ತಾಯಿಯನ್ನು ನೋಡಿಕೊಳ್ಳದೆ, ಮಾನಸಿಕ ಕಿರುಕುಳ ; ಮಗನ ಹೆಸರಿಗಿದ್ದ ಆಸ್ತಿ ವಾಪಸ್​ ಪಡೆಯಲು ಎಸಿ ಆದೇಶ

ಮಗ ಹುಸೇನ್ ಬಾಷಾ ಮಾತ್ರ ತಾಯಿ ಖತೇಜ ಬೇಗಂಳನ್ನು ಸರಿಯಾಗಿ ನೋಡಿಕೊಳ್ಳದೆ, ಮಾನಸಿಕ ಕಿರುಕುಳ ನೀಡುತ್ತಿದ್ದ ಎಂದು ಖತೇಜ ಬೇಗಂ ಮಗನ ವಿರುದ್ಧ ಕೇಸ್ ದಾಖಲಿಸಿದ್ದರು

ರಾಯಚೂರು ಎಸಿ ಸಂತೋಷ್ ಕಾಮಗೌಡ

ರಾಯಚೂರು ಎಸಿ ಸಂತೋಷ್ ಕಾಮಗೌಡ

  • Share this:
ರಾಯಚೂರು(ಆಗಸ್ಟ್​.10): ಮಕ್ಕಳ ಮೇಲೆ ಪ್ರೀತಿ, ವೃದ್ಯಾಪ್ಯದಲ್ಲಿ ಮಕ್ಕಳು ತಮ್ಮನ್ನು ನೋಡಿಕೊಳ್ಳುತ್ತಾರೆ ಎಂಬ ನಂಬಿಕೆಯಿಂದ ಆಸ್ತಿಯ ಮೇಲಿನ ಆಸೆ ಬಿಟ್ಟು ಅವರಿಗೆ ಆಸ್ತಿ ವರ್ಗಾವಣೆ ಮಾಡಿಸುತ್ತಾರೆ, ಆದರೆ ಮಕ್ಕಳೆ ತಾಯಿಯನ್ನು ನೋಡಿಕೊಳ್ಳದಿದ್ದರೆ ಮತ್ತೆ ಆಸ್ತಿಯನ್ನು ಪಡೆಯಬಹುದಾಗಿದೆ, ಇಂಥ ಒಂದು ತೀರ್ಪನ್ನು ರಾಯಚೂರು ಸಹಾಯಕ ಆಯುಕ್ತರು ಆದೇಶಿಸಿದ್ದಾರೆ.

ರಾಯಚೂರು ಜಿಲ್ಲೆ ಸಿರವಾರ ತಾಲೂಕಿನ ಕವಿತಾಳದ ಖತೇಜ ಬೇಗಂ ಎನ್ನುವ ಮಹಿಳೆ ತನ್ನ ಮಗನಾದ ಹುಸೇನ್ ಬಾಷ್ ಎಂಬಾತನಿಗೆ ತನ್ನ ಆಸ್ತಿಯನ್ನ ವರ್ಗಾವಣೆ‌ 2015 ರಲ್ಲಿ ಮಾಡಿರುತ್ತಾಳ. ಹೆತ್ತುಹೊತ್ತು, ಸಾಕಿಸಲುಹಿದ ತಾಯಿ ಮಗನ ಊಟೋಪಚಾರಕ್ಕಾಗಿ ತನ್ನ 3 ಎಕರೆ 28 ಗುಂಟೆ ಆಸ್ತಿಯನ್ನೂ ಮಗನ ಹೆಸರಿಗೆ ಮಾಡಿದ್ದಾಳೆ. ಆದರೆ,‌ ಮಗ ಹುಸೇನ್ ಬಾಷಾ ಮಾತ್ರ ತಾಯಿ ಖತೇಜ ಬೇಗಂಳನ್ನು ಸರಿಯಾಗಿ ನೋಡಿಕೊಳ್ಳದೆ, ಮಾನಸಿಕ ಕಿರುಕುಳ ನೀಡುತ್ತಿದ್ದ ಎಂದು ಖತೇಜ ಬೇಗಂ ಮಗನ ವಿರುದ್ಧ ಕೇಸ್ ದಾಖಲಿಸಿದ್ದರು.

ಅರ್ಜಿಯ ವಿಚಾರಣೆ ಆಗಸ್ಟ್ 4 ರಂದು ನಡೆಸಿದ ರಾಯಚೂರು ಉಪ ವಿಭಾಗಾಧಿಕಾರಿ ಸಂತೋಷ್ ಕಾಮಗೌಡ ಅವರು'ಪಾಲಕರ ಪೋಷಣೆ, ಸಂರಕ್ಷಣೆ, ಹಿರಿಯ ನಾಗರಿಕರ ರಕ್ಷಣಾ ಕಾಯ್ದೆ 2007 ರ ಅಡಿಯಲ್ಲಿ ಮಗನ ಹೆಸರಿನ ಆಸ್ತಿ ನೋಂದಣಿ ರದ್ದುಗೊಳಿಸಿ ತಾಯಿ ಖತೇಜ ಬೇಗಂ ಅವರಿಗೆ ಆಗಸ್ಟ್ 5 ರಂದು ಖಾತಾ ವರ್ಗಾವಣೆ ಮಾಡುವಂತೆ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ : ಮುಂಗಾರು ಮಳೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಪಾರ ಹಾನಿ ; ಸಂತ್ರಸ್ಥ ಕುಟುಂಬಗಳಿಗೆ ಪರಿಹಾರ ವ್ಯವಸ್ಥೆ

ದಿನನಿತ್ಯ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಾನೆ ಎಂದು ತಾಯಿಯ ಆರೋಪವಾಗಿದೆ. ಹೀಗಾಗಿ ಮಗನ ವಿರುದ್ದ ರಾಯಚೂರಿನ ಆಗಿನ ಎಸ್ ಪಿ ಡಾ. ವೇದಮೂರ್ತಿ ಅವರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ರಾಯಚೂರು ಪಾಲಕರ ಪೋಷಣೆ,ಸಂರಕ್ಷಣೆ, ಹಿರಿಯ ನಾಗರೀಕರ ರಕ್ಷಣಾ ನ್ಯಾಯ ಮಂಡಳಿ ಹಾಗೂ ಉಪ ವಿಭಾಗಾಧಿಕಾರಿ ನ್ಯಾಯಾಲಯ ಕೋರ್ಟ್ ನಲ್ಲಿ ಪ್ರಕರಣ ಇತ್ಯರ್ಥ ಆಗಿದ್ದು, ಪಾಲಕ ಪೋಷಕರನ್ನು ಎಲ್ಲಾ ಪಡೆದು ಕೊನೆಗೆ ಅವರನ್ನೇ ನಿರ್ಲಕ್ಷಿಸುವ ಮಕ್ಕಳಿಗೆ ಎ.ಸಿ ಸಂತೋಷ್ ಕಾಮಗೌಡ ಅವರ ಆದೇಶ ಎಚ್ಚರಿಕೆಯಂತಿದೆ.

ತಂದೆ ಹಾಗು ತಾಯಿಗಳಿಗೆ ಮಕ್ಕಳು ಎಂದರೆ ಪ್ರೀತಿ, ಪ್ರೇಮ, ಮಕ್ಕಳಿಗೂ ತಂದೆಗಿಂತ ತಾಯಿಯ ಮೇಲೆ ಪ್ರೀತಿ ಹೆಚ್ಚು ಆದರೆ ಪ್ರೌಢಾವಸ್ಥೆಗೆ ಬಂದ ಮಕ್ಕಳು ಮಾನವಿಯತೆಯನ್ನು ಮರೆತು ಅವರನ್ನು ದೂರ ಮಾಡುತ್ತಿದ್ದಾರೆ. ಚಿಕ್ಕಂದಿನಿಂದಲೂ ಸಾಕಿ ಸಲುಹಿ, ಮಕ್ಕಳ ಭವಿಷ್ಯದ ಬಗ್ಗೆ ಚಿಂತಿಸುವ ಪಾಲಕರು ಮಕ್ಕಳ ಏಳ್ಗೆಗಾಗಿ ಕಷ್ಟ ಪಡುತ್ತಾರೆ, ಆದರೆ ಅವರಿಗೆ ವಯಸ್ಸಾದ ನಂತರ ಇನ್ನೊಬ್ಬರ ಆಶ್ರಯದಲ್ಲಿರಬೇಕಾದ ಪಾಲಕರಿಗೆ ಈ ಸಂದರ್ಭದಲ್ಲಿ ಪ್ರೀತಿ ವಿಶ್ವಾಸ, ಹಿರಿಯರ ಬಗ್ಗೆ ಗೌರವ ಬೇಕಾಗುತ್ತದೆ, ಆದರೆ ಇಂದಿನ ದಿನಗಳಲ್ಲಿ ಮಾನವೀಯ ಸಂಬಂಧಗಳು ಹಾಳಾಗಿವೆ ಎನ್ನುವುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ,
Published by:G Hareeshkumar
First published: