HOME » NEWS » District » PROTEST FOR DEMAND SIRSI SEPARATE DISTRICT RHHSN DKK

ಶಿರಸಿ ಬಂದ್ ಯಶಸ್ವಿ; ಶಿರಸಿ ಪ್ರತ್ಯೇಕ ಜಿಲ್ಲೆ ಹೋರಾಟ ಜೋರು!

ಕಳೆದ ಹತ್ತಾರು ವರ್ಷದಿಂದ ಪ್ರತ್ಯೇಕ ಜಿಲ್ಲೆಯ ಹೋರಾಟವನ್ನು ಸರಕಾರ ಕಡೆಗಣಿಸಿದೆ. ಆದರೆ ಈಗ ಸರಕಾರ ಶಿರಸಿ ಪ್ರತ್ಯೇಕ ಜಿಲ್ಲೆಯ ಬಗ್ಗೆ ಪರಿಣಾಮಕಾರಿಯಾಗಿ ಗಮನ ಹರಿಸದೆ ಇದ್ದಲ್ಲಿ ಇಂತ ಹತ್ತಾರು ಹೋರಾಟಗಳು ನಿರಂತರವಾಗಿ ನಡೆಯಲಿವೆ. ಕೂಡಲೇ ಸರಕಾರ ಎಚ್ಚೆತ್ತು ಈ ವರ್ಷ ಶಿರಸಿಯನ್ನ ಪ್ರತ್ಯೇಕ ಜಿಲ್ಲೆಯನ್ನಾಗಿಸಬೇಕೆಂದು ಹೋರಾಟ ಸಮಿತಿಯ ಪದಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

news18-kannada
Updated:February 24, 2021, 3:51 PM IST
ಶಿರಸಿ ಬಂದ್ ಯಶಸ್ವಿ; ಶಿರಸಿ ಪ್ರತ್ಯೇಕ ಜಿಲ್ಲೆ ಹೋರಾಟ ಜೋರು!
ಶಿರಸಿ ಪ್ರತ್ಯೇಕ ಜಿಲ್ಲೆಗೆ ಆಗ್ರಹಿಸಿ ನಡೆದ ಪ್ರತಿಭಟನೆ.
  • Share this:
ಕಾರವಾರ: ವಿಜಯನಗರ ಹೊಸ ಜಿಲ್ಲೆಯಾಗಿ ಅಧಿಕೃತ ಘೋಷಣೆಯಾಗುತ್ತಿದ್ದಂತೆ ಉತ್ತರ ಕನ್ನಡ ಜಿಲ್ಲೆಯನ್ನು ಇಬ್ಬಾಗಿಸಿ ಶಿರಸಿ ಪ್ರತ್ಯೇಕ ಜಿಲ್ಲೆಯನ್ನಾಗಿಸಬೇಕೆಂಬ ಕೂಗು ಜೋರಾಗಿದೆ. ಪ್ರತ್ಯೇಕ ಜಿಲ್ಲೆಗೆ ಆಗ್ರಹಿಸಿ ಇಂದು  ಶಿರಸಿ ಬಂದ್​ಗೆ ಕರೆ ನೀಡಲಾಗಿತ್ತು. ಬಂದ್​​ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿ ಬೃಹತ್ ಹೋರಾಟ ನಡೆಯಿತು.

ಶಿರಸಿ ಪ್ರತ್ಯೇಕ ಜಿಲ್ಲೆಗೆ ಆಗ್ರಹಿಸಿ ಇಂದು ನಡೆಸಿದ ಶಿರಸಿ ಬಂದ್ ಗೆ ಉತ್ತಮ ಸ್ಪಂದನೆ ಸಿಕ್ಕಿದೆ. ಶಿರಸಿ ಜಿಲ್ಲಾ ಹೋರಾಟ ಸಮಿತಿಯಿಂದ ಕರೆದ ಬಂದ್ ಗೆ ಹತ್ತಾರು ಸಂಘಟನೆಯವರು ಕೈ ಜೋಡಿಸಿ ಶಿರಸಿ ಪ್ರತ್ಯೇಕ ಜಿಲ್ಲೆಗೆ ಆಗ್ರಹಿಸಿದರು. ಕಳೆದ ಹತ್ತಾರು ವರ್ಷದಿಂದ ಕೇವಲ ಮನವಿಯಲ್ಲಿ ನಡೆಯುತ್ತಿದ್ದ ಹೋರಾಟ ಈಗ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಪ್ರತ್ಯೇಕ ಜಿಲ್ಲೆಯ ಹೋರಾಟದ ಕೂಗು ಬಲವಾಗುತ್ತಿದೆ.

ಇಂದು ಪ್ರತ್ಯೇಕ ಜಿಲ್ಲೆಯ ಹೋರಾಟದ ಆದಿಯಾಗಿ ನಡೆದ ಪ್ರತಿಭಟನೆ ಮತ್ತು ಬಂದ್ ಗೆ ಅಂಗಡಿ- ಮುಂಗಟ್ಟುಗಳು ಮುಂಜಾನೆಯಿಂದ ಬಂದ್ ಆಗಿದ್ದವು. ಖಾಸಗಿ ವಾಹನ ಚಾಲಕರು, ಮಾಲೀಕರು ತಮ್ಮ ವಾಹನವನ್ನು ರಸ್ತೆಗಿಳಿಸದೆ ಹೋರಾಟಕ್ಕೆ ಬೆಂಬಲ ನೀಡಿದರು. ಸಾವಿರಾರು ಸಂಖ್ಯೆಯಲ್ಲಿ ನೆರೆದ ಜನರು ಶಿರಸಿ ಪ್ರತ್ಯೇಕ ಜಿಲ್ಲೆಗೆ ಆಗ್ರಹಿಸಿದರು. ಜಿಲ್ಲೆಯಲ್ಲಿ ಬೃಹತ್ ರ‍್ಯಾಲಿ ಸಂಘಟಿಸಲಾಗಿತ್ತು. ರ‍್ಯಾಲಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ನೆರೆದ ಜನರು ತಮ್ಮ ಶಕ್ತಿ ಪ್ರದರ್ಶಿಸಿದರು.

ಶಿರಸಿ ಪ್ರತ್ಯೇಕ ಜಿಲ್ಲೆ ಮಾಡಿದರೆ ಏನು ಪ್ರಯೋಜನ?

ಶಿರಸಿ ಪ್ರತ್ಯೇಕ ಜಿಲ್ಲೆಯಾಗಿ ಮಾಡಿದರೆ ಉಡುಪಿ ಮಾದರಿಯಲ್ಲಿ  ಕಾರವಾರ ಮತ್ತು ಶಿರಸಿ ಅಭಿವೃದ್ಧಿ ಕಾಣಬಹುದು ಎನ್ನೋದು ಶಿರಸಿ ಜನರ ಅಭಿಪ್ರಾಯ. ಭೌಗೋಳಿಕವಾಗಿ ವಿಸ್ತಾರ ಹೊ‌ಂದಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಶಿರಸಿ, ಸಿದ್ದಾಪುರ ತಾಲೂಕಿನ ಜನ ಜಿಲ್ಲಾ ಕೇಂದ್ರ ಕಾರವಾರಕ್ಕೆ ಬಂದು ತಮ್ಮ ಕಚೇರಿ ಕೆಲಸ ಮಾಡಿಕೊಳ್ಳಲು ಸರಿಸುಮಾರು 150ಕಿ.ಮಿ ಪ್ರಯಾಣ ಬೆಳೆಸಬೇಕು. ಇದು ಘಟ್ಟದ ಮೇಲಿನ ತಾಲೂಕಿನ ಜನರಿಗೆ ದೊಡ್ಡ ಹರಸಾಹಸವಾಗಿದೆ. ಹೀಗಾಗಿ ತಾವು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದೇವೆ. ಅಭಿವೃದ್ಧಿ ಮತ್ತು ಜಿಲ್ಲೆಯ ಜನರ ಸಮಸ್ಯೆ ಅರಿತು ಸರಕಾರ ಜಿಲ್ಲೆಯನ್ನು ಇಬ್ಭಾಗಿಸಿ ಶಿರಸಿ ಪ್ರತ್ಯೇಕ ಜಿಲ್ಲೆ ಮಾಡಬೇಕು ಎನ್ನುತ್ತಾರೆ ಸ್ಥಳೀಯರು.

ಇದನ್ನು ಓದಿ: ಬೆಂಗಳೂರು ಆಚೆ ಐಟಿ ಉದ್ಯಮ ವಿಸ್ತರಣೆ: ಪ್ರಮುಖ ಕ್ಲಸ್ಟರ್ ಕೇಂದ್ರವಾಗಿ ಮಂಗಳೂರು ನಗರ ಪರಿಗಣನೆ

ಹೋರಾಟಕ್ಕೆ ಭಾಗಿಯಾಗದ ಕನ್ನಡ ಪರ ಸಂಘಟನೆಗಳುಉತ್ತರ ಕನ್ನಡ ಜಿಲ್ಲೆ ಇಬ್ಭಾಗಿಸಿ ಶಿರಸಿ ಪ್ರತ್ಯೇಕ ಜಿಲ್ಲೆ ಮಾಡಲು ಕನ್ನಡ ಪರ ಸಂಘಟನೆಗಳ ವಿರೋಧವಿದೆ. ಯಾವುದೇ ಕಾರಣಕ್ಕೂ ಕನ್ನಡ ಪರ ಸಂಘಟ‌ನೆಗಳು ಅಖಂಡ ಉತ್ತರ ಕನ್ನಡ ಜಿಲ್ಲೆ ಒಡೆಯಬಾರದೆಂದು ಹೇಳುತ್ತಿವೆ. ಕರಾವಳಿಯ ತಾಲೂಕಿನ ಜನ ಜಿಲ್ಲೆ ಇಬ್ಭಾಗಿಸಲು ಸೊಪ್ಪು ಹಾಕುತ್ತಿಲ್ಲ. ಕೇವಲ ಶಿರಸಿ ಜಿಲ್ಲೆಯ ಜನರು ಮಾತ್ರ ಜಿಲ್ಲೆ ವಿಭಜಿಸಲು ಹಕ್ಕೊತ್ತಾಯಿಸುತ್ತಿದ್ದಾರೆ.
Youtube Video

ಸರಕಾರ ಗಮನ ಹರಿಸಬೇಕು ಇಲ್ಲವಾದರೆ ಉಗ್ರ ಹೋರಾಟ

ಸರಕಾರ ಶಿರಸಿ ಪ್ರತ್ಯೇಕ ಜಿಲ್ಲೆ ಬಗ್ಗೆ ಸರ್ಕಾರ ಗಮನ ಹರಿಸ ಬೇಕು. ಕಳೆದ ಹತ್ತಾರು ವರ್ಷದಿಂದ ಪ್ರತ್ಯೇಕ ಜಿಲ್ಲೆಯ ಹೋರಾಟವನ್ನು ಸರಕಾರ ಕಡೆಗಣಿಸಿದೆ. ಆದರೆ ಈಗ ಸರಕಾರ ಶಿರಸಿ ಪ್ರತ್ಯೇಕ ಜಿಲ್ಲೆಯ ಬಗ್ಗೆ ಪರಿಣಾಮಕಾರಿಯಾಗಿ ಗಮನ ಹರಿಸದೆ ಇದ್ದಲ್ಲಿ ಇಂತ ಹತ್ತಾರು ಹೋರಾಟಗಳು ನಿರಂತರವಾಗಿ ನಡೆಯಲಿವೆ. ಕೂಡಲೇ ಸರಕಾರ ಎಚ್ಚೆತ್ತು ಈ ವರ್ಷ ಶಿರಸಿಯನ್ನ ಪ್ರತ್ಯೇಕ ಜಿಲ್ಲೆಯನ್ನಾಗಿಸಬೇಕೆಂದು ಹೋರಾಟ ಸಮಿತಿಯ ಪದಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
Published by: HR Ramesh
First published: February 24, 2021, 3:51 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories