HOME » NEWS » District » PROGRESSIVE FARMERS DO PROTEST FOR START THE MANDYA MYSUGAR FACTORY RH

ಮಂಡ್ಯದಲ್ಲಿ ಜೋರಾದ ಮೈಷುಗರ್ ಜಟಾಪಟಿ; ಕಾರ್ಖಾನೆ ಆರಂಭಿಸಲು ಒತ್ತಾಯಿಸಿ ಪ್ರಗತಿಪರ ರೈತರಿಂದ ಪ್ರತಿಭಟನೆ

ಒಟ್ಟಾರೆ ಸಕ್ಕರೆ ನಾಡು ಮಂಡ್ಯದಲ್ಲಿ ಇದೀಗ ಮೈಷುಗರ್  ಕಾರ್ಖಾನೆ ಆರಂಭ ವಿಚಾರದ  ಜಟಾಪಟಿ ಜೋರಾಗಿದೆ‌. ಇದೀಗ ಸಂಸದೆ ಸುಮಲತಾ ಖುದ್ದು ಅಖಾಡಕ್ಕೆ ಇಳಿದಿದ್ದು ಶತಾಯಗತಾಯ ಮೈಷುಗರ್ ಕಾರ್ಖಾನೆ  ಆರಂಭಿ ಸಲು ರೈತರ ಪರ ನಿಂತಿದ್ದಾರೆ. 

news18-kannada
Updated:June 18, 2020, 5:53 PM IST
ಮಂಡ್ಯದಲ್ಲಿ ಜೋರಾದ ಮೈಷುಗರ್ ಜಟಾಪಟಿ; ಕಾರ್ಖಾನೆ ಆರಂಭಿಸಲು ಒತ್ತಾಯಿಸಿ ಪ್ರಗತಿಪರ ರೈತರಿಂದ ಪ್ರತಿಭಟನೆ
ಮಂಡ್ಯದಲ್ಲಿ ಸಕ್ಕರೆ ಕಾರ್ಖಾನೆ ಆರಂಭಿಸುವಂತೆ ಇಂದು ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ಸಂಸದೆ ಸುಮಲತಾ.
  • Share this:
ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಮೈ ಷುಗರ್ ವಿಚಾರದಲ್ಲಿ ಜಟಾಪಟಿ ಜೋರಾಗುತ್ತಲೇ ಇದೆ. ಒಂದು ಗುಂಪು ರೈತ ಹಿತರಕ್ಷಣಾ ವೇದಿಕೆ ಹೆಸರಲ್ಲಿ ಸಕ್ಕರೆ  ಕಾರ್ಖಾನೆ ಮೈಷುಗರ್ ಸರ್ಕಾ ರಿ ಸ್ವಾಮ್ಯದಲ್ಲೇ ಆರಂಭಿಸಿ,ಇಲ್ಲದಿದ್ದರೆ ಹೋರಾಟ ಮಾಡುತ್ತೇವೆ ಅಂತಿದ್ದರೆ, ಪ್ರಗತಿಪರ ರೈತರ ಗುಂಪು ಒ&ಎಂ ನಲ್ಲೇ ಕಾರ್ಖಾನೆ ಆರಂಭಿಸಿ ಎಂದು ಪ್ರತಿಭಟನೆ ನಡೆಸುತ್ತಿದೆ. ಇದಕ್ಕೆ ಸಂಸದೆ ಸುಮಲತಾ ಕೂಡ ಸಾಥ್ ನೀಡಿದ್ದಾರೆ.

ಹೌದು! ಮೈಷುಗರ್ ಸಕ್ಕರೆ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲಿ ನಡೆಸಬೇಕೆಂದು ಒಂದು ಗುಂಪು ಪಟ್ಟು ಹಿಡಿದು ಜಿಲ್ಲೆಯಲ್ಲಿ ಸರಣಿ ಪ್ರತಿಭಟನೆ ಮಾಡ್ತಾ ಸರ್ಕಾರದ ಮೇಲೆ  ಒತ್ತಡ ಹಾಕುತ್ತಿದ್ದರೆ, ಇದೀಗ ಪ್ರಗತಿಪರ ಸಂಘಟನೆಗಳು ಮತ್ತು ಜಿಲ್ಲೆಯ ಕಬ್ಬು ಬೆಳೆಗಾರ ರೈತರು ಕಾರ್ಖಾನೆಯನ್ನು O&M ಮಾದರಿಯಲ್ಲಿ ಆರಂಭಿಸಿ, ರೈತರನ್ನು ಉಳಿಸುವಂತೆ ಇಂದು ಮಂಡ್ಯದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಮಾಜಿ ಶಾಸಕ ಚೌಡಯ್ಯ ನೇತೃತ್ವದಲ್ಲಿ ನೂರಾರು ರೈತರು ವಿಶ್ವೇಶ್ವರಯ್ಯ ವೃತ್ತದಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಈ ಪ್ರತಿಭಟನೆಯಲ್ಲಿ ಸಂಸದೆ ಸುಮಲತಾ ಕೂಡ ಭಾಗಿಯಾಗಿ ರೈತರ ಬೇಡಿಕೆ ಈಡೇರಿಸುವಂತೆ ಡಿಸಿ ಮನವಿ ಸಲ್ಲಿಸಿ, ಕಾರ್ಖಾನೆ ಆರಂಭಕ್ಕೆ ಅಡ್ಡಿಯಾಗಿರುವವರ ವಿರುದ್ದ ಹರಿಹಾಯ್ದುರು. ಅಲ್ಲದೇ, ರೈತರ ವಿಷಯದಲ್ಲಿ ಸ್ವಾರ್ಥ ರಾಜಕಾರಣ ಮಾಡುವವರನ್ನು ಆ ದೇವರು ಸೇರಿದಂತೆ ಜಿಲ್ಲೆಯ ರೈತರು ಕ್ಷಮಿಸುವುದಿಲ್ಲ ಅಂತಾ ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಮೈಷುಗರ್ ಸಕ್ಕರೆ ಕಾರ್ಖಾನೆ ಆರಂಭದ ವಿಚಾರದಲ್ಲಿ ಅಡ್ಡಿಪಡಿಸುತ್ತಾ ಪ್ರತಿಭಟನೆ, ಹೋರಾಟ ಮಾಡುತ್ತಿರುವ ರೈತ ಹೋರಾಟಗಾರನ್ನು ನಕಲಿ ಹೋರಾಟ ಮತ್ತು ನಕಲಿ ರೈತರು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇಂದಿನ ಹೋರಾಟದಲ್ಲಿ ಭಾಗಿಯಾದ ರೈತರೇ ನಿಜವಾದ ಹೋರಾಟಗಾರರು ಮತ್ತು ರೈತರು. ನಕಲಿ ಹೋರಾಟಗಾರರ ಹಿಂದೆ ಒಂದು ದುರುದ್ದೇಶವಿದೆ. ಈ ಹಿಂದೆ ಕಾರ್ಖಾನೆ ಆರಂಭವಾಗದೆ ಇದ್ದಾಗ ಸುಮ್ಮನಿದ್ದ ರೈತ ಹೋರಾಟಗಾರರು ಈಗ ಕಾರ್ಖಾನೆ ಆರಂಭವಾಗುತ್ತೆ ಅಂತಾ ಪ್ರತಿಭಟನೆ, ಧರಣಿ ಅಂತಾ ಇದ್ದಾರೆ. ಇದು ವಿಪರ್ಯಾಸ‌ ಅಲ್ಲವೇ. ಕಾರ್ಖಾನೆ ಆರಂಭವಾಗುವುದರಿಂದ ಹಲವರಿಗೆ  ಉದ್ಯೋಗ ಸೇರಿದಂತೆ ಇನ್ನಿತರ ಕ್ಷೇತ್ರಗಳಿಗೂ ಉಪಯೋಗವಾಗುತ್ತದೆ. ನಮ್ಮ ಕಡೆ ನ್ಯಾಯ ಇದೆ .ಕಾರ್ಖಾನೆ ಆರಂಭವಾಗುವವರೆಗೂ ನಮ್ಮ ಈ ಹೋರಾಟ ನಿಲ್ಲುವುದಿಲ್ಲ ಎಂದು ಸಂಸದೆ ಸುಮಲತಾ ಎಚ್ಚರಿಕೆ ನೀಡಿದ್ದರು.

ಇದನ್ನು ಓದಿ: ರೈತರು ಮತ್ತು ಕೃಷಿ ಇಲಾಖೆ ಮಧ್ಯೆ ಸಂಪರ್ಕ ಕೊಂಡಿಯಾಗಿದ್ದ ಅನುವುಗಾರರ ಕೆಲಸಕ್ಕೆ ಸಂಚಕಾರ
Youtube Video

ಒಟ್ಟಾರೆ ಸಕ್ಕರೆ ನಾಡು ಮಂಡ್ಯದಲ್ಲಿ ಇದೀಗ ಮೈಷುಗರ್  ಕಾರ್ಖಾನೆ ಆರಂಭ ವಿಚಾರದ  ಜಟಾಪಟಿ ಜೋರಾಗಿದೆ‌. ಇದೀಗ ಸಂಸದೆ ಸುಮಲತಾ ಖುದ್ದು ಅಖಾಡಕ್ಕೆ ಇಳಿದಿದ್ದು ಶತಾಯಗತಾಯ ಮೈಷುಗರ್ ಕಾರ್ಖಾನೆ  ಆರಂಭಿ ಸಲು ರೈತರ ಪರ ನಿಂತಿದ್ದಾರೆ.
First published: June 18, 2020, 5:53 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories