ಬಿದಿರು ವ್ಯವಸಾಯಕ್ಕೆ ಕೊಡಗು ಅರಣ್ಯ ಮಹಾವಿದ್ಯಾಲಯದ ಉತ್ತೇಜನ; ಎಕರೆಗೆ 5 ಲಕ್ಷ ಆದಾಯ!
ಸಿಸಿಬಿ ಕೆಮಿಕಲ್ ನಿಂದ ಬಿದಿರನ್ನು ಕರಗದಂತೆ ಮಾಡುವುದರ ಜೊತೆಗೆ ಸಂಸ್ಕರಣೆಗೊಂಡ ಬಿದಿರನ ಬೊಂಬನ್ನು ಸೀಳಿ ಸಾಗಾಟಕ್ಕೆ ಅನುಕೂಲವಾಗುವಂತೆ ಮಾಡಲಾಗುತ್ತಿದೆ. ಹೀಗೆ ಒಂದು ಬಿದಿರಿನ ಬೊಂಬನ್ನು ಸಂಸ್ಕರಿಸಲು 70 ರೂಪಾಯಿ ವೆಚ್ಚವಾಗುತ್ತದೆ. ಸಂಸ್ಕರಣೆಗೊಂಡ ಒಂದು ಬೊಂಬನ್ನು ಕನಿಷ್ಠ ಎಂದರೆ 170 ರೂಪಾಯಿಗೆ ಮಾರಾಟ ಮಾಡಬಹುದು.
news18-kannada Updated:January 13, 2021, 7:43 PM IST

ಬಿದಿರಿನಿಂದ ತಯಾರಿಸಿರುವ ವಸ್ತುಗಳು.
- News18 Kannada
- Last Updated: January 13, 2021, 7:43 PM IST
ಕೊಡಗು: ಕೃಷಿ ಅಂದ್ರೆ ಕೇವಲ ಭತ್ತ, ರಾಗಿ, ಜೋಳ ಕಬ್ಬು ಅಥವಾ ರೇಷ್ಮೆ ತರಹದ ಬೆಳೆಗಳಷ್ಟೇ ಅಲ್ಲ. ಅರಣ್ಯ ಉತ್ಪನ್ನದ ಬೆಳೆಗಳ ಮೂಲಕ ಅಪಾರ ಪ್ರಮಾಣದ ಲಾಭ ಗಳಿಸುವುದಕ್ಕೆ ಅನುಕೂಲವಾಗಲೆಂದು ಬಿದಿರಿನ ಬೆಳೆ ಬೆಳೆಯಲು ರೈತರಿಗೆ ಉತ್ತೇಜನ ನೀಡುವುದಕ್ಕಾಗಿ ಕೊಡಗು ಜಿಲ್ಲೆಯ ಪೊನ್ನಂಪೇಟೆಯಲ್ಲಿರುವ ಅರಣ್ಯ ಮಹಾವಿದ್ಯಾಲಯ ಮುಂದಾಗಿದೆ. ಅದಕ್ಕಾಗಿ ವಿದ್ಯಾಲಯ ಬಿದಿರು ಸಂಸ್ಕರಣ ಘಟಕ ಆರಂಭಿಸಿದೆ. ಹುಟ್ಟಿದ ಮಗುವನ್ನು ತೂಗುವ ತೊಟ್ಟಿಲಿನಿಂದ ಹಿಡಿದು, ಕೇರುವ ಮೊರದವರೆಗೂ ಬಿದಿರು ಬಳಕೆಯಲ್ಲಿದೆ.
