ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸಿ ಮಾಜಿ ಪ್ರಧಾನಿ ದೇವೇಗೌಡರ ನೇತೃತ್ವದಲ್ಲಿ ಹೋರಾಟ; ಎಚ್.ಡಿ.ರೇವಣ್ಣ

ಮುಖ್ಯಮಂತ್ರಿಗಳಿಗೆ ಒಂದು ವಾರ ಗಡುವು ನೀಡುತ್ತೇವೆ. ನಮ್ಮ ಹಾಸನ ಜಿಲ್ಲೆಯ ಕೆಲಸ ಮಾಡದಿದ್ದರೇ ಸರ್ಕಾರದ ವಿರುದ್ಧ ಜೆಡಿಎಸ್ ನಿಂದ ಹೋರಾಟ ಆರಂಭಿಸಲಾಗುವುದು. ಜಿಲ್ಲೆಯ ಎಲ್ಲಾ ಜೆಡಿಎಸ್ ಶಾಸಕರಿಂದ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಹೆಚ್.ಡಿ. ರೇವಣ್ಣ

ಹೆಚ್.ಡಿ. ರೇವಣ್ಣ

  • Share this:
ಹಾಸನ; ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸಿ ಮತ್ತು ವಾರದಲ್ಲಿ ಜಿಲ್ಲೆಯ ಅಭಿವೃದ್ಧಿ ಕೆಲಸ ಮಾಡದಿದ್ದರೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ನೇತೃತ್ವದಲ್ಲಿ ಹೋರಾಟಕ್ಕೆ ಇಳಿಯುವುದಾಗಿ ಮಾಜಿ ಸಚಿವ ಎಚ್.ಡಿ. ರೇವಣ್ಣ ಎಚ್ಚರಿಸಿದ್ದಾರೆ.

ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್.ಡಿ.ರೇವಣ್ಣ, ರೈತರ ಹೆಸರಲ್ಲಿ ಹಸಿರು ಶಾಲು ಹಾಕಿಕೊಂಡು ಮುಖ್ಯಮಂತ್ರಿಗಳು ಬೋಗಸ್ ಮಾಡುತ್ತಿದ್ದಾರೆ. ಹಾಸನ ಜಿಲ್ಲೆಯ ಜನರ ಹಕ್ಕನ್ನು ಕಿತ್ತುಕೊಳ್ಳಲು ಮುಂದಾಗಬೇಡಿ. ಭೂ ಸುಧಾರಣಾ ಕಾಯ್ದೆ ವಿರುದ್ದವಾಗಿ ಸಿಎಂ ವಿರುದ್ದ ಜನತೆ ದಂಗೆ ಏಳಲಿದ್ದಾರೆ ಎಂದು ಹೇಳಿದರು.

ಡಿಕೆ. ಶಿವಕುಮಾರ್ ಅವರು ಜೆಡಿಎಸ್ ಪಕ್ಷವನ್ನು ನಿರ್ನಾಮ ಮಾಡುತ್ತಾರೆ ಎಂಬ ಬಿಜೆಪಿ ಮುಖಂಡ ಯೋಗೇಶ್ವರ್ ಹೇಳಿಕೆ ವಿಚಾರವಾಗಿ ಉತ್ತರಿಸಿದ ರೇವಣ್ಣ ಅವರು, ಯಾರು ಯಾರನ್ನು ನಿರ್ನಾಮ ಮಾಡುತ್ತಾರೆಂದು ಮುಂದೆ ಕಾದು ನೋಡೋಣ. ಅದನ್ನು ಜನ ತೀರ್ಮಾನ ಮಾಡುತ್ತಾರೆ. ಜೆಡಿಎಸ್ ಪಕ್ಷವನ್ನು ನಿರ್ನಾಮ ಮಾಡೋರು ಆ ಯೋಗೇಶ್ವರನ​ ಏನು ಮಾಡ್ತಾರೆ ಎಂದು ತಿರುಗೇಟು ನೀಡಿದರು.

​ಬಿಜೆಪಿಯ ಪಕ್ಷದವರು ಕೊರೋನಾ ನಡುವೆಯೂ ನಿಗಮ ಮಂಡಳಿ ನೇಮಕ ಮತ್ತು ಸಂಪುಟ ವಿಸ್ತರಣೆಗೆ ಮುಂದಾಗಿರುವ ವಿಚಾರವಾಗಿ ಮಾತನಾಡಿ, ಸರ್ಕಾರ ಉಳಿಸಿಕೊಂಡು ಇರುವಷ್ಟು ದಿನ ಮಜಾ ಮಾಡಬೇಕು ಅನ್ನೋದೇ ಬಿಜೆಪಿಯವರ ಉದ್ದೇಶವಾಗಿದೆ. ಬಿಜೆಪಿ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.

ಸಕಲೇಶಪುರ ತಾಲ್ಲೂಕಿನ ಹೆತ್ತೂರು ಪದವಿ ಕಾಲೇಜನ್ನು ಬೆಂಗಳೂರಿಗೆ ಶಿಫ್ಟ್ ಮಾಡಿದ್ದಾರೆ. ಈ ಕಾಲೇಜಿಗೆ ಶಿಕ್ಷಕರನ್ನೇ ಇನ್ನು ನೇಮಕ ಮಾಡಿಲ್ಲ. ಬೇಲೂರಿನ ರಣಘಟ್ಟ ಯೋಜನೆಗೆ ಹಣ ನೀಡದೇ ತಡೆ ಹಿಡಿದಿದ್ದಾರೆ. ಇನ್ನು ಹಾಸನ ಜಿಲ್ಲೆಯ ಎಲ್ಲಾ ಕಾಮಗಾರಿಗಳನ್ನು ತಡೆ ಹಿಡಿದಿದ್ದಾರೆ. ಹಾಸನ ವಿಮಾನ ನಿಲ್ದಾಣ ಕಾಮಗಾರಿಯನ್ನೂ ಬೇಕಂತಲೇ ತಡೆ ಹಿಡಿದಿದ್ದಾರೆ. ಮುಖ್ಯಮಂತ್ರಿಗಳು ಹಿಂದೆಯೇ ನಾನು ದ್ವೇಷದ ರಾಜಕಾರಣ ಮಾಡೊಲ್ಲಾ ಅಂತಾ ಹೇಳಿದ್ದರು. ಆದರೆ ಈಗ ಮಾಡುತ್ತಿರುವುದು ಏನು ಎಂದು ಪ್ರಶ್ನೆ ಮಾಡಿದರು.

ಇದನ್ನು ಓದಿ: ‘ನನ್ನ ಮತ್ತು ಡಿ.ಕೆ ಶಿವಕುಮಾರ್​​​​ ಮಧ್ಯೆ ಹುಳಿ ಹಿಂಡುವವರ ನಾಟಕ ಫಲಿಸದು‘ - ಎಚ್​​.ಡಿ ಕುಮಾರಸ್ವಾಮಿ

ಮುಖ್ಯಮಂತ್ರಿಗಳಿಗೆ ಒಂದು ವಾರ ಗಡುವು ನೀಡುತ್ತೇವೆ. ನಮ್ಮ ಹಾಸನ ಜಿಲ್ಲೆಯ ಕೆಲಸ ಮಾಡದಿದ್ದರೇ ಸರ್ಕಾರದ ವಿರುದ್ಧ ಜೆಡಿಎಸ್ ನಿಂದ ಹೋರಾಟ ಆರಂಭಿಸಲಾಗುವುದು. ಜಿಲ್ಲೆಯ ಎಲ್ಲಾ ಜೆಡಿಎಸ್ ಶಾಸಕರಿಂದ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
Published by:HR Ramesh
First published: