ಏಪ್ರಿಲ್ 1 ರಿಂದ ವಾರ್ಡ್, ಪ್ರದೇಶವಾರು ಆಸ್ತಿ ತೆರಿಗೆ ದರ ನಿಗಧಿ; ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ

ವಾರ್ಡ್​ವಾರು ಮತ್ತು ಪ್ರದೇಶವಾರು ಆಸ್ತಿ ತೆರಿಗೆ ದರಗಳನ್ನು ನಿಗಧಿಪಡಿಸಿ  ಠರಾವು ಮಾಡಿದ ಪ್ರಕಾರ 2021-22 ನೇ ಸಾಲಿನ ಅನ್ವಯವಾಗುವಂತೆ ಏ. 1 ರಿಂದ ಜಾರಿಗೆ ಬರುತ್ತದೆ. ಸಾರ್ವಜನಿಕರು ವಾರ್ಡವಾರು ಮತ್ತು ಪ್ರದೇಶವಾರು ಆಸ್ತಿ ತೆರಿಗೆ ದರಗಳ ಮಾಹಿತಿಯನ್ನು ಕಂದಾಯ ವಿಭಾಗದಲ್ಲಿ ಪಡೆಯಬೇಕೆಂದು ವಿಜಯಪುರ ಜಿಲ್ಲಾಧಿಜಾರಿ ಪಿ. ಸುನೀಲ‌ ಕುಮಾರ ತಿಳಿಸಿದರು.

ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಸಭೆ.

ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಸಭೆ.

  • Share this:
ವಿಜಯಪುರ (ಮಾ.29); ವಿಜಯಪುರ ಮಹಾನಗರ ಪಾಲಿಕೆಯ ಆಸ್ತಿ ತೆರಿಗೆ ದರವನ್ನು 2021- 22ನೇ ಆರ್ಥಿಕ ವರ್ಷ ಏ. 1 ರಿಂದ ಅನ್ವಯವಾಗುವಂತೆ ಪರಿಷ್ಕರಣೆ ಮಾಡಲಾಗುತ್ತದೆ ಎಂದು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ತಿಳಿಸಿದ್ದಾರೆ. ವಿಜಯಪುರ ನಗರದಲ್ಲಿರುವ ಜಿಲ್ಲಾಧಿಕಾರಿ ಸಭಾ ಭವನದಲ್ಲಿ ಜಿಲ್ಲಾಧಿಕಾರಿ, ಯೋಜನಾ ನಿರ್ದೇಶಕರು ಮತ್ತು ಆಯುಕ್ತರನ್ನು ಒಳಗೊಂಡು ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಕರ್ನಾಟಕ ಪೌರ ನಿಗಮಗಳ ಅಧಿನಿಯಮ 1976 ರ ಕಲಂ 109ರ ತಿದ್ದುಪಡಿ ಪ್ರಕಾರ ಸ್ವತ್ತಿನ ಮೂಲ ಮೌಲ್ಯವನ್ನು ನಿಗದಿಪಡಿಸಲಾಗುವುದು. ಕರ್ನಾಟಕ ಸ್ಟ್ಯಾಂಪುಗಳ ಅಧಿನಿಯಮ 1957 ರ ಸೆಕ್ಷ ನ್ 45ಬಿ ರಡಿಯಲ್ಲಿ ಪ್ರಕಟಿಸಲಾದ ಚಾಲ್ತಿ ಸಾಲಿನ ಮಾರುಕಟ್ಟೆ ಮೌಲ್ಯದ ಮಾರ್ಗಸೂಚಿ ಬೆಲೆಯ ಶೇ 25ನ್ನು ಪರಿಗಣಿಸಲಾಗುವುದು‌. ಬೇರೆ ಬೇರೆ ಪ್ರದೇಶಗಳಿಗೆ ಬೇರೆ ಬೇರೆ ಆಸ್ತಿ ತೆರಿಗೆ ದರಗಳನ್ನು ನಿಗದಿಪಡಿಸಲಾಗಿದೆ. ಕರ್ನಾಟಕ ಪೌರ ನಿಗಮ ಅಧಿನಿಯಮ 1976 ರ ಕಲಂ 108 ಉಪ ಪ್ರಕರಣ  2(ಬಿ ) ರ ತಿದ್ದುಪಡಿ ಪ್ರಕಾರ ವಾಸದ ಕಟ್ಟಡಗಳಿಗೆ ಮಾರುಕಟ್ಟೆ ಮೂಲ ಬೆಲೆಯ ಮೇಲೆ ಕನಿಷ್ಠ ಶೇ.‌ 0.2 ಕ್ಕಿಂತ ಕಡಿಮೆ ಇಲ್ಲದಂತೆ ಮತ್ತು ಶೇ.‌ 1.5 ಕ್ಕಿಂತ ಹೆಚ್ಚಿಗೆ ಇಲ್ಲದಂತೆ ಪ್ರದೇಶವಾರು ಬೇರೆ ಬೇರೆ ತೆರಿಗೆ ದರಗಳನ್ನು  ವಿಧಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಕರ್ನಾಟಕ ಪೌರ ನಿಗಮ ಅಧಿನಿಯಮ 1976 ರ ಕಲಂ 108 ಉಪ ಪ್ರಕರಣ  2(ಸಿ) ರ ತಿದ್ದುಪಡಿ ಪ್ರಕಾರ ಖಾಲಿ ನಿವೇಶನಗಳಿಗೆ ಕನಿಷ್ಠ ಶೇ. 0.2 ಗಿಂತ ಕಡಿಮೆ ಇಲ್ಲದಂತೆ ಮತ್ತು ಶೇ. 0.5 ಕ್ಕಿಂತ ಹೆಚ್ಚಿಗೆ  ಇಲ್ಲದಂತೆ ಪ್ರದೇಶವಾರು ಬೇರೆ ಬೇರೆ ತೆರಿಗೆ ದರಗಳನ್ನು ವಿಧಿಸಲಾಗುತ್ತದೆ‌‌ ಮತ್ತು ಪ್ರಕರಣ 108 ಉಪ ಪ್ರಕರಣ(3) ರ ತಿದ್ದುಪಡಿ ಪ್ರಕಾರ ಕಟ್ಟಡಕ್ಕೆ ಹೊಂದಿಕೊಂಡಿರುವ 1000 ಚದರ‌ ಅಡಿಗಿಂತ ಹೆಚ್ಚಿರುವ ಖಾಲಿ ಭೂಮಿಗೆ ಸ್ವತ್ತು ತೆರಿಗೆಯನ್ನು ಖಾಲಿ ಭೂಮಿಗೆ  ವಿಧಿಸುವ ಆಸ್ತಿ ತೆರಿಗೆ ದರದಲ್ಲಿ ವಿಧಿಸಲಾಗುತ್ತದೆ ಎಂದು  ಅವರು ತಿಳಿಸಿದರು.

ಕರ್ನಾಟಕ ಪೌರ ನಿಯಮಗಳ ಅಧಿನಿಯಮ 1976 ರ ಕಲಂ 108ರ ಉಪ ಪ್ರಕರಣ 2( ಎ ) ತಿದ್ದುಪಡಿ ಪ್ರಕಾರ ವಾಣಿಜ್ಯ ಕಟ್ಟಡಗಳಿಗೆ ಮಾರುಕಟ್ಟೆ ಮೂಲ ಬೆಲೆಯ ಕನಿಷ್ಠ ಶೇ. 0.5 ಕ್ಕಿಂತ  ಕಡಿಮೆ ಇಲ್ಲದಂತೆ ಮತ್ತು ಶೇ. 3.0 ಕ್ಕಿಂತ ಹೆಚ್ಚಿಗೆ ಇಲ್ಲದಂತೆ ಪ್ರದೇಶವಾರು ಬೇರೆ ಬೇರೆ ತೆರಿಗೆ ದರವನ್ನು ವಿಧಿಸಿ, ಕರ್ನಾಟಕ ಪೌರ ನಿಯಮಗಳ ಅಧಿನಿಯಮ 1976 ರ ಪ್ರಕರಣ 109 ಎ ರ ತಿದ್ದುಪಡಿ ಪ್ರಕಾರ ಪ್ರತಿವರ್ಷ  ಶೇ. 3 ರಿಂದ ಶೇ. 5ರಷ್ಟು ಸ್ವತ್ತು ತೆರಿಗೆಯನ್ನು ಹೆಚ್ಚಿಸಲು ಅವಕಾಶವಿರುತ್ತದೆ ಎಂದು ಪಿ. ಸುನೀಲ ಕುಮಾರ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.

ಮಹಾನಗರ ಪಾಲಿಕೆಗೆ ಸಂಬಂಧಿಸಿದಂತೆ 2005 ರಿಂದ 2021ಕ್ಕೆ ಆಸ್ತಿ ತೆರಿಗೆ ದರವನ್ನು ಪರಿಷ್ಕರಣೆ ಮಾಡಲಾಗಿರುತ್ತದೆ. ಆದರೆ, ಕರ್ನಾಟಕ ಪೌರ ನಿಗಮ ಅಧಿನಿಯಮ 1976 ರ ಪ್ರಕರಣ 108, 109 ಮತ್ತು 109ಎ ಗಳಿಗೆ ತಿದ್ದುಪಡಿ ಮಾಡಿ ಫೆ. 18 ರಂದು ರಾಜ್ಯಪತ್ರ ಹೊರಡಿಸಲಾಗಿದೆ. ಕರ್ನಾಟಕ ಪೌರ ನಿಗಮಗಳ ಅಧಿನಿಯಮ 1976 ರ ಪ್ರಕರಣ 109(ಎ ) ಪ್ರಕರಣ, 2005-06ನೇ ಹಣಕಾಸು ವರ್ಷದಿಂದ ಪ್ರಾರಂಭಿಸಿ ಪ್ರತಿ ಮೂರು ವರ್ಷಕ್ಕೊಮ್ಮೆ ಆಸ್ತಿ ತೆರಿಗೆಯನ್ನು ಶೇ. 15 ರಿಂದ ಶೇ.30ರಷ್ಟು ಹೆಚ್ಚಿಸಿ ಪರಿಷ್ಕರಿಸಲು ಅವಕಾಶ ವಿರುತ್ತದೆ ಎಂದು ಅವರು ತಿಳಿಸಿದರು.

ಇದನ್ನು ಓದಿ: ರಾಜ್ಯದಲ್ಲಿ ಯಾವುದೇ ರೀತಿಯ ಲಾಕ್​ಡೌನ್, ನೈಟ್ ಕರ್ಫ್ಯೂ ಜಾರಿ ಇಲ್ಲ; ಸಿಎಂ ಬಿಎಸ್​ ಯಡಿಯೂರಪ್ಪ ಸ್ಪಷ್ಟನೆ

ವಾರ್ಡ್​ವಾರು ಮತ್ತು ಪ್ರದೇಶವಾರು ಆಸ್ತಿ ತೆರಿಗೆ ದರಗಳನ್ನು ನಿಗಧಿಪಡಿಸಿ  ಠರಾವು ಮಾಡಿದ ಪ್ರಕಾರ 2021-22 ನೇ ಸಾಲಿನ ಅನ್ವಯವಾಗುವಂತೆ ಏ. 1 ರಿಂದ ಜಾರಿಗೆ ಬರುತ್ತದೆ. ಸಾರ್ವಜನಿಕರು ವಾರ್ಡವಾರು ಮತ್ತು ಪ್ರದೇಶವಾರು ಆಸ್ತಿ ತೆರಿಗೆ ದರಗಳ ಮಾಹಿತಿಯನ್ನು ಕಂದಾಯ ವಿಭಾಗದಲ್ಲಿ ಪಡೆಯಬೇಕೆಂದು ವಿಜಯಪುರ ಜಿಲ್ಲಾಧಿಜಾರಿ ಪಿ. ಸುನೀಲ‌ ಕುಮಾರ ತಿಳಿಸಿದರು.

ಸಭೆಯಲ್ಲಿ ವಿಜಯಪುರ ಮಹಾನಗರ ಪಾಲಿಕೆ ಆಯುಕ್ತ ಹರ್ಷ ಶೆಟ್ಟಿ ಮತ್ತು ಕಂದಾಯ ಇಲಾಖೆ ನಾನಾ ಅಧಿಕಾರಿಗಳು ಸೇರಿದಂತೆ ಇತರೆ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
Published by:HR Ramesh
First published: