ದರೋಡೆಕೋರರನ್ನು ಬಂಧಿಸಿದ ಪೊಲೀಸರಿಗೆ ಕೊರೋನಾ ಶಾಕ್‌; ವಿಜಯಪುರದ 37 ಜನ ಪೊಲೀಸರು ಕ್ವಾರಂಟೈನ್

ವಿಜಯಪುರದಲ್ಲಿ ಜೂ. 17 ರಂದು ಬಂಧಿಸಿದ್ದ ಇಬ್ಬರು ದರೋಡೆಕೋರರಲ್ಲಿ P-8307(36 ವರ್ಷ) ಮತ್ತು P-8308(27 ವರ್ಷ)  ಕೊರೋನಾ ಪಾಸಿಟಿವ್ ಇರುವುದು ಇಂದು ದೃಢಪಟ್ಟಿದೆ. 

ವಿಜಯಪುರ ಜಿಲ್ಲಾ ಆಸ್ಪತ್ರೆ.

ವಿಜಯಪುರ ಜಿಲ್ಲಾ ಆಸ್ಪತ್ರೆ.

  • Share this:
ವಿಜಯಪುರ; ದರೋಡೆಕೋರರನ್ನು ಬಂಧಿಸಿದ ಸಂತಸದಲ್ಲಿದ್ದ ವಿಜಯಪುರ ಜಿಲ್ಲಾ ಪೊಲೀಸರಿಗೆ ಇದೀಗ ಕೊರೋನಾ ಶಾಕ್ ಎದುರಾಗಿದೆ. ಅಷ್ಟೇ ಅಲ್ಲ, ಜೈಲು ಸಿಬ್ಬಂದಿಗೂ ದಿಗಿಲು ತಂದಿದ್ದು, ಆರೋಪಿಗಳನ್ನು ಬಂಧಿಸಿದ್ದ ಪೊಲೀಸರೂ ಸೇರಿ ಒಟ್ಟು 37 ಜನ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ

ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಆಲಮೇಲ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಜೂ. 12 ರಂದು ನಡೆದ ದಂಪತಿಯ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಪುರ ಜಿಲ್ಲೆಯ ಇಂಡಿ ಉಪವಿಭಾಗದ ಪೊಲೀಸರು ಜೂ. 17 ರಂದು ಮೂರು ಜನ ಆರೋಪಿಗಳನ್ನು ಬಂಧಿಸಿದ್ದರು.  ಅಲ್ಲದೇ, ಅವರ ಬಳಿಯಿದ್ದ ರೂ. 8.35 ಲಕ್ಷ ನಗದು ವಶಪಡಿಸಿಕೊಂಡಿದ್ದರು.

ನಂತರ ಅದೇ ದಿನ ರಾತ್ರಿ ಆರೋಪಿಗಳನ್ನು ವಿಜಯಪುರ ಜಿಲ್ಲೆಯ ಸಿಂದಗಿ ನ್ಯಾಯಾಧೀಶರ ನಿವಾಸಕ್ಕೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಪಡೆಯಲಾಗಿತ್ತು. ಆದರೆ, ಜೂ. 17 ರಂದು ಬಂಧಿಸಿದ್ದ ಇಬ್ಬರು ದರೋಡೆಕೋರರಲ್ಲಿ P-8307(36 ವರ್ಷ) ಮತ್ತು P-8308(27 ವರ್ಷ)  ಕೊರೋನಾ ಪಾಸಿಟಿವ್ ಇರುವುದು ಇಂದು ದೃಢಪಟ್ಟಿದೆ.

ಈ ಸುದ್ದಿ ಪೊಲೀಸರಷ್ಟೇ ಅಲ್ಲ, ಇವರನ್ನು ಇಡಲಾಗಿದ್ದ ವಿಜಯಪುರ ಕೇಂದ್ರ ಕಾರಾಗೃಹದ ಸಿಬ್ಬಂದಿಗೂ ಬೆಚ್ಚಿ ಬೀಲುವಂತೆ ಮಾಡಿದೆ. ಈ ಕುರಿತು ಮಾಹಿತಿ ನೀಡಿರುವ ವಿಜಯಪುರ ಎಸ್‌ಪಿ ಅನುಪಮ ಅಗ್ರವಾಲ, "ನ್ಯಾಯಾಲಯದ ಆದೇಶದಂತೆ ಈ ಆರೋಪಿಗಳನ್ನು ವಿಜಯಪುರ ಕೇಂದ್ರ ಕಾರಾಗೃಹದಲ್ಲಿ ಪ್ರತ್ಯೇಕವಾಗಿ ಇಡಲಾಗಿತ್ತು.

ಇದನ್ನೂ ಓದಿ ; Coronavirus Pandemic: ಕೊರೋನಾ ಭೀತಿ; SSLC ಪರೀಕ್ಷೆಯನ್ನೇ ರದ್ದುಗೊಳಿಸಿ ಆದೇಶಿಸಿದ ಆಂಧ್ರಪ್ರದೇಶ ಸರ್ಕಾರ

ಇಂದು ಇವರಲ್ಲಿ ಕೊರೋನಾ ಪಾಸಿಟಿವ್ ದೃಢಪಟ್ಟ ಹಿನ್ನೆಲೆಯಲ್ಲಿ ಅವರನ್ನು ವಿಜಯಪುರ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.  ಅಲ್ಲದೇ, ಈ ಆರೋಪಿಗಳ ಪ್ರಾಥಮಿಕ ಸಂಪರ್ಕಕ್ಕೆ ಬಂದ ಇಬ್ಬರು ಪಿಎಸ್‌ಐ, 37 ಜನ ಪೊಲೀಸ್ ಸಿಬ್ಬಂದಿಯ ಗಂಟಲು ದ್ರವದ ಮಾದರಿ ಪರೀಕ್ಷೆಗೆ ರವಾನೆ ಕಳುಹಿಸಿ ಕೊಡಲಾಗಿದೆ ಎಂದು ತಿಳಿಸಿದ್ದಾರೆ.
First published: