ನೇತ್ರಾವತಿ ನದಿ ಪರಂಬಕೋಕಿನಲ್ಲಿ ಅಕ್ರಮ ಕಟ್ಟಡ ನಿರ್ಮಾಣ : ಸ್ಥಳದ ಸರ್ವೆಗೆ ಪುತ್ತೂರು ತಹಶೀಲ್ದಾರ್ ಸೂಚನೆ

ಕಟ್ಟಡದ ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲೇ ಅಂದಿನ ಸಹಾಯಕ ಆಯುಕ್ತರಾಗಿದ್ದ, ಹಾಗೂ ಇದೀಗ ದಕ್ಷಿಣಕನ್ನಡ ಜಿಲ್ಲಾಧಿಕಾರಿಯಾಗಿರುವ ಡಾ. ರಾಜೇಂದ್ರ ಕೆ.ವಿ ನದಿ ಪರಂಬೋಕು ಅತಿಕ್ರಮಿಸಿ ಕಟ್ಟಿದ್ದ ಕಟ್ಟಡವನ್ನು ತೆರವುಗೊಳಿಸುವಂತೆ ಸೂಚಿಸಿದ್ದರು

news18-kannada
Updated:August 14, 2020, 3:22 PM IST
ನೇತ್ರಾವತಿ ನದಿ ಪರಂಬಕೋಕಿನಲ್ಲಿ ಅಕ್ರಮ ಕಟ್ಟಡ ನಿರ್ಮಾಣ : ಸ್ಥಳದ ಸರ್ವೆಗೆ ಪುತ್ತೂರು ತಹಶೀಲ್ದಾರ್ ಸೂಚನೆ
ಒತ್ತುವರಿ ಮಾಡಿಕೊಂಡು ಕಟ್ಟಡ ಕಟ್ಟಿರುವುದು
  • Share this:
ಮಂಗಳೂರು(ಆಗಸ್ಟ್​.14): ಯಾವುದೋ ಒತ್ತಡಕ್ಕೆ ಮಣಿದು ನದಿಯ ಪಕ್ಕ ಒತ್ತುವರಿ ಮಾಡಿ ಅಕ್ರಮವಾಗಿ ಕಟ್ಟಡ ಕಟ್ಟಿದ್ದ ವ್ಯಕ್ತಿಯ ವಿರುದ್ಧ ಇದೀಗ ಮತ್ತೆ ಸಾರ್ವಜನಿಕ ಆಕ್ರೋಶ ಕೇಳಿ ಬರಲಾರಂಭಿಸಿದೆ. ದಕ್ಷಿಣಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿಯನ್ನು ಕಬಳಿಸಿ ಕಟ್ಟಿರುವ ಕಟ್ಟಡದ ವಿರುದ್ಧ ನ್ಯೂಸ್ 18 ನಿರಂತರವಾಗಿ  ವರದಿ ಮಾಡಿತ್ತು. ಈ ನಡುವೆ ಪುತ್ತೂರು ತಹಶೀಲ್ದಾರ್ ಕಟ್ಟಡದ ಎಲ್ಲಾ ಸ್ಥಳವನ್ನೂ ಸರ್ವೇ ನಡೆಸಬೇಕು ಎಂದು ತಾಲೂಕು ಸರ್ವೇ ಕಛೇರಿಗೆ ಪತ್ರ ಬರೆದಿದ್ದಾರೆ.

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ಕೂಟೇಲು ಸೇತುವೆ ಬಳಿ ನಿರ್ಮಾಣಗೊಂಡಿರುವ ಕಟ್ಟಡ ಪಕ್ಕದಲ್ಲೇ ಹರಿಯುತ್ತಿರುವ ನೇತ್ರಾವತಿ ನದಿಯನ್ನು ಕಬಳಿಸಿದೆ ಎನ್ನುವ ಆರೋಪ ಸಾರ್ವಜನಿಕರಿಂದ ನಿರಂತರವಾಗಿ ಕೇಳಿ ಬಂದಿತ್ತು. ಈ ಆರೋಪವನ್ನು ಬೆನ್ನಟ್ಟಿದ್ದ ನ್ಯೂಸ್ 18 ಕನ್ನಡ ಸಾರ್ವಜನಿಕರ ಆರೋಪಕ್ಕೆ ಧ್ವನಿಯಾಗಿ ವರದಿ ಮಾಡಿತ್ತು. ನಿರಂತರ ನಾಲ್ಕು ವರ್ಷಗಳ ಕಾಲ ಈ ಕಟ್ಟಡದ ನಿರ್ಮಾಣಕ್ಕೆ ಸಂಬಂಧಿಸಿದಂತೆ ವರದಿ ಮಾಡಿದ್ದು, ಸ್ಥಳೀಯ ಉಪ್ಪಿನಂಗಡಿ ಗ್ರಾಮ ಪಂಚಾಯತ್, ಪುತ್ತೂರು ಸಹಾಯಕ ಆಯುಕ್ತರು, ಪುತ್ತೂರು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ಸೇರಿದಂತೆ ಹಲವು ಅಧಿಕಾರಿಗಳ ಗಮನಕ್ಕೂ ಈ ವಿಚಾರವನ್ನು ತಂದಿದೆ.

ಆದರೆ ನಿರಂತರ ರಾಜಕೀಯ ಒತ್ತಡದ ಕಾರಣದಿಂದಾಗಿ ಈ ಕಟ್ಟಡದ ವಿರುದ್ಧ ಯಾವುದೇ ಕಾರ್ಯಾಚರಣೆಗೆ ಅಧಿಕಾರಿಗಳು ಈವರೆಗೂ ಮುಂದಾಗಿಲ್ಲ. ಆದರೆ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಇತ್ತೀಚೆಗೆ ತನ್ನ ವ್ಯಾಪ್ತಿಯಲ್ಲಿ ಬರುವ ಅಕ್ರಮ ಗೂಡಂಗಡಿಗಳನ್ನು ತೆರವುಗೊಳಿಸಿದ ಬಳಿಕ ಈ ಕಟ್ಟಡದ ವಿಚಾರ ಮತ್ತೆ ಬೆಳಕಿಗೆ ಬಂದಿದೆ.

ಇದನ್ನೂ ಓದಿ : ಸಾರ್ವಜನಿಕರ ಆಸ್ತಿ ಹಾನಿ ಮಾಡಿದವರಿಂದಲೇ ನಷ್ಟ ವಸೂಲಿ ಮಾಡಬೇಕು; ಸಚಿವ ಜಗದೀಶ್ ಶೆಟ್ಟರ್

ನೇತ್ರಾವತಿ ನದಿ ಪರಂಬೋಕು ಜಾಗವನ್ನು ಒತ್ತುವರಿ ಮಾಡಿ ಕಟ್ಟಿದ ಕಟ್ಟಡವನ್ನು ತೆರವು ಮಾಡಬೇಕು ಎನ್ನುವ ಒತ್ತಡ ಸಾರ್ವಜನಿಕ ವಲಯದಿಂದ ಮತ್ತೆ ಕೇಳಿ ಬರಲಾರಂಭಿಸಿದೆ. ಈ ಹಿನ್ನಲೆಯಲ್ಲಿ ಪುತ್ತೂರು ತಹಶೀಲ್ದಾರ್ ಕಟ್ಟಡಕ್ಕೆ ಸಂಬಂಧಿಸಿದಂತೆ ಸ್ಥಳದ ಸರ್ವೇ ನಡೆಸುವಂತೆ ತಾಲೂಕು ಸರ್ವೇ ಕಛೇರಿಗೆ ಪತ್ರ ಬರೆದಿದ್ದಾರೆ.

ನದಿ ಪಾತ್ರದಲ್ಲಿ ಇದ್ದ ಶೇ.50 ರಷ್ಟು ಪಟ್ಟಾ ಜಮೀನಿನಲ್ಲಿ ಕಟ್ಟಡ ಕಟ್ಟಲು ಆರಂಭಿಸಿದ್ದ ಕಟ್ಟಡ ಮಾಲಿಕ ಬಳಿಕ ಪಕ್ಕದಲ್ಲೇ ಹರಿಯುವ ನೇತ್ರಾವತಿ ನದಿಯ ಪರಂಬೋಕು ಜಾಗವನ್ನೂ ಒತ್ತುವರಿ ಮಾಡಿದ್ದಾನೆ.
ಕಟ್ಟಡದ ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲೇ ಅಂದಿನ ಸಹಾಯಕ ಆಯುಕ್ತರಾಗಿದ್ದ, ಹಾಗೂ ಇದೀಗ ದಕ್ಷಿಣಕನ್ನಡ ಜಿಲ್ಲಾಧಿಕಾರಿಯಾಗಿರುವ ಡಾ. ರಾಜೇಂದ್ರ ಕೆ.ವಿ ನದಿ ಪರಂಬೋಕು ಅತಿಕ್ರಮಿಸಿ ಕಟ್ಟಿದ್ದ ಕಟ್ಟಡವನ್ನು ತೆರವುಗೊಳಿಸುವಂತೆ ಸೂಚಿಸಿದ್ದರು. ಆದರೆ ಆ ಬಳಿಕ ಬಂದ ಅಧಿಕಾರಿಗಳು ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದ ಕಾರಣ ಕಟ್ಟಡ ಮತ್ತೆ ಬೃಹದಾಕಾರವಾಗಿ ನಿರ್ಮಾಣಗೊಂಡಿದೆ.
Published by: G Hareeshkumar
First published: August 14, 2020, 3:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading