ಮನೆ ಬಾಗಿಲಿಗೆ ಕೊರೋನಾ ಜಾಗೃತಿ; ಜನಮೆಚ್ಚುಗೆಗೆ ಪಾತ್ರವಾಗಿದೆ ಪುತ್ತೂರು ನಗರ ಸಭೆಯ ಜನಸಂಪರ್ಕ ಅಭಿಯಾನ

ಪುತ್ತೂರು ನಗರಸಭೆಯ ಅಧಿಕಾರಿ ವರ್ಗ ಹಾಗೂ ಜನಪ್ರತಿನಿಧಿಗಳ ತಂಡ ಮನೆ ಬಾಗಿಲಿಗೇ ತೆರಳಿ ಜನರಿಗೆ ಬೇಕಾದ ಅನುಕೂಲಕರ ವಾತಾವರವನ್ನು ಸೃಷ್ಟಿ ಮಾಡಿದೆ. ನಗರಸಭೆಯ ಈ ಅಭಿಯಾನಕ್ಕೆ ನಗರಸಭೆ ವ್ಯಾಪ್ತಿಯ ಜನತೆಯಿಂದ ಉತ್ತಮ ಸ್ಪಂದನೆಯೂ ದೊರೆತಿದೆ.

ಮನೆ ಮನೆಗೆ ತೆರಳಿ ಜಾಗೃತಿ ಅಭಿಯಾನ ಮೂಡಿಸುತ್ತಿರುವ ನಗರಸಭೆ ಸಿಬ್ಬಂದಿ.

ಮನೆ ಮನೆಗೆ ತೆರಳಿ ಜಾಗೃತಿ ಅಭಿಯಾನ ಮೂಡಿಸುತ್ತಿರುವ ನಗರಸಭೆ ಸಿಬ್ಬಂದಿ.

  • Share this:
ಪುತ್ತೂರು: ಕೊರೋನಾ ಕುರಿತು ಜನರಿಗೆ ಜಾಗೃತಿ ಮೂಡಿಸುವುಕ್ಕಾಗಿ ಸರಕಾರಗಳು ಹಲವು ರೀತಿಯ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಪತ್ರಿಕೆ-ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕವೂ ಕೊರೋನಾ ಬಗ್ಗೆ ಉಪಯುಕ್ತ ಮಾಹಿತಿಯನ್ನು ನೀಡುವ ಕೆಲಸಗಳು ನಡೆಯುತ್ತಿದೆ. ಆದರೆ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ನಗರಸಭೆ ಮಾತ್ರ ಜನರ ಮನೆ ಬಾಗಿಲಿಗೇ ತೆರಳಿ ಕೊರೋನಾ ಜಾಗೃತಿ ಅಭಿಯಾನವನ್ನು ಆರಂಭಿಸಿದೆ. ನಗರಸಭೆ ವ್ಯಾಪ್ತಿಯ 15 ಸಾವಿರ ಮನೆಗಳನ್ನು ಸಂಪರ್ಕಿಸಿರುವ ನಗರಸಭೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕೊರೋನಾದಿಂದ ಭಯಭೀತರಾಗಿರುವ ಜನರಿಗೆ ಧೈರ್ಯವನ್ನೂ ತುಂಬುತ್ತಿದ್ದಾರೆ.

ಕೊರೋನಾ ತಡೆ ಹಾಗೂ ನಿಯಂತ್ರಣ ಕುರಿತಂತೆ ದೇಶದಲ್ಲಿ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪತ್ರಿಕೆ, ಮಾಧ್ಯಮ, ಸಾಮಾಜಿಕ ಜಾಲತಾಣ ಹೀಗೆ ಹಲವು ಮಾಧ್ಯಮಗಳ ಮೂಲಕ ಜನರಿಗೆ ಕೊರೋನಾ ಕುರಿತು ಜಾಗೃತಿ ಮೂಡಿಸುವ ಕೆಲಸಗಳು ನಿರಂತರವಾಗಿ ನಡೆಯುತ್ತಿದೆ. ಆದರೆ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ನಗರಸಭೆ ಮಾತ್ರ ಕೊಂಚ ವಿಭಿನ್ನ ರೀತಿಯಲ್ಲಿ ಕೊರೋನಾ ಕುರಿತ ಮಾಹಿತಿಯನ್ನು ನೀಡುವ ಮೂಲಕ ಪ್ರಚಾರದಲ್ಲಿದೆ.

ಹೌದು, ಪುತ್ತೂರು ನಗರಸಭಾ ವ್ಯಾಪ್ತಿಯ ಸುಮಾರು 15,300 ಮನೆಗಳಿಗೆ ಭೇಟಿ ನೀಡಿ ಕೊರೋನಾ ಬಗ್ಗೆ ಮಾಹಿತಿ ನೀಡುವ ಕೆಲಸವನ್ನು ಮಾಡಿದೆ. ಪ್ರತೀ ಮನೆ ಬಾಗಿಲಿಗೇ ತೆರಳಿ ಕೊರೋನಾ ಕುರಿತು ಭಯ ನಿವಾರಿಸುವ, ಸರಿಯಾದ ಮಾಹಿತಿ ನೀಡುವ ಕೆಲಸವನ್ನು ಮಾಡಿದೆ. ನಗರಸಭೆಯ ಪ್ರತಿ ವಾರ್ಡ್ ನ ಸದಸ್ಯರ ನೇತೃತ್ವದಲ್ಲಿ ಪ್ರತಿ ಮನೆಯನ್ನು ಸಂಪರ್ಕಿಸುವ ಕಾರ್ಯ ಈ ಅಭಿಯಾನದ ಮೂಲಕ ನಡೆದಿದೆ. ಕೊರೋನಾ ಸೋಂಕಿನ ಪ್ರಕರಣ ಜಾಸ್ತಿಯಾಗುತ್ತಿದ್ದಂತೆ ಜನರಲ್ಲಿ ಸಹಜವಾಗಿಯೂ ಭಯದ ವಾತಾವರಣ ನಿರ್ಮಾಣಗೊಂಡಿದೆ. ಈ ಸಂದರ್ಭದಲ್ಲಿ ಜನರ ಮನೆ ಬಾಗಿಲಿಗೇ ತೆರಳಿ ಅವರಿಗೆ ಧೈರ್ಯ ತುಂಬುವ ಹಾಗೂ ಜನರ ಅವಶ್ಯಕತೆಗಳನ್ನು ಪೂರೈಸುವ ಕಾರ್ಯ ಈ ಅಭಿಯಾನದ ಮೂಲಕ ನಡೆದಿದೆ. ಅಲ್ಲದೆ ನಗರಸಭಾ ವ್ಯಾಪ್ತಿಯಲ್ಲಿ ಇರುವ ಕೊರೋನಾ ಸೋಂಕಿತರ ಮನೆಗೂ ತೆರಳಿ ಅಲ್ಲಿನ ವ್ಯವಸ್ಥೆಯನ್ನು ಖುದ್ಧು ಪರಿಶೀಲಿಸುವ ವ್ಯವಸ್ಥೆಯೂ ಈ ಅಭಿಯಾನದ ಮೂಲಕ ನಡೆದಿದೆ. ಪುತ್ತೂರು ಶಾಸಕರ ವಾರ್ ರೂಂ ಮೂಲಕ ಕೊರೋನಾ ಸೋಂಕಿತರಿಗೆ ಔಷಧಿಗಳ ಕಿಟ್ ವಿತರಣೆಯನ್ನೂ ಜಾಗೃತಿ ಅಭಿಯಾನದ ಮೂಲಕ ಮಾಡಲಾಗಿದೆ ಎನ್ನುತ್ತಾರೆ ಪುತ್ತೂರು ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್.

ಇದನ್ನು ಓದಿ: freedom fighter Doreswamy RIP : ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಇನ್ನಿಲ್ಲ

ನಗರಸಭಾ ವ್ಯಾಪ್ತಿಯ ಪ್ರತೀ ಮನೆಗೂ ಆಶಾ ಕಾರ್ಯಕರ್ತೆ, ವಾರ್ಡ್ ನ ಸದಸ್ಯ, ಹೋಂ ಗಾರ್ಡ್ ಗಳನ್ನು ಒಳಗೊಂಡ ತಂಡ ಭೇಟಿ ನೀಡುತ್ತದೆ. ಕೊರೋನಾ ವೈರಸ್​ ನಿಂದ ಭಯಭೀತರಾಗಿರುವ ಕುಟುಂಬಗಳ ಸದಸ್ಯರಿಗೆ ಆಶ್ವಾಸನೆ ನೀಡುವ ಕೆಲಸವನ್ನೂ ಈ ತಂಡ ಮಾಡುತ್ತಿದೆ. ಕೊರೋನಾ ಸಂದರ್ಭದಲ್ಲಿ ಪ್ರತೀ ಅವಶ್ಯಕತೆಗಾಗಿ ಅಧಿಕಾರಿಗಳನ್ನು ಹಾಗೂ ಜನಪ್ರತಿನಿಧಿಗಳನ್ನು ಹುಡುಕಿಕೊಂಡು ಹೋಗಬೇಕಾದ ಪರಿಸ್ಥಿತಿಯಿರುವಾಗ ಪುತ್ತೂರು ನಗರಸಭೆಯ ಅಧಿಕಾರಿ ವರ್ಗ ಹಾಗೂ ಜನಪ್ರತಿನಿಧಿಗಳ ತಂಡ ಮನೆ ಬಾಗಿಲಿಗೇ ತೆರಳಿ ಜನರಿಗೆ ಬೇಕಾದ ಅನುಕೂಲಕರ ವಾತಾವರವನ್ನು ಸೃಷ್ಟಿ ಮಾಡಿದೆ. ನಗರಸಭೆಯ ಈ ಅಭಿಯಾನಕ್ಕೆ ನಗರಸಭೆ ವ್ಯಾಪ್ತಿಯ ಜನತೆಯಿಂದ ಉತ್ತಮ ಸ್ಪಂದನೆಯೂ ದೊರೆತಿದ್ದು, ರಾಜ್ಯದಲ್ಲಿ ಇಂಥ ಪ್ರಯೋಗವನ್ನು ಮಾಡಿದ ಮೊದಲ ಸ್ಥಳೀಯ ಸಂಸ್ಥೆ ಪುತ್ತೂರು ನಗರಸಭೆಯಾಗಿದೆ.

ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣವನ್ನು ಬಳಸಿಕೊಂಡು ಜನರಿಗೆ ಮಾರಕ ಕೊರೋನಾ ಸೋಂಕಿನ ಕುರಿತ ಮಾಹಿತಿ ನೀಡುವುದು ಎಷ್ಟು ಪರಿಣಾಮಕಾರಿ ಎನ್ನುವ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿರುವ ಈ ಸಮಯದಲ್ಲಿ, ಪುತ್ತೂರು ನಗರಸಭೆ ಯಾವುದೇ ಪ್ರಶ್ನೆಗಳಿಗೆ ಅವಕಾಶ ನೀಡದಂತೆ ಅತ್ಯುತ್ತಮವಾಗಿ ಈ ಕೆಲಸ ನಿರ್ವಹಿಸಿದೆ.
Published by:HR Ramesh
First published: