ಬೀದರ್: ಐಸೋಲೇಷನ್ ವಾರ್ಡ್ ಒಳಗೆ ಬಿಡುವಂತೆ ಆಗ್ರಹಿಸಿ ಸೋಂಕಿತರ ಸಂಬಂಧಿಕರ ಪ್ರತಿಭಟನೆ

ಸೋಂಕಿತರನ್ನು ಕೋವಿಡ್ ವಾರ್ಡ್ ನಲ್ಲಿ ಯಾರೂ ಗಮನಿಸುತ್ತಿಲ್ಲ. ಸರಿಯಾಗಿ ಊಟ ಪೂರೈಸುತ್ತಿಲ್ಲ. ಶೌಚಾಲಯದ ವ್ಯವಸ್ಥೆ ಕೂಡ ಸರಿಯಿಲ್ಲ. ಸೋಂಕಿತರಲ್ಲಿ ಬಹುತೇಕರು ವೃದ್ಧರಿದ್ದಾರೆ. ಹಾಗಾಗಿ ನಮ್ಮನ್ನು ಒಳಹೋಗಲು ಬಿಡಬೇಕೆಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.

news18-kannada
Updated:July 16, 2020, 3:16 PM IST
ಬೀದರ್: ಐಸೋಲೇಷನ್ ವಾರ್ಡ್ ಒಳಗೆ ಬಿಡುವಂತೆ ಆಗ್ರಹಿಸಿ ಸೋಂಕಿತರ ಸಂಬಂಧಿಕರ ಪ್ರತಿಭಟನೆ
ಪ್ರತಿಭಟನೆ
  • Share this:
ಬೀದರ್(ಜು.16): ಐಸೋಲೇಷನ್ ವಾರ್ಡಿನಲ್ಲಿ ಅವ್ಯವಸ್ಥೆಯಿದ್ದು, ಅವರನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಹಾಗಾಗಿ ಅವರನ್ನು ನಾವು ಆರೈಕೆ ಮಾಡುತ್ತೇವೆ. ನಮಗೆ ಕೋವಿಡ್ ವಾರ್ಡ್ ಒಳಗೆ ಹೋಗಲು ಅನುಮತಿ ನೀಡಬೇಕೆಂದು ಸೋಂಕಿತರ ಸಂಬಂಧಿಕರು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದ ಎದುರು ಪ್ರತಿಭಟನೆ ನಡೆಸಿದರು.

ಸೋಂಕಿತರನ್ನು ಕೋವಿಡ್ ವಾರ್ಡ್ ನಲ್ಲಿ ಯಾರೂ ಗಮನಿಸುತ್ತಿಲ್ಲ. ಸರಿಯಾಗಿ ಊಟ ಪೂರೈಸುತ್ತಿಲ್ಲ. ಶೌಚಾಲಯದ ವ್ಯವಸ್ಥೆ ಕೂಡ ಸರಿಯಿಲ್ಲ. ಸೋಂಕಿತರಲ್ಲಿ ಬಹುತೇಕರು ವೃದ್ಧರಿದ್ದಾರೆ. ಹಾಗಾಗಿ ನಮ್ಮನ್ನು ಒಳಹೋಗಲು ಬಿಡಬೇಕೆಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ಸುಮಾರು ಅರ್ಧ ಗಂಟೆ ಪ್ರತಿಭಟನಾಕಾರರೊಂದಿಗೆ ಚರ್ಚೆ ನಡೆಸಿದ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಮನವೊಲಿಕೆಗೆ ಮೊದ ಮೊದಲು ಪ್ರತಿಭಟನಾಕಾರರು ಮಣಿಯದೆ ತಮ್ಮ ಪಟ್ಟನ್ನು ಬಿಗಿಗೊಳಿಸದೆ ಚರ್ಚೆಗೆ ಇಳಿದರು.

ವಿಜಯಪುರದಲ್ಲಿ 60 ವರ್ಷ ಮೇಲ್ಪಟ್ಟವರು ಮನೆಬಿಟ್ಟು ಹೊರಬಂದರೆ ಕಠಿಣ ಕ್ರಮ; ಜಿಲ್ಲಾಧಿಕಾರಿ ಎಚ್ಚರಿಕೆ

ಕೋವಿಡ್ ವಾರ್ಡ್ ನಲ್ಲಿ ಯಾರನ್ನು ಬಿಡಲಾಗುವುದಿಲ್ಲ. ಅದರಿಂದ ಸೋಂಕು ವ್ಯಾಪಿಸುವ ಅಪಾಯವಿದೆ. ಖುದ್ದು ನಾನೇ ಬ್ರಿಮ್ಸ್ ಆಸ್ಪತ್ರೆಯ ಕೋವಿಡ್ ವಾರ್ಡ್ ಗೆ ಭೇಟಿ ನೀಡಿ ಅವ್ಯವಸ್ಥೆಯನ್ನು ಸರಿಪಡಿಸುವೆ ಎಂದರು. ಆಗಲೂ ಪ್ರತಿಭಟನಾಕಾರರು ತಮ್ಮ ಪಟ್ಟು ಸಡಿಲಿಸದಿದ್ದಾಗ  ಸಿಡಿಮಿಡಿಗೊಂಡ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. 'ಸೋಂಕು ಜಿಲ್ಲೆಯಾದ್ಯಂತ ಹರಡಿದೆ. ಸಮಸ್ಯೆಯನ್ನು ಬಗೆಹರಿಸುತ್ತೇನೆ ಎಂದು ಈಗಾಗಲೇ ತಿಳಿಸಿದ್ದೇನೆ. ಇಷ್ಟು ಜನ ಬಂದು ಪ್ರತಿಭಟನೆ ಮಾಡುತ್ತಿದ್ದೀರಿ, ಇಷ್ಟು ಜನರಲ್ಲಿ ಯಾರಿಗೆ ಸೋಂಕಿದೆಯೋ ಹೇಗೆ ಗೊತ್ತಾಗಬೇಕು? ಅಗತ್ಯ ಮುನ್ನೆಚ್ಚರಿಕೆ ಕ್ರಮ ವಹಿಸಿಕೊಂಡೇ ನಾವು ಕೊರೋನಾ ವಿರುದ್ಧ ಸೆಣೆಸಬೇಕಿದೆ. ಕಾಮನ್ ಸೆನ್ಸ್ ಇಲ್ಲದೆ ಬೇಡಿಕೆಗಳನ್ನಿಡಬೇಡಿ' ಎಂದು ಖಾರವಾಗಿ ಉತ್ತರಿಸಿದ ನಂತರ ಪ್ರತಿಭಟನಾಕಾರರು ತಣ್ಣಗಾದರು.

ಈಗಾಗಲೇ ಗಡಿ ಜಿಲ್ಲೆಯಲ್ಲಿ 1139 ಪಾಸಿಟಿವ್ ಕೇಸ್ ದಾಖಲಾಗಿದ್ದು, ಬೆಂಗಳೂರಿನ ನಂತರ ಅತಿ ಹೆಚ್ಚು ಜನರು (53) ಮೃತಪಟ್ಟಿದ್ದಾರೆ. ಚಿಕಿತ್ಸೆ ಪಡೆದು 670 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದರೆ, ಜಿಲ್ಲೆಯಲ್ಲಿ ಒಟ್ಟು 416 ಸಕ್ರಿಯ ಪ್ರಕರಣಗಲಿವೆ. ಹೀಗಾಗಿ ಕೊರೋನಾ ಆರ್ಭಟಕ್ಕೆ ಬ್ರೇಕ್ ಹಾಕಲು ಜಿಲ್ಲಾಡಳಿತ ನಿನ್ನೆ ರಾತ್ರಿ ಎಂಟರಿಂದ ಮುಂದಿನ ಒಂದು ವಾರ ಕಾಲ ಅಂದರೆ ಜುಲೈ 22ರವರೆಗೆ ಲಾಕ್ ಡೌನ್ ಘೋಷಣೆ ಮಾಡಿದೆ.
Published by: Latha CG
First published: July 16, 2020, 3:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading