• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ನಮ್ಮೂರಿಗೆ ಬಾರ್ ಬೇಡವೇ ಬೇಡ.. ಬಾರ್ ಮಾಲೀಕನ ವಿರುದ್ಧ ಮುಸ್ಲಾಪುರ ಮಹಿಳೆಯರು ಕೆಂಡಾಮಂಡಲ!

ನಮ್ಮೂರಿಗೆ ಬಾರ್ ಬೇಡವೇ ಬೇಡ.. ಬಾರ್ ಮಾಲೀಕನ ವಿರುದ್ಧ ಮುಸ್ಲಾಪುರ ಮಹಿಳೆಯರು ಕೆಂಡಾಮಂಡಲ!

ಮಹಿಳೆಯರಿಂದ ಪ್ರತಿಭಟನೆ

ಮಹಿಳೆಯರಿಂದ ಪ್ರತಿಭಟನೆ

ನಮ್ಮೂರಿಗೆ ಬಾರ್ ಬೇಡವೇ ಬೇಡ, ಯಾಕಂದ್ರೆ ನನ್ನ ಗಂಡ ವಾರಕೊಮ್ಮೆ ಕುಡಿದು ಮನೆಗೆ ಬರ್ತಿದ್ರು, ಆದ್ರೆ ಬಾರ್ ಓಪನ್ ದಿನ ಕುಡಿಯಲು ಬಾರ್ ಗೆ ಹೋಗ್ತಾರೆ, ಹಾಗಾಗಿ ನಮ್ಮೂರಿಗೆ ಬೇಡ, ಈ ಬಾರ್ ಬೇರೆ ಕಡೆ ಸ್ಥಳಾಂತರ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

  • Share this:

ಚಿಕ್ಕಮಗಳೂರು : ಬಡ ಕೂಲಿ ಕಾರ್ಮಿಕರೇ ವಾಸವಿರೋ ಗ್ರಾಮದಲ್ಲಿ ಬಾರ್ ಓಪನ್ ಆದ ಒಂದೇ ದಿನಕ್ಕೆ ವಿರೋಧ ವ್ಯಕ್ತವಾಗಿದ್ದು ಮಹಿಳೆಯರು ಪ್ರತಿಭಟನೆ ನಡೆಸಿದ್ದಾರೆ. ಕಡೂರು ತಾಲೂಕಿನ ಎಮ್ಮೆದೊಡ್ಡಿ ಸಮೀಪದ ಮುಸ್ಲಾಪುರ ಗ್ರಾಮದಲ್ಲಿ ಪ್ರತಿಭಟನೆ ನಡೆದಿದೆ. ನಮ್ಮ ಗಂಡಂದಿರು ವಾರಕ್ಕೆ ಒಮ್ಮೆ ಕುಡಿಯುತ್ತಿದ್ದರು, ಈಗ ದಿನ ಕುಡಿಯಲು ಆರಂಭಿಸುತ್ತಾರೆ. ಹಾಗಾಗಿ ನಮ್ಮ ಹಳ್ಳಿಗೆ ಬಾರ್ ಬೇಡವೇ ಬೇಡ ಎಂದು ಮಹಿಳೆಯರು ಬಾರ್ ಮುಂದೆ ಮುಸ್ಲಾಪುರ ಗ್ರಾಮದ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಬಾರ್​​ ಓಪನ್​ ಬೆನ್ನಲ್ಲೇ ಆಕ್ರೋಶ 


ಮುಸ್ಲಾಪುರ ಗ್ರಾಮದಲ್ಲಿ ಬಾರ್ ನಿನ್ನೆ ತಾನೇ ಓಪನ್ ಆಗಿತ್ತು. ಬಾರಿನಿಂದ ಮುಂದಾಗೋ ಅನಾಹುತ, ತೊಂದರೆಯನ್ನ ಮನಗಂಡ ಹಳ್ಳಿ ಮಹಿಳೆಯರು ಒಂದೇ ದಿನಕ್ಕೆ ಬಾರ್ ಮುಂದೆ ಧರಣಿ ನಡೆಸಿ ನಮ್ಮ ಹಳ್ಳಿಗೆ ಬಾರ್ ಬೇಡವೇ ಬೇಡ ಎಂದು ಆಗ್ರಹಿಸಿದ್ದಾರೆ. ಎಮ್ಮೆದೊಡ್ಡಿಯ ಮುಸ್ಲಾಪುರ ಸುತ್ತಮುತ್ತ ಯಾವುದೇ ಬಾರ್ ಇರಲಿಲ್ಲ. ಹಾಗಾಗಿ, ನಿನ್ನೆ ತಾನೇ ನೂತನ ಬಾರ್ ಓಪನ್ ಆಗಿತ್ತು. ಸಾಲದಕ್ಕೆ ಅದೇ ಮಾರ್ಗದಲ್ಲಿ ಶಾಲೆ ಬೇರೆ ಇದೆ. ಕುಡಿದು ದಾರಿಯಲ್ಲಿ ಹೋಗೋ-ಬರೋ ಹೆಣ್ಮಕ್ಕಳು, ಹೆಂಗಸರಿಗೆ ಕಿಟಲೆ ಮಾಡುವವರ ಸಂಖ್ಯೆಯೂ ಹೆಚ್ಚಾಗುತ್ತೆ. ಅಷ್ಟೆ ಅಲ್ಲದೆ, ಈ ಭಾಗದಲ್ಲಿ ಇರುವವರೆಲ್ಲಾ ಕೂಲಿ ಕಾರ್ಮಿಕರು. ಅವರು ಇಷ್ಟು ದಿನ ದುಡಿದು ಜೀವನ ಮಾಡುತ್ತಿದ್ದರು. ಸುತ್ತಮುತ್ತ ಬಾರ್ ಇಲ್ಲದ ಕಾರಣ ವಾರಕ್ಕೊಮ್ಮೆ ಸಂತೆಗೆ ಹೋದಾಗ ಕುಡಿದು ಬರುತ್ತಿದ್ದರು.