ಅಷ್ಟೇ ಅಲ್ಲ ಇಂದು ಬಿದಿರಿನಿಂದ ಅತ್ಯಾಕರ್ಷಕ ಕೊಡುಗೆಯ ವಸ್ತುಗಳನ್ನು ಸಿದ್ಧಗೊಳಿಸಲಾಗುತ್ತಿದೆ. ಇಲ್ಲಿ ನೋಡಿ ಕಣ್ಮನ ಕೋರೈಸುವ ಲ್ಯಾಂಪ್, ಪುಸ್ತಕದ ರೂಪದಲ್ಲಿರುವ ಆಕರ್ಷಕವಾದ ಸ್ಪೈಸಿಸ್ ಬ್ಯಾಕ್ಸ್, ಅಷ್ಟೇ ಅಲ್ಲ ಬರೆಯಲು ಮುದನೀಡುವ ಪೆನ್ನು ಅವುಗಳನ್ನು ಹಾಕಿ ಇಡಲು ವಾಜ್ ಗಳು. ಜೊತೆಗೆ ಮನೆಗಳ ಕಿಟಕಿಗಳಿಗೆ ಚಿತ್ತಾಕರ್ಷಕ ಸ್ಕ್ರೀನ್ ಗಳನ್ನು ಮಾಡಲಾಗುತ್ತಿದೆ. ಹೀಗೆ ಆಧುನಿಕತೆ ಸ್ಪರ್ಶ ಪಡೆದು ಹೊಸ ರೂಪದಲ್ಲಿ ಮನೆ, ಕಚೇರಿಗಳನ್ನು ಅಲಂಕರಿಸುವ ವಸ್ತುಗಳು ಬಿದಿರಿನಿಂದ ಮೈದಳೆಯುತ್ತಿವೆ. ಇಂತಹ ಅತ್ಯಾಧುನಿಕ ವಸ್ತುಗಳ ತಯಾರಿಕೆ ಸೇರಿದಂತೆ ವಿವಿಧ ವಸ್ತುಗಳ ತಯಾರಿಕೆಗೆ ಬಿದಿರು ಅನಿವಾರ್ಯವಾಗಿದ್ದು, ಅಗತ್ಯವಾದ ಈ ಬಿದಿರನ್ನು ಸದ್ಯ ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಆದರೆ ಇದೇ ಬಿದಿರನ್ನು ರಾಜ್ಯದ ರೈತರು ಬೆಳೆದಲ್ಲಿ ಐದು ವರ್ಷಗಳಲ್ಲಿ ಲಕ್ಷಾಂತರ ರೂಪಾಯಿ ಆದಾಯ ಗಳಿಸಬಹುದು. ಉತ್ತಮ ಬೆಳೆ ಬರುವುದಕ್ಕೆ ಐದು ವರ್ಷಗಳು ಕಾಯಲೇಬೇಕು. ಐದು ವರ್ಷಗಳ ಬಳಿಕ ಎಕರೆಗೆ ಐದು ಲಕ್ಷ ಆದಾಯ ಗಳಿಸಬಹುದು ಎಂಬುದು ಅರಣ್ಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಸತೀಶ್ ಅವರ ಅಭಿಪ್ರಾಯ. ಇದನ್ನು ಓದಿ: ಜನರ ದುಡ್ಡು ತಿಂದು ಜೈಲಿಗೆ ಹೋಗೋದೇ ಶಿವಮೊಗ್ಗ ಮುಖಂಡನ ಸಾಧನೆ ಎಂದು ಹೇಳಿಕೊಳ್ಳಲು ಮರೆತಿದ್ದಾರೆ; ಬಿಎಸ್ವೈಗೆ ಸಿದ್ದರಾಮಯ್ಯ ತಿರುಗೇಟು
ಅರಣ್ಯ ಮಹಾವಿದ್ಯಾಲಯದಲ್ಲಿ ಬಿದಿರು ಸಂಸ್ಕರಣಾ ಘಟಕ ಸ್ಥಾಪಿಸಿದ್ದು, ನಿತ್ಯ ಒಂದು ಟನ್ ನಷ್ಟು ಬಿದಿರನ್ನು ಸಂಸ್ಕರಣೆ ಮಾಡಬಹುದು. ಬೊರಾನ್ ಮತ್ತು ಕಾಫರ್ ಮಿಶ್ರಣವನ್ನು ಒಂದು ಎಚ್ ಪಿ ಮೋಟರ್ ಬಳಸಿ ಬಿದಿರಿನ ಬೊಂಬಿನಲ್ಲಿರುವ ನೀರಿನ ಅಂಶವನ್ನು ತೆಗೆದು ಅದರಲ್ಲಿ ಬೋರ್ಯಾಕ್ಸ್ ಮತ್ತು ಕಾಫರ್ ದ್ರಾವಣದ ಮಿಶ್ರಣವನ್ನು ಒತ್ತಡದ ಮೂಲಕ ಸೇರಿಸಲಾಗುತ್ತದೆ. ಜೊತೆಗೆ ಕ್ರೋಮಿಯಂ ಎಂಬ ರಾಸಾಯನಿಕ ದ್ರಾವಣವನ್ನು ಸೇರಿಸುವುದರಿಂದ ತುಂಬಾ ವರ್ಷಗಳ ಕಾಲದವರೆಗೆ ಬೋರ್ಯಾಕ್ಸ್ ಅನ್ನು ಕ್ರೋಮಿಯಂ ಹಿಡಿದಿಟ್ಟುಕೊಳ್ಳುತ್ತದೆ. ಜೊತೆಗೆ ಕಾಫರ್ ರಾಸಾಯನಿಕ ಬಿದಿರಿನ ಬೊಂಬಿಗೆ ಶಿಲೀಂದ್ರ ಅಟ್ಯಾಕ್ ಆಗದಂತೆ ತಡೆಯುತ್ತಿದೆ. ಹೀಗೆ ಸಂಸ್ಕರಿಸುವುದರಿಂದ ಬಿದಿರು ಕನಿಷ್ಠ 25 ವರ್ಷಗಳ ಕಾಲ ಗಟ್ಟಿಮುಟ್ಟಾಗಿ ಬಳಕೆಗೆ ಬರುತ್ತದೆ.
