HOME » NEWS » District » PROTEST RAMESH JARKIHOLI AGAINST AND FAR IN GOKAK RHHSN LCTV

ಜಾರಕಿಹೋಳಿ ರಾಜೀನಾಮೆ; ಸ್ವ ಕ್ಷೇತ್ರದಲ್ಲಿ ಭುಗಿಲೆದ್ದ ಆಕ್ರೋಶ, ಪರ-ವಿರೋಧದ ನಡುವೆ ಗೋಕಾಕ್ ಬಂದ್!

ಇಡೀ ದಿನ ಗೋಕಾಕ್ ನಗರದಲ್ಲಿ ಪರ ವಿರೋಧದ ಹೈಡ್ರಾಮಾವೇ ನಡೆದು ಹೋಗಿದೆ. ನಮ್ಮ ನಾಯಕ ತಪ್ಪು ಮಾಡಿಲ್ಲ ಎಂದು ಜಾರಕಿಹೊಳಿ ಬೆಂಬಲಿಗರು ರಮೇಶ್ ಕಟೌಟಿಗೆ ಹಾಲಿನ ಅಭಿಷೇಕ ಮಾಡಿದರೆ ಇತ್ತ ರಾಜೀನಾಮೆ ನೀಡಿದ ಹಿನ್ನಲೆ ರಾಜಕೀಯ ವಿರೋಧಿಗಳು ಪಟಾಕಿ ಸಿಡಿಸಲು ಮುಂದಾಗಿದ್ದರು.

news18-kannada
Updated:March 3, 2021, 4:53 PM IST
ಜಾರಕಿಹೋಳಿ ರಾಜೀನಾಮೆ; ಸ್ವ ಕ್ಷೇತ್ರದಲ್ಲಿ ಭುಗಿಲೆದ್ದ ಆಕ್ರೋಶ, ಪರ-ವಿರೋಧದ ನಡುವೆ ಗೋಕಾಕ್ ಬಂದ್!
ಗೋಕಾಕ್ ನಗರದಲ್ಲಿ ಪ್ರತಿಭಟನೆ ನಡೆಸಿದ ರಮೇಶ್ ಜಾರಕಿಹೊಳಿ ಬೆಂಬಲಿಗರು.
  • Share this:
ಬೆಳಗಾವಿ: ಸಾಹುಕಾರ್ ಸಿಡಿ ಪ್ರಕರಣ ಬಯಲಿಗೆ ಬಂದಂತೆ ರಮೇಶ್ ಜಾರಕಿಹೋಳಿ ಸ್ವ ಕ್ಷೇತ್ರದಲ್ಲಿ ಪರ- ವಿರೋಧದ ಪ್ರತಿಭಟನೆಗಳು ನಡೆದಿವೆ. ಬೆಳಿಗ್ಗೆಯಿಂದಲೇ ವಿರೋಧ ಪಕ್ಷದ ನಾಯಕರು ಗೋಕಾಕ ನಗರದಲ್ಲಿ ಪ್ರತಿಭಟನೆ ನಡೆಸಿದರೆ ಬೆಂಬಲಿಗರು ಸಹ ನಾವೇನು ಕಮ್ಮಿ ಇಲ್ಲಾ ಎಂದು ಸಾಹುಕರ ಪರ ನಿಂತು ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೇ ಸಾಹುಕಾರ್ ರಮೇಶ್ ಜಾರಕಿಹೊಳಿ ಕಟೌಟಿಗೆ ಹಾಲಿನ ಅಭಿಷೇಕ ಮಾಡಿ ಗೋಕಾಕ ನಗರ ಬಂದ್ ಗೆ ಕರೆ ನೀಡಿದರು.

ಒಂದು ಸರ್ಕಾರವನ್ನೇ ಉರುಳಿಸಿ ಹೊಸ ಸರ್ಕಾರ ರಚಿಸಿದ ಪವರಫುಲ್ ನಾಯಕ ರಮೇಶ್ ಜಾರಕಿಹೊಳಿ ಅವರ ಸೆಕ್ಸ್ ವಿಡಿಯೋ ಬಹಿರಂಗವಾಗುತ್ತಿದ್ದಂತೆ ಬಿಜೆಪಿ ಪಾಳಯದಲ್ಲಿ ಬಿರುಗಾಳಿಯೇ ಎದ್ದಿದೆ‌. ಘಟನೆ ಬಯಲಿಗೆ ಬರುತ್ತಿದ್ದಂತೆ ಹೆಚ್ಚಿದ ಒತ್ತಡದಿಂದ ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇನ್ನು ಈ ವಿಷಯವಾಗಿ ರಮೇಶ್ ಜಾರಕಿಹೋಳಿ ಸ್ವ ಕ್ಷೇತ್ರದಲ್ಲೂ ಕೂಡ ರಾಜಕೀಯ ವಿರೋಧಿ ತಂಡ ರಮೇಶ್ ವಿರುದ್ದ ರಸ್ತೆಗೆ ಇಳಿದಿತ್ತು. ಜೆ.ಡಿ.ಎಸ್.ನ ಅಶೋಕ್ ಪೂಜಾರಿ ಗೋಕಾಕ್ ನಗರದ ಬಸವ ವೃತ್ತದಲ್ಲಿ ಚಡ್ಡಿ ಪ್ರದರ್ಶನ ಮಾಡಿ ಚಡ್ಡಿ  ನಾಯಕ ರಮೇಶ್ ಜಾರಕಿಹೋಳಿ ರಾಜೀನಾಮೆ ನೀಡಬೇಕು ಎಂದು ಪ್ರತಿಭಟನೆ ನಡೆಸಿದರು.

ಇದನ್ನು ಓದಿ: Political sex tapes in Karnataka | ರಾಜ್ಯ ರಾಜಕಾರಣದಲ್ಲಿ ಕಾಮ ಪ್ರಸಂಗದ ಪ್ರಕರಣಗಳು!

ಇನ್ನು ಅಶೋಕ್ ಪುಜಾರಿ ಪ್ರತಿಭಟನೆ ಬೆನ್ನಲ್ಲೆ ನಾವೇನು ಕಮ್ಮಿ ಇಲ್ಲ ಎಂದು ಜಾರಕಿಹೊಳಿ ಬೆಂಬಲಿಗರು ಸಹ ಅವರ ನಿವಾಸದ ಬಳಿ ಜಮಾವಣೆಗೊಂಡು ರಮೇಶ್ ಪರವಾಗಿ ಜೈಕಾರ ಕೂಗಿದ್ದಾರೆ. ನಮ್ಮ ನಾಯಕರು ಯಾವುದೇ ತಪ್ಪು ಮಾಡಿಲ್ಲಾ. ಅವರು ರಾಜೀನಾಮೆ ನೀಡುವ ಅವಶ್ಯಕತೆ ಇಲ್ಲಾ. ಇದೊಂದು ರಾಜಕೀಯ ಪಿತೂರಿ ಎಂದು ಆಕ್ರೋಶ ಹೋರ ಹಾಕಿದರು. ಯಾವಾಗ ಹೈ ಕಮಾಂಡ್ ರಮೇಶ್ ಜಾರಕಿಹೊಳಿ ರಾಜೀನಾಮೆ ಪಡೆಯುವಂತೆ ಸೂಚನೆ ನೀಡಿದ ಬೆನ್ನಲ್ಲೆ ಕೆರಳಿದ ಜಾರಕಿಹೊಳಿ ಬೆಂಬಲಿಗರು ಸ್ವ ಪಕ್ಷದ ವಿರುದ್ದವೆ ರಸ್ತೆಗಿಳಿದು ಹೋರಾಟ ನಡೆಸಿದರು. ಇಬ್ಬರು ಬೆಂಬಲಿಗರು ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೂ ಕೂಡ ಯತ್ನಿಸಿದ್ದಾರೆ. ಇದೊಂದು ರಾಜಕೀಯ ಪಿತೂರಿ. ಈ ಕುರಿತ ಸಂಪೂರ್ಣ ತನಿಖೆ ಆಗುವವರೆಗೂ ರಾಜೀನಾಮೆ ಅಂಗೀಕಾರ ಮಾಡಬಾರದು ಎಂದು ಗೋಕಾಕನಲ್ಲಿ ಪ್ರತಿಭಟಿಸಿ ಟೈರ್ ಗೆ ಬೆಂಕಿ ಹಾಕಿ ಆಕ್ರೋಶ ಹೊರ ಹಾಕಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಬೆಂಬಲಿಗರು ಗೋಕಾಕ ನಗರ ಬಂದ್ ಗೆ ಕರೆ ನೀಡಿದ್ದರು. ಕಾರ್ಯಕರ್ತರೆ ಬಲವಂತವಾಗಿ ಕೈಯಲ್ಲಿ ಕಲ್ಲುಗಳನ್ನು ಹಿಡಿದು ಅಂಗಡಿ - ಮುಗ್ಗಟ್ಟುಗಳನ್ನ ಬಂದ್ ಮಾಡಿಸಿದ್ದಾರೆ.

ಒಟ್ಟಿನಲ್ಲಿ ರಮೇಶ್ ಜಾರಕಿಹೊಳಿ ರಾಜೀನಾಮೆ ಬೆನ್ನಲ್ಲೆ ಇಡೀ ದಿನ ಗೋಕಾಕ್ ನಗರದಲ್ಲಿ ಪರ ವಿರೋಧದ ಹೈಡ್ರಾಮಾವೇ ನಡೆದು ಹೋಗಿದೆ. ನಮ್ಮ ನಾಯಕ ತಪ್ಪು ಮಾಡಿಲ್ಲ ಎಂದು ಜಾರಕಿಹೊಳಿ ಬೆಂಬಲಿಗರು ರಮೇಶ್ ಕಟೌಟಿಗೆ ಹಾಲಿನ ಅಭಿಷೇಕ ಮಾಡಿದರೆ ಇತ್ತ ರಾಜೀನಾಮೆ ನೀಡಿದ ಹಿನ್ನಲೆ ರಾಜಕೀಯ ವಿರೋಧಿಗಳು ಪಟಾಕಿ ಸಿಡಿಸಲು ಮುಂದಾಗಿದ್ದರು. ಪಟಾಕಿ ಸಿಡಿಸಲು ಬಂದಿದವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Published by: HR Ramesh
First published: March 3, 2021, 4:53 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories