ಕಾರವಾರ: ರಾಜ್ಯದ ಕರಾವಳಿ ಭಾಗದಲ್ಲಿ ಮಳೆ ಗಾಳಿ ಜೋರಾಗಿದೆ. ಅರಬ್ಬಿ ಸಮುದ್ರ ಪ್ರಕ್ಷುಬ್ದಗೊಂಡಿದ್ದರಿಂದ ಉತ್ತರಕನ್ನಡ ಜಿಲ್ಲೆಯ ಲ್ಲಿ ದೋಣಿ ದುರಂತ ಸಂಭವಿಸಿದೆ. ಕಾರವಾರ ಬಂದರಿನತ್ತ ಬರುತ್ತಿರುವ ಯಾಂತ್ರಿಕ ದೋಣಿಯೊಂದು ಮುಳುಗಿದೆ. ಇನ್ನೊಂದೆಡೆ ಲಂಗರು ಹಾಕಿದ್ದ ಬೋಟುಗಳೆರಡು ಆ್ಯಂಕರ್ ತುಂಡಾಗಿ ದಡಕ್ಕೆ ಬಂದು ಬಿದ್ದಿದೆ. ರಾಜ್ಯದ ಕರಾವಳಿ ಭಾಗದಲ್ಲಿ ಇಂದು ಕೂಡ ಮಳೆ ಮುಂದುವರಿದಿದೆ. ಗಾಳಿಯ ವೇಗ ಕೂಡ ತೀವೃಗೊಂಡಿದ್ದರಿಂದ ಅರಬ್ಬಿ ಸಮುದ್ರ ಕೂಡ ಪ್ರಕ್ಷುಬ್ದಗೊಂಡಿದೆ. ಹವಮಾನ ವೈಪರೀತ್ಯ ಮುಂದುವರೆ ದಿರುವುದರಿಂದ ಉತ್ತರಕನ್ನಡ ಜಿಲ್ಲೆಯ ಕಾರವಾರ ಸಮೀಪ ನೂರಾರು ಬೋಟುಗಳು ಲಂಗರು ಹಾಕಿ ನಿಂತಿವೆ. ಇನ್ನೂ ಆರೇಳು ದಿನಗಳ ಹಿಂದೆಯೇ ಮೀನುಗಾರಿಕೆ ನಡೆಸುತ್ತಿರುವ ಯಾಂತ್ರಿಕ ದೋಣಿಗಳು ಕರಾವಳಿಯ ಬಂದರಿನತ್ತ ಬರಲು ಹರಸಾಹಸ ಪಡುತ್ತಿವೆ. ಈ ನಡುವೆ ಕಾರವಾರ ಬಂದರು ಕಡೆ ಬರುತ್ತಿದ್ದ ಮಲ್ಪೆಯ ಬ್ರಾಹ್ಮರಿ ಹೆಸರಿನ ಬೋಟು ಅಲೆಯ ಹೊಡೆತಕ್ಕೆ ಪೈಬರ್ ತುಂಡಾಗಿತ್ತು. ಸಮುದ್ರದ ನೀರು ತುಂಬಿದ್ದರಿಂದ ಬೋಟು ಮುಳುಗಿದೆ. ಬೋಟಿನಲ್ಲಿದ್ದ ಏಳು ಮೀನುಗಾರರನ್ನ ರಕ್ಷಣೆ ಮಾಡಲಾಗಿದೆ.
ನಿನ್ನೆಯಿಂದ ಕಡಲ ಅಬ್ಬರ ಜಾಸ್ತಿಯಾಗಿದ್ದರಿಂದ ಯಾಂತ್ರಿಕ ದೋಣಿಗಳನ್ನ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಅಲೆಯ ಹೊಡೆತಕ್ಕ ಕಾರವಾರದ ಕಡಲತೀರದ ಹೊರಭಾಗದಲ್ಲಿ ಲಂಗರು ಹಾಕಿದ್ದ ಮಂಗಳೂರಿನ ಎರಡು ಬೋಟುಗಳು ಲಂಗರು ತುಂಡಾಗಿ ದಡಕ್ಕೆ ಬಂದು ಬಿದ್ದಿವೆ. ರಾತ್ರಿ ವೇಳೆ ಮಳೆಯೊಂದಿಗೆ ಗಾಳಿಯ ವೇಗ ಹೆಚ್ಚಾಗಿದ್ರಿಂದ ಈ ಎರಡು ಬೋಟುಗಳ ಆ್ಯಂಕರ್ ಕಟ್ಟಾಗಿತ್ತು. ಹೊಯ್ದಾಡುತ್ತಾ ಬಂದು ತೀರದಲ್ಲಿ ಬಂದು ಬಿದ್ದಿವೆ. ಇನ್ನೂ ಕಾರವಾರ ಟ್ಯಾಗೋರ್ ಕಡಲತೀರದಲ್ಲಿ ಇಟ್ಟಿದ್ದ ಉದಯ ಬಾನಾವಳಿಕರ ಎಂಬುವವರಿಗೆ ಸೇರಿದ ನಾಡ ದೋಣಿ ಕೂಡ ಛಿದ್ರಛಿದ್ರವಾಗಿದ್ದು ಅಪಾರ ಹಾನಿಯಾಗಿವೆ.
ಇದನ್ನೂ ಓದಿ : ಕೇಂದ್ರ ಕೃಷಿ ಕಾಯ್ದೆ ವಿರುದ್ಧ ರೈತ ಹೋರಾಟ; ಹೋರಾಟಗಾರರನ್ನು ಭಯೋತ್ಪಾದಕರೆಂದ ನಟಿ ಕಂಗನಾ
ಇಂದು ಕೂಡ ಉತ್ತರಕನ್ನಡ ಜಿಲ್ಲೆಯಲ್ಲಿ ಮಳೆ ಮುಂದುವರಿದಿರೋದ್ರಿಂದ ಜನತೆ ಕಂಗಾಲಾಗಿದ್ದಾರೆ. ಇನ್ನೂ ಹಲವು ಬೋಟುಗಳು ಆಳ ಸಮುದ್ರದಿಂದ ಬಂದರು ಪ್ರದೇಶದತ್ತ ಬರಲು ಹರಸಾಹಸಪಡುತ್ತಿರುವ ಮಾಹಿತಿ ಲಭ್ಯವಾಗಿದೆ. ಹವಮಾನ ಇಲಾಖೆ ಕೂಡ ಮತ್ತೆ ಐದಾರು ದಿನಗಳ ಕಾಲ ಮಳೆ ಜಾಸ್ತಿಯಾಗುವ ಮಾಹಿತಿ ನೀಡಿದ್ದು, ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