ಹೀಗೆ ಸಿಸಿಬಿ ಕೆಮಿಕಲ್ ನಿಂದ ಬಿದಿರನ್ನು ಕರಗದಂತೆ ಮಾಡುವುದರ ಜೊತೆಗೆ ಸಂಸ್ಕರಣೆಗೊಂಡ ಬಿದಿರನ ಬೊಂಬನ್ನು ಸೀಳಿ ಸಾಗಾಟಕ್ಕೆ ಅನುಕೂಲವಾಗುವಂತೆ ಮಾಡಲಾಗುತ್ತಿದೆ. ಹೀಗೆ ಒಂದು ಬಿದಿರಿನ ಬೊಂಬನ್ನು ಸಂಸ್ಕರಿಸಲು 70 ರೂಪಾಯಿ ವೆಚ್ಚವಾಗುತ್ತದೆ. ಸಂಸ್ಕರಣೆಗೊಂಡ ಒಂದು ಬೊಂಬನ್ನು ಕನಿಷ್ಠ ಎಂದರೆ 170 ರೂಪಾಯಿಗೆ ಮಾರಾಟ ಮಾಡಬಹುದು. ಹೀಗಾಗಿ ರೈತರು ಬಿದಿರನ್ನು ಬೆಳೆದು ಉತ್ತಮ ಆದಾಯ ಗಳಿಸಬಹುದು ಎಂದು ಪ್ರಾಧ್ಯಾಪಕರ ಹರೀಶ್ ಹೇಳುತ್ತಾರೆ.
ಅಷ್ಟೇ ಅಲ್ಲ ಇಂದು ಬಿದಿರಿನಿಂದ ಅತ್ಯಾಕರ್ಷಕ ಕೊಡುಗೆಯ ವಸ್ತುಗಳನ್ನು ಸಿದ್ಧಗೊಳಿಸಲಾಗುತ್ತಿದೆ. ಇಲ್ಲಿ ನೋಡಿ ಕಣ್ಮನ ಕೋರೈಸುವ ಲ್ಯಾಂಪ್, ಪುಸ್ತಕದ ರೂಪದಲ್ಲಿರುವ ಆಕರ್ಷಕವಾದ ಸ್ಪೈಸಿಸ್ ಬ್ಯಾಕ್ಸ್, ಅಷ್ಟೇ ಅಲ್ಲ ಬರೆಯಲು ಮುದನೀಡುವ ಪೆನ್ನು ಅವುಗಳನ್ನು ಹಾಕಿ ಇಡಲು ವಾಜ್ ಗಳು. ಜೊತೆಗೆ ಮನೆಗಳ ಕಿಟಕಿಗಳಿಗೆ ಚಿತ್ತಾಕರ್ಷಕ ಸ್ಕ್ರೀನ್ ಗಳನ್ನು ಮಾಡಲಾಗುತ್ತಿದೆ. ಹೀಗೆ ಆಧುನಿಕತೆ ಸ್ಪರ್ಶ ಪಡೆದು ಹೊಸ ರೂಪದಲ್ಲಿ ಮನೆ, ಕಚೇರಿಗಳನ್ನು ಅಲಂಕರಿಸುವ ವಸ್ತುಗಳು ಬಿದಿರಿನಿಂದ ಮೈದಳೆಯುತ್ತಿವೆ. ಇಂತಹ ಅತ್ಯಾಧುನಿಕ ವಸ್ತುಗಳ ತಯಾರಿಕೆ ಸೇರಿದಂತೆ ವಿವಿಧ ವಸ್ತುಗಳ ತಯಾರಿಕೆಗೆ ಬಿದಿರು ಅನಿವಾರ್ಯವಾಗಿದ್ದು, ಅಗತ್ಯವಾದ ಈ ಬಿದಿರನ್ನು ಸದ್ಯ ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಆದರೆ ಇದೇ ಬಿದಿರನ್ನು ರಾಜ್ಯದ ರೈತರು ಬೆಳೆದಲ್ಲಿ ಐದು ವರ್ಷಗಳಲ್ಲಿ ಲಕ್ಷಾಂತರ ರೂಪಾಯಿ ಆದಾಯ ಗಳಿಸಬಹುದು. ಉತ್ತಮ ಬೆಳೆ ಬರುವುದಕ್ಕೆ ಐದು ವರ್ಷಗಳು ಕಾಯಲೇಬೇಕು. ಐದು ವರ್ಷಗಳ ಬಳಿಕ ಎಕರೆಗೆ ಐದು ಲಕ್ಷ ಆದಾಯ ಗಳಿಸಬಹುದು ಎಂಬುದು ಅರಣ್ಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಸತೀಶ್ ಅವರ ಅಭಿಪ್ರಾಯ.
ಅರಣ್ಯ ಮಹಾವಿದ್ಯಾಲಯದಲ್ಲಿ ಬಿದಿರು ಸಂಸ್ಕರಣಾ ಘಟಕ ಸ್ಥಾಪಿಸಿದ್ದು, ನಿತ್ಯ ಒಂದು ಟನ್ ನಷ್ಟು ಬಿದಿರನ್ನು ಸಂಸ್ಕರಣೆ ಮಾಡಬಹುದು. ಬೊರಾನ್ ಮತ್ತು ಕಾಫರ್ ಮಿಶ್ರಣವನ್ನು ಒಂದು ಎಚ್ ಪಿ ಮೋಟರ್ ಬಳಸಿ ಬಿದಿರಿನ ಬೊಂಬಿನಲ್ಲಿರುವ ನೀರಿನ ಅಂಶವನ್ನು ತೆಗೆದು ಅದರಲ್ಲಿ ಬೋರ್ಯಾಕ್ಸ್ ಮತ್ತು ಕಾಫರ್ ದ್ರಾವಣದ ಮಿಶ್ರಣವನ್ನು ಒತ್ತಡದ ಮೂಲಕ ಸೇರಿಸಲಾಗುತ್ತದೆ. ಜೊತೆಗೆ ಕ್ರೋಮಿಯಂ ಎಂಬ ರಾಸಾಯನಿಕ ದ್ರಾವಣವನ್ನು ಸೇರಿಸುವುದರಿಂದ ತುಂಬಾ ವರ್ಷಗಳ ಕಾಲದವರೆಗೆ ಬೋರ್ಯಾಕ್ಸ್ ಅನ್ನು ಕ್ರೋಮಿಯಂ ಹಿಡಿದಿಟ್ಟುಕೊಳ್ಳುತ್ತದೆ. ಜೊತೆಗೆ ಕಾಫರ್ ರಾಸಾಯನಿಕ ಬಿದಿರಿನ ಬೊಂಬಿಗೆ ಶಿಲೀಂದ್ರ ಅಟ್ಯಾಕ್ ಆಗದಂತೆ ತಡೆಯುತ್ತಿದೆ. ಹೀಗೆ ಸಂಸ್ಕರಿಸುವುದರಿಂದ ಬಿದಿರು ಕನಿಷ್ಠ 25 ವರ್ಷಗಳ ಕಾಲ ಗಟ್ಟಿಮುಟ್ಟಾಗಿ ಬಳಕೆಗೆ ಬರುತ್ತದೆ.
ಹೀಗೆ ಸಿಸಿಬಿ ಕೆಮಿಕಲ್ ನಿಂದ ಬಿದಿರನ್ನು ಕರಗದಂತೆ ಮಾಡುವುದರ ಜೊತೆಗೆ ಸಂಸ್ಕರಣೆಗೊಂಡ ಬಿದಿರನ ಬೊಂಬನ್ನು ಸೀಳಿ ಸಾಗಾಟಕ್ಕೆ ಅನುಕೂಲವಾಗುವಂತೆ ಮಾಡಲಾಗುತ್ತಿದೆ. ಹೀಗೆ ಒಂದು ಬಿದಿರಿನ ಬೊಂಬನ್ನು ಸಂಸ್ಕರಿಸಲು 70 ರೂಪಾಯಿ ವೆಚ್ಚವಾಗುತ್ತದೆ. ಸಂಸ್ಕರಣೆಗೊಂಡ ಒಂದು ಬೊಂಬನ್ನು ಕನಿಷ್ಠ ಎಂದರೆ 170 ರೂಪಾಯಿಗೆ ಮಾರಾಟ ಮಾಡಬಹುದು. ಹೀಗಾಗಿ ರೈತರು ಬಿದಿರನ್ನು ಬೆಳೆದು ಉತ್ತಮ ಆದಾಯ ಗಳಿಸಬಹುದು ಎಂದು ಪ್ರಾಧ್ಯಾಪಕರ ಹರೀಶ್ ಹೇಳುತ್ತಾರೆ.
- ವರದಿ; ರವಿ.ಎಸ್ ಹಳ್ಳಿ