ಸುತ್ತಮುತ್ತಲಿನ 28 ಹಳ್ಳಿಗೆ ತೊಂದರೆ


ಈಗ ಇಲ್ಲೇ ಬಾರ್ ಮಾಡಿದ್ದಾರೆ. ಇನ್ನು ಮುಂದೆ ದಿನಾ ಕುಡಿಯಲು ಆರಂಭಿಸುತ್ತಾರೆ. ದುಡಿದದ್ದನ್ನೆಲ್ಲಾ ಬಾರಿಗೆ ಹಾಕುತ್ತಾರೆ. ಆಗ ಹೆಂಡತಿ-ಮಕ್ಕಳ ಕಥೆ ಏನೆಂದು ಪ್ರಶ್ನಿಸಿರೋ ಈ ಬಾರಿನಿಂದ ಸುತ್ತಮುತ್ತಲಿನ 28 ಹಳ್ಳಿಗೆ ತೊಂದರೆಯಾಗಲಿದೆ. ಹಾಗಾಗಿ, ನಮ್ಮ ಹಳ್ಳಿಗೆ ಬಾರ್ ಬೇಡವೇ ಬೇಡ ಎಂದು ಮಹಿಳೆಯರು-ಪುರುಷರು ಬಾರ್ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಇನ್ನು ಇದೇ ವೇಳೆ ಮಾತಾನಾಡಿದ ಮಹಿಳೆಯೊಬ್ಬರು ನಮ್ಮೂರಿಗೆ ಬಾರ್ ಬೇಡವೇ ಬೇಡ, ಯಾಕಂದ್ರೆ ನನ್ನ ಗಂಡ ವಾರಕೊಮ್ಮೆ ಕುಡಿದು ಮನೆಗೆ ಬರ್ತಿದ್ರು, ಆದ್ರೆ ಬಾರ್ ಓಪನ್ ದಿನ ಕುಡಿಯಲು ಬಾರ್ ಗೆ ಹೋಗ್ತಾರೆ, ಹಾಗಾಗಿ ನಮ್ಮೂರಿಗೆ ಬೇಡ, ಈ ಬಾರ್ ಬೇರೆ ಕಡೆ ಸ್ಥಳಾಂತರ ಮಾಡಬೇಕು ಎಂದರು.


ಇದನ್ನೂ ಓದಿ: Son Killed by Father: 2 ವರ್ಷದ ಮಗನನ್ನೇ ಕೊಂದು ನಾಟಕವಾಡಿದ ಪಾಪಿ ತಂದೆ ಸಿಕ್ಕಿಬಿದ್ದಿದ್ದೇ ರೋಚಕ!


ಬಾರ್ ವಿರೋಧದ ಬಗ್ಗೆ ಮತ್ತೋರ್ವ ಮಹಿಳೆ ಮಾತಾನಾಡಿ ಸರ್ ಈ ಬಾರ್ ಬೇಡವೇ ಬೇಡ, ಈ ಬಾರ್ ಯಿಂದ ನಮ್ಗೆ ನಷ್ಟವೇ ಜಾಸ್ತಿ, ನಾವು ಕೂಲಿ ಕೆಲಸ ಮಾಡಿಕೊಂಡು ಬದುಕುತ್ತಿದ್ದೇವೆ, ನಮ್ಮ ಗಂಡ ಈಗ ನಮ್ಮ ಮಾತು ಕೇಳ್ತಾ ಇದ್ದಾರೆ, ಇಲ್ಲೇ ಬಾರ್ ಇದ್ರೆ ನಮ್ ಮಾತು ಕೇಳಲ್ಲ, ಆಗ ನಾವು ಉಪವಾಸ ಮಲಗಬೇಕಾಗುತ್ತದೆ, ಈ ಬಾರ್ ಕೂಡಲ್ ಕ್ಲೋಸ್ ಮಾಡಬೇಕು ಎಂದು ಆಗ್ರಹಿಸಿದ್ರು.

First published: