾನೇಜರ್ ಅವರು ಮೆಕ್ಯಾನಿಕ್ ರಾಜು ಮೇಲೆ ಕ್ಷುಲ್ಲಕ ವಿಚಾರಗಳಿಗೆ ಜಗಳ ತೆಗೆದು ಕಿರುಕುಳ ನೀಡುತ್ತಿದ್ದರು ಎನ್ನಲಾಗುತ್ತಿದೆ. ನಿನ್ನೆ ಬುಧವಾರ ಸಹ ವಾಡಿಕೆಯಂತೆ ಜಗಳ‌ ಮುಂದುವರೆದಿದೆ.

ಇದನ್ನೂ ಓದಿ: ಚಿನ್ನದ ಮೇಲೆ ಬಡ್ಡಿ; ಮಂಡ್ಯದ ಬ್ಯಾಂಕ್ ಉದ್ಯೋಗಿ ಆಮಿಷಕ್ಕೆ ಕೋಟಿಗಟ್ಟಲೆ ಚಿನ್ನ ಕಳೆದುಕೊಂಡ ನಾರಿಯರು

ಜಗಳದಲ್ಲಿ ಸೂಪರ್ವೈಸರ್ ದಿನೇಶ್ ಹಾಗೂ ರಾಜು ನಡುವೆ ಜಟಾಪಟಿ ಉಂಟಾಗಿದೆ. ಹೃದಯಾಘಾತದಿಂದ ರಾಜು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಮೃತನ ಪತ್ನಿ ಪ್ರಮಿಳಾ ಆರೋಪಿಸಿದ್ದಾರೆ. ಹೃದಯಾಘಾತದ ನಂತರ ರಾಜುವನ್ನು ಆಂಬುಲೆನ್ಸ್‌ ಮೂಲಕ ಇಎಸ್‌ಐ ಆಸ್ಪತ್ರೆಗೆ ರವಾನಿಸಲಾಯಿತು. ಆಸ್ಪತ್ರೆಯಲ್ಲಿ ವೈದ್ಯರು ಸಾವನ್ನಪಿರುವುದನ್ನ ದೃಡಪಡಿಸಿದ್ದು, ಮೃತ ದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೀಣ್ಯ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

ವರದಿ: ಅಭಿಷೇಕ್ ಚಿಕ್ಕಮಾರನಹಳ್ಳಿ
Published by: Vijayasarthy SN
First published: October 15, 2020, 4:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading